Breaking News
Home / ರಾಜ್ಯ (page 491)

ರಾಜ್ಯ

ಮಹೇಶ ಫೌಂಡೇಶನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸಲ್ಪಟ್ಟು, ತನ್ನ ಸಾಧನೆಗಳ ಮೂಲಕ ನಮ್ಮ ಬೆಳಗಾವಿ ಗೆ ಹೆಮ್ಮೆ ತಂದಿದೆ: ಆಸಿಫ್ ಸೇಠ್

ಮಹೇಶ ಫೌಂಡೇಶನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸಲ್ಪಟ್ಟು, ತನ್ನ ಸಾಧನೆಗಳ ಮೂಲಕ ನಮ್ಮ ಬೆಳಗಾವಿ ಗೆ ಹೆಮ್ಮೆ ತಂದಿದೆ. ಮಹೇಶ ಫೌಂಡೇಶನ್ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ನಮ್ಮಂತಹವರು ಮಾಡುವುದಕ್ಕಿಂತ ಹೆಚ್ಚಿನದನ್ನು ಅವರು ಮಾಡುತ್ತಿದ್ದಾರೆ. ಒಬ್ಬ ಶಾಸಕನಾಗಿ ಮತ್ತು ವೈಯಕ್ತಿಕವಾಗಿ ಮಹೇಶ ಫೌಂಡೇಶನ್ನ ಉದಾರ ಕಾರ್ಯಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಒದಗಿಸುವ ಭರವಸೆ ನೀಡುತ್ತೇನೆ. ಅಲ್ಲದೆ, ಮಹೇಶ ಫೌಂಡೇಶನ್ ನ ಮುಂದಿನ ಎಲ್ಲ ಕಾರ್ಯಗಳಿಗೆ ಶುಭ ಹಾರೈಸುತ್ತೇನೆ”. ಎಂದು ಬೆಳಗಾವಿ …

Read More »

ನಾಳೆಯಿಂದಲೇ ಕಣಬರ್ಗಿ ಮುಖ್ಯರಸ್ತೆ ಕಾಮಗಾರಿಗೆ ಚಾಲನೆ: ರಾಜು ಸೇಠ್

ಕಳೆದ ಆರು ತಿಂಗಳಿಂದ ಬಂದ್ ಆಗಿರುವ ಕಣಬರ್ಗಿ ಮುಖ್ಯರಸ್ತೆಯ ಕಾಮಗಾರಿ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜು ಸೇಠ್ ಅಧಿಕಾರಿ ಹಾಗೂ ಗುತ್ತಿಗೆದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸ್ಥಗಿತಗೊಂಡಿರುವ ಕಾಮಗಾರಿಯನ್ನು ನಾಳೆಯಿಂದ ಕೂಡಲೇ ಆರಂಭಿಸಿ ಗುಣಮಟ್ಟದಲ್ಲಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ಬೆಳಗಾವಿಯ ಉಪನಗರ ಕಣಬರ್ಗಿ ಗ್ರಾಮದ ಪ್ರವೇಶ ದ್ವಾರದಿಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಹಾಗೂ ಆಚೆಗೆ ಮುಖ್ಯರಸ್ತೆ ಕಾಮಗಾರಿಗೆ ಆರು ತಿಂಗಳ ಹಿಂದೆ ಚಾಲನೆ ನೀಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಮಧ್ಯದಲ್ಲಿ …

Read More »

ಪ್ರತಾಪ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಲಿ : ತನ್ವೀರ್ ಸೇಠ್

ಮೈಸೂರು : ಸಂಸದ ಪ್ರತಾಪಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಲಿ. ಬಳಿಕ ಅದರ ಅನುಭವವನ್ನು ನಮಗೆ ಬಂದು ಹೇಳಲಿ ಎಂದು ಶಾಸಕ ತನ್ವೀರ್ ಸೇಠ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಲಕ್ಷ್ಮಿ ಯೋಜನೆ ಜಾರಿಯಿಂದ ಮುಸ್ಲಿಂ ಕುಟುಂಬಗಳಲ್ಲಿ ಒಡಕು ಉಂಟಾಗುತ್ತದೆ. ಮುಸ್ಲಿಮರಿಗೆ ಎರಡು ಮೂರು ಹೆಂಡತಿಯರಿರುತ್ತಾರೆ. ಆಗ ಯಾರನ್ನು ಮನೆಯ ಯಜಮಾನಿ ಎಂದು ಗುರುತಿಸುತ್ತಿರಾ ಎಂದಿದ್ದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರತಾಪ್​ …

Read More »

ಪತ್ನಿ ಹತ್ಯೆಗೆ ನಾಡ ಪಿಸ್ತೂಲು ಖರೀದಿಸಿದ್ದ ವ್ಯಕ್ತಿ

ಚಿಕ್ಕೋಡಿ : ಕಳೆದ 15 ದಿನಗಳ ಹಿಂದೆಯಷ್ಟೇ ಡಿವೋರ್ಸ್​ ನೀಡಿದ್ದ ವ್ಯಕ್ತಿ ವಿಚ್ಛೇದಿತ ಹೆಂಡತಿಯನ್ನು ಕೊಲೆ ಮಾಡಲು ಮಹಾರಾಷ್ಟ್ರದಲ್ಲಿ ನಾಡ ಪಿಸ್ತೂಲು ಖರೀದಿಸಿದ್ದ. ಈ ವ್ಯಕ್ತಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತನನ್ನು ಚಿಕ್ಕೋಡಿ ಪಟ್ಟಣದ ನಿವಾಸಿ ಸಚಿನ್ ಬಾಬಾ ಸಾಹೇಬ್ ರಾಯಮಾನೆ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಸಚಿನ್​​ ಕಳೆದ 15 ದಿನಗಳ ಹಿಂದೆಯಷ್ಟೇ ತನ್ನ ಪತ್ನಿ ಹರ್ಷಿತಾಗೆ ವಿಚ್ಛೇದನ ನೀಡಿದ್ದ. ತನ್ನ ಹೆಂಡತಿಗೆ ಬೇರೊಬ್ಬರ ಜೊತೆ ಸಂಬಂಧ ಇದೆ ಎಂದು …

Read More »

ದಕ್ಷಿಣ ಕನ್ನಡದ ಕೊಲೆ ಪ್ರಕರಣಗಳು: ದೀಪಕ್ ರಾವ್, ಮಸೂದ್, ಫಾಝಿಲ್, ಜಲೀಲ್ ಕುಟುಂಬಗಳಿಗೆ ಸಿಎಂ ನಿಧಿಯಿಂದ ತಲಾ 25 ಲಕ್ಷ ಪರಿಹಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಹತ್ಯೆಗೀಡಾದ ನಾಲ್ವರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಲಾಗಿದೆ. ಸುಳ್ಯದ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್, ಮಂಗಳೂರಿನ ಸುರತ್ಕಲ್​​ನ ಮೊಹಮ್ಮದ್ ಫಾಜಿಲ್, ಅಬ್ದುಲ್ ಜಲೀಲ್ ಮತ್ತು ದೀಪಕ್ ರಾವ್ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ. ಸಿಎಂ ನಿಧಿಯಿಂದ ತಲಾ 25 ಲಕ್ಷ ಪರಿಹಾರಬೆಳ್ಳಾರೆಯ …

Read More »

ಪರಿಚಯ – ಪ್ರಣಯ, ದೋಖಾ ಆರೋಪ: ಕನ್ನಡದ ಸಹ ನಟಿಯ ಬಂಧನ

ಶಿವಮೊಗ್ಗ: ಕನ್ನಡ ಚಿತ್ರರಂಗದ ಸಹ ನಟಿ ಉಷಾ ಅಲಿಯಾಸ್ ಉಷಾ ರವಿಶಂಕರ್​ ಅವರನ್ನು ವಂಚನೆ ಪ್ರಕರಣದಲ್ಲಿ ಶಿವಮೊಗ್ಗದ ವಿನೋಬನಗರ ಪೊಲೀಸರು ಬಂಧಿಸಿದ್ದಾರೆ.‌ ನಟಿ ಉಷಾ ಅವರು ಸುಮಾರು 6.50 ಲಕ್ಷ ರೂನಷ್ಟು ಹಣ ಪಡೆದು ವಾಪಸ್ ಮಾಡದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ಶರವಣನ್​ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಖಾಸಗಿ ದೂರಿನ‌ ಮೇರೆಗೆ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಉಷಾ ಅವರನ್ನು ಬಂಧಿಸಿದ್ದಾರೆ. ಶರವಣನ್​ ಎಂಬವವರು ಧಾರಾವಾಹಿ …

Read More »

ಅಕ್ಕಳಿಗೆ ಕಿರುಕುಳ ನೀಡುತ್ತಿರುವುದನ್ನು ಪ್ರಶ್ನಿಸಿದ ಸಹೋದರನನ್ನು ಸುಟ್ಟು ಹಾಕಿದ ಹಂತಕರು!

ಬಾಪಟ್ಲಾ, ಆಂಧ್ರಪ್ರದೇಶ: 10ನೇ ತರಗತಿ ಓದುತ್ತಿದ್ದ ಬಾಲಕನೊಬ್ಬನ ಮೇಲೆ ಯುವಕನೊಬ್ಬ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿರುವ ಘಟನೆ ಬಾಪಟ್ಲಾ ಜಿಲ್ಲೆಯ ಚೆರುಕುಪಲ್ಲಿ ತಾಲೂಕಿನ ರಾಜೋಲು ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿತ್ತು. ಈ ಘಟನೆ ಕುರಿತು ಕೆಲವೊಂದು ವಿಷಯಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಚೆರುಕುಪಲ್ಲಿ ತಾಲೂಕಿನ ಉಪ್ಪಳ ಅಮರನಾಥ್ (14) ಅವರ ತಂದೆ ಬಾಲ್ಯದಲ್ಲಿಯೇ ತೀರಿಕೊಂಡಿದ್ದು, ತಾಯಿ, ಸಹೋದರಿ, ತಾತನೊಂದಿಗೆ ವಾಸವಾಗಿದ್ದಾರೆ. ರಾಜೋಲು ಪಂಚಾಯಿತಿ ರೆಡ್ಲಪಾಲೇನಿ ನಿವಾಸಿ ಪಾಮು ವೆಂಕಟೇಶ್ವರ ರೆಡ್ಡಿ ಅಮರನಾಥ್​ …

Read More »

ಮಕ್ಕಳ ಅನುಕೂಲಕ್ಕೆ ಪಠ್ಯ ಬದಲಾಯಿಸಿದರೆ ತಪ್ಪೇನು? ಗೀತಾ ಶಿವರಾಜ್​ಕುಮಾರ್

ಮೈಸೂರು: ರಾಜ್ಯ ಸರ್ಕಾರವು ಪಠ್ಯ ಪರಿಷ್ಕರಣೆಗೆ ಮುಂದಾಗಿದ್ದು, ಮಕ್ಕಳ ಅನುಕೂಲಕ್ಕೆ ತಕ್ಕಂತೆ ಪಠ್ಯ ಬದಲಾಯಿಸಿದರೆ ಅದರಲ್ಲಿ ತಪ್ಪೇನು? ಎಂದು ಕಾಂಗ್ರೆಸ್​ ನಾಯಕಿ ಗೀತಾ ಶಿವರಾಜ್​ಕುಮಾರ್​​ ಹೇಳಿದರು. ಈ ಮೂಲಕ ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿ ಒಳ್ಳೆಯ ವಿಚಾರಗಳು ಮಾತ್ರ ಇರಬೇಕು. ಈ ಕಾರಣಕ್ಕಾಗಿ ಪಠ್ಯಪುಸ್ತಕ ಬದಲಾವಣೆ ಆದರೆ ಒಳ್ಳೆಯದು ಎಂದರು. ಒಂದೊಂದು ಸರ್ಕಾರ ಒಂದೊಂದು ರೀತಿಯಲ್ಲಿ ಪಠ್ಯ ಬದಲಾವಣೆ ಮಾಡುವ ಕ್ರಮದಿಂದ ಮಕ್ಕಳಲ್ಲಿ ಗೊಂದಲ …

Read More »

ಕಾರು – ಕಂಟೇನರ್ ಮಧ್ಯೆ ಭೀಕರ ಅಪಘಾತ: ಇಬ್ಬರು ಸೇವಕರು ಸಾವು, ಕಾಡಸಿದ್ದೇಶ್ವರ ಸ್ವಾಮೀಜಿಗೆ ಗಾಯ

ಬೆಳಗಾವಿ: ಕಾರು, ಕಂಟೇನರ್‌ಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಸ್ವಾಮೀಜಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.   ಬೆಳಗಾವಿ ತಾಲೂಕಿನ ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾಮೀಜಿ ಸೇವಕರಾದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ದೇವಲವಾಡಿ ಗ್ರಾಮದ ನಿವಾಸಿ ಪಾಂಡುರಂಗ ಜಾಧವ್ …

Read More »

ಮಹಾರಾಷ್ಟ್ರದ ಶಾಲೆಯ ದಾಖಲೆ ಮರಾಠಿಯಲ್ಲಿದ್ದರೂ ಕನ್ನಡದಲ್ಲಿಯೇ ವಿವರಗಳನ್ನು ತುಂಬಿದ್ದಲ್ಲದೇ ” ಕರ್ನಾಟಕ ರಾಜ್ಯ”ಎಂದೂ ಬರೆದ ಮನದಾಳದ ಇಚ್ಛೆಯನ್ನು ಪ್ರಕಟಿಸಿದ ಗುಗವಾಡ ಶಾಲಾ ಮುಖ್ಯಾಧ್ಯಾಪಕರು!

ಮಹಾರಾಷ್ಟ್ರದ ಶಾಲೆಯ ದಾಖಲೆ ಮರಾಠಿಯಲ್ಲಿದ್ದರೂ ಕನ್ನಡದಲ್ಲಿಯೇ ವಿವರಗಳನ್ನು ತುಂಬಿದ್ದಲ್ಲದೇ ” ಕರ್ನಾಟಕ ರಾಜ್ಯ”ಎಂದೂ ಬರೆದ ಮನದಾಳದ ಇಚ್ಛೆಯನ್ನು ಪ್ರಕಟಿಸಿದ ಗುಗವಾಡ ಶಾಲಾ ಮುಖ್ಯಾಧ್ಯಾಪಕರು! ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಗವಾಡ ಗ್ರಾಮದ ಈ ಶಾಲೆಯ ಮುಖ್ಯಾಧ್ಯಾಪಕರು ನೀಡಿದ ಟಿಸಿ( ವರ್ಗಾವಣೆ ಪ್ರಮಾಣಪತ್ರ)ಈಗ ವೈರಲ್ ಆಗಿದೆ. ಅಚ್ಚ ಕನ್ನಡ ಪ್ರದೇಶಗಳಾದ ಜತ್ತ ತಾಲೂಕಿನ 44 ಹಳ್ಳಿಗಳ ಪೈಕಿ ಗುಗವಾಡ ಗ್ರಾಮವೂ ಒಂದಾಗಿದೆ.ಇಲ್ಲಿಯ ಶಾಲೆಯ ಮುಖ್ಯಾಧ್ಯಾಪಕರು ರಾಹುಲ್ ಚೌಗುಲೆ ಎಂಬವರಿಗೆ ನೀಡಿದ …

Read More »