Breaking News
Home / ರಾಜ್ಯ (page 604)

ರಾಜ್ಯ

ಕರ್ನಾಟಕ ವಿಧಾನಸಭೆ ಚುನಾವಣೆ : 50 ಸಾವಿರ ರೂ. ಮೀರಿದ ಹಣ ಜೊತೆ ತೆಗೆದುಕೊಂಡು ಹೋಗುವಂತಿಲ್ಲ!

ಕಲಬುರಗಿ : ವಿಧಾನಸಭೆ‌ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೆ ದಾಖಲೆ, ವಿವರಣೆ ಇಲ್ಲದೆ ಯಾವುದೇ ವ್ಯಕ್ತಿ 50,000 ರೂ. ಕ್ಕಿಂತ ಹೆಚ್ಚಿನ ಹಣವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ‌ವಿ. ಗುರುಕರ್ ಆದೇಶ ಹೊರಡಿಸಿದ್ದಾರೆ.   ಇನ್ನು ದಾಖಲೆ‌ ಇಲ್ಲದ 10,000 ರೂ. ಮೀರಿದ ಯಾವುದೇ ಸರಕುಗಳನ್ನು ಸಂಗ್ರಹಣೆ ಮತ್ತು ಬೃಹತ್ ಪ್ರಮಾಣದಲ್ಲಿ ಸಹ ಸಾಗಿಸುವಂತಿಲ್ಲ. ಈ ಆದೇಶ‌ ಚುನಾವಣೆ‌ ಮುಕ್ತಾಯದ …

Read More »

J.D.S. ಅಭ್ಯರ್ಥಿ ಗಳ ಎರಡನೇ ಪಟ್ಟಿಯಲ್ಲಿ, ಬೆಳಗಾವಿ ಆನಂದ್&ಪ್ರದೀಪ ಮಾಳಗಿ, ಸೌರವ್ ಚೋಪ್ರಾ, ಶಶಿಕಾಂತ್ ಪಡಸಲಾಗಿ…

ಬೆಂಗಳೂರು – ಮೇ 10ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಿದರು. ಬಹುನಿರೀಕ್ಷಿತ ಹಾಸನಕ್ಕೆ ಎಚ್.ಪಿ.ಸ್ವರೂಪ್ ಅವರಿಗೆ ಟಿಕೆಟ್ ನೀಡಲಾಗಿದೆ. ಬೆಳಗಾವಿಯ ಹಲವು ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಿಸಲಾಗಿದೆ. ಬೆಳಗಾವಿಯಲ್ಲಿ ಇನ್ನು 2 ದಿನಗಳಲ್ಲಿ ದೊಡ್ಡಮಟ್ಟದ ಹಲವು ನಾಯಕರು ಪಕ್ಷ ಸೇರ್ಪಡೆಯಾಗಲಿದ್ದು, ಜಿಲ್ಲೆಯಲ್ಲಿ 7-8 ಕ್ಷೇತ್ರ ಗೆಲ್ಲುವ ಅವಕಾಶವಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಅಭ್ಯರ್ಥಿಗಳ ವಿವರ: ಹಾಸನ- ಎಚ್.ಪಿ.ಸ್ವರೂಪ …

Read More »

ರಾಜಕೀಯ ನಾಯಕರಿಗೂ ಚುನಾವಣಾ ನೀತಿ ಸಂಹಿತೆ ಬಿಸಿ

 ದಕ್ಷಿಣ ಕನ್ನಡ : ಚುನಾವಣಾ ನೀತಿ ಸಂಹಿತೆ ಬಿಸಿ ಜನಸಾಮಾನ್ಯರಿಗೆ ಮಾತ್ರವಲ್ಲ ರಾಜಕೀಯ ನಾಯಕರಿಗೂ ತಟ್ಟಲು ಆರಂಭವಾಗಿದೆ.     ಸದ್ಯ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಕಟ್ಟು ನಿಟ್ಟಿನ ವಾಹನ ತಪಾಸಣೆ ನಡೆಸುತ್ತಿದ್ದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಜಿಲ್ಲಾಧ್ಯಕ್ಷ ಸುದರ್ಶನ ಅವರ ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ‌. ಅಧಿಕಾರಿ ಜಯಕೀರ್ತಿ ಹೆಚ್.ಬಿ. ಅವರಿದ್ದ ತಂಡವು ಚಾರ್ಮಾಡಿ ಚೆಕ್ ಪೋಸ್ಟ್ …

Read More »

ಅತಿಥಿ ಉಪನ್ಯಾಸಕರೊಬ್ಬರ ಬರ್ಬರವಾಗಿ ಹತ್ಯೆ,35 ಬಾರಿ ಚಾಕುವಿನಿಂದ ಇರಿದ ದುಷ್ಕರ್ಮಿಗಳು

ಕಲಬುರಗಿ : ಕಲಬುರಗಿ ಜಿಲ್ಲೆಯ ಚಿತ್ತಾಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಅತಿಥಿ ಉಪನ್ಯಾಸಕ ರವಿ ಪಟ್ಟೇದಾರ ಎಂಬುವವರನ್ನು ನಗರದ ಹೊರವಲಯದ ಕುಸನೂರು ಬಳಿ ದುಷ್ಕರ್ಮಿಗಳು 35 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನಲ್ಲಿ ತೆರಳುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ರವಿ ಅಣ್ಣನ ಹೆಂಡತಿ ಕಡೆಯವರು ಡಿಕ್ಕಿ ಹೊಡೆಸಿ ಕೆಳಕ್ಕೆ ಕೆಡವಿ ಚಾಕುವಿನಿಂದ …

Read More »

ಈಜಲು ಹೋಗಿದ್ದ ನಾಲ್ವರು ಯುವಕರು ಘಟಪ್ರಭಾ ನದಿಯಲ್ಲಿ ನೀರುಪಾಲು

ಈಜಲು ಹೋಗಿದ್ದ ನಾಲ್ವರು ಯುವಕರು ಘಟಪ್ರಭಾ ನದಿಯಲ್ಲಿ ನೀರುಪಾಲು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದುಪದಾಳ ಬಳಿಯ ಘಟಪ್ರಭಾ ನದಿಯಲ್ಲಿ ಘಟನೆ   ಮೃತ ನಾಲ್ವರೂ ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಹಿರಿಗೆರೆ ಗ್ರಾಮದವರೆಂಬ ಮಾಹಿತಿ ಮೃತ ಯುವಕರು ಘಟಪ್ರಭಾ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರೆಂಬ ಮಾಹಿತಿ ಬಾರ್ ರಜೆ ಇದ್ದಿದ್ದರಿಂದ ಈಜಲು ಹೋಗಿದ್ದ ಯುವಕರು, ಮೃತ ಯುವಕರ ಹೆಸರು ಇನ್ನೂ ತಿಳಿದು ಬಂದಿಲ್ಲ, ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ,

Read More »

ಬೆಳಗಾವಿ ಬಿಜೆಪಿಯಲ್ಲಿ ಮತ್ತೆರಡು ವಿಕೆಟ್ ಪತನ: ಪಕ್ಷ ಬಿಡಲು ಮುಂದಾದ ಮಹಾದೇವಪ್ಪ ಯಾದವಾಡ ಮತ್ತು ಅನಿಲ್ ಬೆನಕೆ

ಲಕ್ಷ್ಮಣ ಸವದಿ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಮತ್ತೆರಡು ವಿಕೆಟ್ ಪತನಗೊಳ್ಳಲಿದೆ. ಬಿಜೆಪಿಗೆ ಗುಡ್‌ಬೈ ಹೇಳಲು ರಾಮದುರ್ಗ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಮತ್ತು ಅನಿಲ್ ಬೆನಕೆ ಮುಂದಾಗಿದ್ದಾರೆ ಒಂಡಾಯದ ಕಾವು ಹೆಚ್ಚಾಗಿದೆ(Karnataka Assembly Elections 2023) . ಬೆಳಗಾವಿಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಟಿಕೆಟ್ ಸಿಗದ ಆಕಾಂಕ್ಷಿಗಳು ಬಂಡಾಯ ಸಾರಿದ್ದರು. ಆದ್ರೆ ಈಗ ಲಕ್ಷ್ಮಣ ಸವದಿ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಮತ್ತೆರಡು ವಿಕೆಟ್ ಪತನಗೊಳ್ಳಲಿದೆ ಎಂಬ ಸುದ್ದಿ …

Read More »

ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ : ಒಂದೇ ದಿನ 498 ಕೇಸ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಸೋಂಕಿನ ( Coronavirus ) ಸಂಖ್ಯೆ ಏರಿಕೆ ಕಂಡಿದೆ. ನಿನ್ನೆ ಒಂದೇ ದಿನ ಹೊಸದಾಗಿ 498 ಮಂದಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ನಿನ್ನೆ 15,036 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 498 ಜನರಿಗೆ ಪಾಸಿಟಿವ್ ಎಂಬುದಾಗಿ ವರದಿಯಲ್ಲಿ …

Read More »

ವರುಣದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ : ಟಿಕೆಟ್ ಆಕಾಂಕ್ಷಿಯಾಗಿದ್ದ ತೋಟದಪ್ಪ ಬಸವರಾಜು ಪಕ್ಷಕ್ಕೆ ಗುಡ್ ಬೈ

ಮೈಸೂರು : ವರುಣ ಕ್ಷೇತ್ರದಿಂದ ಸಚಿವ ವಿ.ಸೋಮಣ್ಣಗೆ ಟಿಕಟ್ ನೀಡಿರುವುದಕ್ಕೆ ಅಸಮಾಧನಗೊಂಡಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತೋಟದಪ್ಪ ಬಸವರಾಜು ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ವರುಣ ಕ್ಷೇತ್ರದಲ್ಲಿ ಸಚಿವ ವಿ.ಸೋಮಣ್ಣಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ತೋಟದಪ್ಪ ಬಸವರಾಜು ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.   ವರುಣ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ತೋಟದಪ್ಪ ಬಸವರಾಜು ಅವರು ಕಳೆದ ಬಾರಿ ವರುಣದಿಂದ ಸ್ಪರ್ಧಿಸಿದ್ದರು. 2018 ರಲ್ಲಿ ವ್ಯಾಪಕ ವಿರುದ್ಧವಿದ್ದರೂ 37,819 ಮತಗಳನ್ನು …

Read More »

ಅಮೂಲ್‌ ಬಳಿಕ ಕರ್ನಾಟಕಕ್ಕೆ ಗುಜರಾತ್​ ಮೂಲದ ‘ಮೆಣಸಿನ ಕಾಯಿ ಪುಷ್ಪಾ’ ಎಂಟ್ರಿ, ರೈತರಲ್ಲಿ ಹೆಚ್ಚಿದ ಆತಂಕ

ಹಾವೇರಿ: ಅಮುಲ್ ಹಾಲಿನ ನಂತರ ಇದೀಗ ಗುಜರಾತ್ ಮೆಣಸಿನಕಾಯಿ ಸರದಿಯಾಗಿದೆ. ಸದ್ಯ ರಾಜ್ಯದ ಮಾರುಕಟ್ಟೆಗೆ ಅಮುಲ್‌ ಬಳಿಕ ಈ ಮೆಣಸಿನಕಾಯಿ ತಲೆ ನೋವಾಗಿದೆ. ರಾಜ್ಯದ ಮೆಣಸಿನಕಾಯಿ ಮಾರುಜಕಟ್ಟೆಗೆ ಕಾಲಿಟ್ಟಿರುವ ಗುಜರಾತಿ ಮೆಣಸಿನಕಾಯಿಯ ‘ಪುಷ್ಪ’ – ಲಾಲಿ ಎಂದೂ ಕರೆಯುತ್ತಾರೆ – ಏಷ್ಯಾದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಬ್ಯಾಡಗಿಯಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸುತ್ತಿದೆ.   ಮೂಲಗಳ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಕನಿಷ್ಠ 20,000 ಕ್ವಿಂಟಲ್ ಗುಜರಾತಿ ಮೆಣಸಿನಕಾಯಿ ಮಾರಾಟವಾಗಿದೆ. …

Read More »

ಬೆಳಗಾವಿಸಪ್ತಪದಿ ತುಳಿಯಬೇಕಿದ್ದ ಯೋಧ ಪಂಜಾಬ್‌ನಲ್ಲಿ ಹುತಾತ್ಮ

ಬೆಳಗಾವಿ : ವಿವಾಹಕ್ಕಾಗಿ ಊರಿಗೆ ಬರಬೇಕಿದ್ದ ಯೋಧ ಪಂಜಾಬ್‌ನಲ್ಲಿ ಹುತಾತ್ಮನಾಗಿದ ವಿಷಯ ತಿಳಿದು ಕುಟುಂಬಸ್ಥರಲ್ಲಿ ಆಕ್ರಂಧನ ಮುಗಿಲು ಮುಟ್ಟಿದೆ ಎಂದು ವರದಿಯಾಗಿದೆ. ಯೋಧ ಪಂಜಾಬ್‌ನಲ್ಲಿ ಹುತಾತ್ಮ ಯೋಧನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ಯೋಧ ಸಾಗರ ಅಪ್ಪಾಸಾಹೇಬ್ ಬನ್ನೆ(25) ಮೃತಪಟ್ಟ ಯೋಧ ಎಂದು ಗುರುತಿಸಲಾಗಿದೆ. ಈತ 2018ರಲ್ಲಿ ಭೂಸೇನಾ ರ್ಯಾಲಿಯಲ್ಲಿ ಭಾಗವಹಿಸಿ ಸೇನೆಗೆ ಸೇರಿದ್ದ ಸಾಗರ್, ಪಂಜಾಬ್‌ ಮಿಲಿಟರಿ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಂತೋಷ್‌ ಮಲ್ಲಪ್ಪ ನಾಗರಾಳ …

Read More »