Breaking News
Home / ಸಿನೆಮಾ

ಸಿನೆಮಾ

ಸ್ಯಾಂಡಲ್ ವುಡ್ ನಟ ಚೇತನ್ ಅರೆಸ್ಟ್

ಬೆಂಗಳೂರು: ಕನ್ನಡ ಚಿತ್ರರಂಗದ ನಟ ಚೇತನ್ ಅವರನ್ನು ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಿಂದುತ್ವದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಹಿನ್ನಲೆಯಲ್ಲಿ ಚೇತನ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಚೇತನ್ ನನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ನಟ ಚೇತನ್ ವಿರುದ್ಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚೇತನ್ ವಿರುದ್ಧ ಐಪಿಸಿ ಸೆಕ್ಷನ್ 295A, 505B ಅಡಿ …

Read More »

ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್‌ ವಿಧಿವಶ

ಬೆಂಗಳೂರು: ಸ್ಯಾಂಡಲ್‌ ವುಡ್‌ ನ ಹಿರಿಯ ನಿರ್ದೇಶಕ ಶ್ರಿನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್‌ ಸೋಮವಾರ (ಫೆ.20 ರಂದು) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.   1966 ರಲ್ಲಿ ಬಂದ ʼಸಂಧ್ಯಾರಾಗʼ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ನಿರ್ದೇಶಕರಾಗಿ ಕನ್ನಡದಲ್ಲಿ ʼಕಸ್ತೂರಿ ನಿವಾಸʼ, ʼಎರಡು ಕನಸುʼ, ʼಬಯಲು ದಾರಿʼ, ʼಜೀವನ ಚೈತ್ರʼ,ʼಗಾಳಿ ಮಾತುʼ, ʼಹೊಸ …

Read More »

ರಶ್ಮಿಕಾಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಇತೀಚೆಗೆ ಇಡೀ ದೇಶವೇ ಕೊಂಡಾಡಿದ ಕಾಂತಾರ ಸಿನಿಮಾ ರಿಲೀಸ್‌ ಆದ ವೇಳೆ ಚಿತ್ರ ವೀಕ್ಷಿಸಿಲ್ಲ ಎಂಬ ಹೇಳಿಕೆ ಮೂಲಕ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು. ರಶ್ಮಿಕಾಗೆ ‘ಕೃತಜ್ಞತೆ ಇಲ್ಲ’ ಎಂದು ಹಲವರು ಅಸಮಾಧಾನ ಹೊರಹಾಕಿದ್ದರು. ನಟಿ ರಶ್ಮಿಕಾ ಮಂದಣ್ಣ ಕಾಂತಾರ ಚಿತ್ರವನ್ನು ನೋಡಿಲ್ಲ ಎಂಬ ಕಾಮೆಂಟ್‌ಗಳ ಸುತ್ತಲಿನ ವಿವಾದದ ಬಗ್ಗೆ ಇದೀಗ ರಿಷಬ್‌ ಶೆಟ್ಟಿ …

Read More »

ಕಾಂತಾರʼ ಸಿನಿಮಾ ಆಸ್ಕರ್‌ ರೇಸ್‌ ನಲ್ಲಿ ಸ್ಥಾನ

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶನ ʼಕಾಂತಾರʼ ಸಿನಿಮಾ ಆಸ್ಕರ್‌ ರೇಸ್‌ ನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಟ್ವಿಟರ್‌ ನಲ್ಲಿ ಮಾಹಿತಿಯನ್ನು ಕೊಟ್ಟಿದೆ. ಇತ್ತೀಚೆಗೆ ʼಕಾಂತಾರʼ ಸಿನಿಮಾವನ್ನು ಆಸ್ಕರ್‌ ಗೆ ಕಳುಹಿಸಲು ಅರ್ಜಿ ಸಲ್ಲಿಸಿದ್ದೇವೆ ಎಂದು ನಿರ್ಮಾಪಕ ವಿಜಯ್‌ ಕಿರಂದೂರು ಅವರು ಹೇಳಿದ್ದರು. ಟ್ವಟರ್‌ ನಲ್ಲಿ ಕಾಂತಾರಕ್ಕೆ ಆಸ್ಕರ್‌ ಸಿಗಬೇಕೆಂದು ಹಲವು ಮಂದಿ ಆಗ್ರಹಿಸಿದ್ದರು. ಪ್ರೇಕ್ಷಕರ ಮನವಿಯಂತೆ ಚಿತ್ರ ತಂಡ ಆಸ್ಕರ್‌ ಗಾಗಿ ಕಾಂತಾರವನ್ನು ಪರಿಗಣಿಸುವಂತೆ ಅರ್ಜಿ …

Read More »

ಅದ್ಧೂರಿಯಾಗಿ ಜರುಗಿದ ಅಭಿ-ಅವಿವಾ ನಿಶ್ಚಿತಾರ್ಥ

ಸ್ಯಾಂಡಲ್‌ವುಡ್‌ನಲ್ಲಿ ಈಗ ಸಾಲು ಸಾಲು ಮದುವೆ ಸಂಭ್ರಮಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಅದಿತಿ ಪ್ರಭುದೇವ ಅವರು ಮದುವೆ ಅದ್ಧೂರಿಯಾಗಿ ಜರುಗಿತ್ತು. ಕಳೆದ ಕೆಲ ದಿನಗಳ ಹಿಂದೆ ಹರಿಪ್ರಿಯಾ ವಸಿಷ್ಠ ಸಿಂಹ ಅವರ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ರೆಬೆಲ್ ಸ್ಟಾರ್ ಅಂಬರೀಶ್‌ ಮತ್ತು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಅವಿವಾ ಬಿದ್ದಪ್ಪ ಜೊತೆ ಅದ್ಧೂರಿಯಾಗಿ ನೆರವೇರಿತು. ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿಅಭಿಷೇಕ್‌ ಮತ್ತು ಅವಿವಾ ಎಂಗೇಜ್ಮೆಂಟ್‌ಅದ್ಧೂರಿಯಾಗಿ ನಡೆಯುತ್ತಿದೆ. ಕುಟುಂಬಸ್ಥರ …

Read More »

ನಾನು ಹೋಗುವಾಗ ಯಾರಾದ್ರೂ ಕಲ್ಲಲ್ಲಿ ಹೊಡೆಯಬಹುದು’ ಬೆಳಗಾವಿ ವಿವಾದದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ!

ಇತ್ತೀಚೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಬುಗಿಲೆದ್ದಿತ್ತು. ಬೆಳಗಾವಿ ಬಗ್ಗೆ ಮಹಾರಾಷ್ಟ್ರ ತಗಾದೆ ತೆಗೆದಿತ್ತು. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದರು. ಬೆಳಗಾವಿ ಬಗ್ಗೆ ಮತ್ತೆ ತಗಾದೆ ತೆಗೆದಿದ್ದಕ್ಕೆ ಬೆಳಗಾವಿಯಲ್ಲಿ ಪ್ರತಿಭಟನೆಗಳನ್ನು ಮಾಡಿದ್ದರು. ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದು, ವಾಹನದ ಗಾಜುಗಳನ್ನು ಒಡೆದು ಹಾಕಿದ್ದರು. ಹೀಗಾಗಿ ಒಂದೆರಡು ದಿನ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಆಗಾಗ ಸಾಮಾನ್ಯ ಜನರ ನಿದ್ದೆಯನ್ನು ಕೆಡಿಸುತ್ತಿರುವ ಬೆಳಗಾವಿ …

Read More »

ಕಾಮಿಡಿ ನಟಿ ನಯನಾ ವಿರುದ್ಧ ನಿಂದನೆ ಆರೋಪ, ಕೇಸ್‌ ದಾಖಲು

ಕಾಮಿಡಿ ನಟಿ ನಯನಾ ವಿರುದ್ಧ ಕೇಸ್ ದಾಖಲಾಗಿದೆ. ಜೀವ ಬೆದರಿಕೆ ಮತ್ತು ನಿಂದನೆ ಆರೋಪದಲ್ಲಿ ಕೇಸ್ ದಾಖಲಾಗಿದೆ. ಹಣದ ಹಂಚಿಕೆ ವಿಚಾರಕ್ಕೆ ನಯನಾ ಅವರು ಮತ್ತೊಬ್ಬ ಕಾಮಿಡಿ ನಟ ಸೋಮಶೇಖರ್‌ಗೆ ಬೆದರಿಕೆ ಹಾಕಿದ್ದಾರೆ (Crime news) ಎಂದು ಆರೋಪಿಸಲಾಗಿದೆ. ಸೋಮಶೇಖರ್ ರಿಂದ ದೂರು ದಾಖಲಾಗಿದೆ. ಕಾಮಿಡಿ ಕಿಲಾಡಿ ಗ್ಯಾಂಗ್ಸ್ ನಲ್ಲಿ ಸೋಮಶೇಖರ್ ತಂಡ ಭಾಗವಹಿಸಿತ್ತು. ಖಾಸಗಿ ಚಾನಲ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು. ಕಾರ್ಯಕ್ರಮದಲ್ಲಿ ಬಹುಮಾನದ ಹಣವಾಗಿ 3 ಲಕ್ಷ ಹಣ …

Read More »

ರಿಷಬ್ – ರಜನಿಕಾಂತ್ ಭೇಟಿಯಾದಾಗ ‘ಕಾಂತಾರ’ ಬಗ್ಗೆ ಚರ್ಚಿಸಿದ್ದು ಕನ್ನಡದಲ್ಲಾ, ತಮಿಳಿನಲ್ಲಾ?

ಕಾಂತಾರ ಸದ್ಯ ವಿಶ್ವದಾದ್ಯಂತ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಈ ಚಿತ್ರ ಈ ಪರಿ ಗೆಲ್ಲಲಿದೆ ಎಂದು ಯಾರೂ ಊಹಿಸಿರಲಿಲ್ಲ. ಸ್ವತಃ ಕಾಂತಾರ ಚಿತ್ರತಂಡ ಕೂಡ ಈ ಚಿತ್ರ ಇಷ್ಟರ ಮಟ್ಟಿಗೆ ಚಿತ್ರ ಜನರಿಗೆ ಇಷ್ಟವಾಗಲಿದೆ ಎಂದು ಊಹಿಸಿರಲಿಲ್ಲ. ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡದಿರುವುದೇ ಇದಕ್ಕೆ ಸಾಕ್ಷಿ. ಹೀಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡ ಕಾಂತಾರ ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡಬೇಕು ಎಂಬ ಕೂಗು ಹೆಚ್ಚಾದ ಬಳಿಕ ಹೊಂಬಾಳೆ ಫಿಲ್ಮ್ಸ್ …

Read More »

ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರದಾನ

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಮತ್ತು ಸಹಸ್ರಾರು ಅಭಿಮಾನಿಗಳ ಹರ್ಷೋದ್ಗಾರಗಳ ಮಧ್ಯೆಯೇ, ನಾಡಿನ ಜನರ ಮನಗೆದ್ದ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ, ಪುನೀತ್‌ ಅವರನ್ನು ಕಳೆದುಕೊಂಡು ಆಗಸವೇ ಅಳುತ್ತಿದೆ ಯೇನೋ ಎಂಬಂತೆ ಭೋರ್ಗರೆದು ಸುರಿಯುತ್ತಿದ್ದ ವರ್ಷಧಾರೆಯ ನಡುವೆಯೇ ಛತ್ರಿಯ ಆಸರೆಯಲ್ಲಿ ಸಮಾರಂಭ ನಡೆಯಿತು. ತಂದೆ ಡಾ. ರಾಜ್‌ಕುಮಾರ್‌ ಅವರಿಗೆ 30 ವರ್ಷಗಳ ಹಿಂದೆ …

Read More »

ಅಪ್ಪು ಕನಸಿನ ಗಂಧದಗುಡಿ ದರ್ಶನ ಫಸ್ಟ್ ಡೇ ಫಸ್ಟ್ ಶೋಗೆ ಭರ್ಜರಿ ರೆಸ್ಪಾನ್ಸ್

ಬೆಂಗಳೂರು: ಪುನೀತ್‌ ರಾಜ್‌ ಕುಮಾರ್ (puneeth Raj Kumar) ಕೊನೆಯ ಚಿತ್ರ ಗಂದಧಗುಡಿ (Gandhada Gudi) ಬೆಳ್ಳಿತೆರೆಯಲ್ಲಿ ರಾರಾಜಿಸಿದೆ. ಗಂಧದಗುಡಿ ಚಿತ್ರ ಇಂದು ಆಫಿಷಿಯಲ್ ತೆರೆಕಂಡಿದೆ. ಪರಮಾತ್ಮ’ನ ಕನಸಿನ ಕೂಸು ಬೆಳ್ಳಿ ತೆರೆಗೆ ಬಂದಿದೆ. ರಾಜ್ಯಾದ್ಯಂತ ಗಂಧದಗುಡಿ ಸಾಕ್ಷ್ಯಚಿತ್ರ ಪ್ರದರ್ಶನವಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ಥಿಯೇಟರ್ ಗಳಲ್ಲಿ ಗಂಧದಗುಡಿ ಪ್ರದರ್ಶನ ಕಂಡಿದೆ. ಅಭಿಮಾನಿಗಳು ದೊಡ್ಮನೆ ಹುಡುಗನನ್ನ ಕಣ್ತುಂಬಿಸಿಕೊಂಡಿದ್ದಾರೆ. ಥಿಯೇಟರ್ ಗಳೆಲ್ಲಾ ಹೌಸ್‍ಫುಲ್ ಆಗಿದ್ದು, ಎಲ್ಲೆಲ್ಲೂ ಅಪ್ಪು ಜಾತ್ರೆ ನಡೆಯುತ್ತಿದೆ. ಟೀಶರ್ಟ್, …

Read More »