Breaking News

ಅ.1ರಿಂದ ಇರಲ್ಲ ವರ್ಕ್ ಫ್ರಮ್ ಹೋಮ್: ಬೆಂಗಳೂರಲ್ಲಿ ಟ್ರಾಫಿಕ್​ ಡಬಲ್​?

Spread the love

ಬೆಂಗಳೂರು, ಸೆಪ್ಟೆಂಬರ್​ 29: ಅಕ್ಟೋಬರ್ 1ರಿಂದ ಬಹುತೇಕ ಖಾಸಗಿ ಕಂಪನಿಗಳ ವರ್ಕ್ ಫ್ರಮ್ ಹೋಮ್ (Work from Home) ಅಂತ್ಯವಾಗಲಿದ್ದು,

ರಾಜಧಾನಿ ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್​ ಡಬಲ್​ ಆಗುವ ಸಾಧ್ಯತೆ ಹೆಚ್ಚಿದೆ. ಉದ್ಯೋಗಿಗಳು ಕಚೇರಿಗೇ ಹೋಗಿ ಕೆಲಸ ಮಾಡಬೇಕಿರುವ ಕಾರಣ ವಾಹನಗಳ ಓಡಾಟದ ಸಂಖ್ಯೆಯೂ ಸಹಜವಾಗಿ ಹೆಚ್ಚಲಿದೆ. ಅಂದಾಜಿನ ಪ್ರಕಾರ ಔಟರ್​ ರಿಂಗ್​ ರೋಡ್​ ಒಂದರಲ್ಲಿಯೇ ಪ್ರತಿನಿತ್ಯ 10 ಲಕ್ಷ ಉದ್ಯೋಗಿಗಳು ಓಡಾಡುವ ನಿರೀಕ್ಷೆ ಇದೆ.ಬೆಂಗಳೂರಿನ ಬಹುತೇಕ ಖಾಸಗಿ ಕಂಪನಿಗಳು ವರ್ಕ್​ ಫ್ರಮ್​ ಹೋಮ್​ ಸೌಲಭ್ಯ ಹಿಂಪಡೆಯಲು ನಿರ್ಧರಿಸಿವೆ ಎನ್ನಲಾಗಿದ್ದು, ಶೇಕಡಾ 80ರಷ್ಟು ಐಟಿ ಕಂಪನಿಗಳು ಈ ತೀರ್ಮಾನಕ್ಕೆ ಮುಂದಾಗಿವೆಯಂತೆ.

ಔಟರ್​ ರಿಂಗ್​ ರೋಡ್ ನಲ್ಲಿ ಸುಮಾರು 500ರಷ್ಟು ಪ್ರತಿಷ್ಟಿತ ಕಂಪನಿಗಳಿದ್ದು, ಎರಡು ಸಾವಿರ ಆಫೀಸ್ ಗಳಿವೆ. ಇವುಗಳಲ್ಲಿ ಬಹುತೇಕ ಕಂಪನಿಗಳು ತಮ್ಮ ನೌಕರರಿಗೆ ವರ್ಕ್​ ಫ್ರಮ್​ ಹೋಮ್​ ನೀಡಿದ್ದವು. ಆದರೆ ಈಗ ಉದ್ಯೋಗಿಗಳು ಮತ್ತೆ ಆಫೀಸ್​ ನತ್ತ ಮುಖ ಮಾಡಬೇಕಿರುವ ಕಾರಣ ಟ್ರಾಫಿಕ್​ ಸಹಜವಾಗಿಯೇ ಇನ್ನಷ್ಟು ಹೆಚ್ಚಾಗಲಿದೆ.

ಕಳೆದ ವರ್ಷದ ಅಂಕಿ-ಅಂಶದ ಆಧಾರದಲ್ಲಿ ಪ್ರತಿನಿತ್ಯ ಸುಮಾರು 82 ಸಾವಿರ ವಾಹನಗಳು ಔಟರ್​ ರಿಂಗ್​ ರೋಡ್ ಮೂಲಕ ಸಂಚರಿಸಿದ್ದವು. ಈ ವರ್ಷದಲ್ಲಿ ಅವುಗಳ ಸಂಖ್ಯೆ ಸುಮಾರು 1 ಲಕ್ಷದ 20 ಸಾವಿರಕ್ಕೆ ಹೆಚ್ಚಿತ್ತು. ಈಗ ವರ್ಕ್​ ಫ್ರಮ್​ ಹೋಮ್​ ಕ್ಯಾನ್ಸಲ್​ ಆಗುತ್ತಿರುವ ಕಾರಣ ಅಕ್ಟೋಬರ್ 1ರಿಂದ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಸಂಚಾರ ದಟ್ಟಣೆ ಸಮಸ್ಯೆಯಿಂದ ಹೈರಾಣಾಗ್ತಿರೋ ವಾಹನ ಸವಾರರಿಗೆ ಖಾಸಗಿ ಕಂಪನಿಗಳ ಈ ನಿರ್ಧಾರ ಮತ್ತಷ್ಟು ತಲೆನೋವು ತಂದಿದೆ. ಒಂದೊಮ್ಮೆ ವರ್ಕ್​ ಫ್ರಮ್​ ಹೋಮ್​ ಕ್ಯಾನ್ಸಲ್​ ಆಗಿದ್ದೇ ಆದಲ್ಲಿ ಪ್ರತಿನಿತ್ಯ ಓಡಾಡುವ ಉದ್ಯೋಗಿಗಳ ಸಂಖ್ಯೆ ಬೆಂಗಳೂರಲ್ಲಿ ದ್ವಿಗುಣವಾಗುವ ನಿರೀಕ್ಷೆ ಇದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ