Home / ರಾಜಕೀಯ / ಕೇಂದ್ರದಿಂದ ಸಿಹಿ ಸುದ್ದಿ: 50 ಸಾವಿರ ರೂ. ಸಾಲ ಸೌಲಭ್ಯದ ಪಿಎಂ ಸ್ವನಿಧಿ ಯೋಜನೆ 2 ವರ್ಷ ವಿಸ್ತರಣೆ

ಕೇಂದ್ರದಿಂದ ಸಿಹಿ ಸುದ್ದಿ: 50 ಸಾವಿರ ರೂ. ಸಾಲ ಸೌಲಭ್ಯದ ಪಿಎಂ ಸ್ವನಿಧಿ ಯೋಜನೆ 2 ವರ್ಷ ವಿಸ್ತರಣೆ

Spread the love

ವದೆಹಲಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು 2024ರ ಡಿಸೆಂಬರ್ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಹರ್ ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಸಂಸದರೊಬ್ಬರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ ಸಚಿವರು, ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಎರಡು ವರ್ಷ ವಿಸ್ತರಿಸಲಾಗಿದೆ ಎಂದರು.

 

ಬೀದಿ ಬದಿ ವ್ಯಾಪಾರಿಗಳನ್ನು ಸ್ವಾವಲಂಬಿಗೊಳಿಸುವ ಉದ್ದೇಶದಿಂದ ಆತ್ಮನಿರ್ಭರ ಯೋಜನೆಯಡಿ ಪಿಎಂ ಸ್ವನಿಧಿ ಯೋಜನೆ ರೂಪಿಸಲಾಗಿದ್ದು ಅವಧಿ ವಿಸ್ತರಣೆ ಮಾಡಲಾಗಿದೆ. ಮೂರನೇ ಸಾಲ ಪಡೆಯುವ ಸೌಲಭ್ಯವನ್ನೂ ಪರಿಚಯಿಸಲಾಗಿದೆ ಎಂದರು.

ಪಿಎಂ ಸ್ವನಿಧಿ ಯೋಜನೆಯಡಿ ಮೊದಲ ಸಾಲವಾಗಿ 10 ಸಾವಿರ ರೂಪಾಯಿ, ಎರಡನೇ ಸಾಲವಾಗಿ 20 ಸಾವಿರ ರೂಪಾಯಿ ಹಾಗೂ ಮೂರನೇ ಸಾಲವಾಗಿ 50,000 ರೂ.ವರೆಗೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಕಳೆದ ನವೆಂಬರ್ ವರೆಗೆ 31.73 ಲಕ್ಷ ಬೀದಿ ವ್ಯಾಪಾರಿಗಳು ಯೋಜನೆಯಡಿ ಸಾಲ ಪಡೆದುಕೊಂಡಿದ್ದಾರೆ ಎಂದರು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ