Breaking News

ರಾಷ್ಟ್ರೀಯ

ಗೋಕಾಕ ತಾಲೂಕಿನ ಕಪರಟ್ಟಿಯಲ್ಲಿ ಮನಕಲುಕುವ ಘಟನೆ: ತ್ರಿಬಲ್ ಶಾಕ್

ಗೋಕಾಕ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನು ಸಹಿತ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಗೋಕಾಕ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೆಳಿಗ್ಗೆ ನಸುಕಿನ ಜಾವ ಸುಮಾರು 4 ಘಂಟೆಗೆ ಅನಾರೋಗ್ಯದಿಂದ 10 ನೇ ತರಗತಿಯಲ್ಲಿ ಓದುತ್ತಿದ್ದ ಸತೀಶ್ ಬಾಗನ್ನವರ (16) ಮೃತಪಟ್ಟಿದ್ದರು. ಈತನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಬದುಕುಳಿಯುವುದಿಲ್ಲ ಎಂದು ಇವನ ಅಣ್ಣ ಬಸವರಾಜ ಬಾಗನ್ನವರ (24) ಗೆ ತಿಳಿದಾಗ, ಇತನು ಸಹಿತ ಕುಸಿದು …

Read More »

22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ…ಮಾಜಿ ಸೈನಿಕನನ್ನು ಅದ್ಧೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ…

22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ…ಮಾಜಿ ಸೈನಿಕನನ್ನು ಅದ್ಧೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ… ಮಾಜಿ ಸೈನಿಕನನ್ನು ಅದ್ಧೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು ಹಾಲಗಿಮರ್ಡಿಯ ಯೋಧ ಮಂಜುನಾಥ ಪಟಾತ್ ಜೈ ಘೋಷಣೆಗಳನ್ನು ಕೂಗಿ ಸಂಭ್ರಮ ಮಂಜುನಾಥ ರಾಮಪ್ಪ ಪಟಾತ್ ಅವರು 22 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ತಮ್ಮ ಸ್ವಗ್ರಾಮಕ್ಕೆ ಮರಳಿದ್ದು, ಬೆಳಗಾವಿಯಲ್ಲಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬೆಳಗಾವಿ ಜಿಲ್ಲೆಯ ಹಾಲಗಿಮರ್ಡಿಯ ಮಂಜುನಾಥ ರಾಮಪ್ಪ ಪಟಾತ್ …

Read More »

ಮನೆ ದೇವರನ್ನು ಪೂಜಿಸಿ ಗ್ರಾಮ ದೇವರಿಗೆ ವಂದಿಸಿದರೆ ಮಾತ್ರ ಶಾಂತಿ ಲಭಿಸುವುದು – ಚಂದ್ರಶೇಖರ ಶ್ರೀಗಳು.

ಹುಕ್ಕೇರಿ : ಮನೆ ದೇವರನ್ನು ಪೂಜಿಸಿ ಗ್ರಾಮ ದೇವರಿಗೆ ವಂದಿಸಿದರೆ ಮಾತ್ರ ಶಾಂತಿ ಲಭಿಸುವುದು – ಚಂದ್ರಶೇಖರ ಶ್ರೀಗಳು. ನಮ್ಮ ನಮ್ಮ ಮನೆಯ ದೇವರನ್ನು, ಗುರು ಮಠಗಳನ್ನು ಊರಿನ ಪರಂಪರೆಯನ್ನು ಬೀಡಬೇಡಿ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ದಸರಾ ಸಂದೇಶ ನೀಡಿದರು. ಹುಕ್ಕೇರಿ ನಗರದಲ್ಲಿ ಕಳೆದ ಹತ್ತು ದಿನಗಳಿಂದ ಹಿರೇಮಠದ ದಸರಾ ಉತ್ಸವದಲ್ಲಿ ಗುಡ್ಡಾಪೂರ ದಾನಮ್ಮಾ ದೇವಿ ಪುರಾಣ ಪ್ರವಚನ, ಚಂಡಿಕಾ ಹೋಮ, ಗುರುಶಾಂತೇಶ್ವರ ರಥೋತ್ಸವ ಹಾಗೂ ದೇವಿ …

Read More »

ದೇವರಗಟ್ಟು ಬನ್ನಿ ಉತ್ಸವದಲ್ಲಿ ಬಡಿಗೆಗಳಿಂದ ಕಾದಾಟ ಇಬ್ಬರು ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

ಬಳ್ಳಾರಿ/ಆಂಧ್ರ ಪ್ರದೇಶ: ಹಬ್ಬ ಒಂದೇ ಆದರೂ ಅವುಗಳ ಆಚರಣೆಯ ವಿಧಾನಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತವೆ. ಮೈಸೂರಿನಲ್ಲಿ ವಿಜಯದಶಮಿಯನ್ನು ಅಂಬಾರಿ ಮೇಲೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನಿಟ್ಟು ವಿಜೃಂಭಣೆಯಿಂದ ಜಂಬೂ ಸವಾರಿ ಮೆರವಣಿಗೆ ನಡೆಸಿದರೆ, ರಾಜ್ಯದ ಗಡಿ ಭಾಗವಾದ ದೇವರ ಗಟ್ಟು ಎಂಬಲ್ಲಿ ಇದರ ಆಚರಣೆ ವಿಭಿನ್ನ ಅಷ್ಟೇ ಅಲ್ಲ, ವಿಚಿತ್ರವೂ ಕೂಡಾ. ಇಲ್ಲಿ ವಿಜಯ ದಶಮಿಯ ವೇಳೆ ದೇವರ ಉತ್ಸವ ಮೂರ್ತಿಗಾಗಿ ಗ್ರಾಮಸ್ಥರ ನಡುವೆ ಬಡಿಗೆಗಳಿಂದ ಹೊಡೆದಾಟವೇ ನಡೆಯುತ್ತದೆ. ಇದು ನಿಮಗೆ ಅಚ್ಚರಿ …

Read More »

ಪೇಸ್‌ಮೇಕರ್‌ ಚಿಕಿತ್ಸೆ ಯಶಸ್ವಿ, ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯಕ್ಕೊಳಗಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್​​ ಮೇಕರ್​ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಗುರುವಾರ ಸಂಜೆ ಬೆಂಗಳೂರಿನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್​ ಮಾಡಿರುವ ಕಾಂಗ್ರೆಸ್​, ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ದೈನಂದಿನ ಕಾರ್ಯಕ್ಕೆ ಮರಳಲಿದ್ದಾರೆ ಎಂದು ತಿಳಿಸಿದೆ. ಖರ್ಗೆ ಚೇತರಿಕೆ ಕಾಣುತ್ತಿದ್ದಾರೆ. ಅವರಿಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಶೀಘ್ರದಲ್ಲೇ ವೈದ್ಯರ ಸಲಹೆಯ ಬಳಿಕ ಅವರು ತಮ್ಮ ಚಟುವಟಿಕೆಗಳಿಗೆ …

Read More »

ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಕಣಬರಗಿ ನಿವಾಸಿಯೊಬ್ಬರು ಸಾವಯವ ಕೃಷಿಯತ್ತ ಸಾಗಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಬೆಳಗಾವಿ : ಕಲಿತಿದ್ದು ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್. ಬಾರ್ ಉದ್ಯಮ, ಸರ್ಕಾರಿ ಗುತ್ತಿಗೆ ಸೇರಿ ಮತ್ತಿತರ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡಿದ್ದರು. ವ್ಯಾಪಾರದಲ್ಲಿ ಲಕ್ಷ ಲಕ್ಷ ಗಳಿಸಿದರೂ ಮನಸ್ಸಿಗೆ ಮಾತ್ರ ನೆಮ್ಮದಿ ಇರಲಿಲ್ಲ. ಈಗ ಅವರಿಗೆ ನೆಮ್ಮದಿ ಸಿಕ್ಕಿದ್ದು, ಸಾವಯವ ಕೃಷಿಯಲ್ಲಿ. 80ರ ಇಳಿ ವಯಸ್ಸಿನಲ್ಲೂ ಉತ್ತಮ ಆರೋಗ್ಯದ ಜೊತೆಗೆ ಲಕ್ಷ ಲಕ್ಷ ಆದಾಯ ಗಳಿಸುವ ಮೂಲಕ ಯುವಕರನ್ನೂ ನಾಚಿಸುವಂತೆ ಜಿಲ್ಲೆಯ ಕೃಷಿಕರೊಬ್ಬರು ಸಾಧನೆ ಮಾಡಿದ್ದಾರೆ. ಹೌದು, ತಲೆ ಮೇಲೆ ಟೋಪಿ, ಸಫಾರಿ …

Read More »

ಮಲ್ಲಿಕಾರ್ಜುನ ಖರ್ಗೆ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಸಿರಾಟದ ತೊಂದರೆ ಹಾಗೂ ಜ್ವರ ಕಾಣಿಸಿಕೊಂಡ ಕಾರಣ ಮಂಗಳವಾರ ಸಂಜೆ ಖರ್ಗೆ ಅವರನ್ನು ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಹಿರಿಯ ವೈದ್ಯರು, ಹಲವು ಪರೀಕ್ಷೆಗಳನ್ನು ನಡೆಸಿದರು. ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಖರ್ಗೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸದ್ಯ ಜನರಲ್ ವಾರ್ಡ್​ನಲ್ಲಿ ವಿಶ್ರಾಂತಿ …

Read More »

ಪೊಲೀಸ್ ಇಲಾಖೆಯ ನೇಮಕಾತಿಗೆ ಶಾಶ್ವತ ವಯೋಮಿತಿ ಸಡಿಲಿಕೆಗೆ ನಿರ್ಧಾರ: ಪರಮೇಶ್ವರ್

ಬೆಂಗಳೂರು: ಪೊಲೀಸ್ ಇಲಾಖೆಯ ನೇಮಕಾತಿಗೆ ಶಾಶ್ವತ ವಯೋಮಿತಿ ಸಡಿಲಿಕೆಗೆ ಮುಂದಾಗಿದ್ದು, ಸದ್ಯದಲ್ಲೇ ವಯೋಮಿತಿ ಸಡಿಲಿಕೆ ಪ್ರಕಟಿಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರಿ‌ ನೌಕರರ ವಯೋಮಿತಿ ಸಡಿಲಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಂದು ಸಲಕ್ಕೆ ಅನ್ವಯ ಆಗುವಂತೆ ಸಡಿಲಿಕೆ ಮಾಡಲಾಗಿದೆ. 2027ರವರೆಗೆ ವಯೋಮಿತಿ ಸಡಿಲಿಸಿದ್ದೇವೆ. ನಮ್ಮ ಪೊಲೀಸ್ ಇಲಾಖೆಯಲ್ಲಿ ಶಾಶ್ವತ ವಯೋಮಿತಿ ಸಡಿಲಿಕೆಗೆ ಮುಂದಾಗಿದ್ದೇವೆ. ಕಾನ್‌ಸ್ಟೇಬಲ್, ಪಿಎಸ್‌ಐ, ಎಸ್ಐ …

Read More »

ಅ.1ರಿಂದ ಇರಲ್ಲ ವರ್ಕ್ ಫ್ರಮ್ ಹೋಮ್: ಬೆಂಗಳೂರಲ್ಲಿ ಟ್ರಾಫಿಕ್​ ಡಬಲ್​?

ಬೆಂಗಳೂರು, ಸೆಪ್ಟೆಂಬರ್​ 29: ಅಕ್ಟೋಬರ್ 1ರಿಂದ ಬಹುತೇಕ ಖಾಸಗಿ ಕಂಪನಿಗಳ ವರ್ಕ್ ಫ್ರಮ್ ಹೋಮ್ (Work from Home) ಅಂತ್ಯವಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್​ ಡಬಲ್​ ಆಗುವ ಸಾಧ್ಯತೆ ಹೆಚ್ಚಿದೆ. ಉದ್ಯೋಗಿಗಳು ಕಚೇರಿಗೇ ಹೋಗಿ ಕೆಲಸ ಮಾಡಬೇಕಿರುವ ಕಾರಣ ವಾಹನಗಳ ಓಡಾಟದ ಸಂಖ್ಯೆಯೂ ಸಹಜವಾಗಿ ಹೆಚ್ಚಲಿದೆ. ಅಂದಾಜಿನ ಪ್ರಕಾರ ಔಟರ್​ ರಿಂಗ್​ ರೋಡ್​ ಒಂದರಲ್ಲಿಯೇ ಪ್ರತಿನಿತ್ಯ 10 ಲಕ್ಷ ಉದ್ಯೋಗಿಗಳು ಓಡಾಡುವ ನಿರೀಕ್ಷೆ ಇದೆ.ಬೆಂಗಳೂರಿನ ಬಹುತೇಕ ಖಾಸಗಿ ಕಂಪನಿಗಳು ವರ್ಕ್​ ಫ್ರಮ್​ ಹೋಮ್​ ಸೌಲಭ್ಯ ಹಿಂಪಡೆಯಲು …

Read More »

ಇದು ಸೋಲಲ್ಲ, ಗೆಲುವಿನ ಮುಂದೂಡಿಕೆಯಷ್ಟೇ.

ಪ್ರತಿರೋಧವೇ ಇಲ್ಲವೆಂದು ಪ್ರಭುತ್ವದಿಂದ ಬೀಗುತಿದ್ದ ನೆಲದಲ್ಲಿ ಪ್ರಜಾಪ್ರಭುತ್ವವನ್ನು ಪ್ರತಿಷ್ಠಾಪಿಸಿದ ಶ್ರೇಯಸ್ಸು ಸತೀಶಣ್ಣನವರಿಗೆ ಸಲ್ಲುತ್ತದೆ. ಚುನಾವಣೆಯಲ್ಲಿ ಸೋತರೂ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ ಕೀರ್ತಿ ನಿಮ್ಮದಾಗಿದ್ದು ಈ ಫಲಿತಾಂಶದಿಂದ ಧೃತಿಗೆಡಬೇಕಾಗಿಲ್ಲ. ಇದು ಸೋಲಲ್ಲ, ಗೆಲುವಿನ ಮುಂದೂಡಿಕೆಯಷ್ಟೇ.   ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಈ ಬಾರಿ ರಾಜಕೀಯ ಜಿದ್ದಾಜಿದ್ದಿಗಿಂತ ಪ್ರತಿಷ್ಠೆಯ ಕಣವಾಗಿತ್ತು,ಆಯಾ ಪಕ್ಷದ ಕಾರ್ಯಕರ್ತರಿಗೇ ಗೊಂದಲದ ಗುಡಾಗಿತ್ತು, ಈ ಚುನಾವಣೆ ಮೇಲೆ ಇಡೀ ರಾಜ್ಯದ ಕಣ್ಣಿತ್ತು,ಲೋಕೋಪಯೋಗಿ ಸಚಿವರ ಜಾಣ ನಡೆ,ರಮೇಶ್ ಕತ್ತಿಯವರ …

Read More »