Breaking News
Home / ರಾಜ್ಯ (page 605)

ರಾಜ್ಯ

ಬೆಳಗಾವಿಯ ರಾಮದುರ್ಗದಲ್ಲಿ ಹಾಲಿ ಶಾಸಕ ಮಹಾದೇವಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ..!?

ಬೆಳಗಾವಿ : ಬಿಜೆಪಿಯಲ್ಲಿ ಮತ್ತೊಂದು ವಿಕೆಟ್‌ ಪತನವಾಗುತ್ತಿದ್ದು, ರಾಮದುರ್ಗದಲ್ಲಿ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಟಿಕೆಟ್‌ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇದೀಗ ಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಭರ್ಜರಿ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.   ವಿಧಾನ ಸಭೆ ಚುನಾವಣೆ ಹೊತ್ತಲ್ಲೇ ಸಾಲು ಸಾಲು ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ನಾಯಕರು ಗುಡ್‌ಬೈ ಹೇಳುತ್ತಿರುವುದರಿಂದ ಬಿಜೆಪಿ ಮೇಲೆ ಭಾರೀ ಹೊಡೆತ ಬೀಳಲಿದೆ. ಇದೀಗ ರಾಮದುರ್ಗದಲ್ಲಿ ಹಾಲಿ ಶಾಸಕ ಮಹಾದೇವಪ್ಪ …

Read More »

ನಿನ್ನ ನಂಬಿದ್ದೇನೆ, ದಯಮಾಡಿ ಕೈಬಿಡಬೇಡ : ಕಾಪು ಸಿದ್ದಲಿಂಗ ಸ್ವಾಮಿಗೆ ವಿ ಸೋಮಣ್ಣ ಮನವಿ

ಮೈಸೂರು: ರಾಜ್ಯದಲ್ಲೆಡೆ ಮುಂದಿನ ವಿಧಾನಸಭೆ ಚುನಾವಣೆ ರಣತಂತ್ರ ರೂಪಿಸುತ್ತಿದ್ದು ಈ ಬೆನ್ನಲ್ಲೆ ಬಿಜೆಪಿ ಟಿಕೆಟ್‌ ಕೈ ತಪ್ಪಿದ ಬೆನ್ನಲ್ಲೆ ಟಿಕೆಟ್‌ಗಾಗಿ ಬಂಡಾಯ ಭುಗಿಲೆದ್ದಿದೆ. ಈನಿಟ್ಟಿನಲ್ಲಿ ಕಾಪು ಸಿದ್ದಲಿಂಗ ಸ್ವಾಮಿಗೆ ವಿ ಸೋಮಣ್ಣ ಭೇಟಿ ನೀಡಿ ಮನವಿ ಮಾಡಿದ್ದಾರೆ.   ವಸತಿ ಸಚಿವ ವಿ. ಸೋಮಣ್ಣ ಅವರು ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಆಪ್ತ ಕಾಪು ಸಿದ್ದಲಿಂಗ ಸ್ವಾಮಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ ವಿ. …

Read More »

ವಿವಿಧೆಡೆ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಂಠೀರವ ನಗರ, ಕಮಲಾನಗರ, ವಿಧಾನಸೌಧದ ಮುಂಭಾಗ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಅಂಬೇಡ್ಕರ್ ಸರ್ಕಲ್, ಅಂಬೇಡ್ಕರ್ ಭವನ ಹಾಗೂ ರವೀಂದ್ರ ಕಲಾಕ್ಷೇತ್ರ ಸೇರಿದಂತೆ ವಿವಿಧೆಡೆ ಮಾನ್ಯ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ರವರು ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 132 ನೇ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿ, ಅವರು ಮಾತನಾಡಿದರು.   ನಂತರ ಮಾತನಾಡಿದ ಅವರು, ಮಹಾನ್ ಮಾನವತವಾದಿ ಭಾರತರತ್ನ, …

Read More »

ಇಂದು ಸಂಜೆಯೇ ಕಾಂಗ್ರೆಸ್ ಸೇರುತ್ತೇನೆ:ಲಕ್ಷ್ಮಣ ಸವದಿ

ಬೆಂಗಳೂರು – ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವುದಕ್ಕೆ ಮುಹೂರ್ತ ಫಿಕ್ಸ ಆಗಿದೆ. ಇಂದು ಸಂಜೆ 4.30ಕ್ಕೆ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ. ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಚರ್ಚೆಯ ಬಳಿಕ ಲಕ್ಷ್ಮಣ ಸವದಿ ಉಪಸ್ಥಿತಿಯಲ್ಲಿ ಶಿವಕುಮಾರ ಈ ಕುರಿತು ಮಾಹಿತಿ ನೀಡಿದರು. ಲಕ್ಷ್ಮಣ ಸವದಿ ಯಾವುದೇ ಷರತ್ತಿಲ್ಲದೇ …

Read More »

ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಮರಣ ಕಾರಣ ನಮೂದು ಕಡ್ಡಾಯ

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಮರಣ ಕಾರಣವನ್ನು ಕಡ್ಡಾಯವಾಗಿ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ಭರ್ತಿ ಮಾಡಿ, ಜನನ-ಮರಣ ಮುಖ್ಯ ನೋಂದಣಾ ಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತರು ಹಾಗೂ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿ ಜಂಟಿ ಯಾಗಿ ಸುತ್ತೋಲೆ ಹೊರಡಿಸಿದ್ದಾರೆ.   ಜನನ, ಮರಣಗಳ ನೋಂದಣಿ ಅಧಿನಿಯಮ 1969ರ ಪ್ರಕಾರ ಎಲ್ಲಾ ವೈದ್ಯರು, ವೈದ್ಯ ವೃತ್ತಿಪರರು ತಾವು ಉಪಚರಿಸಿದ ವ್ಯಕ್ತಿ ಮೃತನಾದಲ್ಲಿ …

Read More »

ಚಂದಾದಾರಿಕೆ ಹೆಸರಿನಲ್ಲಿ ವಂಚನೆ ಗಾಳ: ಇಂಡಿಯನ್ ಮನಿ ಕಂಪನಿ ವಿರುದ್ಧ 6 ಎಫ್‌ಐಆರ್

ಬೆಂಗಳೂರು: ಹಣಕಾಸು ವಿಷಯದಲ್ಲಿ ಸಲಹೆ ನೀಡುವ ಉದ್ದೇಶವಿಟ್ಟುಕೊಂಡಿದ್ದ ‘ಇಂಡಿಯನ್ ಮನಿ ಡಾಟ್ ಕಾಮ್’ಕಂಪನಿ, ಹಲವು ಸಾಧಕರ ಹೆಸರು ಹಾಗೂ ಅವರಿಂದ ತರಬೇತಿ ಕೊಡಿಸುವ ನೆಪದಲ್ಲಿ ಸಾವಿರಾರು ಜನರಿಂದ ‘ಚಂದಾದಾರಿಕೆ’ ಹಣ ಪಡೆದು ವಂಚಿಸಿರುವ ಸಂಗತಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.   ಅರೆಕಾಲಿಕ ಕೆಲಸದ ಹೆಸರಿನಲ್ಲಿ ಯುವಕ- ಯುವತಿಯರನ್ನು ವಂಚಿಸಿರುವ ಪ್ರಕರಣದ ತನಿಖೆ ಕೈಗೊಂಡಿರುವ ಬನಶಂಕರಿ ಠಾಣೆ ಪೊಲೀಸರು, ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿ.ಎಸ್. ಸುಧೀರ್ ಹಾಗೂ ಮಾನವ ಸಂಪನ್ಮೂಲ …

Read More »

ಶಿವಮೂರ್ತಿ ಶರಣರ ಮೇಲೆ ದೋಷಾರೋಪ ನಿಗದಿ

ಚಿತ್ರದುರ್ಗ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಹಾಗೂ ಪರಿಶಿಷ್ಟ ಜಾತಿ, ಪಂಗಡದ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರ ಮೇಲಿನ ದೋಷಾರೋಪವನ್ನು ಜಿಲ್ಲಾ ನ್ಯಾಯಾಲಯ ಗುರುವಾರ ನಿಗದಿಪಡಿಸಿತು.   ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಸಲ್ಲಿಸಿದ್ದ ಎರಡು ದೋಷಾರೋಪ ಪಟ್ಟಿಗಳ ಪೈಕಿ ಒಂದರಲ್ಲಿನ ದೋಷಾರೋಪವನ್ನು ನಿಗದಿಪಡಿಸಿ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಲಾಯಿತು. ಕಲಾಪದ ಅವಧಿ ಮುಕ್ತಾಯಗೊಂಡಿದ್ದರಿಂದ ಮತ್ತೊಂದು ದೋಷಾರೋಪ …

Read More »

ನಿಲ್ಲಿಸದ ಬಸ್‌; ಚಲಿಸುವಾಗಲೇ ಇಳಿಯಲು ಹೋಗಿ ವಿದ್ಯಾರ್ಥಿನಿ ಸಾವು

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಪಟ್ಟಣದ ಹೊರ ವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬಳಿ ಸಾರಿಗೆ ಸಂಸ್ಥೆ ಬಸ್‌ ನಿಲುಗಡೆ ಮಾಡಲಿಲ್ಲ. ಹೀಗಾಗಿ ಚಲಿಸುತ್ತಿದ್ದಾಗಲೇ ಅದರಿಂದ ಇಳಿಯಲು ಪ್ರಯತ್ನಿಸಿ ನಿಯಂತ್ರಣ ತಪ್ಪಿ ಬಿದ್ದು ಗಂಭೀರ ಗಾಯಗೊಂಡ ವಿದ್ಯಾರ್ಥಿನಿ ಬುಧವಾರ ಮೃತಪಟ್ಟಿದ್ದಾರೆ. ಹೊಳಲು ಗ್ರಾಮದ ಎಲ್.ಶ್ವೇತಾ ಶಾಂತಪ್ಪನವರ (19) ಮೃತ ವಿದ್ಯಾರ್ಥಿನಿ. ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್‌ ಆಯಂಡ್ ಕಮ್ಯುನಿಕೇಶನ್ಸ್‌ ವಿಭಾಗದ ಮೊದಲ ಸೆಮಿಸ್ಟರ್ ನಲ್ಲಿ ಓದುತಿದ್ದ ಶ್ವೇತಾ, ಪ್ರತಿದಿನ ಪಟ್ಟಣದ …

Read More »

ಹಾರೂಗೇರಿ ಚೆಕ್ ಪೊಸ್ಟ್ ನಲ್ಲಿ 2.49 ಲಕ್ಷ ರೂ.ಗಳನ್ನು ವಶ

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಚುನಾವಣೆ ಕರ್ತವ್ಯ ನಿರತ ಅಧಿಕಾರಿಗಳು ಹಣ ಹಾಗೂ ಲಿಕ್ಕರ್ ವಶಪಡಿಸಿಕೊಂಡಿದ್ದಾರೆ. ಹಾರೂಗೇರಿ ಚೆಕ್ ಪೊಸ್ಟ್ ನಲ್ಲಿ 2.49 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಮಕನಮರಡಿಯ ಶೆಟ್ಟಿಹಳ್ಳಿ ಚೆಕ್ ಪೊಸ್ಟ್ ನಲ್ಲಿ 3.25 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ. ಐಗಳಿಯಲ್ಲಿ 188 ಲೀಟರ್ ಲಿಕ್ಕರ್ ವಶಪಡಿಸಿಕೊಳ್ಳಲಾಗಿದೆ. ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಹಳ್ಳಿ ಗ್ರಾಮದಲ್ಲಿ  ಹನುಮಂತ್ ಹುಲಿಗೆಪ್ಪ ಭಜಂತ್ರಿ ಈತನು ಅಕ್ರಮವಾಗಿ  ಸಾರಾಯಿ ಮಾರಾಟ …

Read More »

ಕಾಂಗ್ರೆಸ್ ಬಿಜೆಪಿ ಬಂಡಾಯ ನೋಡಿದ್ರೆ ಬೆಳಗಾವಿ ಉತ್ತರ ಕ್ಷೇತ್ರ ಮೂರನೇಯವರು ಲಾಭ ಕೊಡುತ್ತಾ..?

ಕರ್ನಾಟಕ ವಿಧಾನಸಭಾ ಚುನಾವಣೆಯ ಕದನ ಇದೀಗ ಆರಂಭವಾಗಿದೆ. ಎಲ್ಲಾ ಆಸಕ್ತ ಅಭ್ಯರ್ಥಿಗಳು ಹಾಗು ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಪಡೆದುಕೋಂಡಿರುವ ಅಭ್ಯರ್ಥಿಗಳು ತಮ್ಮ ಮುಂದಿನ ಕಾರ್ಯತಂತ್ರವನ್ನು ರೂಪಿಸುತ್ತಿದ್ದು, ಟಿಕೆಟ್ ಸಿಗದೆ ನೊಂದಿರುವ ಆಕಾಂಕ್ಷಿಗಳು ಬಂಡಾಯ ಎದ್ದಿದ್ದಾರೆ. ಮತದಾನದ ನಂತರ ಅವರೆಲ್ಲರೂ ಅದ್ಭುತ ಫಲಿತಾಂಶಗಳನ್ನು ಎದುರು ನೋಡುತ್ತಿದ್ದಾರೆ. ಅಂದಿನಿಂದ, ಮರಾಠಿ ಮತ್ತು ಮರಾಠ ಮತದಾರರ ಪ್ರಾಬಲ್ಯವನ್ನು ಉಳಿಸಿಕೊಂಡು, ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಭ್ಯರ್ಥಿಗಳನ್ನು ಆಯ್ಕೆ ಆಗುತ್ತಿದ್ದರು, ಆದರೆ ಆಂತರಿಕ ರಾಜಕೀಯ, ಪ್ರಾಬಲ್ಯ …

Read More »