Breaking News

ರಾಜಕೀಯ

ಒಂದೇ ದಿನ 24 ಗಂಟೆಯಲ್ಲಿ 1,647 ಮಂದಿಗೆ ಕೊರೋನಾ ವೈರಸ್​ ಬಂದಿದೆ. ಈ ಮೂಲಕ ದೆಹಲಿಯಲ್ಲಿ

 ದೆಹಲಿಯಲ್ಲಿ ಮಾರಕ ಕೊರೋನಾ ವೈರಸ್​ ಆರ್ಭಟ ಮುಂದುವರಿದದೆ. ಸೋಮವಾರ ಒಂದೇ ದಿನ 24 ಗಂಟೆಯಲ್ಲಿ 1,647 ಮಂದಿಗೆ ಕೊರೋನಾ ವೈರಸ್​ ಬಂದಿದೆ. ಈ ಮೂಲಕ ದೆಹಲಿಯಲ್ಲಿ ಕೋವಿಡ್​​-19 ಸೋಂಕಿತರ ಸಂಖ್ಯೆ 42,829ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಪ್​ ಸರ್ಕಾರ ಬಿಡುಗಡೆ ಮಾಡಿದ ಹೆಲ್ತ್​​ ಬುಲೆಟಿನ್​​ನಿಂದ ತಿಳಿದು ಬಂದಿದೆ. ಇನ್ನು, ಮಹಾಮಾರಿ ಕೋವಿಡ್​​-19 ಸೋಂಕು ನಿನ್ನೆಯೂ 73 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಈ ಮೂಲಕ ಕೊರೋನಾ ವೈರಸ್​ನಿಂದ …

Read More »

ಪ್ರತಿ ಕ್ವಿಂಟಾಲ್‍ಗೆ 10,300 ರೂ. ನಂತೆ ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ

ಹಾಸನ: ಪ್ರತಿ ಕ್ವಿಂಟಾಲ್‍ಗೆ 10,300 ರೂ. ನಂತೆ ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೂ.11ರ ಸರ್ಕಾರಿ ಆದೇಶದಂತೆ ಕೊಬ್ಬರಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ಖರೀದಿ ಕೇಂದ್ರಗಳನ್ನು ತರಬೇಕಿದೆ. ಕೇಂದ್ರ ಸರ್ಕಾರ ಬೆಂಬಲಬೆಲೆಯೊಂದಿಗೆ ಕೊಬ್ಬರಿ ಖರೀದಿಸಲು ನೆಫೆಡ್ ಸಂಸ್ಥೆಯನ್ನು ಗುರುತಿಸಿದ್ದು, ರಾಜ್ಯ ಸರ್ಕಾರ ಸಹಕಾರ ಮಾರಾಟ ಮಂಡಳಿ ಮೂಲಕ ಖರೀದಿಸಲು ಸೂಚನೆ ನೀಡಿದೆ. ಅದರಂತೆ …

Read More »

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ನಕಲಿ ವಿಡಿಯೋ ಬಿಡುಗಡೆ ಮಾಡಿದ ಆರೋಪ……..?

ಭೋಪಾಲ್, ಜೂ.15- ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ನಕಲಿ ವಿಡಿಯೋ ಬಿಡುಗಡೆ ಮಾಡಿದ ಆರೋಪದ ಮೇಲೆ ಭೋಪಾಲ್ ಕ್ರೈಂ ಬ್ರ್ಯಾಂಚ್ ಎಫ್‍ಐಆರ್ ದಾಖಲಿಸಿದೆ. ಬಿಜೆಪಿ ದಿಗ್ವಿಜಯ್ ಸಿಂಗ್ ವಿರುದ್ಧ ದೂರು ಸಲ್ಲಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವಿಡಿಯೋವನ್ನು ಹರಿಬಿಟ್ಟಿರುವ ಆರೋಪದ ಮೇಲೆ ಐಪಿಸಿಯ ವಿಭಿನ್ನ ಸೆಕ್ಷನ್ ಗಳ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಹೆಚ್ಚಿನ ಮಾಹಿತಿ ಇನ್ನೂ …

Read More »

ಕೊರೊನಾ ಮಹಾಮಾರಿ ಬೆಂಗಳೂರಿನ ಮೂಲೆ ಮೂಲೆಗಳಿಗೂ ವ್ಯಾಪಿಸುತ್ತಿದೆ…………

ಬೆಂಗಳೂರು, ಜೂ.15-ಕೊರೊನಾ ಮಹಾಮಾರಿ ಬೆಂಗಳೂರಿನ ಮೂಲೆ ಮೂಲೆಗಳಿಗೂ ವ್ಯಾಪಿಸುತ್ತಿದೆ. 198 ವಾರ್ಡ್‍ಗಳಲ್ಲಿ ಈಗಾಗಲೇ 122 ವಾರ್ಡ್‍ಗಳಿಗೆ ಮಹಾಮಾರಿ ಕಾಲಿಟ್ಟಿದ್ದು, 142 ಕಂಟೇನ್ಮೆಂಟ್ ಜೋನ್‍ಗಳನ್ನು ಸ್ಥಾಪಿಸಲಾಗಿದೆ. ನಿನ್ನೆಯಿಂದೀಚೆಗೆ 32 ಕಂಟೈನ್‍ಮೆಂಟ್ ಪ್ರದೇಶಗಳನ್ನು ಗುರುತಿಸಲಾಗಿದ್ದು, ನಗರದ ಪ್ರತಿಯೊಂದು ರಸ್ತೆಗೂ ಬೀಳುತ್ತಿವೆ ಸೀಲ್‍ಡೌನ್ ಬ್ಯಾರಿಕೇಡ್‍ಗಳು. ನಗರದ ಎಂಟು ವಲಯಗಳಿಗೂ ಮಹಾಮಾರಿ ಹಬ್ಬುತ್ತಿದ್ದು, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕು ತಡೆಗಟ್ಟಲು ಹರಸಾಹಸ ಪಡುತ್ತಿದ್ದಾರೆ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ …

Read More »

ಸೋತು ಸುಣ್ಣವಾಗಿರುವ ಕಾಂಗ್ರೆಸ್ ಗೆ ಹೊಸ ಆಶಾಕಿರಣ ಡಿ.ಕೆ.ಶಿವಕುಮಾರ ಪ್ರಮಾಣ ಎಂದು?

ಬೆಂಗಳೂರು – ಭರ್ಜರಿಯಾಗಿಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಉತ್ಸಾಹದಲ್ಲಿರುವ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ.ಶಿವಕುಮಾರ ಭಾನುವಾರ ಮೊದಲ ಹಂತದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಭಾನುವಾರ ಬೆಂಗಳೂರಿನ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಹೋಮ, ಹವನ ನಡೆಯಲಿದೆ. ತಮ್ಮ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಗೆ ಯಾವುದೇ ರೀತಿಯ ವಿಘ್ನಗಳು ಎದುರಾಗದಿರಲಿ ಎಂದು ಮತ್ತು ಕಾಂಗ್ರೆಸ್ ಮತ್ತೊಮ್ಮೆ ಉಚ್ಛ್ರಾಯ ಸ್ಥಿತಿಗೆ ತಲುಪಲಿ ಎನ್ನುವ ಆಶಯದೊಂದಿಗೆ ಹೋಮ, ಹವನ ನಡೆಯಲಾಗುತ್ತಿದೆ. ಈಗಾಗಲೆ ಹೋಮ ಕುಂಡಗಳು …

Read More »

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಬೆಳಗಾವಿಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಪ್ರತಿಮೆಗೆ ಮಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಬೆಳಗಾವಿ-ರಾಜ್ಯಸಭಾ ಸದಸ್ಯರಾಗಿ ಏಕಾಏಕಿ ಜಾಕ್ ಫಾಟ್ ಹೊಡೆದ ಬಿಜೆಪಿಯ ಕ್ರಿಯಾಶೀಲ ಮುಖಂಡ ಈರಣ್ಣಾ ಕಡಾಡಿ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಬಳಿಕ ಪ್ರಥಮವಾಗಿ ಬೆಳಗಾವಿಗೆ ಆಗಮಿಸಿದರು. ಬೆಳಗಾವಿ ಜಿಲ್ಲೆಯ ನೂರಾರು ಕಾರ್ಯಕರ್ತರು ಈರಣ್ಣಾ ಕಡಾಡಿ ಅವರನ್ನು ಸುವರ್ಣ ವಿಧಾನಸೌಧದ ಬಳಿ ತಡೆದು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಬೆಳಗಾವಿಗೆ ಬರಮಾಡಿಕೊಂಡರು. ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಬೆಳಗಾವಿಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಪ್ರತಿಮೆಗೆ ಮಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬೆಳಗಾವಿ-ರಾಜ್ಯಸಭಾ …

Read More »

ಇನ್ನು ಕೆಲವು ರಾಜ್ಯಗಳ ಗಡಿ ಬಂದ್ ಮಾಡಲು ಮುಂದಾದ ರಾಜ್ಯ ಸರ್ಕಾರ ……….

ಬೆಂಗಳೂರು, ಮೇ 20- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆಸ್ಪೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇನ್ನು ಕೆಲವು ರಾಜ್ಯಗಳ ಪ್ರವೇಶಕ್ಕೆ ನಿರ್ಬಂಧ ಹಾಕಲು ಮುಂದಾಗಿದೆ. ಈಗಾಗಲೇ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಮತ್ತು ಕೇರಳ ರಾಜ್ಯಗಳ ಪ್ರವೇಶಕ್ಕೆ ಕರ್ನಾಟಕದಲ್ಲಿ ನಿರ್ಬಂಧವಿಧಿಸಲಾಗಿದೆ. ಈ ರಾಜ್ಯಗಳಿಂದ ಯಾರೇ ಬಂದರೂ ಕಡ್ಡಾಯವಾಗಿ ಕ್ವಾರಂಟೈನ್ ಒಳಗಾಗಬೇಕೆಂದು ಸೂಚನೆ ಕೊಡಲಾಗಿದೆ. ಇದರ ನಡುವೆ ಸೋಂಕು ಹೆಚ್ಚಿರುವ ಕೆಲ ರಾಜ್ಯಗಳಿಗೆ ಕರ್ನಾಟಕದಲ್ಲಿ ಕೆಲ ದಿನಗಳ ಮಟ್ಟಿಗೆ ಪ್ರವೇಶ …

Read More »

ಬಾಲಚಂದ್ರ ಜಾರಕಿಹೊಳಿ ಮಾಡುತ್ತಿರುವ ಪುಣ್ಯದ ಕೆಲಸದಲ್ಲಿ ನಾವು ಭಾಗಿಯಾಗಿರುವ ಸಾರ್ಥಕದ ಕಾರ್ಯ

ಮೂಡಲಗಿ: ಲಾಕ್ ಡೌನ್‍ದಂತಹ ಸಂಕಷ್ಟದ ವೇಳೆಯಲ್ಲಿ ಕ್ಷೇತ್ರದ ಜನರ ಸಹಾಯಕ್ಕೆ ಮುಂದೆ ಬಂದು ಅರಭಾಂವಿ ಕ್ಷೇತ್ರದ ಎಲ್ಲ ಕುಟುಂಬಗಳಿಗೆ ದಿನ ನಿತ್ಯದ ಆಹಾರ ಧಾನ್ಯಗಳನ್ನು ನೀಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಮಾದರಿಯಾಗಿದೆ. ಇವರು ಮಾಡುತ್ತಿರುವ ಪುಣ್ಯದ ಕೆಲಸದಲ್ಲಿ ನಾವು ಭಾಗಿಯಾಗಿರುವ ಸಾರ್ಥಕದ ಕಾರ್ಯವಾಗಿದೆ ಎಂದು ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ತಿಳಿಸಿದರು. ಶುಕ್ರವಾರದಂದು ತಾಲೂಕಿನ ನಾಗನೂರ ಪಟ್ಟಣದಲ್ಲಿ ಶಾಸಕ ಮತ್ತು ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು …

Read More »

ಆಹಾರ ಪದಾರ್ಥಕಿಟ್ ಕೊಡಲು ಕರೆಸಿ, ಜನರಿಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವಮಾನ

ಆಹಾರ ಪದಾರ್ಥಗಳ ಕಿಟ್​ಗಳನ್ನು ಪಡೆಯುವ ಸಲುವಾಗಿ ನೂರಾರು ಜನರು ಒಂದೆಡೆ ಸೇರಿದ್ದರು. ಎಲ್ಲರೂ ಬಿಸಿಲಿನಲ್ಲಿ ಗಂಟೆಗೂ ಹೆಚ್ಚು ಕಾದರೂ ಶಾಸಕ ರೇಣುಕಾಚಾರ್ಯ ಅವರು ಸ್ಥಳಕ್ಕೆ ಬರಲಿಲ್ಲ. ಇದರಿಂದ ಅಸಮಾಧಾಗೊಂಡ ಜನರು ತಾವು ಮನೆಗೆ ಹೋಗುವುದಾಗಿ ಹೇಳಿದ್ದಾರೆ. ದಾವಣಗೆರೆ: ಆಹಾರ ಪದಾರ್ಥಕಿಟ್ ಕೊಡಲು ಕರೆಸಿ, ಜನರಿಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವಮಾನ ಮಾಡಿದ ಘಟನೆ ಹೊನ್ನಾಳಿ ತಾಲೂಕಿನ ಹನಮಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ. ಕಿಟ್ ಬೇಡ ಅಂದ್ರೆ ಎದ್ದು ಹೋಗು ಎಂದು ಶಾಸಕರು …

Read More »

ಸಾಸ್ತಾನ ಟೋಲ್ ಸಿಬ್ಬಂದಿ ಜೊತೆ ಮಂಡ್ಯದ ಸೋಂಕಿತ ಮಾತು – 6 ಮಂದಿ ಕ್ವಾರಂಟೈನ್

ಉಡುಪಿ: ಮುಂಬೈನಿಂದ ಹೊರಟ ಖರ್ಜೂರ ಸಾಗಿಸುವ ಲಾರಿ ಹತ್ತಿ ಮಂಡ್ಯಕ್ಕೆ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಲಾರಿ ಪಾಸ್ ಆಗಿದ್ದ ಟೋಲ್ ಗೇಟ್‍ನ ಆರು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಲಾರಿ ಮಹಾರಾಷ್ಟ್ರದಿಂದ ಕರ್ನಾಟಕ ಪ್ರವೇಶಿಸಿದ್ದು, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಲಾರಿಯ ವಿಡಿಯೋ ಪತ್ತೆಯಾಗಿದೆ. ಲಾರಿ ಒಳಗಿದ್ದ ವ್ಯಕ್ತಿ ತೆಕ್ಕಟ್ಟೆ ಸಮೀಪದ ಶಿವಪ್ರಸಾದ್ ಪೆಟ್ರೋಲ್ ಪಂಪ್ ಬಳಿ ಇಳಿದು ಸ್ನಾನ ಮುಗಿಸಿದ್ದು, ನಂತರ ಅಲ್ಲೇ ತಿಂಡಿ ತಿಂದಿದ್ದಾರೆ. ಆಮೇಲೆ …

Read More »