Breaking News

ಇದು ಸೋಲಲ್ಲ, ಗೆಲುವಿನ ಮುಂದೂಡಿಕೆಯಷ್ಟೇ.

Spread the love

ಪ್ರತಿರೋಧವೇ ಇಲ್ಲವೆಂದು ಪ್ರಭುತ್ವದಿಂದ ಬೀಗುತಿದ್ದ ನೆಲದಲ್ಲಿ ಪ್ರಜಾಪ್ರಭುತ್ವವನ್ನು ಪ್ರತಿಷ್ಠಾಪಿಸಿದ ಶ್ರೇಯಸ್ಸು ಸತೀಶಣ್ಣನವರಿಗೆ ಸಲ್ಲುತ್ತದೆ.
ಚುನಾವಣೆಯಲ್ಲಿ ಸೋತರೂ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ ಕೀರ್ತಿ ನಿಮ್ಮದಾಗಿದ್ದು ಈ ಫಲಿತಾಂಶದಿಂದ ಧೃತಿಗೆಡಬೇಕಾಗಿಲ್ಲ.
ಇದು ಸೋಲಲ್ಲ, ಗೆಲುವಿನ ಮುಂದೂಡಿಕೆಯಷ್ಟೇ.

 

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಈ ಬಾರಿ ರಾಜಕೀಯ ಜಿದ್ದಾಜಿದ್ದಿಗಿಂತ ಪ್ರತಿಷ್ಠೆಯ ಕಣವಾಗಿತ್ತು,ಆಯಾ ಪಕ್ಷದ ಕಾರ್ಯಕರ್ತರಿಗೇ ಗೊಂದಲದ ಗುಡಾಗಿತ್ತು,

ಈ ಚುನಾವಣೆ ಮೇಲೆ ಇಡೀ ರಾಜ್ಯದ ಕಣ್ಣಿತ್ತು,ಲೋಕೋಪಯೋಗಿ ಸಚಿವರ ಜಾಣ ನಡೆ,ರಮೇಶ್ ಕತ್ತಿಯವರ ಅಬ್ಬರದ ಭಾಷಣಗಳು ಈ ಚುನಾವಣೆಗೇ ಸಾಕ್ಷಿ ಆದ್ರೆ, ಕಾಂಗ್ರೆಸನ್ ಸತೀಶ್ ಜಾರಕಿಹೊಳಿ,ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆ ಒಂದು ಕಡೆ ಆದ್ರೆ,ಬಿಜೆಪಿಯ ರಮೇಶ್ ಕತ್ತಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು A B ಪಾಟೀಲ್ರು ಒಂದು ಕಡೆ, ಇದು ಸಹಜವಾಗಿ ಆಯಾ ಪಕ್ಷದ ಕಾರ್ಯಕರ್ತರರಲ್ಲಿ ಗೊಂದಲಕ್ಕೆ ಒಳಗಾಗಿದ್ದು ಮಜವಾಗಿತ್ತು,ಸತೀಶ್ ಜಾರಕಿಹೊಳಿ ಅವರ ಸೋಲಿಗಿಂತ ಮೊದಲ ಬಾರಿಗೆ ನಿರಂಕುಷ ಆಡಳಿತಕ್ಕೆ ಸೆಡ್ಡು ಹೊಡೆದು ಪ್ರಜಾಪ್ರಭುತ್ವಕ್ಕೆ ಗೆಲುವಿನ ಉಡುಗೊರೆ ನೀಡುವಲ್ಲಿ ಸತೀಶ್ ಜಾರಕಿಹೊಳಿ ನಡೆ ಸಾಕ್ಷಿ ಆಯಿತು,

ಸತೀಶ್ ಜಾರಕಿಹೊಳಿ ಅವರ ಈ ನಡೆಯಿಂದ ಸಹಕಾರಿ ಚುನಾವಣೆಯು ಸಹ ಪ್ರಜಾಪ್ರಭುತ್ವದ ನಿಯಮಗಳಿಗೆ ಬದ್ಧವಾಗಿದೆ ಮತ್ತು ಯಾವನೋ ಒಬ್ಬ ನಾಯಕ ತಾನೇ ಶ್ರೇಷ್ಠನಲ್ಲ ಜನರ ಮತದ ಶಕ್ತಿಯೇ ಸರ್ವಶ್ರೇಷ್ಠ ಎನ್ನುವ ಸತ್ಯವನ್ನು ಮತ್ತೆ ಸಾಬೀತುಪಡಿಸಿತು. ಇದು ಭಾರತದಂತಹ ಪ್ರಜಾಪ್ರಭುತ್ವದಲ್ಲಿ, ಸಹಕಾರಿ ರಂಗವೂ ರಾಜಕೀಯ ಪ್ರಭಾವಕ್ಕೆ ಮಣಿಯದೆ ಜನರ ಆಶಯಗಳನ್ನು ಪ್ರತಿಬಿಂಬಿಸಬೇಕು ಎನ್ನುವ ದೊಡ್ಡ ಸಂದೇಶವನ್ನು ನೀಡಿತು…


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ