Breaking News

ರಾಷ್ಟ್ರೀಯ

ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್‌ ವಂಚನೆ ಪ್ರಕರಣ ಅಧಿಕೃತವಾಗಿ ಸಿಐಡಿಗೆ ಹಸ್ತಾಂತರ

ಕಳೆದ 10 ವರ್ಷಗಳಿಂದ ಈ ಸೊಸೈಟಿ ಚಾಲ್ತಿಯಲ್ಲಿತ್ತು. ಅದರ ನಂಬಿಕೆ ಆಧಾರದ ಮೇಲೆ ಜನ ಹೆಚ್ಚು ಹೆಚ್ಚಾಗಿ ಇತ್ತೀಚೆಗೆ ಠೇವಣಿಗಳನ್ನು ಇಡತೊಡಗಿದ್ದರು. ಜನರ ಆ ಅಮಾಯಕ ನಂಬಿಕೆಯನ್ನೇ ಆಧಾರವಾಗಿಸಿಕೊಂಡು ಹಣ ಕ್ರೋಢೀಕರಣವಾಗುತ್ತಿದ್ದಂತೆ ಸೊಸೈಟಿ ಕಡೆಯಿಂದ ವಂಚನೆ ನಡೆದಿದ್ದು, ಇಬ್ಬರು ಪರಾರಿಯಾಗಿದ್ದರು. ಬೆಂಗಳೂರು: ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್‌ ವಂಚನೆ ಪ್ರಕರಣದ ತನಿಖೆ ಸಿಐಡಿಗೆ ಅಧಿಕೃತ ಹಸ್ತಾಂತರವಾಗಿದೆ. ಹನುಮಂತನಗರ ಠಾಣೆ ಪೊಲೀಸರು ಸಿಐಡಿಗೆ ಇಂದು (ಆಗಸ್ಟ್ 26) ಅಧಿಕೃತವಾಗಿ ಪ್ರಕರಣದ ತನಿಖೆಯನ್ನು ಮುಂದುವರೆಸುವಂತೆ …

Read More »

ರಾಯಚೂರಿನಲ್ಲಿ ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ 59 ಮಕ್ಕಳ ರಕ್ಷಣೆ

ಕೂಲಿ ಕೆಲಸಕಕ್ಕೆ ಕರೆದೊಯ್ಯುತ್ತಿದ್ದ ಸುಮಾರು 59 ಮಕ್ಕಳನ್ನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಮತ್ತು ಸಿರವಾರ ಕ್ರಾಸ್ ಬಳಿ ರಕ್ಷಣೆ ಮಾಡಲಾಗಿದೆ. ಜೊತೆಗೆ ಬಾಲ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ 5 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ರಾಯಚೂರು: ಸರ್ಕಾರ 14 ವರ್ಷದವರೆಗೆ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕು. ಜೊತೆಗೆ ಈ ಅವಧಿಯಲ್ಲಿ ಮಕ್ಕಳು ದುಡಿಯುವಂತಿಲ್ಲ ಎಂದು ಭಾರತ ಸಂವಿಧಾನ ತಿಳಿಸಿದೆ. ತಮ್ಮ ತಮ್ಮ ಮನೆಗಳಲ್ಲಿ ಕೆಲಸಗಳನ್ನು ಮಾಡಬಹುದು. ಆದರೆ ಒತ್ತಾಯದಿಂದ ಕೆಲಸಕ್ಕೆ …

Read More »

ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡುತ್ತೇವೆ: ಬಾಲಚಂದ್ರ ಜಾರಕಿಹೊಳಿ

    ರಮೇಶ್​ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ನವದೆಹಲಿಯ ಕರ್ನಾಟಕ ಭವನಕ್ಕೆ ಜಾರಕಿಹೊಳಿ ಸಹೋದರರು ಆಗಮಿಸಿದ್ದಾರೆ. ನಾವು ಬೇರೆ ಕೆಲಸದ ವಿಚಾರವಾಗಿ ನವದೆಹಲಿಗೆ ಬಂದಿದ್ದೇವೆ. ಸಿಎಂ ಬಂದಿದ್ದಾರೆಂದು ಗೊತ್ತಾಯ್ತು. ಹಾಗಾಗಿ, ಭೇಟಿಗೆ ಆಗಮಿಸಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಹೋಗುತ್ತೇವೆ. ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿ​ಗೆ ಸಚಿವ ಸ್ಥಾನ …

Read More »

ಪ್ರತಿ ಕ್ವಿಂಟಾಲ್ ಗೆ 7,275 ರೂ.ಗಳಂತೆ ಹೆಸರು ಕಾಳು ಖರೀದಿಗೆ ಸಹಕಾರ ಇಲಾಖೆ ಆದೇಶ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಹೆಸರು ಮತ್ತು ಉದ್ದು ಬೆಳೆಗೆ ಬೆಂಬಲ ಬೆಲೆ ಘೋಷಿಸಿ, ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಬೆಂಬಲ ಬೆಲೆ ಆಧಾರದ ಮೇಲೆ 30 ಸಾವಿರ ಟನ್ ಹೆಸರು ಕಾಳು ಹಾಗೂ 10 ಸಾವಿರ ಟನ್ ಉದ್ದಿನ ಕಾಳು ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪ್ರತಿ ಎಕೆರೆಗೆ 4 ಕ್ವಿಂಟಾಲ್ ಗರಿಷ್ಟ, ಪ್ರತಿ ರೈತರಿಂದ 6 ಕ್ವಿಂಟಾಲ್ ಹೆಸರು ಕಾಳು ಖರೀದಿ ಮಾಡಬೇಕು. ಉದ್ದಿನ …

Read More »

ವಿದ್ಯಾರ್ಥಿನಿ ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆ : ಆರೋಪಿಗಳಿಗಾಗಿ ಶೋಧ

ಮೈಸೂರು : ಲಲಿತಾದ್ರಿಪುರದಲ್ಲಿ ನಡೆದಿದ್ದ ಯುವತಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಇದೀಗ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಗ್ಯಾಂಗ್‌ರೇಪ್‌ ಮಾಡಿದ್ದ ಆರೋಪಿಗಳು ಯುವತಿಯ ವಿಡಿಯೋವನ್ನು ಸೆರೆ ಹಿಡಿದು, ಮೂರು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಿದೇ ಇದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆನ್ನುವ ಸ್ಫೋಟಕ‌ ಮಾಹಿತಿ ಬಹಿರಂಗವಾಗಿದೆ.   ಮಹಾರಾಷ್ಟ್ರ ಮೂಲದ ವಿದ್ಯಾರ್ಥಿನಿಯೋರ್ವಳು ತನ್ನ ಸ್ನೇಹಿತನ ಜೊತೆಗೆಯಲ್ಲಿ ಕುಳಿತಿದ್ದ ವೇಳೆಯಲ್ಲಿ ಬಂದಿದ್ದ ಕಾಮುಕರು, ಯುವಕನ ಮೇಲೆ …

Read More »

ರಾಜ್ಯದಲ್ಲಿ ಹಗರಣಗಳ ಸರ್ಕಾರ: ಡಿಕೆಶಿ ಆರೋಪ

ಬೆಂಗಳೂರು: ರಾಜ್ಯದಲ್ಲಿ ಹಗರಣಗಳ ಸರ್ಕಾರವಿದ್ದು, ಆರೋಗ್ಯ ಕ್ಷೇತ್ರದ ಔಷಧ, ವೆಂಟಿಲೇಟರ್‌, ಆಯಂಬುಲೆನ್ಸ್‌ ವಿಚಾರದಲ್ಲೂ ಹಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಕೇಂದ್ರ ಸರ್ಕಾರ 4 ಕೋಟಿ ರೂ.ಗೆ ಖರೀದಿಸಿದ್ದನ್ನು ರಾಜ್ಯ ಸರ್ಕಾರ 22 ಕೋಟಿ ರೂ.ಗೆ ಖರೀದಿ ಮಾಡುವಷ್ಟರ ಮಟ್ಟಿಗೆ ಹಗರಣದಲ್ಲಿ ಮುಳುಗಿದೆ ಎಂದು ಟೀಕಿಸಿದರು. ಕೋವಿಡ್‌ ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗದ ಸಮಯದಲ್ಲಿ …

Read More »

ಕರ್ನಾಟಕ ಹೈಕೋರ್ಟ್- ಎರಡನೇ ವಿಭಾಗ ಸಹಾಯಕರ (ಎಸ್ಡಿಎ) ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ಹೈಕೋರ್ಟ್‌ಗೆ 142 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ karnatakajudiciary.kar.nic ನಲ್ಲಿ ಪರಿಶೀಲಿಸಬಹುದು. ಅಭ್ಯರ್ಥಿಗಳು ಸೆಪ್ಟೆಂಬರ್ 24, 2021 ರೊಳಗೆ ಅರ್ಜಿ ಸಲ್ಲಿಸಬಹುದು. ನೇಮಕಾತಿ ನಡೆಯುತ್ತಿರುವ ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 142. ಒಮ್ಮೆ ನೇಮಕಗೊಂಡ ನಂತರ, ಅಭ್ಯರ್ಥಿಗಳು ಎರಡು ವರ್ಷಗಳ ಕಾಲ ಪರೀಕ್ಷಾ ಅವಧಿಯಲ್ಲಿರುತ್ತಾರೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು 35 ವರ್ಷ ಮೀರಿರಬಾರದು. …

Read More »

ಯೋಗಿ ಆದಿತ್ಯನಾಥ್​ಗೆ ಚಪ್ಪಲಿಯಿಂದ ಹೊಡೆಯಬೇಕು’ ಎಂದಿದ್ದ ಸಿಎಂ ಉದ್ಧವ್ ಠಾಕ್ರೆ; ವಿಡಿಯೋ ವೈರಲ್​​

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆರನ್ನು ಪೊಲೀಸರು ಬಂಧಿಸಿದ್ದರು. ಈ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಉದ್ಧವ್​​​​ ಠಾಕ್ರೆ ನೀಡಿದ್ದ ಹಳೆ ಹೇಳಿಕೆಯೊಂದು ಸೋಷಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಯೋಗಿ ಆದಿತ್ಯನಾಥ್​​​​ ಒಬ್ಬ ಯೋಗಿ, ಹೇಗೆ ತಾನೇ ಸಿಎಂ ಆಗಲು ಸಾಧ್ಯ. ಇವರು ರಾಜಕೀಯ ತೊರೆದು ಗುಹೆಯಲ್ಲಿ ಕೂರಬೇಕು. ಶಿವಾಜಿಯ ಪಟ್ಟಾಭಿಷೇಕಕ್ಕೆ ಉತ್ತರ ಪ್ರದೇಶದಿಂದ …

Read More »

ಎಲ್ಲಾ ಕುಡುಕರು ಸೇರಿ ನನಗೆ ಕುಡುಕನ ಪಟ್ಟ ಕಟ್ಟಿದ್ರು; ಸಿ.ಟಿ ರವಿ

ಮೈಸೂರು: ಎರಡು ವರ್ಷಗಳ ಹಿಂದೆ ಅಪಘಾತ ಪ್ರಕರಣವೊಂದರಲ್ಲಿ ಎಲ್ಲಾ ಕುಡುಕರು ಸೇರಿ ನನಗೆ ಕುಡುಕನ ಪಟ್ಟ ಕಟ್ಟಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 8000 ಕೋಟಿ GST ಬಂದಿದೆ. ಕರ್ನಾಟಕದ ಪಾಲು ಕೇಂದ್ರ ಬಿಡುಗಡೆ ಮಾಡಿದೆ. ಕೆಲವರಿಗೆ ಸುಳ್ಳೇ ಮನೆ ದೇವರು, ಸುಳ್ಳನ್ನೇ ಸತ್ಯ ಎಂದು ಹೇಳುತ್ತಾರೆ. ನನಗೆ ಕುಡುಕನ ಪಟ್ಟ ಕಟ್ಟಿದ ಹಾಗೆಯೇ GST …

Read More »

ರೈತರ ಆದಾಯ ದ್ವಿಗುಣಕ್ಕೆ ಎರಡನೇ ಕೃಷಿ ನಿರ್ದೇಶನಾಲಯ ಆರಂಭ : ಸಿಎಂ

ಬೆಂಗಳೂರು ;ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸಲು ರಾಜ್ಯಸರ್ಕಾರ ಹಲವಾರು ಕ್ರಮಗಳನ್ನು ಜಾರಿಗೊಳಿಸಲಿದ್ದು, ರೈತರ ಉತ್ಪನ್ನಗಳ ಮೌಲ್ಯ ಹೆಚ್ಚಿಸಲು 2ನೇ ಕೃಷಿ ನಿರ್ದೇಶನಾಲಯವನ್ನು ಅಸ್ಥಿತ್ವಕ್ಕೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ, ಪಶುಸಂಗೋಪನೆ, ಡೈರಿ, ಮೀನುಗಾರಿಕೆ ಒಳಗೊಂಡಂತೆ ಆಗ್ರೋ ಉತ್ಪನ್ನಗಳ ಸಂಸ್ಕರಣೆಗೆ ಒತ್ತು ನೀಡಿ ಉತ್ಪನ್ನಗಳ ಮೌಲ್ಯ ಹೆಚ್ಚಿಸಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗುವುದು. ಇದಕ್ಕೆ ಸೆಕೆಂಡರಿ ಅಗ್ರಿಕಲ್ಚರ್ ಡೈರೆಕ್ಟರೇಟ್ ಎಂದು ಹೆಸರಿಟ್ಟು ಕೃಷಿಯಲ್ಲಿ ದೊಡ್ಡ ಬದಲಾವಣೆ ಮಾಡುವ ಮೂಲಕ …

Read More »