ನವದೆಹಲಿ: ಏಪ್ರಿಲ್ ತಿಂಗಳಲ್ಲಿ 2.61 ಕೋಟಿ ಟನ್ ಕಲ್ಲಿದ್ದಲು ದೇಶಕ್ಕೆ ಆಮದಾಗಿದೆ ಎಂದು ಇ-ವಾಣಿಜ್ಯ ಸಂಸ್ಥೆ ಎಂ-ಜಂಕ್ಷನ್ ಸರ್ವಿಸಸ್ ಲಿಮಿಟೆಡ್ ತಿಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 2.30 ಕೋಟಿ ಟನ್ ಕಲ್ಲಿದ್ದಲು ಆಮದಾಗಿತ್ತು. ಈ ಆಮದಿಗೆ ಹೋಲಿಸಿದರೆ ಶೇ 13.2ರಷ್ಟು ಏರಿಕೆಯಾಗಿದೆ. ಕೋಕಿಂಗ್ ಅಲ್ಲದ (ಉಷ್ಣ ವಿದ್ಯುತ್ ಸ್ಥಾವರದಲ್ಲಿ ಬಳಸುವ ಕಲ್ಲಿದ್ದಲು) ಕಲ್ಲಿದ್ದಲು 1.74 ಕೋಟಿ ಟನ್ ಮತ್ತು 49.7 ಲಕ್ಷ ಟನ್ ಕೋಕಿಂಗ್ (ಉತ್ತಮ ಗುಣಮಟ್ಟ) ಕಲ್ಲಿದ್ದಲು …
Read More »ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ.: ಬಿ.ಸಿ.ಪಾಟೀಲ್ ಆಕ್ರೋಶ
ಹಾವೇರಿ: ರಾಜ್ಯ ಸರಕಾರ ಬೆಲೆ ಏರಿಕೆ ಮಾಡಿದ್ದು ದೊಡ್ಡ ಆಘಾತವಾಗಿದೆ. ನೇರವಾಗಿ ರಾಬರಿ ಮತ್ತು ಡಕಾಯತಿ ಇದು. ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ. ಸಾರ್ವಜನಿಕರ ಜೇಬಿಗೆ ಸರಕಾರ ಕತ್ತರಿ ಹಾಕಿದೆ. ಗ್ಯಾರಂಟಿ ಕೊಟ್ಟರೂ ಜನರು ಕೈ ಹಿಡಿಯಲಿಲ್ಲ ಎಂದು ಹತಾಶರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹರಿಹಾಯ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,187 ಕೋಟಿ ಭ್ರಷ್ಟಾಚಾರ ಮಾಡಿ ಆಂಧ್ರ ಪ್ರದೇಶದ ಚುನಾವಣೆಗೆ ಬಳಸಿದ್ದಾರೆ. ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಕೈವಾಡವಿದೆ. ನಾಗೇಂದ್ರ ಅವರ …
Read More »ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಗದಗ: ಡೀಸೆಲ್, ಪೆಟ್ರೋಲ್ ದರ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಮಹಿಳೆಯರು ತೆಂಗಿನಕಾಯಿ ಚಿಪ್ಪು ಪ್ರದರ್ಶಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ವಾಹನ ಸವಾರರ ಮೇಲೆ ಬರೆ ಎಳೆದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಜನವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಜನಸಾಮಾನ್ಯರಿಗೆ ಹೊರೆಯಾದ ಕಾಂಗ್ರೆಸ್ …
Read More »ಟಾಟಾ ನೆಕ್ಸಾನ್ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!
ನವದೆಹಲಿ: 2017ರಲ್ಲಿ ಮಾರುಕಟ್ಟೆಗೆ ಬಂದ ಟಾಟಾ ನೆಕ್ಸಾನ್(Tata Nexon), 2021ರಿಂದ 2023ರವರೆಗೆ ಸತತ ಮೂರು ವರ್ಷಗಳ ಕಾಲ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಎಸ್ ಯುವಿ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. ಟಾಟಾ ನೆಕ್ಸಾನ್ ಮಾರುಕಟ್ಟೆಗೆ ಬಿಡುಗಡೆಗೊಂಡ ಏಳು ವರ್ಷಗಳಲ್ಲಿ ಟಾಟಾ ನೆಕ್ಸಾನ್ ಏಳು ಲಕ್ಷ ಮಾರಾಟ ಕಂಡಿರುವುದು ಟಾಟಾ ಮೋಟಾರ್ಸ್ ಸಂಭ್ರಮಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ 2018ರಲ್ಲಿ ಗ್ಲೋಬಲ್ NCAPನಿಂದ 5 ಸ್ಟಾರ್ ರೇಟಿಂಗ್ ಪಡೆದ ಭಾರತದ ಮೊದಲ ಕಾರು …
Read More »ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ; ದೂರು ದಾಖಲು
ಪಣಜಿ: ಝೋಸ್ಕಾ ಆಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದಾಗಿ ಹೇಳಿ ಮಹಿಳೆಯೊಬ್ಬರು 2.71 ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಅಜೀಂ ಸಿಂಗ್ ಮತ್ತು ಮನಾಲಿ ಶಾ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ರೀತಿಯ ವಂಚನೆ ಜನವರಿ 17 ರಿಂದ ಫೆಬ್ರವರಿ 8ರ ಅವಧಿಯಲ್ಲಿ ನಡೆಯಿತು. ಆರೋಪಿಗಳು ತಾವು ಜೋಸ್ಕಾ ಎಂಬ ಆನ್ಲೈನ್ ಸಂಸ್ಥೆಯ ಪ್ರಮುಖರು ಮತ್ತು ಸಹಾಯಕ ಪ್ರಾಧ್ಯಾಪಕರು ಮತ್ತು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು …
Read More »“ಅವನು ಜೈಲಿನೊಳಗೆ ಇದ್ದಾನೆ, ನೀನು ಹೊರಗೆ ಇದ್ದೀಯ ಅಷ್ಟೇ”; ಮತ್ತೆ ಕಿಚ್ಚನ ವಿರುದ್ಧ ತಿರುಗಿಬಿದ್ದ ಅಹೋರಾತ್ರ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ದೇಶಾದ್ಯಂತ ಈ ಕೊಲೆ ಬಗ್ಗೆನೇ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್ ಮೌನ ಮುರಿದಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದರು. ಈ ಹೇಳಿಕೆ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕಿಚ್ಚ ಸುದೀಪ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಹೋರಾತ್ರ ಕಿಡಿಕಾರುವುದಕ್ಕೆ ಶುರು ಮಾಡಿದ್ದಾರೆ. ವಿಡಿಯೋ ಮಾಡಿ ಈ ಹಿಂದೆ ಸುದೀಪ್ ಅಭಿಮಾನಿಗಳು ಅವರ ಮೇಲೆ ಹಲ್ಲೆ …
Read More »ಸಿಐಡಿ ಕಚೇರಿಯಲ್ಲಿ ಒಂದೇ ಬಾರಿ ವಿಚಾರಣೆಗೆ ಹಾಜರಾದ ಮೂವರು ರಾಜಕೀಯ ನಾಯಕರು
ಸಿಐಡಿ ಕಚೇರಿಯಲ್ಲಿ ಒಂದೇ ಬಾರಿ ವಿಚಾರಣೆಗೆ ಹಾಜರಾದ ಮೂವರು ರಾಜಕೀಯ ನಾಯಕರು ಬೆಂಗಳೂರು: ರಾಜ್ಯದ ಘಟಾನುಘಟಿ ರಾಜಕೀಯ ನಾಯಕರು ಇಂದು ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಒಂದೇ ಬಾರಿಗೆ ವಿಚಾರಣೆಗೆ ಹಾಜರಾಗಿರುವ ಘಟನೆ ನಡೆದಿದೆ. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇದೇ ವೇಳೆ ಮೈಸೂರಿನ ಕೆ.ಆರ್.ನಗರ ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಕೂಡ ಸಿಐಡಿ ವಿಚಾರಣೆಗೆ ಹಾಜರಾಗಿದ್ದಾರೆ. …
Read More »ಜಮೀನಿಗೆ ಹೋದಾಗಲೇ ಘೋರ ದುರಂತ: ವಿದ್ಯುತ್ ತಂತಿ ತಗುಲಿ ರೈತ, ಎತ್ತು ಸಾವು
ಕೊಪ್ಪಳ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ರೈತ ಹಾಗೂ ಎತ್ತು ಮೃತಪಟ್ಟ ಘಟನೆ ತಾವರಗೇರಾ ಸಮೀಪದ ಚಿಕ್ಕತೆಮ್ಮಿನಾಳ ಗ್ರಾಮದಲ್ಲಿ ನಡೆದಿದೆ. ಬಸವರಾಜ(38) ಮೃತಪಟ್ಟ ರೈತ ಎಂದು ಹೇಳಲಾಗಿದೆ. ಜಮೀನಿನಲ್ಲಿ ಉಳುಮೆ ಮಾಡುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ವಿದ್ಯುತ್ ಪ್ರವಹಿಸಿ ಎತ್ತು ಹಾಗೂ ರೈತ ಬಸವರಾಜ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ ಕೂಡ ಭೇಟಿ ನೀಡಿ …
Read More »ರೇಣುಕಾಸ್ವಾಮಿ ಕೊಲೆ ಕೇಸ್ : ದರ್ಶನ್ ಜೊತೆ ಪಾರ್ಟಿ ಮಾಡಿದ್ದ ಹಾಸ್ಯನಟ ಚಿಕ್ಕಣ್ಣಗೆ ಸಂಕಷ್ಟ..!
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ಚಿಕ್ಕಣ್ಣಗೆ ಸಂಕಷ್ಟ ಎದುರಾಗಿದ್ದು, ನೋಟಿಸ್ ನೀಡಲು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಹೌದು. ನಟ ದರ್ಶನ್ ಶೆಡ್ ಗೆ ಹೋಗುವ ಮೊದಲು ( ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳ) ದರ್ಶನ್ ಚಿಕ್ಕಣ್ಣ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಕೊಲೆ ನಡೆಯುವದಕ್ಕೂ ಮುನ್ನ ಪಾರ್ಟಿ ಒಂದು ನಡೆದಿದ್ದು, ಈ ಪಾರ್ಟಿಯಲ್ಲಿ ದರ್ಶನ್ ಜೊತೆ ಚಿಕ್ಕಣ್ಣ ಭಾಗಿಯಾಗಿದ್ದರು ಎನ್ನಲಾಗಿದೆ. ಚಿಕ್ಕಣ್ಣಗೂ ಈ …
Read More »ಹೊಲಗಳತ್ತ ಮುಖ ಮಾಡಿದ ಅನ್ನದಾತ: ಬಿತ್ತನೆ ಕಾರ್ಯ ಚುರುಕು
ಮುದ್ದೇಬಿಹಾಳ: ತಾಲ್ಲೂಕಿನ ಮೂರು ಹೋಬಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರು ಬಿತ್ತನೆಗೆ ಸಿದ್ಧ ಮಾಡಿಕೊಂಡ ಕೃಷಿಪರಿಕರಗಳೊಂದಿಗೆ ಹೊಲಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ತೊಗರಿ, ಹೆಸರು, ಸಜ್ಜೆ,ಹ ತ್ತಿ ಬೆಳೆಗಳ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೃಷಿ ಇಲಾಖೆಯಿಂದ ಈಗಾಗಲೇ ಮುದ್ದೇಬಿಹಾಳ, ಢವಳಗಿ, ನಾಲತವಾಡ ಹೋಬಳಿ ವ್ಯಾಪ್ತಿಯ ರೈತರಿಗೆ ತೊಗರಿ, ಹೆಸರು ಬೀಜಗಳನ್ನು ವಿತರಣೆ ಮಾಡಿದೆ. ಅದರಲ್ಲಿ ಮುಸುಕಿನ ಜೋಳ, ಬಿಜಿಎಸ್-9 ಹೆಸರು, ಟಿಎಸ್ಆರ್3ಆರ್ ತೊಗರಿ …
Read More »
Laxmi News 24×7