Breaking News

Daily Archives: ಮೇ 31, 2026

ಕನಿಷ್ಠ ವೇತನ ಹೆಚ್ಚಳ ವಿರೋಧಿಸಿ ಜೂನ್ 1ರಂದು ಬೃಹತ್ ಪ್ರತಿಭಟನೆ

ಬೆಳಗಾವಿ: ಕರ್ನಾಟಕ ಸರ್ಕಾರ ಇತ್ತೀಚೆಗೆ ಘೋಷಿಸಿರುವ ಕನಿಷ್ಠ ವೇತನ ಹೆಚ್ಚಳದ ತಿದ್ದುಪಡಿ ಆದೇಶವನ್ನು ವಿರೋಧಿಸಿ ಬೆಳಗಾವಿಯ ವಿವಿಧ ವ್ಯಾಪಾರ ಮತ್ತು ಕೈಗಾರಿಕಾ ಸಂಘಟನೆಗಳು ಜೂನ್ 1ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ. ಮೇ 29ರಂದು ಉದ್ಯಮಬಾಗದ ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಸಭಾಭವನದಲ್ಲಿ ನಡೆದ ಎಲ್ಲಾ ವ್ಯಾಪಾರ ಮತ್ತು ಕೈಗಾರಿಕಾ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜಂಟಿ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಸರ್ಕಾರದ ಕ್ರಮದ …

Read More »

ತಂಬಾಕು‌ ದೇಹದ ಪ್ರತಿಯೊಂದು ಅಂಗವನ್ನು ಹಾನಿಗೊಳಿಸುತ್ತದೆ: ಡಾ. ಕರ್ನಲ್‌ ಎಂ ದಯಾನಂದ

ಬೆಳಗಾವಿ: ತಂಬಾಕು ಬಳಕೆ ಕೇವಲ ಶ್ವಾಸಕೋಶ ಕ್ಯಾನ್ಸರ್‌ಗೆ ಮಾತ್ರ ಕಾರಣವಾಗುವುದಿಲ್ಲ. ಅದು ಮಾನವ ದೇಹದ ಪ್ರತಿಯೊಂದು ಅಂಗವನ್ನೂ ವಿಭಿನ್ನ ರೀತಿಯಲ್ಲಿ ಹಾನಿಗೊಳಿಸುತ್ತದೆ. ಹೃದಯ, ಯಕೃತ್, ಮೆದುಳು ಸೇರಿದಂತೆ ಎಲ್ಲಾ ಅಂಗಾಂಗಗಳ ಮೇಲೂ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ತಂಬಾಕು ಸೇವನೆ ಜೀವನದ ಮೇಲೆ ದುಷ್ಪರಿಣಾಮ ಬೀರಬಲ್ಲದು ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್‌ ಎಂ ದಯಾನಂದ ಅವರಿಂದಿಲ್ಲಿ …

Read More »

ರೈತರಿಗೆ ಹನಿ ನೀರಾವರಿ ಅಳವಡಿಕೆಗೆ ಸಹಾಯಧನ

ಬೆಳಗಾವಿ: ತೋಟಗಾರಿಕೆ ಇಲಾಖೆಯಿಂದ 2026-27 ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಪ್ರತಿ ಹನಿಗೆ ಅಧಿಕ ಬೆಳೆ ಯೋಜನೆಯಡಿ ಹನಿ ನೀರಾವರಿ ವಿವಿಧ ರೀತಿಯ ತುಂತುರು ನೀರಾವರಿ ಘಟಕಕ್ಕೆ ಸಹಾಯಧನ ಲಭ್ಯವಿದ್ದು, ಕಾಫಿ, ಟೀ, ರಬ್ಬರ್ ಹಾಗೂ ಅಡಿಕೆ ಬೆಳೆಗಳನ್ನು ಹೊರತು ಪಡಿಸಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ ಹನಿ ನೀರಾವರಿ ಅಳವಡಿಸಿ ಸಹಾಯಧನ ನೀಡಲಾಗುತ್ತಿದೆ. ಹನಿ ನೀರಾವರಿ ಮತ್ತು ತುಂತುರು ನೀರಾವರಿ …

Read More »

ಡಿಸಿಎಂಗಳ ಹುದ್ದೆ ಬೇಡವೇ ಬೇಡ – ಕಾಂಗ್ರೆಸ್ ಹೈಕಮಾಂಡ್ ಮುಂದೆ ಡಿಕೆಶಿ, ಸತೀಶ್ ಜಾರಕಿಹೊಳಿ ಪ್ರಸ್ತಾಪ

ಬೆಂಗಳೂರು: ಡಿಸಿಎಂಗಳ ಹುದ್ದೆಬೇಡವೇ ಬೇಡ ಎಂದು ಕಾಂಗ್ರೆಸ್  ಹೈಕಮಾಂಡ್ ಮುಂದೆ ಭಾವಿ ಸಿಎಂ ಡಿಕೆ ಶಿವಕುಮಾರ್  ಹಾಗೂ ಸತೀಶ್ ಜಾರಕಿಹೊಳಿ ಪ್ರಸ್ತಾಪ ಇಟ್ಟಿದ್ದಾರೆ. ನೂತನ ಕ್ಯಾಬಿನೆಟ್‌ಗೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಈ ಪ್ರಸ್ತಾಪ ನಡೆದಿದೆ. ದಲಿತ, ಲಿಂಗಾಯತ, ಅಲ್ಪಸಂಖ್ಯಾತ, ಓಬಿಸಿ ಸಮುದಾಯಗಳಿಗೆ ಮಣೆ ಹಾಕಬೇಕು. ಯಾರಿಗಾದರೂ ಇಬ್ಬರಿಗೆ ಕೊಟ್ಟರೂ ಅಸಮಾಧಾನ ಸಾಧ್ಯತೆಯಿದೆ. ನಾಲ್ಕು ಡಿಸಿಎಂ ಸೃಷ್ಟಿ ಮಾಡಿದ್ರೆ ಹಾಸ್ಯಾಸ್ಪದ ಎಂದು ಹೈಕಮಾಂಡ್ ಬಳಿ ಪ್ರಸ್ತಾಪವಿಟ್ಟಿದ್ದಾರೆ. ಈ ಕುರಿತು ಸೋಮವಾರ ರಾಹುಲ್ …

Read More »

ಸತ್ತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ – ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ

ಬೆಂಗಳೂರು: ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸತ್ತ ಮಹಿಳೆಯರ ಬೆತ್ತಲೆ ಫೋಟೋ ಕ್ಲಿಕ್ಕಿಸುತ್ತಿದ್ದ ಅಮಾನವೀಯ ಘಟನೆ ನಡೆದಿದ್ದು, ಈ ಘಟನೆಗೆ ರಾಜ್ಯ ಮಹಿಳಾ ಆಯೋಗ ಪ್ರತಿಕ್ರಿಯೆ ನೀಡಿದೆ. ಘಟನೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ವರದಿ ನೀಡುವಂತೆ ಆರೋಗ್ಯ ಇಲಾಖೆಗೆ ಕೇಳಿದೆ. ಬೀದರ್‌ ಜಿಲ್ಲೆಯ ಬ್ರಿಮ್ಸ್‌ ಆಸ್ಪತ್ರೆಯ ಶವಾಗಾರದಲ್ಲಿ ಅಟೆಂಡರ್‌ ಮುನೀರ್‌ ಅಹಮದ್‌ ಎಂಬಾತ ಸತ್ತ ಮಹಿಳೆಯರ ಬೆತ್ತಲೆ ಫೋಟೋಗಳನ್ನ ಶೂಟ್‌ ಮಾಡಿ ವಿಕೃತಿ ಮೆರೆದಿರುವ ಅಮಾನುಷ …

Read More »

ಶಿವಮೊಗ್ಗ ಜಿಲ್ಲೆಯಾದ್ಯಂತ ಮರಳು, ಕ್ವಾರಿಗಳ ಮೇಲೆ ಲೋಕಾಯುಕ್ತ ದಾಳಿ

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಮರಳು ಮತ್ತು ಕ್ವಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು  , ಮರಳು ಗಣಿಗಾರಿಕೆ ಹಾಗೂ ಸಂಗ್ರಹವನ್ನ ಪರಿಶೀಲಿಸಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಸಂಬಂಧ ಸಾಲು ಸಾಲು ದೂರುಗಳು ಕೇಳಿಬಂದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ, ತೀರ್ಥಹಳ್ಳಿ, ಭದ್ರಾವತಿ, ನಿಂಬೆಗೊಂದಿ, ಮಂಗೋಟೆ, ಸನ್ಯಾಸಿ ಕೊಡಮಗ್ಗಿ, ಹಾಡೋನಹಳ್ಳಿ, ಕೂಡಲಿ, ಮಂಡುವಳ್ಳಿ, ತೂದೂರು, ದಬ್ಬಣಗದ್ದೆ, ಹೊಸನಗರ ತಾಲೂಕಿನ ಹರಿದ್ರಾವತಿ, ಸಂಪಕಟ್ಟೆ ಮತ್ತು ಸಾಗರದ ಆವಿನಹಳ್ಳಿಯ ಕ್ವಾರಿಗಳ …

Read More »

ಡಿಕೆಶಿ ಅವಧಿಯಲ್ಲಾದರೂ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್ಡಿಕೆಶಿ ಅವಧಿಯಲ್ಲಾದರೂ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

ಧಾರವಾಡ: ಸಿದ್ದರಾಮಯ್ಯನವರ  ಮೂರು ವರ್ಷದ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ತೀವ್ರ ಹದಗೆಟ್ಟು ಹೋಗಿದೆ. ಡಿ.ಕೆ.ಶಿವಕುಮಾರ್  ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಅವರ ಅವಧಿಯಲ್ಲಾದರೂ ರಾಜ್ಯ ಅಭಿವೃದ್ಧಿ ಕಾಣಲಿ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್  ಹೇಳಿದರು. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 136 ಸೀಟು ಗೆಲ್ಲಿಸಿ ಅಧಿಕಾರಕ್ಕೆ ತಂದ ಜನರಿಗೆ ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ನ್ಯಾಯ ಸಿಕ್ಕಿಲ್ಲ. ಈ ರಾಜ್ಯ ಅಭಿವೃದ್ಧಿ ಆಗಲಿದೆ, ಸುಭಿಕ್ಷೆ ಹೊಂದಲಿದೆ …

Read More »

ಅಕ್ರಮ ಅದಿರು ಸಾಗಾಟ; 2 ಕೇಸ್‌ಗಳಲ್ಲಿ ಜನಾರ್ದನ ರೆಡ್ಡಿಗೆ ರಿಲೀಫ್‌ಅಕ್ರಮ ಅದಿರು ಸಾಗಾಟ; 2 ಕೇಸ್‌ಗಳಲ್ಲಿ ಜನಾರ್ದನ ರೆಡ್ಡಿಗೆ ರಿಲೀಫ್‌

ಬೆಂಗಳೂರು: ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಲೋಕಾಯುಕ್ತ ಎಸ್ಐಟಿ ದಾಖಲಿಸಿದ್ದ ಎರಡು ಪ್ರಕರಣದಿಂದ ಕೈಬಿಟ್ಟು ಜನಪ್ರತಿನಿಧಿಗಳ ವಿಶೇಷ ಕೊರ್ಟ್ ಆದೇಶ ಹೊರಡಿಸಿದೆ. ಜನಾರ್ದನ ರೆಡ್ಡಿ, ಮೆಹಫೂಜ್ ಅಲಿ ಖಾನ್, ಹೊತ್ತೂರ್ ಅಬ್ದುಲ್ ವಹಾಬ್, ಹೊತ್ತೂರ್ ನೂರ್ ಅಹಮದ್, ಹೊತ್ತೂರ್ ಮೊಹಮ್ಮದ್ ಇಕ್ಬಾಲ್, ಟ್ರೈಡೆಂಟ್ ಮೈನಿಂಗ್ ಕಂಪನಿ ವಿರುದ್ಧದ ಪ್ರಕರಣವನ್ನು ಕೈಬಿಟ್ಟು ಕೋರ್ಟ್‌ ಆದೇಶಿಸಿದೆ. ಬಳ್ಳಾರಿ ಉಸ್ತುವಾರಿ ಸಚಿವರಾಗಿ ಅಕ್ರಮ ಗಣಿಗಾರಿಕೆ ಪಿತೂರಿ …

Read More »

ರಾಜ್ಯಸಭೆ ಎಲೆಕ್ಷನ್ ಬಳಿಕ ಮೋದಿ ಕ್ಯಾಬಿನೆಟ್ ಪುನಾರಚನೆಗೆ ಪ್ಲ್ಯಾನ್

ನವದೆಹಲಿ: ಕೇಂದ್ರದ ಮೋದಿ ಕ್ಯಾಬಿನೆಟ್ ಕೂಡ ಜೂನ್ 15 ರಿಂದ 18 ರ ನಡುವೆ ಪುನಾರಚನೆ ಆಗುವ ಸಾಧ್ಯತೆ ಇದೆ. ಮುಂಬರುವ ನಿರ್ಣಾಯಕ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಬಿಜೆಪಿ ನಾಯಕತ್ವವು ರಾಜಕೀಯ ಮತ್ತು ಸಾಂಸ್ಥಿಕ ಪುನಾರಚನೆಗೆ ಸಿದ್ಧವಾಗ್ತಿದೆ. ಹೀಗಾಗಿ, ಹಲವಾರು ರಾಜ್ಯ ಸಚಿವರು ಸೇರಿದಂತೆ 1 ಡಜನ್‌ಗೂ ಹೆಚ್ಚು ಸಚಿವರನ್ನು ಕೈಬಿಡಬಹುದು ಅಥವಾ ಬದಲಾಯಿಸಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಪುನಾರಚನೆಯು 10-12 ಸಚಿವಾಲಯಗಳಲ್ಲಿ ನಾಯಕತ್ವ ಬದಲಾವಣೆಗಳನ್ನು ಒಳಗೊಂಡಿದ್ದು, ಹಲವಾರು …

Read More »

ಖಾಸಗಿ ವಿಡಿಯೋ ಇಟ್ಕೊಂಡು ಸಂಬಂಧಿಯಿಂದಲೇ ಬ್ಲ್ಯಾಕ್‌ಮೇಲ್‌ – ಹಣ ಹೊಂದಿಸಲು ಅತ್ತಿಗೆಯನ್ನೇ ಮುಗಿಸಿದ ನಾದಿನಿ

ಚಿಕ್ಕಬಳ್ಳಾಪುರ: ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಮಹಿಳೆಯ ಚಿನ್ನದ ಸರ ಕದ್ದು ಆಕೆಯ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಯಾರೂ ಊಹೆ ಮಾಡದ ಸಿನಿಮೀಯ ಟ್ವಿಸ್ಟ್ ಸಿಕ್ಕಿದೆ. ನಾದಿನಿಯೇ ತನ್ನ ಸಹೋದರ ಸಂಬಂಧಿಯ ಜೊತೆ ಸೇರಿ ಅಣ್ಣನ ಹೆಂಡತಿಯನ್ನ ಕೊಂದಿರೋದು ಪೊಲೀಸರ  ತನಿಖೆಯಲ್ಲಿ ಬಯಲಾಗಿದೆ. ನಗರದ ಬಾಪೂಜಿ ನಗರದ ನರಸಿಂಹಮೂರ್ತಿಯವರ ಮನೆಯಲ್ಲಿ ಮೇ 28 ರಂದು ಆತನ ಸೊಸೆ ಪುಷ್ಪಲತಾಳನ್ನ (23) ಕತ್ತು ಕೊಯ್ದು ಕೊಲೆ ಮಾಡಿದಂತೆ ಶವ ಪತ್ತೆಯಾಗಿತ್ತು. ಪುಷ್ಪಲತಾಳ …

Read More »