Breaking News

Daily Archives: ಆಗಷ್ಟ್ 5, 2026

ಬೆಳಗಾವಿಗೆ ಬಂತು ಹೈಟೆಕ್ ‘ಮೊಬೈಲ್ ಫೋರೆನ್ಸಿಕ್ ವ್ಯಾನ್’: ತನಿಖೆಗೆ ವೈಜ್ಞಾನಿಕ ಸ್ಪರ್ಶ!

ಬೆಳಗಾವಿಗೆ ಬಂತು ಹೈಟೆಕ್ ‘ಮೊಬೈಲ್ ಫೋರೆನ್ಸಿಕ್ ವ್ಯಾನ್’: ತನಿಖೆಗೆ ವೈಜ್ಞಾನಿಕ ಸ್ಪರ್ಶ! ಅಪರಾಧ ಪ್ರಕರಣಗಳ ತನಿಖೆಯನ್ನು ಮತ್ತಷ್ಟು ವೈಜ್ಞಾನಿಕ ಹಾಗೂ ಪರಿಣಾಮಕಾರಿಗೊಳಿಸಲು ಪೊಲೀಸ್ ಇಲಾಖೆ ಬಿಗ್ ಸ್ಟೆಪ್ ಇಟ್ಟಿದೆ. ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದ ಸಹಯೋಗದೊಂದಿಗೆ ಬೆಳಗಾವಿ ನಗರಕ್ಕೂ ಅತ್ಯಾಧುನಿಕ ‘ಮೊಬೈಲ್ ಫೋರೆನ್ಸಿಕ್ ವ್ಯಾನ್’ ಸೇವೆ ಲಭ್ಯವಾಗಿದೆ. ಘಟನಾ ಸ್ಥಳದಲ್ಲೇ ಸಾಕ್ಷ್ಯ ಸಂಗ್ರಹಿಸಲು ಈ ವಾಹನದ ನೆರವಾಗಲಿದೆ. ಅಪರಾಧ ನಡೆದ ಸ್ಥಳದಲ್ಲೇ ವೈಜ್ಞಾನಿಕ ಸಾಕ್ಷ್ಯಗಳನ್ನು ಪತ್ತೆಹಚ್ಚಿ, ಸಂಗ್ರಹಿಸಿ, ಸಂರಕ್ಷಿಸುವ ಉದ್ದೇಶದಿಂದ …

Read More »

ಕೃಷಿ ಅಧಿಕಾರಿ ಹುದ್ದೆ ನೇಮಕಾತಿ ನಿಯಮ ತಿದ್ದುಪಡಿಗೆ ಆಗ್ರಹ; 21ನೇ ದಿನಕ್ಕೆ ಕಾಲಿಟ್ಟ ಕೃಷಿ ವಿವಿ ವಿದ್ಯಾರ್ಥಿಗಳ ಆಕ್ರೋಶ, ಉಪವಾಸ ಸತ್ಯಾಗ್ರಹ ಆರಂಭ!

ಧಾರವಾಡ: ಕೃಷಿ ಅಧಿಕಾರಿ ಹುದ್ದೆ ನೇಮಕಾತಿ ನಿಯಮ ತಿದ್ದುಪಡಿಗೆ ಆಗ್ರಹ; 21ನೇ ದಿನಕ್ಕೆ ಕಾಲಿಟ್ಟ ಕೃಷಿ ವಿವಿ ವಿದ್ಯಾರ್ಥಿಗಳ ಆಕ್ರೋಶ, ಉಪವಾಸ ಸತ್ಯಾಗ್ರಹ ಆರಂಭ! ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಇತರೆ ಇಲಾಖೆ ಹಾಗೂ ವಿಭಿನ್ನ ಪದವೀಧರರಿಗೂ ಅವಕಾಶ ನೀಡಿರುವುದನ್ನು ಖಂಡಿಸಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ಇಂದಿಗೆ 21ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಇದೀಗ ಅಹೋರಾತ್ರಿ ಉಪವಾಸ …

Read More »

ಅತಿವೃಷ್ಟಿ-ಬರ ವೀಕ್ಷಣೆಗೆ ಸಚಿವರಿಗೆ ಫೀಲ್ಡ್ ಟಾಸ್ಕ್: ಬೆಳಗಾವಿ ಹೊಣೆ ವಹಿಸಿಕೊಂಡ ಸತೀಶ್ ಜಾರಕಿಹೊಳಿ!

ಅತಿವೃಷ್ಟಿ-ಬರ ವೀಕ್ಷಣೆಗೆ ಸಚಿವರಿಗೆ ಫೀಲ್ಡ್ ಟಾಸ್ಕ್: ಬೆಳಗಾವಿ ಹೊಣೆ ವಹಿಸಿಕೊಂಡ ಸತೀಶ್ ಜಾರಕಿಹೊಳಿ! ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯನ್ನು ಎದುರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪುಟ ಸಹೋದ್ಯೋಗಿಗಳಿಗೆ ತಕ್ಷಣವೇ ಫೀಲ್ಡ್‌ಗೆ ಇಳಿಯುವಂತೆ ಸೂಚಿಸಿದ್ದಾರೆ. ತಮಗೆ ವಹಿಸಲಾದ ಜಿಲ್ಲೆಗಳಿಗೆ ತಕ್ಷಣವೇ ಭೇಟಿ ನೀಡಿ, ತಾಲೂಕುವಾರು ಪರಿಶೀಲನೆ ನಡೆಸಿ ನೈಜ ಪರಿಸ್ಥಿತಿಯ ವರದಿಯನ್ನು ಸಲ್ಲಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಸೃಷ್ಟಿಯಾಗಿರುವ ಪ್ರಾಕೃತಿಕ ವಿಕೋಪ ಮತ್ತು ಬರ ಸನ್ನಿವೇಶದ …

Read More »

ಗೋವಾ ಚುನಾವಣೆಗೆ ಕಾಂಗ್ರೆಸ್‌ನಿಂದ ಬಿಗ್ ಪ್ಲಾನ್: ಮೈತ್ರಿ ಸಮಿತಿಗೆ ಡಾ. ಅಂಜಲಿ ನಿಂಬಾಳ್ಕರ್ ನೇಮಕ!

ಗೋವಾ ಚುನಾವಣೆಗೆ ಕಾಂಗ್ರೆಸ್‌ನಿಂದ ಬಿಗ್ ಪ್ಲಾನ್: ಮೈತ್ರಿ ಸಮಿತಿಗೆ ಡಾ. ಅಂಜಲಿ ನಿಂಬಾಳ್ಕರ್ ನೇಮಕ! ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಭರ್ಜರಿ ಸಿದ್ಧತೆ ಆರಂಭವಾಗಿದೆ. ಮೈತ್ರಿ ಪಕ್ಷಗಳ ನಡುವೆ ಉತ್ತಮ ಸಮನ್ವಯ ಸಾಧಿಸಲು ‘ಗೋವಾ ಮೈತ್ರಿ ಸಮಿತಿ’ ರಚಿಸಲಾಗಿದ್ದು, ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಗೋವಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, …

Read More »

ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ತಕ್ಷಣ ವಜಾಗೊಳಿಸಿ,

ಬೆಳಗಾವಿವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ತಕ್ಷಣ ವಜಾಗೊಳಿಸಿ, ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಂಗಳವಾರ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ವಾಲ್ಮೀಕಿ ನಿಗಮದ ಹಣ ದುರ್ಬಳಕೆಯು …

Read More »

ರಾಯರ ಹುಂಡಿಯಲ್ಲಿ ವಿಚಿತ್ರ ಪತ್ರ: “ಸ್ವಾಮಿ, ನನ್ನನ್ನ ಆ ಹುಡುಗಿಯಿಂದ ಕಾಪಾಡು!”

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ಪತ್ರ! • ರಾಮದುರ್ಗದ ರಾಯರ ಮಠದಲ್ಲಿ ವಿಚಿತ್ರ ಪ್ರಸಂಗ • ಹುಂಡಿಯಲ್ಲಿ ಪತ್ತೆಯಾಯಿತು ಭಕ್ತನ ಅಪರೂಪದ ಪತ್ರ • “ಒಬ್ಬ ಹುಡುಗಿಯಿಂದ ಕಾಪಾಡಿ ಸ್ವಾಮಿ” ಎಂದು ಪ್ರಾರ್ಥನೆ • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ಪತ್ರ! ರಾಮದುರ್ಗ ತಾಲೂಕಿನ ಪಡಕೋಟಗಲ್ಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ಎಣಿಕೆ ವೇಳೆ ವಿಚಿತ್ರ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಭಕ್ತನೊಬ್ಬ “ಸ್ವಾಮಿ, ನನ್ನನ್ನು ಒಬ್ಬ ಹುಡುಗಿಯಿಂದ ಕಾಪಾಡಿ” …

Read More »

ಗಣೇಶಪುರ-ಮಹಾಲಕ್ಷ್ಮೀ ಲೇಔಟ್‌ಗೆ ಬಸ್ ಸೇವೆ ಆರಂಭಿಸಿ…:

NWKSRTC ಉಪಾಧ್ಯಕ್ಷ ಸುನಿಲ್ ಹನುಮಣ್ಣನವರ್‌ಗೆ ಮಲ್ಲೇಶ್ ಚೌಗುಲೆ ಮನವಿ! • ಗಣೇಶಪುರದಿಂದ ಸಿಬಿಟಿಗೆ ಬಸ್ ಸೇವೆಗೆ ಆಗ್ರಹ • ಮಲ್ಲೇಶ್ ಚೌಗುಲೆ ನೇತೃತ್ವದಲ್ಲಿ ಸಾರ್ವಜನಿಕರ ಮನವಿ • ಮಹಾಲಕ್ಷ್ಮೀ ಲೇಔಟ್‌ಗೆ ಬಸ್ ಸೇವೆ ಪರಿಶೀಲನೆ • ಸುನಿಲ್ ಹನುಮಣ್ಣನವರ್ ಅವರಿಂದ ಸಕರಾತ್ಮಕ ಭರವಸೆ ಆಂಕರ್: ಬೆಳಗಾವಿಯ ಗಣೇಶಪುರ ಮತ್ತು ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯಲ್ಲಿ ಸೂಕ್ತ ಬಸ್ ಸಂಪರ್ಕವಿಲ್ಲದೆ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯನ್ನು ತಪ್ಪಿಸಲು NWKSRTC ಉಪಾಧ್ಯಕ್ಷ ಸುನಿಲ್ ಹನುಮಣ್ಣನವರ್ ಅವರಿಗೆ …

Read More »

ಗಣೇಶೋತ್ಸವಕ್ಕೆ ಶಿವಶಂಬು ಪಥಕದಿಂದ ನಾದನಮನ: ಅನಿಲ್ ಬೆನಕೆ ಹಾಗೂ ಗಣ್ಯರ ಸಮ್ಮುಖದಲ್ಲಿ ವಾದ್ಯಪೂಜೆ, ಶೈಕ್ಷಣಿಕ ಸನ್ಮಾನ!

• ಚವ್ಹಾಟ್ ಗಲ್ಲಿಯಲ್ಲಿ ಅದ್ಧೂರಿ ವಾದ್ಯಪೂಜೆ • ಅನಿಲ್ ಬೆನಕೆ ಹಾಗೂ ಗಣ್ಯರು ಭಾಗಿ • ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹದ ನುಡಿ • ಶಿವಶಂಬು ಪಥಕದಿಂದ ಅಭ್ಯಾಸ ಶುರು ಬೆಳಗಾವಿಯಲ್ಲಿ ಮುಂಬರುವ ಗಣೇಶೋತ್ಸವದ ಸಂಭ್ರಮಕ್ಕೆ ಈಗಿನಿಂದಲೇ ಚಾಲನೆ ಸಿಕ್ಕಿದೆ. ಚವ್ಹಾಟ ಗಲ್ಲಿಯ ಶ್ರೀ ಶಿವಶಂಬು ಢೋಲ್-ತಾಶಾ ಪಥಕವು ಮಾಜಿ ಶಾಸಕ ಅನಿಲ್ ಬೆನಕೆ ಹಾಗೂ ಹಲವು ಗಣ್ಯರ ಸಮ್ಮುಖದಲ್ಲಿ ಸಾಂಪ್ರದಾಯಿಕ ಶಿಸ್ತಿನೊಂದಿಗೆ ವಾದ್ಯಪೂಜೆ ನೆರವೇರಿಸಿ, ಗಣೇಶೋತ್ಸವದ ನಾದನಮನಕ್ಕೆ ಅದ್ಧೂರಿ ಚಾಲನೆ …

Read More »

ಸ್ವಚ್ಛತೆ,ನೀರು, ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳಿರುವ ನಗರದ ಕೆಲವು ಬಡಾವಣೆಗಳಿಗೆ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಭೇಟಿ

ನಗರದ ವಿವಿಧ ಬಡಾವಣೆಗಳಿಗೆ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಭೇಟಿ ಸ್ವಚ್ಛತೆ,ನೀರು, ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳಿರುವ ನಗರದ ಕೆಲವು ಬಡಾವಣೆಗಳಿಗೆ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಸುಭಾಷ್ ನಗರ, ಅಶೋಕ್ ನಗರ ಸೇರಿದಂತೆ ನಗರದ ವಿವಿಧೆಡೆ ಭೇಟಿ ನೀಡಿದ ಆಯುಕ್ತರು, ಕೆಯುಡಿಎಫ್ಸಿ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ ಪರಿಶೀಲಿಸಿದರು. ಕೆಲವು ಕಡೆ ಕುಡಿಯುವ ನೀರಿನ ಪೈಪ್ ಗೆ ಚರಂಡಿ ನೀರು ಸೇರುತ್ತಿರುವ …

Read More »

ಕೆಪಿಸಿಸಿ ಎಸ್‌ಸಿ ಘಟಕದ ರಾಜ್ಯ ನಿರ್ದೇಶಕರಾಗಿ ಬೆಳಗಾವಿಯ ಹಿರಿಯ ದಲಿತ ಮುಖಂಡ ಮಲ್ಲೇಶ ಚೌಗುಲೆ ನೇಮಕ!

• ಕೆಪಿಸಿಸಿ ಎಸ್‌ಸಿ ವಿಭಾಗದ ನಿರ್ದೇಶಕರಾಗಿ ಚೌಗುಲೆ • ಬೆಳಗಾವಿ ಹಿರಿಯ ದಲಿತ ಮುಖಂಡನಿಗೆ ಜವಾಬ್ದಾರಿ • ಸಾಮಾಜಿಕ, ರಾಜಕೀಯ ಕೊಡುಗೆಗೆ ಸಿಕ್ಕ ಗೌರವ • ಕಾಂಗ್ರೆಸ್ ನಾಯಕರು, ಬೆಂಬಲಿಗರಿಂದ ಶುಭಾಶಯದ ಮಹಾಪೂರ ಬೆಳಗಾವಿ ಜಿಲ್ಲೆಯ ಹಿರಿಯ ದಲಿತ ಮುಖಂಡ, ಸಾಮಾಜಿಕ ಹೋರಾಟಗಾರ ಹಾಗೂ ಕಾಂಗ್ರೆಸ್ ಹಿರಿಯ ಧುರೀಣ ಮಲ್ಲೇಶ ಚೌಗುಲೆ ಅವರಿಗೆ ಪ್ರಮುಖ ಜವಾಬ್ದಾರಿ ಒಲಿದುಬಂದಿದೆ. ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಎಸ್‌ಸಿ ವಿಭಾಗದ ರಾಜ್ಯ …

Read More »