Breaking News

ರಾಷ್ಟ್ರೀಯ

ಕರ್ನಾಟಕದಲ್ಲಿ ಹೊಸದಾಗಿ 789 ಜನರಿಗೆ ಕೊರೊನಾ ದೃಢ; 23 ಮಂದಿ ಸಾವು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಸೆಪ್ಟೆಂಬರ್ 24) ಹೊಸದಾಗಿ 789 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,71,833 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,20,792 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 23 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,706 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 13,306 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ …

Read More »

ರಿಯಾಲಿಟಿ ಶೋನಲ್ಲಿ ಆಲ್ಕೋಹಾಲ್ ಸೇವನೆ.. ಕಪಿಲ್ ಶರ್ಮಾ ವಿರುದ್ಧ FIR

ರಿಯಾಲಿಟಿ ಶೋ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸುವ ಕಪಿಲ್ ಶರ್ಮಾಗೆ ಇದೀಗ ಸಂಕಷ್ಟ ಎದುರಾಗಿದೆ. ಕಪಿಲ್ ಶರ್ಮಾ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ತನ್ನ ರಿಯಾಲಿಟಿ ಶೋನ ಶೂಟ್ ಒಂದರಲ್ಲಿ ಕೋರ್ಟ್ ಸೀನ್ ಶೂಟ್ ಮಾಡುವಾಗ ಮದ್ಯ ಸೇವಿಸಿದ್ದಾರೆ ಎಂದು ಮಧ್ಯಪ್ರದೇಶದಲ್ಲಿ ದೂರು ನೀಡಲಾಗಿದ್ದು ಎಫ್​ಐಆರ್ ದಾಖಲಾಗಿದೆ. ಮಧ್ಯಪ್ರದೇಶದ ವಕೀಲರೊಬ್ಬರು ಸಿಜೆಎಂ ಕೋರ್ಟ್​ನಲ್ಲಿ ಈ ಎಫ್​ಐಆರ್ ದಾಖಲಿಸಿದ್ದಾರೆ. ಅಕ್ಟೋಬರ್ 1 ರಂದು ಪ್ರಕರಣದ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ದೂರು ನೀಡಿರುವ ವಕೀಲರು.. …

Read More »

ದಿನಗೂಲಿ ಕಾರ್ಮಿಕನ ಖಾತೆಗೆ ಜಮಾ ಆಯ್ತು ಬರೋಬ್ಬರಿ ₹9.99 ಕೋಟಿ; ಹೇಗೆ ಗೊತ್ತಾ?

ಪಾಟ್ನಾ: ಇತ್ತೀಚೆಗೆ ಬಿಹಾರದಲ್ಲಿ ಇಬ್ಬರು ಮಕ್ಕಳ ಖಾತೆಗೆ ಸುಮಾರು 900 ಕೋಟಿ ರೂಪಾಯಿಗೂ ಹೆಚ್ಚು ಹಣ ಜಮಾ ಆಗಿತ್ತು. ಈ ಬೆನ್ನಲ್ಲೇ ರೈತನೋರ್ವನ ಖಾತೆಗೆ 50 ಕೋಟಿ ರೂಪಾಯಿ ಜಮೆಯಾದ ಬಳಿಕ ಈಗ ದಿನಗೂಲಿ ಕಾರ್ಮಿಕ ಬ್ಯಾಂಕ್​​ ಅಕೌಂಟ್​​ಗೆ 9.99 ಕೋಟಿ ರೂ. ಠೇವಣಿಯಾದ ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಖಾತೆ ತೆರೆಯಲು ಹೋದ ದಿನಗೂಲಿ ಕಾರ್ಮಿಕನ ಅಚ್ಚರಿ ಕಾದಿತ್ತು. ತನ್ನ ಖಾತೆಯಲ್ಲಿ 9.99 …

Read More »

ಅಸ್ಪೃಶ್ಯತೆ ನಿವಾರಣೆಗೆ ಪಣತೊಟ್ಟ ಕೊಪ್ಪಳ ಪೊಲೀಸರು; ಹಳ್ಳಿ ಹಳ್ಳಿಗೂ ತೆರಳಿ ಜನರಿಂದ ಪ್ರತಿಜ್ಞೆ

ಕೊಪ್ಪಳ: ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಇನ್ನೂ ಅಸ್ಪೃಶ್ಯತೆ ಜೀವಂತವಾಗಿ ಉಸಿರಾಡುತ್ತಿದೆ. ಇದಕ್ಕೆ ಉದಾಹರಣೆಯೇ ಇತ್ತೀಚೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ದೇವರ ದರ್ಶನಕ್ಕಾಗಿ ಹನುಮಂತ ದೇವರ ದೇವಸ್ಥಾನಕ್ಕೆ ಪ್ರವೇಶ ಮಾಡಿದ ದಲಿತ ಬಾಲಕನಿಗೆ ದಂಡ ವಿಧಿಸಿದ್ದಾರೆ. ಹೀಗಿರುವಾಗಲೇ ಅಸ್ಪೃಶ್ಯತೆ ನಿವಾರಣೆಗಾಗಿ ಕೊಪ್ಪಳ ಪೊಲೀಸರು ಪಣತೊಟ್ಟಿದ್ದಾರೆ. ಹೌದು, ಇನ್ನೂ ಕೊಪ್ಪಳದಲ್ಲಿ ಜೀವಂತವಾಗಿರುವ ಅಸ್ಪೃಶ್ಯತೆ ನಿವಾರಣೆಗೆ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿಯೇ ಜಿಲ್ಲೆಯ ಹಳ್ಳಿ ಹಳ್ಳಿಗೂ ತೆರಳಿ ಅಸ್ಪೃಶ್ಯತೆ ನಿವಾರಣೆಗೆ ಪ್ರತಿಜ್ಞೆ ಮಾಡಿಸುತ್ತಿದ್ದಾರೆ. …

Read More »

ಅಪ್ರಾಪ್ತ ಬಾಲಕಿ ಮೇಲೆ 8 ತಿಂಗಳಿಂದ ಕಾಮುಕರು ಅಟ್ಟಹಾಸ 26 ಜರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಅಪ್ರಾಪ್ತರು

ಮುಂಬೈ: ಅಪ್ರಾಪ್ತ ಬಾಲಕಿ ಮೇಲೆ 8 ತಿಂಗಳಿಂದ ಕಾಮುಕರು ಅಟ್ಟಹಾಸ ಮೆರೆದು ನೀಚ ಕೃತ್ಯವೆಸಗಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ಬೆಳಕಿಗೆ ಬಂದಿದೆ. 8 ತಿಂಗಳಿಂದ 15 ವರ್ಷದ ಬಾಲಕಿ ಮೇಲೆ 33 ಜನರಿಂದ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗಿದ್ದು, ಬಾಲಕಿ ಕೊಟ್ಟಿರುವ ದೂರಿನ ಆಧಾರದ ಮೇಲೆ 26 ಜರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಅಪ್ರಾಪ್ತರು ಎಂದು ತಿಳಿದುಬಂದಿದೆ. ಬಾಲಕಿ, ಕಿರಾತಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿ ಸಲುಗೆಯಿಂದ ಜಾಲತಾಣಗಳಲ್ಲಿ ಖಾಸಗಿ …

Read More »

‘ತಾತನಾದೆ ಎಂದು ಹೇಳಲು ಅತೀವ ಸಂತಸವಾಗ್ತಿದೆ’ -ಹೆಚ್​​ಡಿಕೆ ಹರ್ಷ

ಬೆಂಗಳೂರು: ಮಾಜಿ ಸಿಎಂ ಹೆಚ್​ಡಿ ಕುಮಾರ ಸ್ವಾಮಿ ಅವರ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದ್ದು, ನಿಖಿಲ್​ ಕುಮಾರಸ್ವಾಮಿ ಅವರ ಪತ್ನಿ ರೇವತಿ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ತಮ್ಮ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಕುಮಾರಸ್ವಾಮಿ ಅವರು, ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಹೆಚ್​​ಡಿಕೆ, ನನ್ನ ಜೀವನದಲ್ಲಿ ಇನ್ನೊಂದು ಶುಭ ಘಳಿಗೆ ಬಂದಿದೆ. ನಮ್ಮ …

Read More »

ಮಾಜಿ ಸಿಎಂ ಬಿ.ಎಸ್.​​ ಯಡಿಯೂರಪ್ಪಗೆ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ

ಬೆಂಗಳೂರು: ಲೋಕಸಭೆ ಮಾದರಿಯಲ್ಲಿ ರಾಜ್ಯ ವಿಧಾನ ಮಂಡಲದಲ್ಲೂ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಮೊದಲ ಬಾರಿಗೆ ಪ್ರದಾನ ಮಾಡಲಾಗಿದ್ದು, ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ ಅವರು ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕುರಿತು ಮಾತನಾಡಿದ ಸ್ಪೀಕರ್ ಕಾಗೇರಿ ಅವರು, ಹಲವು ರಾಜ್ಯಗಳಲ್ಲಿ ಉತ್ತಮ ಶಾಸಕ ಪ್ರಶಸ್ತಿ ಕೊಡುವ ಸಂಪ್ರದಾಯವಿದೆ. ಅತ್ಯುತ್ತಮ ಶಾಸಕ ಪ್ರಶಸ್ತಿ ಆಯ್ಕೆಗೆ ಸಮಿತಿಯನ್ನು ರಚನೆ ಮಾಡಲಾಗಿದ್ದು, ಸ್ಪೀಕರ್ ನೇತೃತ್ವದ ಸಮಿತಿಯಲ್ಲಿ ಸಿಎಂ ಬೊಮ್ಮಾಯಿ‌, ಸಿದ್ದರಾಮಯ್ಯ, ಮಾಧುಸ್ವಾಮಿ, ದೇಶಪಾಂಡೆ …

Read More »

ಪೆಟ್ರೋಲ್, ಡೀಸೆಲ್​ಗೆ ನೀರು ಬೆರಕೆ! ಬಂಕ್ ಮಾಲೀಕರ ವಿರುದ್ಧ ಆಕ್ರೋಶ

ಬಾಗಲಕೋಟೆ: ಒಂದು ಕಡೆ ಪೆಟ್ರೋಲ್ ಡಿಸೆಲ್ ಬೆಲೆ ಗಗನಕ್ಕೆ ಏರಿದೆ. ಇಂಧನದ ಖರ್ಚು ವೆಚ್ಚದ ಭರಾಟೆಯಲ್ಲಿ ಗ್ರಾಹಕರು ಸಿಲುಕಿದ್ದಾರೆ. ಮತ್ತೊಂದೆಡೆ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಡೀಸೆಲ್​ನಲ್ಲಿ ನೀರು ಬೆರಕೆ ಮಾಡಲಾಗಿದೆ. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಬಂಕ್ ಎದುರು ಜಮಾಯಿಸಿದ ಬೈಕ್ ಹಾಗೂ ಇತರ ವಾಹನ ಸವಾರರು ಬಂಕ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಹಾಗೂ ಡಿಸೇಲ್ ನಲ್ಲಿ …

Read More »

ನರೇಂದ್ರ ಗಿರಿ ಅಸಹಜ ಸಾವು ಕೇಸ್; FIR ದಾಖಲಿಸಿ ತನಿಖೆ ಆರಂಭಿಸಿದ ಸಿಬಿಐ

ನವದೆಹಲಿ: ದೇಶದಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಅಖಿಲ ಭಾರತೀಯ ಅಖಾಡ ಪರಿಷದ್ ಅಧ್ಯಕ್ಷ ನರೇಂದ್ರಗಿರಿ ಅಸಹಜ ಸಾವಿನ ತನಿಖೆಯನ್ನ ಇಂದಿನಿಂದ ಸಿಬಿಐ ಅಧಿಕೃತವಾಗಿ ವಹಿಸಿಕೊಂಡಿದೆ. ತನಿಖೆ ಹಿನ್ನೆಲೆಯಲ್ಲಿ 6 ಅಧಿಕಾರಿಗಳ ನೇತೃತ್ವದ ತಂಡ ಪ್ರಯಾಗ್​ರಾಜ್​ ನಗರಕ್ಕೆ ಆಗಮಿಸಿದ್ದು, ಪ್ರಕರಣ ಸಂಬಂಧ ಎಫ್​ಐಆರ್ ದಾಖಲಿಸಿಕೊಂಡಿದೆ. ಕಳೆದ ಸೋಮವಾರ ಬಘಮಬರಿ ಗದ್ದಿ ಮಠದಲ್ಲಿರುವ ರೂಮಿನಲ್ಲಿ ನರೇಂದ್ರ ಗಿರಿಯ ಶವ ಪತ್ತೆಯಾಗಿತ್ತು. ನರೇಂದ್ರ ಗಿರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಡೆತ್​ನೋಟ್ ಕೂಡ ಸಿಕ್ಕಿದೆ. ಇನ್ನು …

Read More »

ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್‍ನಿಂದ ಸಂಪೂರ್ಣ ಬೆಂಬಲ

ಬೆಂಗಳೂರು: ಒಕ್ಕೂಟ ಸರ್ಕಾರವು ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಪೂರ್ಣ ಬೆಂಬಲ ಘೋಷಿಸುತ್ತದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತಿಳಿಸಿದ್ದಾರೆ. ಒಕ್ಕೂಟ ಸರ್ಕಾರವು ವಿವಾದಿತ ಕೃಷಿ ಕಾನೂನು ಜಾರಿಗೆ ತಂದು ಒಂದು ವರ್ಷವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ. ರೈತ ವಿರೋಧಿಕಾಯ್ದೆಗಳನ್ನು ಹಿಂಪಡೆಯಬೇಕೆಂದು …

Read More »