Breaking News
Home / ರಾಜಕೀಯ (page 773)

ರಾಜಕೀಯ

ದೇವದಾಸಿಯರ ಮಕ್ಕಳಿಗೆ ತಂದೆ ಹೆಸರು ಕಡ್ಡಾಯವಲ್ಲ ಎಂದು ಆದೇಶ ಹೊರಡಿಸಲು ಸರ್ಕಾರ ನಿರ್ಧಾರ

ಬೆಂಗಳೂರು: ‘ದೇವದಾಸಿಯರ ಮಕ್ಕಳು ಸರ್ಕಾರಿ ಸೌಲಭ್ಯ ಪಡೆಯಲು ತಂದೆಯ ಹೆಸರನ್ನು ದಾಖಲಿಸುವುದು ಕಡ್ಡಾಯವಲ್ಲ, ಅದು ಐಚ್ಚಿಕವಾಗಿರುತ್ತದೆ.’ ಹೀಗೆಂದು ಆದೇಶ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಕುಂದು ಕೊರತೆ ಪರಿಹಾರ ಸಂಬಂಧ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.   ಶಾಲಾ-ಕಾಲೇಜುಗಳಿಗೆ ಪ್ರವೇಶ ಪಡೆಯುವಾಗ, ಜಾತಿ ಆದಾಯ ಪ್ರಮಾಣ …

Read More »

ಕೇಂದ್ರದಿಂದ ಸಿಹಿ ಸುದ್ದಿ: 50 ಸಾವಿರ ರೂ. ಸಾಲ ಸೌಲಭ್ಯದ ಪಿಎಂ ಸ್ವನಿಧಿ ಯೋಜನೆ 2 ವರ್ಷ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು 2024ರ ಡಿಸೆಂಬರ್ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಹರ್ ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಸಂಸದರೊಬ್ಬರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ ಸಚಿವರು, ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಎರಡು ವರ್ಷ ವಿಸ್ತರಿಸಲಾಗಿದೆ ಎಂದರು.   ಬೀದಿ ಬದಿ ವ್ಯಾಪಾರಿಗಳನ್ನು ಸ್ವಾವಲಂಬಿಗೊಳಿಸುವ …

Read More »

ಗಡಿ ವಿವಾದ: ಬಸ್ ಗಳಿಗೆ ರಕ್ಷಣೆ ನೀಡಿದ ಬೆಳಗಾವಿ ಪೊಲೀಸರಿಗೆ ಧನ್ಯವಾದ ಹೇಳಿಕೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆ

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ವಿವಾದದ ನಡುವೆಯೂ ಬಸ್ ಹಾಗೂ ವಾಹನಗಳಿಗೆ ರಕ್ಷಣೆ ನೀಡಿದ ಬೆಳಗಾವಿ ಪೊಲೀಸರಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್ಆರ್ಟಿಸಿ)ಯು ಧನ್ಯವಾದಗಳನ್ನು ತಿಳಿಸಿದೆ. ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ವಿವಾದದ ನಡುವೆಯೂ ಬಸ್ ಹಾಗೂ ವಾಹನಗಳಿಗೆ ರಕ್ಷಣೆ ನೀಡಿದ ಬೆಳಗಾವಿ ಪೊಲೀಸರಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್ಆರ್ಟಿಸಿ)ಯು ಧನ್ಯವಾದಗಳನ್ನು ತಿಳಿಸಿದೆ. ಬೆಳಗಾವಿಯ ಸವದತ್ತಿ ಯಲ್ಲಮ್ಮನ …

Read More »

ಕನ್ನಡ ತೇರೆಳೆಯಲು ಗಡಿಯ ಭೋಜ ಗ್ರಾಮ ಸಜ್ಜಾಗುತ್ತಿದೆ

ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ಶಾಂತಿಸಾಗರ ” ಸ್ಮಾರಕ ಸಭಾಮಂಟಪದಲ್ಲಿ ನಿಪ್ಪಾಣಿ ತಾಲೂಕು 3ನೇ ಕನ್ನಡ ಸಾಹಿತ್ಯಸಮ್ಮೇಳನ ಡಿ.11ರಂದು ನಡೆಯಲಿದ್ದು ಸಕಲಸಿದ್ಧತೆಗಳು ನಡೆದಿವೆ. ”ಗಡಿಭಾಗದ ಬಹುತೇಕ ಹಳ್ಳಿಗಳ ದಾನಿಗಳು ಕನ್ನಡ ಸಮ್ಮೇಳನ ಯಶಸ್ವಿಗೊಳಿಸಲು ಜೋಡಿಸಿದ್ದು ಅತ್ಯಂತ ಅದ್ಧೂರಿಯಿಂದ ಸಮ್ಮೇಳನ ಜರುಗಲಿದೆ,” ಎಂದು ಕಸಾಪ ನಿಪ್ಪಾಣಿ ತಾಲೂಕಾಧ್ಯಕ್ಷ ಈರಣ್ಣಾ ಶಿರಗಾವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಅವರು ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು. ಕಸಾಪ ಕಾರ್ಯದರ್ಶಿ ಹಾಗೂ ಶರಣ ಸಾಹಿತ್ಯ ಪರಿಷತ್‌ …

Read More »

ವಿಜಯ್ ದೇವರಕೊಂಡ ಮನೆಯಲ್ಲಿ ಜಾಹ್ನವಿ..!

ವಿಜಯ್ ದೇವರಕೊಂಡ ಹೆಸರಿನ ಜೊತೆ ಯಾವಾಗಲೂ ಒಂದಲ್ಲ ಒಂದು ನಟಿಯರ ಹೆಸರು ತಳುಕು ಹಾಕಿಕೊಂಡೇ ಇರುತ್ತದೆ. ಅದ್ಯಾಕೋ ಗೊತ್ತಿಲ್ಲ. ಯಾವುದೇ ಹೊಸ ನಟಿಯ ಜೊತೆ ಸಿನಿಮಾ ಮಾಡಿದರೂ ಇಬ್ಬರು ಡೇಟಿಂಗ್ ನಲ್ಲಿ ಇದ್ದಾರಾ ಅನ್ನೋ ಗಾಸಿಪ್ ಬಂದೇ ಬರುತ್ತದೆ. ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ ನಲ್ಲಿ ಇದ್ದಾರಾ ಅನ್ನೋ ಗಾಸಿಪ್ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ ಇದೀಗ ಆಗಿದೆ.   ಹೌದು, ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ …

Read More »

ಚಿಕ್ಕೋಡಿ ಪಟ್ಟಣದಲ್ಲಿ ಹಿಮಾಚಲಪ್ರದೇಶದ ವಿಜಯೋತ್ಸವ ಆಚರಿಸಿದಕಾಂಗ್ರೆಸ್ ಕಾರ್ಯಕರ್ತರು

ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಗೆಲವು ಹಿನ್ನಲೆಯಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿಸಿಡಿಸಿ ವಿಜಯೋತ್ಸವನ್ನು ಆಚರಿಸಿದರು. ಚಿಕ್ಕೋಡಿ ಪಟ್ಟಣದ ಬಸವ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ನೇತ್ರತ್ವದಲ್ಲಿ ವಿಜಯೋತ್ಸವ ಜರುಗಿತು. ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಎಂದು ಘೋಷಣೆಗಳನ್ನು ಪಟಾಕಿ ಸಿಡಿಸಿ ವಿಜಯೋತ್ಸವನ್ನು ಆಚರಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ ಹಿಮಾಚಲಪ್ರದೇಶಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯಗಳಿಸಿದೆ. ಜನ ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದರು. ನಂತರ …

Read More »

ಆಕ್ಸಿಲ್ ತುಂಡಾಗಿ ಪಲ್ಟಿಯಾದ ಟ್ರ್ಯಾಕ್ಟರ್‌: ಪ್ರಾಣಾಪಾಯದಿಂದ ಪಾರಾದ ಚಾಲಕ

ಮುದ್ದೇಬಿಹಾಳ: ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಕಬ್ಬಿನ ಟ್ರ್ಯಾಕ್ಟರ್‌ ಆಕ್ಸಿಲ್ ಕಟ್ ಆಗಿ ಟ್ರ್ಯಾಕ್ಟರ್‌ ಪಲ್ಟಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಶಿವರಾಜ್ ಹೋಟೆಲ್ ಬಳಿ ಗುರುವಾರ ನಡೆದಿದೆ. ಯಲ್ಲಪ್ಪ ದೇವರಗಡ್ಡಿ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್‌ ಪಲ್ಟಿಯಾಗಿ, ಲಕ್ಷಾಂತರ ಮೌಲ್ಯದ ಕಬ್ಬು ಹಾನಿ ಆಗಿದೆ. ಅಲ್ಲದೇ, ಟ್ರ್ಯಾಕ್ಟರ್‌ ಚಾಲಕನಿಗೆ ಏನು ಆಗಿಲ್ಲ. ಟ್ರ್ಯಾಕ್ಟರ್‌ ಪಲ್ಟಿಯಾಗಿರುವ‌ ಪರಿಣಾಮ ಲಕ್ಷಾಂತರ ಮೌಲ್ಯದ ಕಬ್ಬು ಹಾನಿಯಾಗಿದೆ. ಟ್ರ್ಯಾಕ್ಟರ್‌ ಜಖಂಗೊಂಡಿದೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ …

Read More »

ಆಸ್ತಿ ಆಸೆಗಾಗಿ ಹೆತ್ತ ತಾಯಿಯನ್ನೇ ಬ್ಯಾಟ್ ನಿಂದ ಹೊಡೆದು ಕೊಂದು ನದಿಗೆಸೆದ ಮಗ

ಮುಂಬಯಿ: ಆಸ್ತಿ ಆಸೆಗಾಗಿ ಹೆತ್ತ ತಾಯಿಯನ್ನೇ ಬೇಸ್ ಬಾಲ್ ಬ್ಯಾಟ್ ನಿಂದ ಹೊಡೆದು ಕೊಂದು ನದಿಗೆಸೆದ ಘಟನೆ ನೆರೆಯ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. ವೀಣಾ ಕಪೂರ್ (74) ಹತ್ಯೆಯಾದ ದುರ್ದೈವಿ ಮಹಿಳೆ. ಕೃತ್ಯಕ್ಕೆ ಸಂಬಂಧಿಸಿ ಆಕೆಯ 43 ವರ್ಷದ ಮಗ ಮತ್ತು ಆತನ ಸ್ನೇಹಿತನನ್ನು ಜುಹು ಪೊಲೀಸರು ಬಂಧಿಸಿದ್ದಾರೆ.   ಮಂಗಳವಾರ ರಾತ್ರಿ ಜುಹು ಪೊಲೀಸ್ ಠಾಣೆಗೆ ಮಹಿಳೆ ಕಾಣೆಯಾಗಿರುವ ಕುರಿತು ದೂರು ಬಂದಿದೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು …

Read More »

ಗುಜರಾತ್ ಫಲಿತಾಂಶ 5 ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ದಿಕ್ಸೂಚಿ: ಜಿಗಜಿಣಗಿ

ವಿಜಯಪುರ : ಗುಜರಾತ್ ವಿಧಾನಸಭಾ ಚುನಾವಣೆ ಕರ್ನಾಟಕ ಸೇರಿದಂತೆ ದೇಶದ ಐದು ರಾಜ್ಯಗಳಲ್ಲಿ ಭವಿಷ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳಿಗೆ ದಿಕ್ಸೂಚಿ ಎಂದು ಮಾಜಿ ಕೇಂದ್ರ ಸಚಿವ, ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯಿಸಿದ್ದಾರೆ.   ಗುರುವಾರ ವಿಜಯಪುರ ತಾಲೂಕಿನ ಬುರಣಾಪುರ ಬಳಿ ಸಂಸದ ಜಿಗಜಿಣಗಿ ಪ್ರತಿಕ್ರಿಯಿಸಿ, ಗುಜರಾತ್ ನಲ್ಲಿ ಸ್ಪಷ್ಟ ಅದ್ವಿತೀಯ ಬಹುಮತ ಮಾತ್ರವಲ್ಲ ಐತಿಹಾಸಿಕ ಗೆಲುವು ಸಾಧಿಸಿದೆ. ಕೆಲವೇ ತಿಂಗಳಲ್ಲಿ ರಾಜ್ಯದಲ್ಲೂ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ …

Read More »

ಕಲ್ಯಾಣ ಕರ್ನಾಟದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಧೂಳಿಪಟ: ಕಾಂಗ್ರೆಸ್ ವಿಶ್ವಾಸ

ಕಲಬುರಗಿ: ರಾಜ್ಯದ ಬಿಜೆಪಿ ಸರ್ಕಾರದ ವೈಫಲ್ಯ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ತೋರಿರುವ ನಿರ್ಲಕ್ಷ್ಯದ ವಿರುದ್ದ ಜನ ಬೇಸತ್ತಿರುವುದರಿಂದ ಮುಂಬರುವ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಕ ಭಾಗದ ಎಲ್ಲ41 ಕ್ಷೇತ್ರಗಳಲ್ಲಿ ಬಿಜೆಪಿ ಧೂಳಿಪಟವಾಗಲಿದೆ ಎಂದು ಕಾಂಗ್ರೆಸ್ ನಾಯಕರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.   ಡಾ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಂಘಟಿತ ಪ್ರಯತ್ನ ಹಾಗೂ …

Read More »