ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ಎಸ್ ನೀಲಣ್ಣವರ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಕಳೆದ 24 ಗಂಟೆಯಲ್ಲಿ ಬೆಳಗಾವಿ ಎಸಿ ನೇತೃತ್ವದ ಅಧಿಕಾರಿಗಳ ತಂಡ ಶಿವಾನಂದ ನೀಲಣ್ಣವರ್ ಸಾಮ್ರಾಜ್ಯವನ್ನು ಜಾಲಾಡಿದ್ದು ಇವತ್ತು ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಜಂಟಿ ಸುದ್ದಿಗೋಷ್ಠಿ ಮಾಡಿ ಈವರೆಗಿನ ತನಿಖೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಆದಾಯದ ಬಗ್ಗೆ ನಿನ್ನೆ ಸಂಪೂರ್ಣವಾಗಿ ಬೆಳಗಾವಿ ಎಸಿ ಶ್ರವಣ್ಕುಮಾರ್ ಅವರ ನೇತೃತ್ವದಲ್ಲಿ …
Read More »Daily Archives: ಮೇ 16, 2026
3ನೇ ಮಗು ಹುಟ್ಟಿದ್ರೆ 30,000, 4ನೇ ಮಗು ಹುಟ್ಟಿದ್ರೆ 40,000 ರೂ. ಗಿಫ್ಟ್ – ಚಂದ್ರಬಾಬು ನಾಯ್ಡು ಘೋಷಣೆ
ಅಮರಾವತಿ: ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಿಸಲು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ಯೋಜನೆಯೊಂದನ್ನ ಘೋಷಿಸಿದ್ದಾರೆ. 3ನೇ ಮಗು ಹುಟ್ಟಿದ್ರೆ 30,000 ರೂ. ಮತ್ತು 4ನೇ ಮಗು ಹುಟ್ಟಿದ್ರೆ 40,000 ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸ್ವರ್ಣ ಆಂಧ್ರ, ಸ್ವಚ್ಛ ಆಂಧ್ರ’ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 3ನೇ ಮತ್ತು 4ನೇ ಮಗು ಹುಟ್ಟಿದ್ರೆ ಆರ್ಥಿಕ ಪ್ರೋತ್ಸಾಹಧನ ನೀಡುವುದಾಗಿ ತಿಳಿಸಿದರು. ಜನನ …
Read More »82 ಕೋಟಿ ಮೌಲ್ಯದ ʻಜಿಹಾದಿ ಡ್ರಗ್ʼ ಜಪ್ತಿ – ಅಮಿತ್ ಶಾ
ನವದೆಹಲಿ: ʻಆಪರೇಷನ್ ರೇಜ್‌ಪಿಲ್ʼ ವಿಶೇಷ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯ ನಿಯಂತ್ರಣ ಘಟಕವು ಸುಮಾರು 182 ಕೋಟಿ ರೂ. ಮೌಲ್ಯದ ʻಜಿಹಾದಿ ಡ್ರಗ್ʼ ಅನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ʻಡ್ರಗ್ ಮುಕ್ತ ಭಾರತʼ ನಿರ್ಮಾಣ ಮಾಡಲು ಸಂಕಲ್ಪ ಮಾಡಿದೆ ಎಂದು ಹೇಳಿದ್ದಾರೆ. ಆಪರೇಷನ್ ರೇಜ್‌ಪಿಲ್ ಮೂಲಕ ನಮ್ಮ ಏಜೆನ್ಸಿಗಳು …
Read More »ನೀಟ್ ರದ್ಧತಿಗೆ ಮನನೊಂದು ಸರಣಿ ಆತ್ಮಹತ್ಯೆ – ನಾಲ್ವರು ಆಕಾಂಕ್ಷಿಗಳು ಸೂಸೈಡ್
ನವದೆಹಲಿ: ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದುಗೊಂಡ ಹಿನ್ನೆಲೆ ಆಘಾತಕ್ಕೊಳಗಾಗಿ ನಾಲ್ವರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜಸ್ಥಾನದ ಸೀಕರ್ ಮೂಲದ ಪ್ರದೀಪ್ ಮೇಘವಾಲ್, ಉತ್ತರ ಪ್ರದೇಶ ರಿತಿಕ್ ಮಿಶ್ರಾ, ದೆಹಲಿಯ ಆಜಾದ್‌ಪುರದ ಅನಿಷ್ಕಾ ಪಾಂಡೆ ಹಾಗೂ ದಕ್ಷಿಣ ಗೋವಾದ 17 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ. 650 ಅಂಕಗಳ ನಿರೀಕ್ಷೆಯಲ್ಲಿದ್ದ ರಾಜಸ್ಥಾನದ ಪ್ರದೀಪ್: ಮೃತ ಪ್ರದೀಪ್ ಕಳೆದ ಮೂರು ವರ್ಷಗಳಿಂದ ತನ್ನ ಇಬ್ಬರು ಸಹೋದರಿಯರೊಂದಿಗೆ ಸೀಕರ್‌ನಲ್ಲಿ ವಾಸಿಸುತ್ತಿದ್ದು, …
Read More »ಭಾರತದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ರೆ ಭೂಪಟದಲ್ಲಿ ಇಲ್ಲದಂತೆ ಮಾಡ್ತೀವಿ: ಪಾಕ್‌ಗೆ ಖಡಕ್ ವಾರ್ನಿಂಗ್
ನವದೆಹಲಿ: ಭಯೋತ್ಪಾದಕರಿಗೆ ಆಶ್ರಯ ನೀಡುವುದು, ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವುದನ್ನು ಮುಂದುವರಿಸಿದರೆ, ಭೂಪಟದಲ್ಲಿ ಪಾಕಿಸ್ತಾನ ಇರಬೇಕೆ ಅಥವಾ ಬೇಡವೇ ಅನ್ನೋದನ್ನು ನಾವು ನಿರ್ಧರಿಸುತ್ತೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಎಚ್ಚರಿಸಿದ್ದಾರೆ. ದೆಹಲಿಯ ಮಾಣೆಕ್ಷಾ ಕೇಂದ್ರದಲ್ಲಿ ‘ಯೂನಿಫಾರ್ಮ್ ಅನ್‌ವೀಲ್ಡ್’ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಆಪರೇಷನ್ ಸಿಂಧೂರ್‌ಗೆ ಕಾರಣವಾದ ಸಂದರ್ಭಗಳು ಮತ್ತೆ ಬಂದರೆ ಭಾರತೀಯ ಸೇನೆಯು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಪಾಕಿಸ್ತಾನಕ್ಕೆ ತಿಳಿದಿದೆ ಎಂದು …
Read More »ಪತ್ನಿಯಿಂದ ಡಿವೋರ್ಸ್ ಸಿಗೋವರೆಗೂ ನಾನು ಯಾವುದೇ ಸಿನಿಮಾ ಮಾಡಲ್ಲ – ನಟ ಜಯಂ ರವಿ ಕಣ್ಣೀರು
ಚೆನ್ನೈ: ತಮಿಳು ನಟ ಜಯಂ ರವಿ ಅವರ ಕೌಟುಂಬಿಕ ಕಲಹ ಜೋರಾಗಿದೆ. ಪತ್ನಿಯಿಂದ ಡಿವೋರ್ಸ್ ಸಿಗೋವರೆಗೂ ನಾನು ಯಾವುದೇ ಸಿನಿಮಾ ಮಾಡಲ್ಲ ಅಂತ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಕೌಟುಂಬಿಕ ಕಲಹದ ಬಗ್ಗೆ ಮಾತನಾಡಿದ ಅವರು, ಹೆಂಡತಿ ಬಗ್ಗೆ ಹೆಚ್ಚು ಮಾತಾಡೋದು ಬೇಡ ಅಂತ ಇಷ್ಟು ದಿನ ಬಾಯಿ ಮುಚ್ಚಿಕೊಂಡಿದ್ದೆ. ಆದರೆ, ಈಗ ಆಕೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾಳೆ. ಇನ್ನು ಸುಮ್ಮನಿರೋಕೆ ಆಗಲ್ಲ. ನನ್ನ ಮಕ್ಕಳನ್ನು ಭೇಟಿಯಾಗಲೂ ಬಿಡ್ತಿಲ್ಲ. …
Read More »ಹಿಜಬ್ ಮೂಲಕ ಶಾಲಾ ಮಕ್ಕಳಲ್ಲಿ ದ್ವೇಷ, ಭೇದಭಾವ ಉಂಟು ಮಾಡುವ ಕೆಲಸ ಆಗ್ತಿದೆ: ಸುನೀಲ್ ಕುಮಾರ್
ಉಡುಪಿ: ಹಿಜಬ್ ಮೂಲಕ ಶಾಲಾ ಮಕ್ಕಳಲ್ಲಿ ದ್ವೇಷ ಹಾಗೂ ಭೇದಭಾವ ಉಂಟುಮಾಡುವ ಕೆಲಸ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುನೀಲ್ ಕುಮಾರ್ ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಓಲೈಕೆಯ ಪರಮಾವಧಿಯ ಕೊಡ ತುಂಬಿದೆ. ಶಿಶುಪಾಲನ ಪಾಪದ ಕೊಡ ತುಂಬಿದಾಗ ಏನಾಯ್ತು ಎಂಬ ಬಗ್ಗೆ ಪುರಾಣಗಳಲ್ಲಿ ಕೇಳಿದ್ದೇವೆ. ಓಲೈಕೆಯ ರಾಜಕಾರಣಕ್ಕೆ 2028ರಲ್ಲಿ ಈ ಸರ್ಕಾರ ಬಲಿಯಾಗುತ್ತೆ. ಟಿಪ್ಪು ಜಯಂತಿ, ವಕ್ಫ್ ಆಸ್ತಿ, ಅಲ್ಪಸಂಖ್ಯಾತರ ಓಲೈಕೆಗೆ ಅನುದಾನ ಮಂಜೂರಾತಿ …
Read More »ಅಕ್ರಮವಾಗಿ ದೇಶಕ್ಕೆ ನುಸುಳಿದ್ದ ನಾಲ್ವರು ಬಾಂಗ್ಲಾಪ್ರಜೆಗಳು ಹುಬ್ಬಳ್ಳಿಯಲ್ಲಿ ಲಾಕ್
ಹುಬ್ಬಳ್ಳಿ: ಕಾನೂನು ಬಾಹಿರವಾಗಿ ದೇಶಕ್ಕೆ ನುಸುಳಿದ್ದ ನಾಲ್ವರು ಬಾಂಗ್ಲಾದೇಶದ ಪ್ರಜೆಗಳನ್ನು ಹುಬ್ಬಳ್ಳಿ ರೈಲ್ವೆ ರಕ್ಷಣಾ ಪಡೆ ಬಂಧಿಸಿದೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರ ಬಳಿ ಯಾವುದೇ ಗುರುತಿನ ದಾಖಲೆಗಳಿರಲಿಲ್ಲ. ದಾಖಲೆಗಳಿಲ್ಲದಿದ್ದರೂ ನಾಲ್ವರು ವಿದೇಸಿಗರು ರೈಲಿನಲ್ಲಿ ಪ್ರಯಾಣ ಮಾಡಿ ಹುಬ್ಬಳ್ಳಿವರೆಗೆ ಬಂದಿದ್ದಾರೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದಿರುವ ಆರ್‌ಪಿಎಫ್ ಸಿಬ್ಬಂದಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ-ಗದಗ ರಸ್ತೆಯಲ್ಲಿರುವ ಆರ್‌ಪಿಎಫ್ …
Read More »ಬಿಡದಿ ಟೌನ್ ಶಿಪ್ ಪ್ರಾಜೆಕ್ಟ್ ಕೈಬಿಡಬೇಕು: ಕುಮಾರಸ್ವಾಮಿ ಬಳಿಕ ಹೆಚ್‌ಡಿಡಿ ಒತ್ತಾಯ
ಬೆಂಗಳೂರು: ಬಿಡದಿ ಟೌನ್ ಶಿಪ್ ಪ್ರಾಜೆಕ್ಟ್ ಕೈಬಿಡಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಬಳಿಕ ಮಾಜಿ ಪ್ರಧಾನಿ ದೇವೇಗೌಡ ಸಿಎಂ ಸಿದ್ದರಾಮಯ್ಯರನ್ನ ಒತ್ತಾಯ ಮಾಡಿದ್ದಾರೆ. ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಹೆಸರು ಹೇಳದೇ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿ ಪ್ರಾಜೆಕ್ಟ್ ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದ್ದರು. ಇದಕ್ಕೆ ಕೌಂಟರ್ ಕೊಟ್ಟಿದ್ದ ಡಿಸಿಎಂ ಡಿಕೆ ಶಿವಕುಮಾರ್ ಕುಮಾರಸ್ವಾಮಿಯೇ ಘೋಷಣೆ …
Read More »ಸಹಾಯಧನ, ಪಿಂಚಣಿ ಸ್ಥಗಿತಗೊಳಿಸಿ ಕಾಂಗ್ರೆಸ್‌ಗೆ ಸಾಧನಾ ಸಮಾವೇಶ ಮಾಡುವ ಯೋಗ್ಯತೆ ಇದ್ಯಾ? – ಆರ್.ಅಶೋಕ್
ಬೆಂಗಳೂರು: ರಾಜ್ಯದಲ್ಲಿ ಅನಾಥರು, ವೃದ್ಧರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಶೋಷಿತ, ಅಸಹಾಯಕ ಜನವರ್ಗಗಳಿಗೆ ರಾಜ್ಯ ಸರ್ಕಾರ ನೀಡುವ ಸಹಾಯಧನ ಹಾಗೂ ಪಿಂಚಣಿ ಸ್ಥಗಿತಗೊಂಡಿದೆ. ಈ ರೀತಿ ಖಜಾನೆ ಖಾಲಿಯಾಗಿದ್ದರೂ ಸಾಧನಾ ಸಮಾವೇಶ ಮಾಡಲು ಕಾಂಗ್ರೆಸ್ ನಾಯಕರಿಗೆ ಯಾವ ಯೋಗ್ಯತೆ ಇದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ತಾನು ಮಾಡಿದ ಪಾಪಗಳಿಗಾಗಿ ಸಮಾವೇಶ ನಡೆಸಿ, ಸಂಭ್ರಮಾಚರಣೆ ಮಾಡುತ್ತಿದೆ. ಭಿಕ್ಷುಕರಿಗೆ, …
Read More »
Laxmi News 24×7