Breaking News

ರಾಜಕೀಯ

ಚಿಕ್ಕ-ಪುಟ್ಟ ಅಪರಾಧಗಳಿಗೆ ಬಂಧಿಸ್ಬೇಡಿ, ಜೈಲಿನಲ್ಲಿ ಜನದಟ್ಟಣೆ ಆಗ್ತಿದೆ : ಪೊಲೀಸರಿಗೆ ಸುಪ್ರೀಂ ಸೂಚನೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗ್ತಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಜನದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಆಗತ್ಯವಿದ್ದರೇ ಮಾತ್ರ ಬಂಧಿಸಿ ಎಂದು ಪೊಲೀಸರಿಗೆ ಸೂಚಿಸಿರುವ ಸುಪ್ರೀಂಕೋರ್ಟ್‌, ಅಗತ್ಯವಿಲ್ಲದಿದ್ರೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಉಳ್ಳ ಅಪರಾಧಗಳಲ್ಲಿ ಆರೋಪಿಗಳನ್ನ ಬಂಧಿಸಬೇಡಿ. ಇನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ರಚಿಸಿರುವ ಉನ್ನತ ಸಮಿತಿಗಳಿಗೆ ಸೋಂಕಿಗೆ ಒಳಪಡುವ ಅಪಾಯವಿರುವ ಕೈದಿಗಳನ್ನ ಗುರುತಿಸಿ ಎಂದಿದೆ. ಇನ್ನು …

Read More »

ಆಮ್ಲಜನಕ ಪೂರೈಕೆ, ಉಪಚುನಾವಣೆ ಮತ್ತು ಕೊವಿಡ್​ ನಿರ್ವಹಣೆ; ಬೊಮ್ಮಾಯಿ ಮತ್ತು ವಿಜಯೇಂದ್ರರಿಂದ ವರದಿ ಪಡೆದ ಅಮಿತ್ ಶಾ

ನಿನ್ನೆ ಮಧ್ಯಾಹ್ನ ಪಕ್ಷದ ರಾಷ್ಟ್ರೀಯ ನಾಯಕರ ಕರೆಯ ಮೇರೆಗೆ ದೆಹಲಿಗೆ ಹೋಗಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಎಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ, ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿ.ವೈ. ವಿಜಯೇಂದ್ರ, ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ಸರಕಾರದಿಂದ ಬಂದಿಲ್ಲದಿದ್ದರೂ ಪಕ್ಷದ ಮೂಲಗಳ ಪ್ರಕಾರ ಕೇಂದ್ರದ ನಾಯಕರು ಮೂರ್ನಾಲ್ಕು …

Read More »

ಕೋವಿಡ್ ಲಸಿಕೆ ಅಭಿಯಾನ: 2ನೇ ಡೋಸ್‌ ಸಿಗದೆ ಪರದಾಟ

ಶಿರಹಟ್ಟಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಕೋವಿಡ್‌ ಲಸಿಕೆ ನೀಡುತ್ತೇವೆ ಎಂದು ರಾಜ್ಯ ಸರ್ಕಾರವೇ ಹೇಳಿತ್ತು. ಆದರೆ, 60 ಮತ್ತು 45 ವರ್ಷ ಮೇಲ್ಪಟ್ಟ ತಾಲ್ಲೂಕಿನ ಸಾವಿರಾರೂ ಜನ ಎರಡನೇ ಲಸಿಕೆ ಹಾಕಿಸಿಕೊಳ್ಳಲು ಕಾಯುವಂತಾಗಿದೆ. ಶಿರಹಟ್ಟಿ ತಾಲ್ಲೂಕಿನಾದ್ಯಂತ ಈವರೆಗೂ 60 ವರ್ಷ ಮೇಲ್ಪಟ್ಟವರು 6,965 ಜನ ಮೊದಲ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ 45 ದಿನಗಳನ್ನು ಪೂರೈಸಿದ 1,595 ಜನ ಮಾತ್ರ ಎರಡನೇ ಲಸಿಕೆಯನ್ನು ಹಾಕಿಸಿಕೊಂಡದ್ದಾರೆ. 45 ವರ್ಷ …

Read More »

‘ರಾಜ್ಯಗಳಿಗೆ ಕೊರೊನಾ ಲಸಿಕೆಯನ್ನು ಕೇಂದ್ರ ಉಚಿತವಾಗಿ ನೀಡಲಿ’

ನವದೆಹಲಿ: ಏಕರೂಪದ ಲಸಿಕೆ ನೀತಿ ಇರಬೇಕು ಮತ್ತು ಇತ್ತೀಚಿನ ಹಂತದ ನೂತನ ಭೇದಾತ್ಮಕ ಬೆಲೆ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಇಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.ಲಸಿಕೆಗಳು ಲಭ್ಯವಾಗುವಂತೆ ಮತ್ತು ರಾಜ್ಯಗಳಿಗೆ ಉಚಿತವಾಗಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಂಗಾಳ ಹೇಳಿದೆ. ಲಸಿಕೆ ಬೆಲೆಗಳ ಬಗ್ಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ಮತ್ತು ಚೌಕಾಶಿ ಮಾಡಲು ರಾಜ್ಯಗಳಿಗೆ ಸಾಧ್ಯವಿಲ್ಲ.ಲಸಿಕೆಗಳಿಗೆ ಹಣವನ್ನು ವಿನಿಯೋಗಿಸಲು …

Read More »

ಚುನಾವಣೆಯಿಂದ ಸೋಂಕು ಹೆಚ್ಚಾಗಿದೆ ಎಂಬುದು ಸುಳ್ಳು:ಶೆಟ್ಟರ್

ಬಳ್ಳಾರಿ: ಉಪ ಚುನಾವಣೆಯಿಂದ ಕೊರೊನಾ ಸೋಂಕು ಹೆಚ್ಚಳವಾಗಿದೆ ಎಂಬುದು ಸುಳ್ಳು, ಜನರೇ ಕೊರೊನಾ ವಿರುದ್ಧ ಹೋರಾಡಬೇಕು ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಮತ್ತು ರಾಜ್ಯದ ಉಪ ಚುನಾವಣೆಗಳಿಂದ ಕೊರೊನಾ ಹೆಚ್ಚಳ ಆಗಿದೆ ಎಂಬುದು ಸುಳ್ಳು. ಕೊರೊನಾ ಹೆಚ್ವಳಕ್ಕೆ ನೂರಾರು ಕಾರಣ ಇವೆ. ಜನರೇ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಿಎಂ ನನಗೆ ನೀಡಿದ್ದಾರೆ. …

Read More »

ಮನೆಗೆ ನುಗ್ಗಿದ ಚಿರತೆ, ಅಡುಗೆ ಮನೆಯ ಶೆಲ್ಫ್ ಮೇಲೆ

ಚಿತ್ರದುರ್ಗ: ತಾಲೂಕಿನ ಮುದ್ದಾಪುರ ಗ್ರಾಮದ ಮನೆಯೊಂದಕ್ಕೆ ನಸುಕಿನಲ್ಲೇ ನುಗ್ಗಿದ ಚಿರತೆಯೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬೆಳಗ್ಗೆ 5.30 ರ ವೇಳೆಗೆ ಮುದ್ದಾಪುರದ ಚಿದಾನಂದ ಎಂಬುವವರ ಮನೆಗೆ ನುಗ್ಗಿದ ಚಿರತೆ, ಅಡುಗೆ ಮನೆಯ ಶೆಲ್ಫ್ ಮೇಲೆ ಪಾತ್ರೆ, ಡಬ್ಬಗಳ ನಡುವೆ ಬಚ್ಚಿಟ್ಟುಕೊಂಡಿತ್ತು. ಮನೆಯೊಳಗೆ ಚಿರತೆ ಕಂಡು ಮನೆಯವರು ಆತಂಕಗೊಂಡು, ಹೊರಗೆ ಓಡಿ ಬಂದು ಬಾಗಿಲು ಬಂದ್ ಮಾಡಿದ್ದರು. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ …

Read More »

ಹಿಮಾಚಲಕ್ಕೆ ಹೋಗಲು ಬಿಗ್ ಬಿ, ಟ್ರಂಪ್ ಹೆಸರಿನಲ್ಲಿ ನಕಲಿ ಇ-ಪಾಸ್ : FIR ದಾಖಲು

ಶಿಮ್ಲಾ : ಹಿಮಾಚಲಕ್ಕೆ ಪ್ರವಾಸ ಕೈಗೊಳ್ಳಲು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿ ನಕಲಿ ಇ-ಪಾಸ್ ನೋಂದಣಿ ಮಾಡಲಾಗಿದ್ದು, ಆರೋಪಿ ವಿರುದ್ಧ FIR ದಾಖಲಾಗಿದೆ. ಹಿಮಾಚಲ ಪ್ರದೇಶ ಸರ್ಕಾರವು ಕೋವಿಡ್ ಸಮಯದಲ್ಲಿ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಇ-ಪಾಸ್ ಕಡ್ಡಾಯ ಮಾಡಿದೆ. ಈ ವೇಳೆ ಇಬ್ಬರು ಖ್ಯಾತ ನಾಮರ ಹೆಸರುಗಳನ್ನು ಬಳಿಸಿಕೊಂಡು, ಈ ಇಬ್ಬರು ಚತ್ತೀಸ್ ಗಡದಿಂದ ಶಿಲ್ಲಾಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದಾರೆ …

Read More »

ಜಗತ್ತಿನ ದುಬಾರಿ ಕೋವಿಡ್ ಲಸಿಕೆ ಫೈಜರ್..!

ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ಎಲ್ಲಾ ವಸ್ತುಗಳಲ್ಲಿ ಕೆಳ, ಮಧ್ಯಮ ಹಾಗೂ ಉನ್ನತ ಮಟ್ಟದ್ದು ಎನ್ನುವ ವಿಭಾಗಗಳಿರುತ್ತವೆ. ಅದು ಈಗ ಲಸಿಕೆಯ ವಿಚಾರದಲ್ಲಿಯೂ ಕೂಡ ಆಗುತ್ತಿದೆ ಎನ್ನುವುದು ದುರಂತ. ಅಮೆರಿಕಾದಲ್ಲಿ ಈ ರೀತಿಯ ಬೆಳವಣಿಗೆ ಕಂಡು ಬರುತ್ತಿರುವುದು ಜಾಗತಿಕ ಮಟ್ಟದಲ್ಲಿ ಈಗ ಸುದ್ದಿಯಾಗುತ್ತಿದೆ. ಜಾನ್ಸನ್ ಲಸಿಕೆಯನ್ನು ಪಡೆದುಕೊಂಡವ ಸಾಮಾನ್ಯ, ಮಾಡೆರ್ನಾ ಲಸಿಕೆಯನ್ನು ನೀವು ಸ್ವೀಕಾರ ಮಾಡಿದರೆ ನಿಮ್ಮನ್ನು ಮಧ್ಯಮ ವರ್ಗದವರು ಎಂದು ಪರಿಗಣಿಸಲಾಗುತ್ತಿದೆ. ಹಾಗೂ ಫೈಜರ್ ಲಸಿಕೆಯನ್ನು ನೀವು ತೆಗೆದುಕೊಂಡರೇ, ನಿಮ್ಮನ್ನು ಮೇಲ್ವರ್ಗದವರು …

Read More »

ತರಕಾರಿ ಅಂಗಡಿಯನ್ನು ಕಾಲಿನಿಂದ ಒದ್ದು ದರ್ಪ ಮೆರೆದ ಪೊಲೀಸ್ ಅಧಿಕಾರಿ : ಅಮಾನತು

ನವದೆಹಲಿ : ಪಂಜಾಬಿನ ಫಗ್ವಾರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬ ತರಕಾರಿ ಮಾರಾಟ ಮಳಿಗೆಯನ್ನು ಕಾಲಿನಿಂದ ಜಾಡಿಸಿರುವ ಘಟನೆ ನಡೆದಿದ್ದು, ಆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಫಗ್ವಾರ್ ಸ್ಟೇಷನ್ ಹೌಸ್ ಆಫೀಸರ್ ನವದೀಪ್ ಸಿಂಗ್ ತರಕಾರಿ ಅಂಗಡಿಯನ್ನು ಕಾಲಿನಿಂದ ಜಾಡಿಸಿ ದರ್ಪ ತೋರಿರುವ ಅಧಿಕಾರಿ. ಪೊಲೀಸ್ ಅಧಿಕಾರಿಯ ಈ ದರ್ಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ. ಇನ್ನು ನವದೀಪ್ ಸಿಂಗ್ ಮೇಲೆ ಕಠಿಣ ಕ್ರಮ ಕೈಗೊಂಡಿರುವ …

Read More »

ವಿಟಿಯು ವಿದ್ಯಾರ್ಥಿಗಳೇ ಗಮನಿಸಿ : ಮೇ.10 ರಿಂದ ಆನ್ ಲೈನ್ ಕ್ಲಾಸ್

ಬೆಂಗಳೂರು : ಮೇ. 10 ರಿಂದ ಪ್ರಸಕ್ತ ಸಾಲಿನ ಎಂಜಿನಿಯರಿಂಗ್ ಎರಡನೇ ಸೆಮಿಸ್ಟರ್ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಆನ್ ಲೈನ್ ತರಗತಿಗಳು ಆರಂಭವಾಗಲಿವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಕಟಿಸಿದೆ. ವಿಟಿಯು ಎಂ.ಟೆಕ್, ಎಂಬಿಎ, ಎಂಸಿಎ, ಎಂ.ಆರ್ಕ್ ಮೊದಲಾದ ಸ್ನಾತಕೋತ್ತರ ಪದವಿಯ ಎರಡನೇ ಸೆಮಿಸ್ಟರ್ ಆನ್ ಲೈನ್ ತರಗತಿಗಳು ಮೇ. 10 ರಿಂದ ಆರಂಭವಾಗಲಿವೆ. ಬಿ.ಇ, ಬಿ.ಟೆಕ್, ಬಿ.ಪ್ಲಾನ್, ಬಿ.ಆರ್ಕ್ ಪದವಿ ಕೋರ್ಸ್ ಗಳ ಆನ್ ಲೈನ್ ತರಗತಿ …

Read More »