Breaking News

Daily Archives: ಆಗಷ್ಟ್ 21, 2026

ವಿಜಯಪುರದಲ್ಲಿ ಮುಂದುವರಿದ ಕಾಂಗ್ರೆಸ್ ನಾಯಕರ ಮುನಿಸು – ಬರ ವೀಕ್ಷಣೆಗೆ ಬಾರದ ಶಾಸಕ ಯಶವಂತರಾಯ ಗೌಡ

ವಿಜಯಪುರ: ಇತ್ತೀಚಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ವಿಜಯಪುರದ ಸಚಿವ ಎಂ.ಬಿ ಪಾಟೀಲ್ ಹಾಗೂ ಶಾಸಕ ಯಶವಂತರಾಯಗೌಡ ಪಾಟೀಲ್ ಮಧ್ಯೆ ಇರುವ ಗುದ್ದಾಟ ಬಯಲಾಗಿತ್ತು. ಇದೀಗ ಬರ ವೀಕ್ಷಣೆಗೆ ಬಾರದಿರುವುದು ಮುನಿಸು ಶಮನವಾಗದಿರುವುದು ಮುನ್ನೆಲೆಗೆ ಬಂದಿದೆ. ಮುನಿಸಿಕೊಂಡಿದ್ದ ಯಶವಂತರಾಯ ಗೌಡ ಪಾಟೀಲ್ ಅವರು ರಾಜೀನಾಮೆ ಕೊಟ್ಟಿದ್ದರು. ತದನಂತರ ಸಿಎಂ ಡಿಕೆಶಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಯಶವಂತರಾಯಗೌಡ ಪಾಟೀಲ್ ಮನವಲಿಸುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ ಸಚಿವ ಎಂ.ಬಿ ಪಾಟೀಲ್ ಹಾಗೂ ಯಶವಂತರಾಯಗೌಡ …

Read More »

ದಲಿತರ ಹಣ ದಲಿತರಿಗೆ ಸೇರಬೇಕು – ವಿಪಕ್ಷ ನಾಯಕ ಆರ್‌. ಅಶೋಕ್‌ ಒತ್ತಾಯ

ಬೆಂಗಳೂರು: ನಾವು ದಲಿತ ವಿರೋಧಿಗಳಲ್ಲ, ನಮ್ಮ ಹೋರಾಟ ಮುಂದುವರಿಯುತ್ತದೆ. ಸರ್ಕಾರ ಲೂಟಿ ಮಾಡಿರುವ ದಲಿತರ ಹಣ ದಲಿತರಿಗೇ ಸೇರಬೇಕು ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಒತ್ತಾಯಿಸಿದ್ದಾರೆ. ವಿಧಾನಸೌಧದ ಕೆಂಗಲ್‌ ಗೇಟ್‌ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣವನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. …

Read More »

ಶ್ರೀರಂಗನಾಥ ದೇವಾಲಯಕ್ಕೆ 66 ಲಕ್ಷ ರೂ.ನ ಬಂಗಾರದ ಕಲಶ ಕೊಟ್ಟ ಉದ್ಯಮಿ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ  ಟಿವಿಎಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವೇಣು ಶ್ರೀನಿವಾಸನ್ 66.78 ಲಕ್ಷ ರೂಪಾಯಿ ಬೆಲೆಯ ಬಂಗಾರದ ಅಷ್ಟಲಕ್ಷ್ಮಿ ಕಲಶವನ್ನು ಕೊಡುಗೆಯಾಗಿ ನೀಡಿದ್ದಾರೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಅವರಿಗೆ ಹಸ್ತಾಂತರಿಸಿದ ಕಲಶದಲ್ಲಿ  ಸುತ್ತಲೂ ಅಷ್ಟ ಲಕ್ಷ್ಮಿಯರ ಚಿತ್ರಗಳಿದ್ದು, 398.580 ಗ್ರಾಂ ತೂಕದ ಶುದ್ಧ ಬಂಗಾರದಿಂದ ಕೂಡಿದೆ. ದೇವಾಲಯದ ರಾಯಗೋಪುರದಿಂದ ಕಲಶವನ್ನು ಮಂಗಳವಾದ್ಯ ಸಹಿತ ಗರ್ಭಗುಡಿವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಶ್ರೀರಂಗನಾಥಸ್ವಾಮಿ ದೇವರ …

Read More »

ಸಚಿವ ಸ್ಥಾನದಿಂದ ನಾಗೇಂದ್ರ ವಜಾಕ್ಕೆ ಬಿಜೆಪಿ ಆಗ್ರಹ – ಶಿವಮೊಗ್ಗದಲ್ಲಿ ಡಿಸಿ ಕಚೇರಿ ಮುತ್ತಿಗೆ ಯತ್ನ

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವ ನಾಗೇಂದ್ರರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ  4 ದಿನಗಳಿಂದ ಬಿಜೆಪಿ ಮುಖಂಡರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು (ಆ.20) ಧರಣಿ ಬಿಟ್ಟು ಏಕಾಏಕಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಮುಖಂಡರು – ಕಾರ್ಯಕರ್ತರು ಯತ್ನಿಸಿದ್ದಾರೆ. ಬ್ಯಾರಿಕೇಡ್ ತಳ್ಳಿ ಏಕಾಏಕಿ ಒಳಗೆ ನುಗ್ಗಿದ್ದಾರೆ. ಈ ವೇಳೆ ಸಂಭವಿಸಿದ ತಳ್ಳಾಟ – ನೂಕಾಟದಲ್ಲಿ ಪೊಲೀಸರು, ಬಿಜೆಪಿ ಕಾರ್ಯಕರ್ತರು ಕೆಳಗೆ ಬಿದ್ದಿದ್ದಾರೆ. …

Read More »

ಲಡಾಖ್‌ನಲ್ಲಿ ಸೇನೆಯ ಜೊತೆ ವಾಗ್ವಾದ – ವಿಡಿಯೋ ವೈರಲ್‌ ಬೆನ್ನಲ್ಲೇ ಜನರಲ್ಲಿ ಕ್ಷಮೆ ಕೇಳಿದ Gen Z ಯುವತಿ

ನವದೆಹಲಿ: ಲಡಾಖ್‌ನಲ್ಲಿ ರಸ್ತೆ ತಡೆ ವೇಳೆ ಭದ್ರತಾ ಸಿಬ್ಬಂದಿ  ವಿರುದ್ಧ ಆಕ್ರೋಶ ಹೊರಹಾಕಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ 25 ವರ್ಷದ ಯುವತಿ ಕೊನೆಗೂ ಭಾರತೀಯ ಸೇನೆ ಹಾಗೂ ಪೊಲೀಸರ ಬಳಿ ಕ್ಷಮೆಯಾಚಿಸಿದ್ದಾಳೆ. ಖಾಸಗಿ ವಾಹಿನಿಗೆ ಜೊತೆ ಮಾತನಾಡಿದ ಯುವತಿ, ತಾನು ಸಶಸ್ತ್ರ ಪಡೆಗಳನ್ನು ಅವಮಾನಿಸುವ ಅಥವಾ ಈ ಘಟನೆಯ ಮೂಲಕ ಪ್ರಚಾರ ಪಡೆಯುವ ಯಾವುದೇ ಉದ್ದೇಶವಿರಲಿಲ್ಲ. ಗಂಟೆಗಟ್ಟಲೆ ಕಾದರೂ ರಸ್ತೆ ತಡೆದು ಕಾರಣ ತಿಳಿಸದ್ದಕ್ಕೆ ಹತಾಶೆಯಿಂದ ಹಾಗೆ ಮಾತನಾಡಿದ್ದಾಗಿ …

Read More »

ಗುಂಡಿ ತಪ್ಪಿಸಲು ಹರಸಾಹಸ ಪಡುತ್ತಿದ್ದ ಬೈಕ್‌ಗೆ ಟ್ಯಾಂಕರ್‌ ಡಿಕ್ಕಿ – ಸವಾರ ಬಚಾವ್‌

ಬೆಂಗಳೂರು: ನಗರದಲ್ಲಿ  ರಸ್ತೆ ಗುಂಡಿ ಅವಾಂತರ ಮುಗಿಯದ ಕಥೆ ರೀತಿ ಆಗಿದೆ. ವರ್ತೂರಿನ ಗುಂಜೂರಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಬೈಕ್‌  ಸವಾರ ಪರದಾಡುತ್ತಿದ್ದಾಗ ಆತನ ಬೈಕ್‌ಗೆ ಹಿಂಬದಿಯಿಂದ ಟ್ಯಾಂಕರ್‌  ಡಿಕ್ಕಿಯಾಗಿದೆ. ಟ್ಯಾಂಕರ್‌ ಡಿಕ್ಕಿಯಾಗುತ್ತಿದ್ದಂತೆ ಸವಾರ ಬೈಕ್‌ ಬಿಟ್ಟು ಜಿಗಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಸ್ತೆ ಗುಂಡಿ ಇದ್ರೂ ವೇಗದಲ್ಲಿ ಬಂದು ನಿಯಂತ್ರಣ ತಪ್ಪಿ ಬೈಕ್‌ಗೆ ಗುದ್ದಿದ ನಂಬರ್ ಪ್ಲೇಟ್ ಇಲ್ಲದ ಟ್ಯಾಂಕರ್‌ನ್ನು ಇತರ ವಾಹನ ಸವಾರರು ಬೆನ್ನಟ್ಟಿ ಹಿಡಿದಿದ್ದಾರೆ. ಈ ವೇಳೆ …

Read More »

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪತಿ ಕುಟುಂಬಸ್ಥರಿಂದ ಕಿರುಕುಳ – ಮಗುವನ್ನು ಕೊಂದು ನೇಣಿಗೆ ಶರಣಾದ ಮಹಿಳೆ

ಹಾಸನ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಪತಿಯ ಕುಟುಂಬಸ್ಥರು ಮನೆಯಿಂದ ಹೊರಹಾಕಿ, ನಿರಂತರ ಕಿರುಕುಳ ನೀಡಿದ್ದಕ್ಕೆ ಬೇಸತ್ತು ಮಹಿಳೆಯೊಬ್ಬಳು ಮಗುವನ್ನು ಕೊಂದು ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಆಲೂರಿನ ಹೌಸಿಂಗ್ ಬೋರ್ಡ್‌ನಲ್ಲಿ ನಡೆದಿದೆ. ಮೃತ ಮಗಳು ಹಾಗೂ ಆಕೆಯ ಮಗುವಿನ ಕಣ್ಗಳನ್ನು ಕುಟುಂಬಸ್ಥರು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಅನುಪಮಾ (27) ಹಾಗೂ ಆರ್ಯನ್ (2) ದುರಂತ ಅಂತ್ಯ ಕಂಡವರು. ಮಹಿಳೆಯ ಪತಿ ಶ್ರೀನಿವಾಸ್ ತಾಯಿ ಜಯಮ್ಮ ಹಾಗೂ ಆಕೆಯ ಪುತ್ರಿ …

Read More »

ಕೇಂದ್ರದ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು: ಪಶ್ಚಿಮ ಘಟ್ಟಗಳ ರಕ್ಷಣೆಗೆ ಕೇಂದ್ರ ಸರ್ಕಾರದ ಕಸ್ತೂರಿ ರಂಗನ್ ವರದಿಯ ಏಳನೇ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನಸಭೆಯಲ್ಲಿ ಇಂದು ಕೇಂದ್ರದ ಏಳನೇ ಕರಡು ಅಧಿಸೂಚನೆ ವಿರೋಧಿಸಿ ನಡೆದ ಚರ್ಚೆಗೆ ಉತ್ತರ ಕೊಡುವಾಗ ಅರಣ್ಯ ಸಚಿವ ರಾಮಲಿಂಗಾರೆಡ್ಡಿ , ಕೇಂದ್ರದ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ಇದೆ. ರಾಜ್ಯ ಸರ್ಕಾರ ತನ್ನ ಆಕ್ಷೇಪಣೆಗಳನ್ನು ಸಲ್ಲಿಸುವ ಮೂಲಕ ಕೇಂದ್ರದ ಅಧಿಸೂಚನೆಯನ್ನು ತಿರಸ್ಕರಿಸಲಾಗುತ್ತದೆ ಅಂದ್ರು. ಕೇಂದ್ರ …

Read More »

ಬೀದರ್‌ನಲ್ಲಿ ಕೃಷ್ಣಮೃಗ ಬೇಟೆಯಾಡಿದ 6 ಬೇಟೆಗಾರರು ಅಂದರ್

ಬೀದರ್: ಜಿಲ್ಲೆಯಲ್ಲಿ ಕೃಷ್ಣಮೃಗ ಬೇಟೆಯಾಡಿದ್ದ ಒಟ್ಟು ಆರು ಜನರ ಪೈಕಿ ಪರಾರಿಯಾಗಿದ್ದ ಮೂವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿಯ ಸೋಹೆಬ್ ಮಲ್ಲಿಕ್, ಹೈದ್ರಾಬಾದ್  ಮೂಲದ ಅಬ್ದುಲ್ ಸಾಹಿದ್ & ಹಮೀದ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಹೈದ್ರಾಬಾದ್ ಮೂಲದ ನಾಸೀರ್, ಆರೀಫ್ ಖಾನ್ ಮತ್ತು ಮಹ್ಮದ್ ಹಜ್ಜಿ ಮೂವರನ್ನು ಬಂಧಿಸಿದ್ದು, ಒಟ್ಟು ಆರು ಜನರನ್ನು ಬಂಧಿಸದಂತಾಗಿದೆ.  ಬೀದರ್ ತಾಲೂಕಿನ ಚೊಂಡಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದ ಬೇಟೆಗಾರರನ್ನು …

Read More »

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ; ಸ್ವಪಕ್ಷ ಸರ್ಕಾರದ ವಿರುದ್ಧವೇ ತಿರುಗಿಬಿದ್ದ ರವಿಕುಮಾರ್ ಗಣಿಗ

ಬೆಂಗಳೂರು: ತಮಿಳುನಾಡಿಗೆ  ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಇದೀಗ ಸ್ವಪಕ್ಷದ ಶಾಸಕರಿಂದಲೇ ವಿರೋಧ ವ್ಯಕ್ತವಾಗಿದೆ. ಮಂಡ್ಯದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ  ಸರ್ಕಾರದ ನಡೆ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ರವಿಕುಮಾರ್ ಗಣಿಗ, ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮ ರಾಜ್ಯದ ರೈತರಿಗೆ ಬೆಳೆಗಳಿಗೆ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾದರೆ ಸಮಸ್ಯೆ ಮತ್ತಷ್ಟು …

Read More »