ಮೈಸೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೋಂಕಿತನೊಬ್ಬ ಆಕ್ಸಿಜನ್ ಒದಗಿಸುವ ಪೈಪ್‌ನಿಂದಲೇ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದಯಗಿರಿ ನಿವಾಸಿ ದೇವರಾಜ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನಗರದ ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
Read More »ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಆಟೋದಲ್ಲಿ ಪ್ರಾಣಬಿಟ್ಟ ಪೇಂಟರ್!
ಮೈಸೂರು: ಏಣಿಯಿಂದ ಬಿದ್ದು ಗಾಯಗೊಂಡಿದ್ದ ಪೇಂಟರ್ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಆಟೋದಲ್ಲಿ ಮೃತಪಟ್ಟ ದಾರುಣ ಘಟನೆ ಮೈಸೂರಿನಲ್ಲಿ ಸಂಭವಿಸಿದೆ. ಕೆ.ಆರ್. ನಗರ ತಾಲೂಕಿನ ಮಿರ್ಲೆ ಗ್ರಾಮದ ನಿವಾಸಿ ಶ್ರೀಕಾಂತ್ (34) ಮೃತ ದುರ್ದೈವಿ ಮನೆಗೆ ಬಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದ ಶ್ರೀಕಾಂತ್ ಬೆಳಗೊಳದ ಬಳಿ ಮನೆಗೆ ಬಣ್ಣ ಹೊಡೆಯುವಾಗ ಏಣಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೈ ಸೇರಿ ದೇಹದ ಹಲವು ಕಡೆ ಗಂಭೀರ ಸ್ವರೂಪದ ಗಾಯವಾಗಿದ್ದರಿಂದ ಮೈಸೂರಿನ ಆಸ್ಪತ್ರೆಗೆ …
Read More »ಚಾಮರಾಜನಗರ ; ಒಂದೇ ದಿನ ೧೪ ಸೋಂಕಿತರು ಸಾವು
ಚಾಮರಾಜನಗರ: ಕಳೆದ ಸೋಮವಾರ ಒಂದೇ ದಿನ ಆಕ್ಸಿಜನ್ ಕೊರತೆಯಿಂದ ೨೪ ಜನ ಸೋಂಕಿತರು ಮೃತಪಟ್ಟು ರಾಷ್ಟ್ರ ಮಟ್ಟದ ಸುದ್ದಿಗೆ ಗ್ರಾಸವಾಗಿದ್ದ ಚಾಮರಾಜನಗರ ಜಿಲ್ಲಸ್ಪತ್ರೆಯಿಂದ ಇಂದು ಮತ್ತೊಂದು ಕಳವಳದ ಸುದ್ದಿ ಹೊರ ಬಿದ್ದಿದೆ. ಈ ಆಸ್ಪತ್ರೆಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 9 ಗಂಟೆಯವರೆಗೆ ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸದ್ಯ 4,186 ಮಂದಿ ಕೊರೊನಾ ಸೋಂಕಿತರು ಇದ್ದಾರೆ. ಇವರಲ್ಲಿ 50 …
Read More »ದಾವಣಗೆರೆ ಪೊಲೀಸರಿಂದ ರಂಜಾನ್ ಹಬ್ಬಕ್ಕೆ ಫುಡ್ ಕಿಟ್ ವಿತರಣೆ
ದಾವಣಗೆರೆ: ರಂಜಾನ್ ಹಬ್ಬಕ್ಕೆ ದಾವಣಗೆರೆ ಪೊಲೀಸರು 50ಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಲಾಕ್‍ಡೌನ್ ನಿಂದ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಜನರಿಗೆ ಒಂದೊತ್ತಿನ ಊಟಕ್ಕೂ ಸಹ ಕಷ್ಟವಾಗುತ್ತದೆ. ರಂಜಾನ್ ಹಬ್ಬ ಬಂದಿದ್ದು, ಕೂಲಿ ಮಾಡುವ ಜನರು ಸಾಕಷ್ಟು ತೊಂದರೆ ಪಡುವಂತಾಗಿದೆ. ಇವರ ಕಷ್ಟವನ್ನು ನೋಡಿದ ದಾವಣಗೆರೆಯ ಅಜಾದ್ ನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಶೈಲಜಾ ತಮ್ಮ ಸ್ವಂತ ಖರ್ಚಿನಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರದ ಕಿಟ್ …
Read More »ಬಿಜೆಪಿಯೇ ಬೆಡ್ ಬ್ಲಾಕಿಂಗ್ ಹಗರಣದ ಕಿಂಗ್‌ಪಿನ್: ದಿನೇಶ್ ಗುಂಡೂರಾವ್
ಬೆಂಗಳೂರು, ಮೇ 08: ಬೆಡ್ ಬ್ಲಾಕಿಂಗ್ ಹಗರಣದ ಕಿಂಗ್‌ಪಿನ್ ಹಾಗೂ ಸೂತ್ರದಾರ ಎರಡೂ ಬಿಜೆಪಿಯೇ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ತಾವೇ ದಂಧೆಯಲ್ಲಿ ಭಾಗಿಯಾಗಿ ಜನರ ಮುಂದೆ ನಾಟಕ ಮಾಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಶಾಸಕ ಸಹಚರರು ಹಾಗೂ ಬಿಜೆಪಿಯ ಕಾರ್ಯಕರ್ತರು ಪುಡಿರೌಡಿಗಳಂತೆ ವರ್ತನೆ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಸಂಸದ ಹಾಗೂ ಶಾಸಕರು ವಾರ್ ರೂಂ ಮೇಲೆ ದಾಳಿ ಮಾಡಿ …
Read More »ಮುಧೋಳ, ಬೆಳಗಾವಿಯಲ್ಲಿ ರೆಮ್ ಡೆಸಿವಿರ್ ಉತ್ಪಾದನೆಗೆ ಅನುಮತಿ, ಮೇ 17 ರಿಂದ ಕಾರ್ಯಾರಂಭ
ಕಲಬುರಗಿ: ಮುಧೋಳ ಮತ್ತು ಬೆಳಗಾವಿಯಲ್ಲಿ ರೆಮ್ ಡೆಸಿವಿರ್ ಉತ್ಪಾದನೆಗೆ ಅನುಮತಿ ಸಿಕ್ಕಿದ್ದು, ಶೀಘ್ರವೇ ಉತ್ಪಾದನೆ ಆರಂಭಿಸಲಿವೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಧೋಳ ಮತ್ತು ಬೆಳಗಾವಿಯಲ್ಲಿ ರೆಮ್ ಡೆಸಿವಿರ್ ಉತ್ಪಾದನೆಗೆ ಅನುಮತಿ ದೊರೆತಿದೆ. ದೇಶದಲ್ಲಿ ಈ ಹಿಂದೆ ರೆಮ್ ಡೆಸಿವರ್ ಉತ್ಪಾದನೆಗೆ ಕೇವಲ ಎರಡು ಕಡೆ ಅನುಮತಿ ನೀಡಲಾಗಿತ್ತು. ಇತ್ತೀಚಿಗೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ …
Read More »ಆಮ್ಲಜನಕ ಟ್ಯಾಂಕರ್ ಗಳಿಗೆ2 ತಿಂಗಳು ಟೋಲ್ ಶುಲ್ಕ ವಿನಾಯಿತಿ
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಗಾಗಿ ಮತ್ತೊಂದು ಕ್ರಮಕೈಗೊಳ್ಳಲಾಗಿದ್ದು, ಆಮ್ಲಜನಕ ಟ್ಯಾಂಕರ್ ಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಮಾಹಿತಿ ನೀಡಿದ್ದು, ದ್ರವೀಕೃತ ವೈದ್ಯಕೀಯ ಆಮ್ಲಜನಕ ಸಾಗಣೆ ಮಾಡುವ ಟ್ಯಾಂಕರ್ ಗಳಿಗೆ ಹೆದ್ದಾರಿಗಳಲ್ಲಿ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ. ದೇಶಾದ್ಯಂತ ಕೊರೊನಾ ಸೋಂಕಿತರಿಗಾಗಿ ವೈದ್ಯಕೀಯ ಆಮ್ಲಜನಕಕ್ಕೆ ಭಾರಿ ಬೇಡಿಕೆ ಇರುವ ಕಾರಣ ತುರ್ತು ಸೇವೆ ಎಂದು ಪರಿಗಣಿಸಲಾಗಿದ್ದು, ಎರಡು …
Read More »ಬೇಡಿಕೆಗನುಗುಣವಾಗಿ ಬಾರದ ಕೊವ್ಯಾಕ್ಸಿನ್: ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಲಸಿಕೆ
ಬೆಂಗಳೂರು: ರಾಜ್ಯಕ್ಕೆ ಬೇಡಿಕೆಗೆ ಅನುಗುಣವಾಗಿ ಕೊವ್ಯಾಕ್ಸಿನ್ ಲಸಿಕೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಲಸಿಕೆಯನ್ನು ನೀಡಲಾಗುವುದು ಎಂದು ಹೇಳಲಾಗಿದೆ. ರಾಜ್ಯಕ್ಕೆ ಬೇಡಿಕೆ ಅನುಸಾರ ಲಸಿಕೆ ಬಾರದ ಹಿನ್ನೆಲೆಯಲ್ಲಿ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಬಳಸಲು ಸರ್ಕಾರ ನಿರ್ಧರಿಸಿದೆ. ಮೊದಲ ಡೋಸ್ ಕೊವ್ಯಾಕ್ಸಿನ್ ಪಡೆದವರಿಗೆ ಮಾತ್ರ ಇದೆ ಲಸಿಕೆಯನ್ನು ಎರಡನೇ ಡೋಸ್ ಪಡೆಯುವವರಿಗೆ ಕೊಡಲಾಗುತ್ತದೆ. 45 ವರ್ಷ ಮೇಲ್ಪಟ್ಟ ಮೊದಲ ಡೋಸ್ ಪಡೆಯುವವರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುವುದು ಎಂದು …
Read More »270 ಆಕ್ಸಿಜನ್ ಬೆಡ್ ಆರಂಭಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ
ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿರುವುದನ್ನು ಮನಗೊಂಡ ಜಿಲ್ಲಾಡಳಿತ ಸೋಂಕಿತರ ಚಿಕಿತ್ಸೆಗಾಗಿ 270 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆಗೆ ನಿರ್ಧರಿಸಿದೆ. ಇದಲ್ಲದೇ, ಕೋವಿಡ್‌ಗಾಗಿ ಸದ್ಯ ಕೊಪ್ಪಳ ಮೆಡಿಕಲ್ ಕಾಲೇಜಿನ 142 ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ಬೆಡ್‌ಗಳ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲೆಯಲ್ಲಿ ಮೊದಲ ಅಲೆ ಹಾಗೂ ಎರಡನೆ ಅಲೆಯಲ್ಲಿ ಆರಂಭಿಕದಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಇರಲಿಲ್ಲ. ಕ್ರಮೇಣ ಸೋಂಕಿನ ಆರ್ಭಟವು ಜೋರಾಗುತ್ತಿದ್ದು, ಅದರೊಟ್ಟಿಗೆ ಸಾವಿನ ಸಂಖ್ಯೆಯು ದಿನೇ …
Read More »ಕೋವಿಡ್ ನಿರ್ವಹಣೆ: ಸರ್ಕಾರದ ವೈಫಲ್ಯಕ್ಕೆ ಖಂಡಿಸಿ ಆನ್‌ಲೈನ್ ಚಳವಳಿ
ವಿಜಯಪುರ: ಕೋವಿಡ್-19 ಎರಡನೇ ಅಲೆಯನ್ನು ತಡೆಗಟ್ಟುವಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿಯಿಂದ ಶನಿವಾರ ಆನ್‌ಲೈನ್ ಮೂಲಕ ಪ್ರತಿಭಟನೆ ನಡೆಸಲಾಯಿತು. ಕೋವಿಡ್‌ನಿಂದ ಹಳ್ಳಿ, ನಗರಗಳಲ್ಲಿ ಸಾಕಷ್ಟು ಜನರ ಸಾವು ನೋವುಗಳನ್ನು ಸಂಭವಿಸುತ್ತಿದ್ದರೂ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಲುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು. ರಾಜಧಾನಿ ಬೆಂಗಳೂರಿನಿಂದ ಹಿಡಿದು ತಾಲ್ಲೂಕು ಮಟ್ಟದವರೆಗೆ ಆಮ್ಲಜನಕ, ಹಾಸಿಗೆ, ಔಷಧ, ಅಂಬುಲೆನ್ಸ್, …
Read More »
Laxmi News 24×7