ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಲಾಕ್ ಡೌನ್ ನಿಯಮ ಮೀರಿ ರಸ್ತೆಗೆ ಇಳಿದ ವಾಹನಗಳು ಸೀಜ್ ಮಾಡಲು ಮುಂದಾಗಿದ್ದಾರೆ. ನಗರದ ಪ್ರತಿ ಸರ್ಕಲ್ ನಲ್ಲೂ ಬ್ಯಾರಿಕೇಡ್ ಅಳವಡಿಸಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಬೆಳಗ್ಗೆಯಿಂದ ಇದುವರೆಗೆ ಶಿವಮೊಗ್ಗ ನಗರ ಒಂದರಲ್ಲೇ 200ಕ್ಕೂ ಹೆಚ್ಚು ವಾಹನಗಳು ಸೀಜ್ ಮಾಡಲಾಗಿದೆ. ಇಂದಿನಿಂದ ಶಿವಮೊಗ್ಗದಲ್ಲಿ ವಾಹನದಲ್ಲಿ ಓಡಾಟ ನಡೆಸಲು ಅವಕಾಶವಿಲ್ಲ. ಬೆಳಗ್ಗೆ 6 ಗಂಟೆಯಿಂದ 10 ಗಂಟೆ ಒಳಗೆ ಕಾಲ್ನಡಿಗೆಯಲ್ಲೇ ಬಂದು ದಿನಬಳಕೆ ವಸ್ತುಗಳ …
Read More »alert! ಪಾಲಿಸಿದಾರರಿಗೆ `LIC’ ಯಿಂದ ಮಹತ್ವದ ಮಾಹಿತಿ
ನವದೆಹಲಿ : ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಗ್ರಾಹಕರಿಗೆ ಇಡೀ ಪ್ರಕ್ರಿಯೆಯನ್ನು ತೊಂದರೆರಹಿತ ಮತ್ತು ಸುಲಭಗೊಳಿಸಲು ಕ್ಲೇಮ್ ಇತ್ಯರ್ಥ ಅಗತ್ಯಗಳಿಗೆ ಸಂಬಂಧಿಸಿದಂತೆ ಹಲವಾರು ಸಡಿಲಿಕೆಗಳನ್ನು ಹೊರತಂದಿದೆ. ಸಾವಿನ ಪರ್ಯಾಯ ಪುರಾವೆಗಳನ್ನು ಅನುಮತಿಸಲಾಗಿದೆ ವಿಮಾ ದಾರ ವ್ಯಕ್ತಿಯು ಆಸ್ಪತ್ರೆಯ ಆವರಣದೊಳಗೆ ಸತ್ತರೆ ಪರಿಶೀಲನೆ ವಿಧಾನವಾಗಿ ಎಲ್ ಐಸಿ ಸಾವಿನ ಪರ್ಯಾಯ ಪುರಾವೆಗಳನ್ನು ಅನುಮತಿಸಿದೆ. ಮುನ್ಸಿಪಲ್ ಮರಣ ಪ್ರಮಾಣಪತ್ರಗಳಲ್ಲದೆ, ಈಗ ಎಲ್‌ಐಸಿ ಅಂಗೀಕರಿಸಿದ ಸಾವುಗಳ ಇತರ ಪುರಾವೆಗಳಲ್ಲಿ, ಮರಣ ಪ್ರಮಾಣಪತ್ರ, …
Read More »ಕೇಂದ್ರದಿಂದ ಹೆಚ್ಚುವರಿ ಆಕ್ಸಿಜನ್; ಶೀಘ್ರ ಸಮಸ್ಯೆಗೆ ಪರಿಹಾರ: ಸಚಿವ ಜಗದೀಶ್ ಶೆಟ್ಟರ್
ಬೆಳಗಾವಿ;-ರಾಜ್ಯಕ್ಕೆ ಅಗತ್ಯವಿರುವ ಆಕ್ಸಿಜನ್ ಪ್ರಮಾಣವನ್ನು ಆಧರಿಸಿ ಹೆಚ್ಚುವರಿ ಆಕ್ಸಿಜನ್ ಹಂಚಿಕೆಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿರುವುದರಿಂದ ಮೂರ್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಪರಿಹಾರವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ರಾಜ್ಯದ ಆಕ್ಸಿಜನ್ ಪೂರೈಕೆ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಆಕ್ಸಿಜನ್ ಲಭ್ಯತೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ (ಮೇ 9) ನಡೆದ ಅಧಿಕಾರಿಗಳ …
Read More »ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಮಾಲೋಚನೆ
ನವದೆಹಲಿ : ಕರ್ನಾಟಕ, ಪಂಜಾಬ್, ಬಿಹಾರ ಹಾಗೂ ಉತ್ತರಾಖಂಡ್ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಫೋನ್ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ದೇಶಾದ್ಯಂತ ಕೋವಿಡ್ ಎರಡನೇ ಅಲೆ ರೌದ್ರ ನರ್ತನ ನಡೆಸುತ್ತಿದ್ದು, ಮಹಾಮಾರಿ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರ ಒಗ್ಗಟ್ಟಿನ ಹೋರಾಟ ನಡೆಸಿದೆ. ದೇಶದ ಎಲ್ಲ ರಾಜ್ಯಗಳ ಜೊತೆ ಸಮನ್ವಯತೆ ಮಾಡಿಕೊಂಡು ಕೋವಿಡ್ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಲಸಿಕಾ ಅಭಿಯಾನದ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ ಪ್ರಧಾನಿ ಮೋದಿ. …
Read More »ಬೈಕ್ ನಿಂದ ಕೆಳಕ್ಕೆ ಬಿದ್ದ ಮಹಿಳೆಗೆ ಆರೈಕೆ ಮಾಡಿದ ಮಸ್ಕಿ ಶಾಸಕ ತುರವಿಹಾಳ
ಮಸ್ಕಿ (ರಾಯಚೂರು): ಬಿಸಿಲಿನ ತಾಪ ತಾಳದೆ ಬೈಕ್ ನಿಂದ ಕೆಳಗೆ ಬಿದ್ದ ಮಹಿಳೆಯನ್ನು ಶಾಸಕ ಆರ್. ಬಸನಗೌಡ ತುರವಿಹಾಳ ಆರೈಕೆ ಮಾಡಿದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆಯಿತು. ಬೈಕ್ ಸವಾರನ ಹಿಂಬದಿ ಕುಳಿತಿದ್ದ ಮಹಿಳೆ ಬಿಸಿಲಿನ ತಾಪ ತಾಳಲಾರದೆ ಕೆಳಗೆ ಬಿದ್ದರು. ಬೈಕ್ ಹಿಂದಿಯೇ ತನ್ನ ಇನ್ನೊವಾ ಕಾರಿನಲ್ಲಿ ಹೊರಟಿದ್ದ ಶಾಸಕ ಬಸನಗೌಡ ತುರವಿಹಾಳ ಕೂಡಲೇ ತನ್ನ ವಾಹನದಿಂದ ಕೆಳಗೆ ಇಳಿದು ರಸ್ತೆ ಬದಿ ಬಿದ್ದಿದ್ದ ಮಹಿಳೆಗೆ ನೀರು ಕುಡಿಸಿ …
Read More »ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಾನು ಮತ್ತು ನನ್ನ ತಂದೆ ಮೇಲೆ ದರ್ಪ ಮೆರೆದಿದ್ದಾರೆ ಎಂದು ಆರೋಪಿ
ನಂಜನಗೂಡು: ತಂದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್ ಕರೆದುಕೊಂಡು ಬರುತ್ತಿದ್ದಾಗ, ಕೋವಿಡ್ ನಿಯಮದ ಹೆಸರಿನಲ್ಲಿ ವ್ಯಕ್ತಿಯೊಂದಿಗೆ ಪೊಲೀಸರು ಅಟ್ಟಹಾಸ ಮೆರೆದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಚಂದ್ರಶೇಖರಯ್ಯ ಎಂಬವರು ಪೊಲೀಸರಿಂದ ನಿಂದನೆಗೆ ಒಳಗಾದ ವ್ಯಕ್ತಿ. ಬಿಪಿ, ಶುಗರ್ ರೋಗಿ ತಂದೆಯನ್ನು ಎಂದಿನಂತೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಹುಲ್ಲಹಳ್ಳಿ ರಸ್ತೆ ಬಳಿ ಆದರ್ಶ ಶಾಲೆ ಬಳಿ ಚಂದ್ರಶೇಖರಯ್ಯ ವಾಪಸ್ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಪೊಲೀಸರು ಬೈಕ್ ತಡೆದು ತಪಾಸಣೆ ನಡೆಸಿದ್ದಾರೆ. …
Read More »ಮೂರನೆ ಬಾರಿ ದೆಹಲಿಯಲ್ಲಿ ಲಾಕ್ ಡೌನ್ ವಿಸ್ತರಣೆ, ಒಂದು ವಾರ ಮತ್ತೆ ಬಂದ್ ಆಗಲಿದೆ ದೆಹಲಿ
ನವದೆಹಲಿ : ಮಾರಕ ಕೊರೋನಾ ನಿಯಂತ್ರಿಸುವ ಸಂಬಂಧ ರಾಜಧಾನಿ ದೆಹಲಿಯಲ್ಲಿ ಹೇರಲಾಗಿರುವ ಲಾಕ್ ಡೌನ್ ಮತ್ತೆ ವಿಸ್ತರಿಸಲಾಗಿದೆ . ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಈ ಮಾಹಿತಿ ನೀಡಿದ್ದಾರೆ . ಒಂದು ವಾರ ಲಾಕ್ ಡೌನ್ ವಿಸ್ತರಿಸಲಾಗಿದೆ . ಮೇ 17 ರ ತನಕ ಲಾಕ್ ಡೌನ್ ಮುಂದುವರಿಯಲಿದ್ದು,ಲಾಕ್ ಡೌನ್ ಅವಧಿಯಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಅರವಿಂದ ಕೇಜ್ರವಾಲ್ ಸ್ಪಷ್ಟಪಡಿಸಿದ್ದಾರೆ . ಇದೀಗ ಮೂರನೆ ಬಾರಿ ದೆಹಲಿಯಲ್ಲಿ ಲಾಕ್ …
Read More »ನೀವು ‘ಕೊರೋನಾ ಸೋಂಕಿತ’ರಾಗಿದ್ದೀರಾ.? ಹಾಗಿದ್ದರೇ ಭಯಬೇಡ.! ‘ಆನ್ ಲೈನ್’ನಲ್ಲೇ ‘ತಜ್ಞ ವೈದ್ಯ’ರಿಂದ ಸಲಹೆ ಪಡೆಯಿರಿ.!
ರಾಜ್ಯಾಧ್ಯಂತ ಕೊರೋನಾ ಸೋಂಕಿನ ಆರ್ಭಟ ಮುಂದುವರೆದಿದೆ. ದಿನವೊಂದಕ್ಕೆ 40 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ಹೊಸದಾಗಿ ಪರೀಕ್ಷೆಯಿಂದ ದೃಢಪಡುತ್ತಿದೆ. ಈ ಸಮಯದಲ್ಲಿ ಬೇಕಿರೋದು ಸೋಂಕಿತರಾದವರಿಗೆ ಧೈರ್ಯ. ಜೊತೆಗೆ ತಜ್ಞ ವೈದ್ಯರ ಸಲಹೆ. ಹಾಗಿದ್ದರೇ ನೀವು ಕೊರೋನಾ ಸೋಂಕಿತರಾಗಿದ್ದೀರಾ.? ಆಸ್ಪತ್ರೆಗೆ ಅನವಶ್ಯಕ ಭೇಟಿ ಕಡಿಮೆ ಮಾಡಿ, ತಜ್ಞ ವೈದ್ಯರಿಂದ ಆನ್ ಲೈನ್ ನಲ್ಲೇ ಹೇಗೆ ಚಿಕಿತ್ಸೆಯ ಸಲಹೆ ಪಡೆಯಬಹುದು ಎನ್ನುವ ಬಗ್ಗೆ ಮುಂದೆ ಓದಿ.. ಕೊರೋನಾ ಸೋಂಕಿನ ವೈರಸ್ ಅಬ್ಬದ …
Read More »ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಸೋಂಕಿತರ ನಾಪತ್ತೆ- ಮತ್ತೆ 6,029 ಮಂದಿ ಎಸ್ಕೇಪ್
ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಉದ್ಯಾನ ನಗರಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಆಕ್ಸಿಜನ್, ಬೆಡ್ ಕೊರತೆಯಿಂದ ನಿತ್ಯ ನೂರಾರು ಜನ ಸಾವನ್ನಪ್ಪುತ್ತಿದ್ದಾರೆ. ಇದೆಲ್ಲದರ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಬಹಿರಂಗವಾಗಿದ್ದು, ಇಂದು ಸಹ 6,029 ಜನ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಜನರಲ್ಲಿ ಮತ್ತೆ ಆತಂಕ ಹೆಚ್ಚಿದೆ. ಕೊರೊನಾ ಕರ್ಫ್ಯೂ ಇದೀಗ ಮತ್ತೆ ಲಾಕ್‍ಡೌನ್ ಮಡಿರುವ ಮಧ್ಯೆ ನಗರದಲ್ಲಿ ಸೋಂಕಿತರು ನಾಪತ್ತೆಯಾಗಿದ್ದಾರೆ. ಈ ಹಿಂದೆ 10,835 ಜನ …
Read More »18 ರಿಂದ 44 ವರ್ಷ ವಯಸ್ಸಿನವರಿಗೆ ನಾಳೆಯಿಂದ ಲಸಿಕೆ -ಡಾ.ಕೆ ಸುಧಾಕರ್
ಬೆಂಗಳೂರು: ರಾಜ್ಯ ಸರ್ಕಾರ ಖರೀದಿಸುತ್ತಿರುವ 2 ಕೋಟಿ ಡೋಸ್ ಕೋವಿಶೀಲ್ಡ್ ಪೈಕಿ ಶನಿವಾರ ರಾತ್ರಿ 3.5 ಲಕ್ಷ ಡೋಸ್ ರಾಜ್ಯಕ್ಕೆ ತಲುಪಿದ್ದು, ಈವರೆಗೂ ಒಟ್ಟು 6.5 ಲಕ್ಷ ಡೋಸ್ ಪೂರೈಕೆಯಾಗಿದೆ. ಹಾಗಾಗಿ ಮೇ 10 ರಿಂದ ರಾಜ್ಯಾದ್ಯಂತ 18 ರಿಂದ 44 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸುಧಾಕರ್, ಕೇಂದ್ರ ಸರ್ಕಾರ ಈವರೆಗೂ 99,58,190 …
Read More »
Laxmi News 24×7