Breaking News
Home / ರಾಜ್ಯ (page 493)

ರಾಜ್ಯ

ಜುಲೈ 2 ರಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚಾರಣೆ: ದೀಲಿಪ ಕುರಂದವಾಡೆ

ಜುಲೈ 2 ರಂದು ಬೆಳಗಾವಿ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚಾರಣೆ ಆಚರಿಸಲಾಗುವದು ಎಂದು ಜಿಲ್ಲಾ ಅದ್ಯಕ್ಷ ದೀಲಿಪ ಕುರಂದವಾಡೆ ಹೇಳಿದರು.  ಬೆಳಗಾವಿ ನಗರದಲ್ಲಿ ಜರುಗಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ ಬೆಳಗಾವಿ ನಗರದಲ್ಲಿ ಅಂತರಾಷ್ಟ್ರೀಯ ಮಟ್ಟದ ಪತ್ರಕರ್ತರ ಸಮ್ಮೇಳನ ಮತ್ತು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚಾರಣೆ ಆಚರಿಸುವ ಕುರಿತು ರೂಪ ರೆಷೆಗಳಂತೆ ಜಿಲ್ಲಾ ಮಟ್ಟದ …

Read More »

ಟೌನ್ ಪ್ಯಾಲೇಸ್ ಎದುರು ಲಾರಿ ಹಾಗೂ ಬೈಕ್ ಮುಖಾಮುಖಿ: ಬೈಕ್ ಸವಾರನ ದುರ್ಮರಣ

ಲಾರಿ ಹಾಗೂ ಬೈಕ್ ಮಧ್ಯೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ನಗರದ ಟೌನ್ ಪಾಲೇಸ್ ಹೋಟೆಲ್ ಎದುರು ನಡೆದಿದೆ. ಮೃತಪಟ್ಟಿರುವ ಬೈಕ್ ಸವಾರನ ಹೆಸರು ಹಾಗೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಕಠಿಣ ಶ್ರಮದಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು: ಸಿಪಿಐ ಬಡಿಗೇರ್

ದೃಢಸಂಕಲ್ಪ, ಪರಿಶ್ರಮ ಮತ್ತು ಕಠಿಣ ಶ್ರಮದಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಿ ಯಶಸ್ವಿಗೊಳಿಸುವಂತೆ ಸಾರಿಗೆ ಇಲಾಖೆಯ ಸಿಪಿಐ ವಿನಾಯಕ ಬಡಿಗೇರ್ ಮನವಿ ಮಾಡಿದರು. ಬೆಳಗಾವಿಯ ಕಾಳಿ ಅಮರಾಯಿಯಲ್ಲಿರುವ ಬೆಳಗಾವಿ ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಭಾನುವಾರ ಸಂಘದ ವತಿಯಿಂದ ವಿಶ್ವಕರ್ಮ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ಸಿಪಿಐ ಬಡಿಗೇರ್ ಮಾತನಾಡಿ, ಯಶಸ್ಸಿನ ಶಿಖರವೇರಿದರೂ ವಿದ್ಯಾರ್ಥಿಯು …

Read More »

ಕರಾವಳಿ ಭಾಗದಲ್ಲಿ ಮುಂದಿನ ಐದು ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಕರಾವಳಿಯಲ್ಲಿ ಮುಂದಿನ ಐದು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 26ರಿಂದ ಜೂ 30ರವರೆಗೆ ಭಾರೀ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದಿದೆ. ಮಲೆನಾಡು, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. …

Read More »

ಭಾರೀ ಮಳೆ.. ನವದೆಹಲಿಯ ರೈಲ್ವೆ ಫ್ಲಾಟ್​ಫಾರ್ಮ್​ನಲ್ಲಿ ವಿದ್ಯುತ್ ಕಂಬ ಸ್ಪರ್ಶಿಸಿ ಮಹಿಳೆ ಸಾವು

ನವದೆಹಲಿ: ಶನಿವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನವದೆಹಲಿಯ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ಮಳೆ ನೀರು ನುಗ್ಗಿದೆ. ಈ ವೇಳೆ ಮಹಿಳೆಯೊಬ್ಬರು ವಿದ್ಯುತ್ ಕಂಬವನ್ನು ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಪೂರ್ವ ದೆಹಲಿಯ ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಎಂದು ಗುರುತಿಸಲಾಗಿದೆ. ಸಾಕ್ಷಿ ಅಹುಜಾ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಮೂವರು ಮಕ್ಕಳೊಂದಿಗೆ ಬೆಳಗ್ಗೆ 5.30 ಕ್ಕೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ನೀರಿನಿಂದ ತುಂಬಿದ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯಲು …

Read More »

ಮಳೆಗಾಗಿ ವಿಚಿತ್ರ ಆಚರಣೆ: ಸ್ಮಶಾನದಲ್ಲಿ ಹೂತಿದ್ದ ಸಮಾಧಿ ಅಗೆದು, ಶವಗಳಿಗೆ ನೀರುಣಿಸಿದ ಗ್ರಾಮಸ್ಥರು!

ವಿಜಯಪುರ: ರಾಜ್ಯದಲ್ಲಿ ವಾಡಿಕೆಯಂತೆ ಆಗಬೇಕಾಗಿದ್ದ ಮುಂಗಾರು ಮಳೆ ವಿಳಂಬವಾಗಿದೆ. ಹೀಗಾಗಿ ರಾಜ್ಯದ ಹಲವೆಡೆಮಳೆಗಾಗಿ ಪ್ರಾರ್ಥಿಸಿ ಕತ್ತೆ ಮದುವೆ, ಕಪ್ಪೆ ಮದುವೆ, ದೇವರಿಗೆ ನೀರುಣಿಸುವುದು ಸೇರಿದಂತೆ ವಿವಿಧ ರೀತಿಯ ಆಚರಣೆ ಮತ್ತು ಸಂಪ್ರದಾಯವನ್ನು ಈಗಲೂ ಗ್ರಾಮೀಣ ಪ್ರದೇಶದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಸ್ಮಶಾನದಲ್ಲಿ ಹೂತಿದ್ದ ಶವಗಳಿಗೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿರುವ ವಿಚಿತ್ರ ಆಚರಣೆ ಬೆಳಕಿಗೆ ಬಂದಿದೆ. ಇದು ವಿಚಿತ್ರ ಸಂಪ್ರದಾಯವಾದರೂ ಸಹ ಗ್ರಾಮಸ್ಥರು ಈ ಆಚರಣೆಯನ್ನು …

Read More »

ಸಿದ್ದರಾಮಯ್ಯ, ಡಿಕೆಶಿ ನೇತೃತ್ವದ ಸರ್ಕಾರ ಐದು ವರ್ಷ ನಡೆಯುವ ಸರ್ಕಾರ ಅಲ್ಲಾ: ಯತ್ನಾಳ್

ಬೆಳಗಾವಿ: ಸಿದ್ದರಾಮಯ್ಯ, ಡಿಕೆಶಿ ನೇತೃತ್ವದ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದಿಲ್ಲ.‌ ಇದು ಐದು ವರ್ಷ ನಡೆಯುವ ಸರ್ಕಾರ ಅಲ್ಲಾ. ಲೋಕಸಭಾ ಚುನಾವಣೆ ಮುನ್ನ ಇಲ್ಲವೇ, ಚುನಾವಣೆ ಬಳಿಕ ಆಯಕ್ಸಿಡೆಂಟ್ ಆಗಿ ಈ ಸರ್ಕಾರ ಬೀಳುತ್ತದೆ ಎಂದು ವಿಜಯಪುರ ಬಿಜೆಪಿ‌ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸರ್ಕಾರದ ವಿರುದ್ಧ​ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಗಾಂಧಿ ಭವನದಲ್ಲಿ ಇಂದು ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ‌ ಭಾಗಿಯಾಗಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೆ ಏನಾಗಿದೆ …

Read More »

ಕುಡಿಯುವ ನೀರಿಗಾಗಿ ಆಗ್ರಹಿಸಿ 3 ದಿನಗಳಿಂದ ಉಪವಾಸ ಕುಳಿತ ರೈತರು

ದೊಡ್ಡಬಳ್ಳಾಪುರ : ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ 3 ದಿನಗಳಿಂದ ರೈತರಿಬ್ಬರು ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹವನ್ನ ನಡೆಸುತ್ತಿದ್ದರು. ಉಪವಾಸ ನಿರತ ರೈತರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕುಡಿಯುವ ನೀರು ಸರಬರಾಜು ಮಾಡುವ ಭರವಸೆ ನೀಡಿದರು. ಸಚಿವರ ಭರವಸೆಯ ಮೇರೆಗೆ ರೈತರು ಉಪವಾಸ ಅಂತ್ಯಗೊಳಿಸಿದ್ದಾರೆ. ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ವಿಷ ಹರಿಸಿದ …

Read More »

ವ್ಯಕ್ತಿಯ ಕತ್ತು ಸೀಳಿ ರಕ್ತ ಕುಡಿದು ಬೀಭತ್ಸ ಕೃತ್ಯ!

ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬನ ಕತ್ತು ಕೊಯ್ದು ರಕ್ತ ಕುಡಿದಿರುವ ಬೀಭತ್ಸಕಾರಿ ಘಟನೆ ನಾಲ್ಕು ದಿನಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬನ ಕತ್ತಿನ ರಕ್ತ ಕುಡಿಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ನಿವಾಸಿ ವಿಜಯ್ ಎಂಬಾತ ಚೇಳೂರು ತಾಲೂಕಿನ ಮಾಡೇಂಪಲ್ಲಿ ನಿವಾಸಿ ಮಾರೇಶ್ ಮೇಲೆ ಹಲ್ಲೆ ಮಾಡಿ, ರಕ್ತ ಕುಡಿದಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ …

Read More »

ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡ ಪಾರ್ವತಮ್ಮ ರಾಜ್​​ಕುಮಾರ್ ತಮ್ಮನ ಮಗ

ಚಾಮರಾಜನಗರ: ಕನ್ನಡ ಚಿತ್ರರಂಗದ ವರನಟ, ದಿ. ಡಾ.ರಾಜ್​​ಕುಮಾರ್ ಅವರ ಪತ್ನಿ ದಿ. ಪಾರ್ವತಮ್ಮ ರಾಜ್​ಕುಮಾರ್ ಅವರ ಸಹೋದರ ಎಸ್.ಎ. ಶ್ರೀನಿವಾಸ್ ಅವರ ಪುತ್ರ ಸೂರಜ್​ ಕುಮಾರ್ (ಧೀರಜ್​​​) ಅವರು ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಚಿಕ್ಕಹುಂಡಿ ಗೇಟ್ ಬಳಿ ನಡೆದಿದೆ. ಇವರು ಕೆಲವು ಸಿನಿಮಾಗಳಲ್ಲಿ ಅಸಿಸ್ಟೆಂಟ್​ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಬೈಕ್​ಗೆ ಟಿಪ್ಪರ್ ಡಿಕ್ಕಿ, ಬಲಗಾಲು ಕಟ್​: ಊಟಿಗೆ ಸೋಲೋ‌ (ಏಕಾಂಗಿ) ಟ್ರಿಪ್ ತೆರಳಿದ್ದ ಸೂರಜ್​​ ಕುಮಾರ್ …

Read More »