Breaking News

ಆ.1 ರಿಂದ ವಾಹನಗಳ ಬೆಲೆ ದುಬಾರಿ – ಬಾಡಿಗೆದಾರರಿಗೂ ತಟ್ಟಲಿದೆ ಬೆಲೆ ಏರಿಕೆ ಬಿಸಿ

Spread the love

ನವದೆಹಲಿ: ದಿನಕ್ಕೊಂದು ಬೆಲೆ ಏರಿಕೆ ಬಿಸಿ ಜನ ಸಾಮಾನ್ಯರ ಜೇಬು ಸುಡುತ್ತಿದೆ. ಇದರ ನಡುವೆ ಆ.1ರಿಂದ ಹೊಸ ವಾಹನಗಳ ಬೆಲೆ ಏರಿಕೆಯಾಗುತ್ತಿದೆ. ಇದರ ಜೊತೆಗೆ ಟ್ರಾವೆಲ್ಸ್ ಮಾಲೀಕರ ಅಸೋಸಿಯೇಷನ್‌ಗಳು ಕೂಡ ತಮ್ಮ ಬಾಡಿಗೆಯನ್ನ ಹಚ್ಚಳ ಮಾಡಲು ಮುಂದಾಗಿವೆ.

ವಾಹನ ತಯಾರಕ ಕಂಪನಿಗಳು ವಾಹನಗಳ ಬೆಲೆಗಳನ್ನು ಏರಿಕೆ ಮಾಡಲು ಮುಂದಾಗಿವೆ. ಯುದ್ದದಿಂದ ಜಾಗತಿಕ ಮಟ್ಟದಲ್ಲಿ ಆದ ಬದಲಾವಣೆ, ಹಣದುಬ್ಬರ, ಉಕ್ಕು, ಅಲ್ಯೂಮಿನಿಯಂ, ರಬ್ಬರ್, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಚಿಪ್‌ಗಳು, ಬ್ಯಾಟರಿಗಳು ಹಾಗೂ ಬಿಡಿಭಾಗಗಳ ದರ ಏರಿಕೆಯಾಗಿದೆ. ಇದರಿಂದ ವಾಹನ ತಯಾರಿಕಾ ಕಂಪನಿಗಳು ಹೊಸ ವಾಹನಗಳ ದರ ಏರಿಕೆ ಮಾಡಲು ಕಂಪನಿಗಳು ಮುಂದಾಗಿವೆ. ಇದರ ಬಿಸಿ ಗ್ರಾಹಕರಿಗೂ ತಟ್ಟಲಿದೆ.

ವಾಹನಗಳ ದರ ಏರಿಕೆಯಾದರೆ ಜನ ಸಾಮಾನ್ಯರು ಹಾಗೂ ಟ್ರಾವೆಲ್ಸ್ ಏಜೆನ್ಸಿಗಳ ಮೇಲೆ ಪರಿಣಾಮ ಬೀರಲಿದೆ. ಕಾರಣ ಟ್ರಾವೆಲ್ಸ್ ಏಜೆನ್ಸಿಗಳು ಕಾರು, ಟಿಟಿ ಸೇರಿದಂತೆ ಹೈ ಹ್ಯಾಂಡ್ ವಾಹನಗಳನ್ನ ಖರೀದಿಸುವುದು ಕಷ್ಟವಾಗಲಿದೆ. ಈಗಾಗಲೇ ಪೆಟ್ರೋಲ್, ಡಿಸೇಲ್, ಟೋಲ್ ದರ ಎಲ್ಲವೂ ಏರಿಕೆಯಾಗಿದ್ದು, ಇದೀಗಾ ಹೊಸ ವಾಹನಗಳ ದರವೂ ಏರಿಕೆಯಾದರೆ ಅದರ ಹೊರೆಯನ್ನ ಜನರ ಮೇಲೆ ಹಾಕಲು ಟ್ರಾವೆಲ್ಸ್ ಏಜೆನ್ಸಿಯವರು ಮುಂದಾಗಿದ್ದಾರೆ. ಪ್ರತಿ ಪ್ರಯಾಣದ ಮೇಲೂ ದರ ಏರಿಕೆ ಮಾಡುವ ಮುನ್ಸೂಚನೆಯನ್ನ ಕರ್ನಾಟಕ ಟ್ರಾವೆಲ್ಸ್ ಅಸೋಸಿಯೇಷನ್ ನೀಡಿದೆ.

ಈಗಾಗಲೇ ಕೆಲ ಕಾರು ತಯಾರಕ ಕಂಪನಿಗಳು ಬೆಲೆ ಏರಿಕೆಯ ಬಗ್ಗೆ ಮಾಹಿತಿಯನ್ನ ತಮ್ಮ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ