Breaking News

Daily Archives: ಮೇ 30, 2026

ಭೀಮಾತೀರದಲ್ಲಿ ಹತ್ಯಾಕಾಂಡ – ಸ್ಥಳಕ್ಕೆ ಐಜಿಪಿ ಭೇಟಿ

ವಿಜಯಪುರ: ಭೀಮಾತೀರದಲ್ಲಿ ಹತ್ಯಾಕಾಂಡ ಪ್ರಕರಣ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರು ಜನ ಹತ್ಯೆಯಾದ ಗೋವಿಂದಪುರದ ಜಮೀನಿಗೆ  ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶುಕ್ರವಾರ (ಮೇ 29) ಮಧ್ಯಾಹ್ನ 2:30ರ ಸುಮಾರಿಗೆ ಜಮೀನಿನಲ್ಲಿ ಕೆಲವರು ಕೆಲಸ ಮಾಡುತ್ತಿರುವ ಸಮಯದಲ್ಲಿ ಅನೇಕ ಜನ ಬಂದು ಅವರ ಮೇಲೆ ಚಾಕು, ಮಚ್ಚು ಹಾಗೂ ಬೇರೆ ಬೇರೆ ಆಯುಧಗಳಿಂದ ಹಲ್ಲೆ …

Read More »

ಬೆಳಗಾವಿ ಉತ್ತರ ವಲಯ ಐಜಿಪಿಯಾಗಿ ನೇಮಕಗೊಂಡ ಸಂದೀಪ ಪಾಟೀಲ ಅಧಿಕಾರ ಸ್ವೀಕಾರ

ಉತ್ತರ ವಲಯ ಐಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ ಪಾಟೀಲ ಗುರುವಾರ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಈವರೆಗಿನ ಉತ್ತರ ವಲಯ ಐಜಿಪಿ ಡಾ.ಚೇತನಸಿಂಗ್ ರಾಥೋರ್, ಪಾಟೀಲಗೆ  ಅಧಿಕಾರ ಹಸ್ತಾಂತರಿಸಿದರು. ಈ ಹಿಂದೆ ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದೀಪ ಪಾಟೀಲ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ, ಇಂಥವರು ಮಹಾರಾಷ್ಟ್ರ ಮತ್ತು ಗೋವಾ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಅತ್ಯಂತ ಸೂಕ್ಷ್ಮ ವಲಯಕ್ಕೆ ಐಜಿಪಿಯಾಗಿ ಬಂದಿರುವುದರಿಂದ …

Read More »

ಸೂರ್ಯವಂಶಿಯನ್ನು 14ನೇ ವಯಸ್ಸಿಗೆ ಐಪಿಎಲ್ ಆಡಿಸಿದ್ದೂ ದ್ರಾವಿಡ್.. ಪ್ರವೀಣ್ ತಾಂಬೆಯನ್ನು 41ನೇ ವಯಸ್ಸಿಗೆ ಐಪಿಎಲ್ ಆಡಿಸಿದ್ದೂ ದ್ರಾವಿಡ್..! 

ಅಲ್ಲಿದ್ದ ಜನ ನಕ್ಕಿದ್ದರು ಆ ದಿನ.. ಇದೇನು ಮಾಡಲು ಹೊರಟಿದ್ದಾರೆ ದ್ರಾವಿಡ್..? 13 ವರ್ಷದ ಹುಡುಗನನ್ನು ಐಪಿಎಲ್’ನಲ್ಲಿ ಆಡಿಸುವ ನಿರ್ಧಾರ..? ವಯಸ್ಸಿನಲ್ಲಿ ದ್ರಾವಿಡ್ ಅವರ ಸಣ್ಣ ಮಗನಿಗಿಂತಲೂ ಅವನು ಚಿಕ್ಕವನು.. ಇನ್ನೂ SSLC ಮೆಟ್ಟಿಲು ಹತ್ತಿಲ್ಲ.. ಆಗಲೇ ಐಪಿಎಲ್..? ‘ಇದೆಂಥಾ ಹುಚ್ಚಾಟ’ ಎಂದು ಕುತೂಹಲದ ಕಣ್ಣುಗಳಿಂದ ದ್ರಾವಿಡ್ ಅವರತ್ತ ನೋಡುತ್ತಿದ್ದಂತೆ, 1 ಕೋಟಿ 10 ಲಕ್ಷಕ್ಕೆ ಹುಡುಗನನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ದ್ರಾವಿಡ್ ಖರೀದಿ ಮಾಡಿಯಾಗಿತ್ತು. ಅದೇ ಐಪಿಎಲ್ ಇತಿಹಾಸದ …

Read More »

ವೈದ್ಯಕೀಯ ಸಿಬ್ಬಂದಿ ಸೇವೆ ಪ್ರಶಂಸಾರ್ಹ

ಬೆಳಗಾವಿ: ತುರ್ತು ವೈದ್ಯಕೀಯ ವಿಭಾಗವು ಆಸ್ಪತ್ರೆ ಪ್ರಮುಖ ಆಧಾರಸ್ತಂಭವಾಗಿದೆ. ಅಪಘಾತಗಳು, ಹೃದಯಾಘಾತ, ಸ್ಟ್ರೋಕ್, ವಿಷಸೇವನೆ, ಗಂಭೀರ ಗಾಯಗಳು ಹಾಗೂ ಇತರ ಜೀವಾಪಾಯದ ಪರಿಸ್ಥಿತಿಗಳಲ್ಲಿ ರೋಗಿಯ ಜೀವ ಉಳಿಸುವ ಮೊದಲ ಜವಾಬ್ದಾರಿ ತುರ್ತು ವೈದ್ಯಕೀಯ ತಂಡದ ಮೇಲಿದೆ. ಇವರ ತ್ವರಿತ ನಿರ್ಧಾರ, ಪರಿಣತಿ ಹಾಗೂ ಮಾನವೀಯ ಸೇವೆ ಪ್ರತಿದಿನ ಅನೇಕ ಜೀವಗಳನ್ನು ಉಳಿಸುತ್ತಿದೆ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ …

Read More »

ದರ್ಶನಕ್ಕೆ ಮುಕ್ತವಾದ ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗಿದ್ದ ಪುರಾತನ ವಿಠ್ಠಲ ದೇವಸ್ಥಾನ

ಹುಕ್ಕೇರಿ: ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಹುನ್ನೂರ ಆರ್‌ಸಿ ಗ್ರಾಮದಲ್ಲಿರುವ ಶತಮಾನದ ಪುರಾತನ ವಿಠ್ಠಲ ದೇವಸ್ಥಾನ ಜಲಾಶಯದ ನೀರು ಕಡಿಮೆಯಾಗಿರುವುದರಿಂದ ಭಕ್ತರ ದರ್ಶನಕ್ಕೆ ಲಭ್ಯವಾಗಿದೆ. 1928ರಲ್ಲಿ ಈ ವಿಠ್ಠಲ ದೇವಸ್ಥಾನ ನಿರ್ಮಿಸಿದ್ದು, ಗುತ್ತಿಯ ಮಣ್ಣಿನಿಂದ ವಿಠ್ಠಲ ಮೂರ್ತಿ ತಯಾರಿಸಲಾಗಿದೆ. ಆ ಮೂರ್ತಿಯ ಮೇಲೆ ಹೊದಿಸಿರುವ ಕಂಬಳಿ ವರ್ಷವಿಡಿ ನೀರಿನಲ್ಲಿದ್ದರೂ ಅದರಲ್ಲಿ ನೀರಿನಂಶ ಇರುವುದಿಲ್ಲ. ಹಾಗಾಗಿ ಇದೊಂದು ದೈವಿಕ ಪವಾಡ ಎನ್ನುತ್ತಾರೆ ಭಕ್ತರು. 1975-76ರಲ್ಲಿ ಹಿಡಕಲ್ ಜಲಾಶಯದಲ್ಲಿ ನೀರಿನ ಸಂಗ್ರಹದಿಂದ …

Read More »

ಎರಂಡೋಲಿ ಗ್ರಾಮದಲ್ಲಿ ಕದ್ದ ಚಿನ್ನ ಖರೀದಿಸಿದ ವ್ಯಾಪಾರಿ ವಿಚಾರಣೆ

ಸಂಬರಗಿ: ಕದ್ದ ಚಿನ್ನ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ಮಿರಜ್ ತಾಲೂಕಿನ ಎರಂಡೋಲಿ ಗ್ರಾಮದ ಆಭರಣ ಅಂಗಡಿ ಮೇಲೆ ಅಥಣಿ ಪೊಲೀಸರು ಮಂಗಳವಾರ ದಾಳಿ ನಡೆಸಿ, ಮಾಲೀಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಂತಾರಾಜ್ಯ ಪ್ರಕರಣವಾಗಿರುವುದರಿಂದ ಅಂಗಡಿ ಮಾಲೀಕನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಗಡಿ ಭಾಗದ ಎರಂಡೋಲಿ ಗ್ರಾಮದ ಚಿನ್ನದ ವ್ಯಾಪಾರಿ ಬಹುದಿನಗಳಿಂದ ಕರ್ನಾಟಕದಲ್ಲಿನ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಚಿನ್ನವನ್ನು ಅನಧಿಕೃತವಾಗಿ ಖರೀದಿಸುತ್ತಿದ್ದನು ಎಂಬ ನಿಖರ ಮಾಹಿತಿ ಮೇರೆಗೆ ಕರ್ನಾಟಕ ಪೊಲೀಸರು ವ್ಯಾಪಾರಿಯನ್ನು ಅಥಣಿ ಠಾಣೆಗೆ …

Read More »

ಚಮಕೇರಿ ಹನುಮ ದೇಗುಲದಲ್ಲಿ 3 ಕೆಜಿ ಬೆಳ್ಳಿ ಕಳವು

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಹನುಮ ದೇವಸ್ಥಾನದ ಗರ್ಭ ಗುಡಿ ಬಾಗಿಲು ಕತ್ತರಿಸಿ, ಸುಮಾರು 7 ಲಕ್ಷ ರೂ. ಮೊತ್ತದ 3 ಕೆಜಿ 750 ಗ್ರಾಂ ಬೆಳ್ಳಿ ಮೂರ್ತಿ, ಗದೆ ಹಾಗೂ 5 ಗುಂಜಿ ಬಂಗಾರ ಆಭರಣ ದೋಚಿ ಪರಾರಿಯಾಗಿದ್ದಾರೆ. 1.5 ಕೆಜಿ ತೂಕದ ಬೆಳ್ಳಿ ಮುಖ, 1.25 ಕೆಜಿ ತೂಕದ ಬೆಳ್ಳಿ ಕುದುರೆ ಮುಖ, 1 ಕೆಜಿ ತೂಕದ ಬೆಳ್ಳಿ ಗದೆ ಹಾಗೂ …

Read More »

ಪೊಲೀಸರು ಕಾರ್ಯಾಚರಣೆ 4.94 ಲಕ್ಷ ರೂ. ಮೌಲ್ಯದ ಮೊಬೈಲ್ ವಶ

ಕಟಕೋಳ: ಇಲ್ಲಿನ ಪೊಲೀಸರು ಕಾರ್ಯಾಚರಣೆ ನೆಡೆಸಿ ಎಂಟು ಜನ ಕಳ್ಳರನ್ನು ಬಂಧಿಸಿ 4.94 ಲಕ್ಷ ರೂ. ಮೌಲ್ಯದ ಮೊಬೈಲ್ ಹಾಗೂ  5.40 ಲಕ್ಷ ರೂ.ಮೌಲ್ಯದ ಎರಡು ಕಾರು ವಶಪಡಿಸಿಕೊಂಡಿದ್ದಾರೆ. ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳ ಹಾಗೂ ಸಿಪಿಐ ವಿನಾಯಕ ಬಡಿಗೇರ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಸ್ಥಳೀಯ ಪಿಎಸ್‌ಐ ಬಸವರಾಜ ಕೊಣ್ಣೂರೆ, ಎಎಸ್‌ಐ ಎಲ್.ಅನ್ನಪೂರ್ಣಾ, ಸಿಬ್ಬಂದಿ ಎಸ್.ಎಂ.ಡೊನವಾಡ, ಎಸ್.ಎಂ.ಬಸರಿಕಟ್ಟಿ, ಆರ್.ಬಿ.ಗೊಕಾಕ, ಎಸ್.ಎಸ್.ವಜ್ರಮಟ್ಟಿ, ಎಂ.ಎಂ.ದ್ಯಾಮನಗೌಡರ, ಡಿ.ಎಚ್.ನದ್ಾ, ಮಂಜುನಾಥ ಹಿರೂರ, ಬಿ.ವಿ.ಹುಲಕುಂದ, …

Read More »

ಹಣಕ್ಕಾಗಿ ಮಕ್ಕಳ ಮಾರಾಟ, ವರದಕ್ಷಿಣೆಗಾಗಿ ಪತ್ನಿಯ ಕೊಲೆ – ತಲೆಮರೆಸಿಕೊಂಡ ಪತಿಗಾಗಿ ಪೊಲೀಸರಿಂದ ತಲಾಶ್‌

ಹಾಸನ: ವರದಕ್ಷಿಣೆಗಾಗಿ ಪತ್ನಿಯನ್ನು ಕೊಲೆ ಮಾಡಿ ನಂತರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇಟ್ಟು ಪತಿ ಎಸ್ಕೇಪ್ ಆದ ಘಟನೆ ಚನ್ನರಾಯಪಟ್ಟಣದ  ಕಂಚಾಗಾರ ಬೀದಿಯಲ್ಲಿ ನಡೆದಿದೆ. ಗುಲ್ಷನ್ ಬಾನು (34) ಕೊಲೆಯಾದ ಮಹಿಳೆ. ಪತಿ ಸೈಫ್‌ ಅಲಿಖಾನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕಳೆದ 14 ವರ್ಷಗಳ ಹಿಂದೆ ಹಾಸನದ  ಚಿಪ್ಪಿನಕಟ್ಟೆಯ ಗುಲ್ಷನ್‌ ಬಾನು, ಚನ್ನರಾಯಪಟ್ಟಣದ ಸೈಫ್‌ ಅಲಿಖಾನ್ ಜೊತೆ ವಿವಾಹವಾಗಿದ್ದರು. ದಂಪತಿಗೆ ಎರಡು ಗಂಡು ಮಕ್ಕಳಿದ್ದು ಸೈಫ್‌ಅಲಿಖಾನ್ ಗಾರೆ ಕೆಲಸ ಮಾಡಿಕೊಂಡಿದ್ದ. …

Read More »

ಕರ್ನಾಟಕದಿಂದ ರಾಜ್ಯಸಭೆಗೆ ಶರ್ಮಿಳಾ ರೆಡ್ಡಿ ಆಯ್ಕೆ ಸಾಧ್ಯತೆ

ನವದೆಹಲಿ: ಕರ್ನಾಟಕದಿಂದ ತೆರವಾಗುವ ಮೂರು ರಾಜ್ಯಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಗೊಂಡಿದೆ. ಕರ್ನಾಟಕದಿಂದ ರಾಜ್ಯಸಭೆಗೆ ವೈಎಸ್ ರಾಜಶೇಖರ ರೆಡ್ಡಿ ಪುತ್ರಿ ಹಾಗೂ ಆಂಧ್ರ ಕಾಂಗ್ರೆಸ್ (Congress) ಸಮಿತಿಯ ಅಧ್ಯಕ್ಷೆ ಶರ್ಮಿಳಾ ರೆಡ್ಡಿ  ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಮೂರು ಸ್ಥಾನಗಳಲ್ಲಿ ಒಂದು ಸ್ಥಾನ ಖರ್ಗೆಗೆ, ಇನ್ನೊಂದು ಸ್ಥಾನವನ್ನು ಸಿದ್ದರಾಮಯ್ಯಗೆ ಹೈಕಮಾಂಡ್ ಮೀಸಲಿಟ್ಟಿದೆ. ಒಂದು ವೇಳೆ ಸಿದ್ದರಾಮಯ್ಯ ಒಪ್ಪದಿದ್ದರೆ ಪರ್ಯಾಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. 3ನೇ ಸ್ಥಾನಕ್ಕೆ ಶರ್ಮಿಳಾ …

Read More »