Breaking News

Daily Archives: ಆಗಷ್ಟ್ 20, 2026

ಡೇಟಿಂಗ್ ಆಪ್ ಮೂಲಕ 67 ವರ್ಷದ ವ್ಯಕ್ತಿಗೆ 1.30 ಲಕ್ಷ ವಂಚನೆ – ಇಬ್ಬರು ಯುವತಿಯರು ಅರೆಸ್ಟ್‌

ನವದೆಹಲಿ: ಡೇಟಿಂಗ್ ಆಪ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ 67 ವರ್ಷದ ವ್ಯಕ್ತಿಯೊಬ್ಬರನ್ನು ವಂಚಿಸಿ 1.30 ಲಕ್ಷ ರೂ. ಕಸಿದುಕೊಂಡ ಆರೋಪದಲ್ಲಿ ಇಬ್ಬರು ಯುವತಿಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ-ಪಶ್ಚಿಮ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಬಂಧಿತರನ್ನು ದೆಹಲಿ ನಿವಾಸಿಗಳಾದ ಜ್ಯೋತ್ಸ್ನಾ (26) ಮತ್ತು ಮಾನಸಿ (21) ಎಂದು ಗುರುತಿಸಲಾಗಿದೆ.  ಪೊಲೀಸರ ಮಾಹಿತಿಯ ಪ್ರಕಾರ, ಜ್ಯೋತ್ಸ್ನಾ ಡೇಟಿಂಗ್ ಆಪ್‌ನಲ್ಲಿ ನಕಲಿ ಗುರುತಿನೊಂದಿಗೆ ಪ್ರೊಫೈಲ್ ಸೃಷ್ಟಿಸಿ 67 ವರ್ಷದ …

Read More »

ಮಹಾದೇವಪುರದ ಪಾಳುಬಾವಿಯಲ್ಲಿ ನವವಿವಾಹಿತೆ ಮೃತದೇಹ ಪತ್ತೆ – ಇಬ್ಬರು ಆರೋಪಿಗಳ ಬಂಧನ

ಚಿತ್ರದುರ್ಗ: ಮಹಾದೇವಪುರದ ಪಾಳು ಬಾವಿಯಲ್ಲಿ ನವವಿವಾಹಿತೆಶವ ಪತ್ತೆ ಪ್ರಕರಣ ಸಂಬಂಧ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗಳನ್ನು ಬಂಧಿಸುವಲ್ಲಿ ನಾಯಕನಹಟ್ಟಿ ಹಾಗು ತಳಕು ಪೊಲೀಸರು ಯಶಸ್ವಿಯಾಗಿದ್ದಾರೆ. ಆಗಸ್ಟ್ 13ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ತಿ ಗ್ರಾಮದ ಮನೆಯಿಂದ ನಾಪತ್ತೆಯಾಗಿದ್ದ ಸುಮಲತಾ, ಗಜೇಂದ್ರ ಎನ್ನುವವರ ಜೊತೆ ಪ್ರೇಮವಿವಾಹವಾಗಿದ್ದಳು. ತನ್ನ ಕುಟುಂಬಸ್ಥರ ಕಣ್ತಪ್ಪಿಸಲು ಜಮೀನೊಂದರಲ್ಲಿ ಈ ನವದಂಪತಿಗಳು ಬೀಡುಬಿಟ್ಟಿದ್ದರು. ಈ ವೇಳೆ ಸುಮಲತಾಳನ್ನು ಹಿಂಬಾಲಿಸಿದ್ದ ಗಜೇಂದ್ರನ ಸ್ನೇಹಿತ ಬೋರಯ್ಯ, ಜಮೀನಿನಲ್ಲಿ ಬಟ್ಟೆ ಬದಲಿಸುತ್ತಿದ್ದ …

Read More »

ಹನೂರು ಎನ್‌ಕೌಂಟರ್‌ ಕೇಸ್‌ – ಮೃತ ಮೂವರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ವಿತರಣೆ

ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಕುಟುಂಬಸ್ಥರಿಗೆ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಸಂಸದ ಸುನೀಲ್ ಬೋಸ್  ಭೇಟಿ ನೀಡಿ ಸಾಂತ್ವನ ಹೇಳಿದರು. ಇದೇ ವೇಲೆ ತಲಾ 1 ಲಕ್ಷ ರೂ. ಪರಿಹಾರವನ್ನೂ ವಿತರಿಸಿದರು. ಹನೂರು ತಾಲೂಕಿನ ತೋಮಿಯರ್ ಪಾಳ್ಯ, ಮರಿಯಮಂಗಲ ಮತ್ತು ಲಾಸರ್ ದೊಡ್ಡಿ ಗ್ರಾಮಗಳಿಗೆ ಭೇಟಿ ನೀಡಿದ ಸಂಸದರು ಮೃತ ಜಾನ್ ರೋಸ್ ಪೀಟರ್, ಸಬಸ್ಟಿಯನ್ ಡೇವಿಡ್ ಕುಮಾರ್ ಮತ್ತು ಆಂತೋಣಿ ಸ್ವಾಮಿ ಅವರ …

Read More »

ಡ್ಯೂಪ್ಲಿಕೇಟ್ ಕೀ ಬಳಸಿ ಐಷಾರಾಮಿ ಕಾರುಗಳ ಕಳ್ಳತನ – ಕರ್ನಾಟಕದಿಂದ ರಾಜಸ್ಥಾನವರೆಗೆ ‘ಕಾರ್‌ ಕಳ್ಳರ’ ಜಾಲ; ಇಬ್ಬರು ಅರೆಸ್ಟ್‌

ಬೆಂಗಳೂರು: ಡ್ಯೂಪ್ಲಿಕೇಟ್ ಕೀ ಹಾಗೂ ಅತ್ಯಾಧುನಿಕ ಉಪಕರಣಗಳನ್ನ ಬಳಸಿ ದೇಶದ ವಿವಿಧೆಡೆ ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡಿ, ರಾಜಸ್ಥಾನದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಮತ್ತೊಂದು ರಾಜ್ಯದ ಮಹಿಳೆಯೂ ಸೇರಿದ್ದಾಳೆ. ಆರೋಪಿಗಳಿಂದ 35 ಲಕ್ಷ ರೂ. ಮೌಲ್ಯದ ಟೊಯೋಟಾ ಫಾರ್ಚುನರ್ ಕಾರನ್ನ ರಾಜಸ್ಥಾನದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೋಟೆಲ್ ಪಾರ್ಕಿಂಗ್‌ನಿಂದ ಫಾರ್ಚುನರ್ ನಾಪತ್ತೆ! ಈ ಪ್ರಕರಣದ ಸುಳಿವು ಸಿಕ್ಕಿದ್ದು ಜೂನ್ 27ರಂದು. ಚೆನ್ನೈ ಮೂಲದ ವ್ಯಕ್ತಿಯೊಬ್ಬರು …

Read More »

ಪಿಎಂ ಕೇರ್ಸ್ ಅತಿದೊಡ್ಡ ಸಾಂಸ್ಥಿಕ ಹಗರಣ, ಮೋದಿ ಸರ್ಕಾರದಿಂದ ಸಾರ್ವಜನಿಕರ ನಂಬಿಕೆಗೆ ಮಾಡಿರುವ ದ್ರೋಹ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಪಿಎಂ ಕೇರ್ಸ್  ದೇಶದ ಅತಿದೊಡ್ಡ ಸಾಂಸ್ಥಿಕ ಹಗರಣಗಳಲ್ಲಿ ಒಂದು ಹಾಗೂ ಪ್ರಧಾನಿ ಮೋದಿ ಸರ್ಕಾರದಿಂದ ಸಾರ್ವಜನಿಕ ನಂಬಿಕೆಗೆ ಮಾಡಿರುವ ದ್ರೋಹವಾಗಿದೆ ಎಂದು ರಾಜ್ಯ ಗೃಹಸಚಿವ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕೋವಿಡ್‌ನಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು 2020ರಲ್ಲಿ ಸ್ಥಾಪಿಸಲಾದ ಪಿಎಂ ಕೇರ್ಸ್ (PM CARES) ನಿಧಿಯಲ್ಲಿ ಸದ್ಯ ಒಟ್ಟು 8,452 ಕೋಟಿ ರೂ. ಹಣವಿರುವುದು ಇತ್ತೀಚಿನ ಆಡಿಟ್ ವರದಿ ತಿಳಿಸಿದೆ. ಈ ಬಗ್ಗೆ ಎಕ್ಸ್‌ ಪೋಸ್ಟ್‌ ಹಂಚಿಕೊಳ್ಳುವ ಮೂಲಕ …

Read More »

ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮುಂದುವರೆಸುವಂತೆ ಕಂದಾಯ ಇಲಾಖೆ ಆದೇಶ

ಬೆಂಗಳೂರು: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಪರಿಶೀಲನೆಯ ನಂತರ 32 ಸಾವಿರ ರೂ.ಯಿಂದ 1.20 ಲಕ್ಷ ರೂ.ಒಳಗಿನ ವಾರ್ಷಿಕ ಆದಾಯ ಮಿತಿ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಗಳನ್ನು ಮುಂದುವರೆಸುವಂತೆ ಕಂದಾಯ ಇಲಾಖೆ  ಆದೇಶ ಹೊರಡಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ವಿವಿಧ ಸಾಮಾಜಿಕ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಇತ್ಯಾದಿಗಳಿಗೆ 32 ಸಾವಿರ ರೂ. ಆದಾಯ ಮಿತಿ …

Read More »

ಪ್ರಜ್ವಲ್ ರೇವಣ್ಣಗೆ ಅಕ್ರಮವಾಗಿ ಮೊಬೈಲ್ ಕೊಟ್ಟಿದ್ದ ವ್ಯಕ್ತಿ ಅರೆಸ್ಟ್

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾ ಬಂಧಿಯಾಗಿರುವ ಪ್ರಜ್ವಲ್ ರೇವಣ್ಣಗೆ ಅಕ್ರಮವಾಗಿ ಮೊಬೈಲ್ ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ಬಂಧಿಸಲಾಗಿದೆ. ಬಾಣಸವಾಡಿ ನಿವಾಸಿ ನವೀನ್ ಎಂಬಾತನನ್ನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.  ಅಪರಾಧ ಪ್ರಕರಣದಲ್ಲಿ ಈ ಹಿಂದೆ ಜೈಲು ಸೇರಿದ್ದ ನವೀನ್‌ಗೆ ಪ್ರತಾಪ್ ರಾಯ್ ಎಂಬಾತನ ಪರಿಚಯವಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ನವೀನ್, ಪ್ರತಾಪ್ ರಾಯ್‌ಗೆ ಅಕ್ರಮವಾಗಿ ಮೊಬೈಲ್ ಫೋನ್ ತಲುಪಿಸಿದ್ದ. ಇದಕ್ಕಾಗಿ ಇಬ್ಬರ ನಡುವೆ ದೊಡ್ಡ ಮಟ್ಟದ …

Read More »

ಒಂದೇ ಕೋಣೆಯ ಮನೆಯಲ್ಲಿರುವವರು ಕೆಲಸಕ್ಕಾಗಿ ಲಕ್ಷಾಂತರ ಹಣ ಕೊಡಲು ಸಾಧ್ಯನಾ? – ಇಡಿ ರೇಡ್‌ಗೆ ಗ್ರಾಮಸ್ಥರ ಅಸಮಾಧಾನ

ರಾಯಚೂರು: ಕೆಪಿಎಸ್‌ಸಿ ಹಗರಣ ಹಿನ್ನೆಲೆ ರಾಜ್ಯದ ಹಲವೆಡೆ ನಡೆದ ಇಡಿ ಅಧಿಕಾರಿಗಳ ದಾಳಿ ರಾಯಚೂರಿನಲ್ಲಿ ಗ್ರಾಮಸ್ಥರನ್ನ ಅಚ್ಚರಿಗೊಳಿಸಿದೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮೂಲ ಜಿಲ್ಲೆ ರಾಯಚೂರಿನಲ್ಲಿ  ಎರಡು ಕಡೆಗಳಲ್ಲಿ ಮಂಗಳವಾರ (ಆ.18) ದಾಳಿ ನಡೆಸಿ, ಇಡಿ ಅಧಿಕಾರಿಗಳು  ಪರಿಶೀಲನೆ ಮಾಡಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳ ಕುಟುಂಬಗಳ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರಿಂದ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ದೇವದುರ್ಗದ ಶಾವಂತಗೇರಾ ಹಾಗೂ ಮಸ್ಕಿ …

Read More »

ಮೂಡಾ 50:50 ಸೈಟು ಹಂಚಿಕೆ ಹಗರಣ – ಹಂಚಿಕೆಯಾಗಿದ್ದ ಎಲ್ಲಾ 1,100 ಸೈಟುಗಳು ತಕ್ಷಣದಿಂದಲೇ ರದ್ದು

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಗಳನ್ನ ಉಲ್ಲಂಘಿಸಿ ಮಾಡಲಾಗಿದ್ದ 50:50 ಬದಲಿ ನಿವೇಶನಗಳ ಹಂಚಿಕೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ, ಉನ್ನತ ಮಟ್ಟದ ತಾಂತ್ರಿಕ ಸಮಿತಿಯು ನೀಡಿರುವ ವರದಿಯನ್ವಯ ಈ ಆದೇಶ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ 2023ರ ಮಾರ್ಚ್ 14ರ ನಿರ್ದೇಶನವನ್ನ ಉಲ್ಲಂಘಿಸಿ ಮಾಡಲಾದ ಎಲ್ಲಾ 50:50 ಬದಲಿ ನಿವೇಶನಗಳ ಹಂಚಿಕೆಯನ್ನ ರದ್ದುಪಡಿಸಿ ಆದೇಶ ಮಾಡಿದೆ. ನಿಯಮ ಉಲ್ಲಂಘಿಸಿ ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿರುವ …

Read More »

ಶೃಂಗೇರಿ ಮರು ಮತ ಎಣಿಕೆ ಪ್ರಕರಣ – ರಾಜೇಗೌಡಗೆ ಸುಪ್ರೀಂನಲ್ಲಿ ತಾತ್ಕಾಲಿಕ ರಿಲೀಫ್

ನವದೆಹಲಿ: ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ  ಅಂಚೆ ಮತಗಳ ಮರು ಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ತಾತ್ಕಾಲಿಕ ರಿಲೀಫ್ ದೊರೆತಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 10ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಈ ಹಿಂದಿನ ಮಧ್ಯಂತರ ಆದೇಶವೇ ಮುಂದುವರಿಯಲಿದೆ. ಇದರಿಂದಾಗಿ ರಾಜೇಗೌಡ ಅವರ ಶಾಸಕ ಸ್ಥಾನ ಸದ್ಯಕ್ಕೆ ಸುಭದ್ರವಾಗಿದೆ. ಇಂದು ನಡೆದ ವಿಚಾರಣೆ ವೇಳೆ, ಬಿಜೆಪಿ …

Read More »