ನವದೆಹಲಿ: ದಿನಕ್ಕೊಂದು ಬೆಲೆ ಏರಿಕೆ ಬಿಸಿ ಜನ ಸಾಮಾನ್ಯರ ಜೇಬು ಸುಡುತ್ತಿದೆ. ಇದರ ನಡುವೆ ಆ.1ರಿಂದ ಹೊಸ ವಾಹನಗಳ ಬೆಲೆ ಏರಿಕೆಯಾಗುತ್ತಿದೆ. ಇದರ ಜೊತೆಗೆ ಟ್ರಾವೆಲ್ಸ್ ಮಾಲೀಕರ ಅಸೋಸಿಯೇಷನ್‌ಗಳು ಕೂಡ ತಮ್ಮ ಬಾಡಿಗೆಯನ್ನ ಹಚ್ಚಳ ಮಾಡಲು ಮುಂದಾಗಿವೆ. ವಾಹನ ತಯಾರಕ ಕಂಪನಿಗಳು ವಾಹನಗಳ ಬೆಲೆಗಳನ್ನು ಏರಿಕೆ ಮಾಡಲು ಮುಂದಾಗಿವೆ. ಯುದ್ದದಿಂದ ಜಾಗತಿಕ ಮಟ್ಟದಲ್ಲಿ ಆದ ಬದಲಾವಣೆ, ಹಣದುಬ್ಬರ, ಉಕ್ಕು, ಅಲ್ಯೂಮಿನಿಯಂ, ರಬ್ಬರ್, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಚಿಪ್‌ಗಳು, ಬ್ಯಾಟರಿಗಳು ಹಾಗೂ ಬಿಡಿಭಾಗಗಳ ದರ …
Read More »Daily Archives: ಜುಲೈ 28, 2026
ಫಾರಿನ್ ಸೀರೆ, ವಜ್ರಾಭರಣದ ಗಿಫ್ಟ್ ಆಸೆ ಮಹಿಳೆಗೆ 1.75 ಕೋಟಿ ನಾಮ
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನ ಮಾತು ನಂಬಿ ಯಶವಂತಪುರದ ಮಹಿಳೆಯೊಬ್ಬರು ದುಬಾರಿ ಸೀರೆ ಹಾಗೂ ವಜ್ರಾಭರಣದ ಗಿಫ್ಟ್ ಆಸೆಗೆ ಬಿದ್ದು ಬರೋಬ್ಬರಿ 1.75 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಸಾಹಿಲ್ ಜುಗ್ಗಲ್ ಎಂಬಾತ ಫೇಸ್‌ಬುಕ್ ಮೂಲಕ ಮಹಿಳೆಗೆ ಪರಿಚಯವಾಗಿದ್ದಾನೆ. ಬಳಿಕ ಇಬ್ಬರೂ ಮೊಬೈಲ್ ನಂಬರ್ ಪಡೆದು ಸಂಪರ್ಕ …
Read More »ಆ.1 ರಂದು ಮೈಸೂರಿಗೆ ಮೋದಿ – 45 ಕೋಟಿ ವೆಚ್ಚದ ವಿವೇಕಾನಂದ ಸ್ಮಾರಕ, ಸಾಂಸ್ಕೃತಿಕ ಯುವಕೇಂದ್ರ ಉದ್ಘಾಟನೆ
ಮೈಸೂರು: ಆಗಸ್ಟ್ 1 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಲಿದ್ದು, ಅಂದು 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸಾಂಸ್ಕೃತಿಕ ಯುವ ಕೇಂದ್ರವನ್ನು ಉದ್ಘಾಟನೆ ಮಾಡಲಿದ್ದಾರೆ. ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸ್ವಾಮಿ ವಿವೇಕಾನಂದರು ಇಲ್ಲಿ ನೆಲೆಸಿದ್ದರು ಎನ್ನುವ ನೆನಪಿಗಾಗಿ ಸ್ಮಾರಕ ಹಾಗೂ ಯುವ ಜನರಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಸಾಂಸ್ಕೃತಿಕ ಯುವ ಕೇಂದ್ರವನ್ನ ನಿರ್ಮಿಸಲಾಗಿದ್ದು, …
Read More »ಕೆಪಿಎಸ್‍ಸಿ ಹಗರಣದ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ
ಬೆಂಗಳೂರು: ಕೆಪಿಎಸ್‍ಸಿಯ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ 80 ಲಕ್ಷ ರೂ.ವರೆಗೆ ಲಂಚ ಪಡೆದಿರುವ ಗಂಭೀರ ಆರೋಪಗಳಿದ್ದು, ಸಿಬಿಐ (CBI) ಅಥವಾ ಕರ್ನಾಟಕ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಯವರ ನೇತೃತ್ವದ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ನಿಯೋಗವು ಒತ್ತಾಯಿಸಿದೆ. ಈ ಹಗರಣವು ಕರ್ನಾಟಕದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ನಂಬಿಕೆಗೆ ದೊಡ್ಡ ಆಘಾತ ನೀಡಿವೆ. ಇಂತಹ ಸಂದರ್ಭದಲ್ಲಿ ಕೆಪಿಎಸ್‍ಸಿಯೇ ತನ್ನ ವಿರುದ್ಧದ ಆರೋಪಗಳನ್ನು ಆಂತರಿಕವಾಗಿ ತನಿಖೆ ನಡೆಸುವುದರಿಂದ ಸತ್ಯ ಹೊರಬರುವುದಿಲ್ಲ. ಸಾರ್ವಜನಿಕರ ವಿಶ್ವಾಸವೂ ಮೂಡುವುದಿಲ್ಲ ಎಂದು …
Read More »ದಸರಾ ಉದ್ಘಾಟನೆ ರೇಸ್‌ನಲ್ಲಿ ಕ್ರಿಕೆಟ್ ಸಾಧಕರ ಹೆಸರು – ಸಿಎಂ ನಿರ್ಧಾರವೇ ಅಂತಿಮ: ಯತೀಂದ್ರ
ಮೈಸೂರು: ಈ ಬಾರಿಯ ದಸರಾ ಉದ್ಘಾಟಕರ ಹೆಸರನ್ನು ಸಿಎಂ ಡಿಕೆ ಶಿವಕುಮಾರ್ ಅವರೇ ಆಯ್ಕೆ ಮಾಡಲಿದ್ದು, ಅವರ ನಿರ್ಧಾರವೇ ಅಂತಿಮ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ದಸರಾ ಸಿದ್ಧತಾ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟನೆ ವಿಚಾರದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರ ನಿರ್ಧಾರ ಅಂತಿಮ. ನಾವೆಲ್ಲರೂ ಉದ್ಘಾಟಕರ ಆಯ್ಕೆಯನ್ನು ಅವರಿಗೆ ಬಿಟ್ಟಿದ್ದೇವೆ. ಶಾಸಕರು ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಯಾವುದೇ ಹೆಸರನ್ನು ಆಯ್ಕೆ ಮಾಡಿದ್ರು …
Read More »ಮೇಕೆದಾಟು ಯೋಜನೆಗೆ ತಮಿಳುನಾಡು ಸಮ್ಮತಿ ಅಗತ್ಯವಿಲ್ಲ: ಕೇಂದ್ರ ಸ್ಪಷ್ಟನೆ
ನವದೆಹಲಿ: ಕರ್ನಾಟಕದ ಮೇಕೆದಾಟು ಯೋಜನೆಗೆ ತಮಿಳುನಾಡು ಸಮ್ಮತಿ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ರಾಜ್ಯಸಭೆಯಲ್ಲಿ ತಮಿಳುನಾಡಿನ ಸಂಸದ ಅನ್ಬುಮಣಿ ರಾಮದಾಸ್ ಅವರು ಕೇಳಿದ ಪ್ರಶ್ನೆಗೆ ಜಲಶಕ್ತಿ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಅವರು ಲಿಖಿತ ಉತ್ತರ ನೀಡಿದ್ದಾರೆ. ಕಾವೇರಿ ನದಿ ನೀರು (Cauvery River) ವಿವಾದಕ್ಕೆ ಸಂಬಂಧಿಸಿದಂತೆ 2018ರಲ್ಲಿ ನೀಡಲಾದ ಸುಪ್ರೀಂ ಕೋರ್ಟ್ (Suprme Court) ತೀರ್ಪಿನಲ್ಲಿ, ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ನಿರ್ಮಾಣ ಕಾರ್ಯ …
Read More »ಖರ್ಗೆ ನಂತರ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರೇ ಆಗಬಹುದು: ಶಿವಲಿಂಗೇಗೌಡ ಭವಿಷ್ಯ
ಚಿಕ್ಕಬಳ್ಳಾಪುರ: ಖರ್ಗೆ ನಂತರ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರೇ ಆಗಬಹುದು ಎಂದು ಶಾಸಕ ಶಿವಲಿಂಗೇಗೌಡ ಅವರು ಭವಿಷ್ಯ ನುಡಿದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಕ್ರಿಯ ರಾಜಕಾರಣದಿಂದ ದೂರ ಆಗುತ್ತೇನೆ ಎಂದು ಹೇಳಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡದಿದ್ದರೆ, ರಾಜ್ಯ ಸಭೆಗೆ ಆಯ್ಕೆ ಮಾಡುತ್ತಾರೆ. ಖರ್ಗೆ ಬಿಟ್ಟ ಮೇಲೆ ಅವರು ವಿರೋಧ ಪಕ್ಷದ ನಾಯಕರೇ ಆಗಬಹುದು. ಒಂದು ದೊಡ್ಡ …
Read More »ಹಿಟ್ & ರನ್‌ಗೆ ಬೈಕ್ ಸವಾರ ಸಾವು
ಶಿವಮೊಗ್ಗ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಆಯನೂರು ಸಮೀಪದ ವೀರಗಾರನಬೈರನಕೊಪ್ಪ ಬಳಿ ನಡೆದಿದೆ. ಬೆಳಗಿನ ಜಾವ ಘಟನೆ ನಡೆದಿದ್ದು, ಶಿವಮೊಗ್ಗ ನಗರದ ಗಾಡಿಕೊಪ್ಪದ ನಿವಾಸಿ ವೀರೇಶ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗದಲ್ಲಿ ಖಾಸಗಿ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ವೀರೇಶ್ ಸೋಮವಾರ ಬೆಳಗ್ಗಿನ ಜಾವ ಬೈಕ್‌ನಲ್ಲಿ ಬೆಂಗಳೂರು- ಹೊನ್ನಾವರ ಎನ್‌ಹೆಚ್-206ರಲ್ಲಿ ಶಿವಮೊಗ್ಗದತ್ತ ಬರುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದಲ್ಲಿ ತಲೆಗೆ ಗಂಭೀರ …
Read More »ತಮ್ಮ ಬರ ನೀಗಿಸಿಕೊಳ್ಳಲು ದೆಹಲಿಗೆ ಹೋಗಿದ್ದಾರೆ, ಸರ್ಕಾರಕ್ಕೆ ರೈತರ ಬರ ಆದ್ಯತೆಯಲ್ಲ: ಸಿ.ಟಿ ರವಿ
ರಾಯಚೂರು: ಸರ್ಕಾರದ ಸಚಿವರು, ಶಾಸಕರು ತಮ್ಮ ಬರ ನೀಗಿಸಿಕೊಳ್ಳಲು ದೆಹಲಿಗೆ ಹೋಗಿದ್ದಾರೆ. ಜನರ ಬರದ ವಿಷಯ ಅವರಿಗೆ ಆದ್ಯತೆಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಯಚೂರಿನ ಲಿಂಗಸುಗೂರಿನ ಛತ್ತರ ಗ್ರಾಮದಲ್ಲಿ ಬರಪೀಡಿತ ಹೊಲಗಳಿಗೆ ಭೇಟಿ ನೀಡಿ, ವೀಕ್ಷಣೆ ಬಳಿಕ ಮಾತನಾಡಿದ ಅವರು ಬರ ಘೋಷಣೆಗೆ ಒತ್ತಾಯಿಸಿದರು. ಆಡಳಿತ ಪಕ್ಷದ ಶಾಸಕರು ತಮ್ಮ ಅಧಿಕಾರದ ದಾಹ ತೀರಿಸಿಕೊಳ್ಳಲು ದೆಹಲಿಗೆ ಹೋಗಿದ್ದಾರೆ. ರಾಜ್ಯದಲ್ಲಿ ಮಳೆಯಿಲ್ಲದೇ ಬರ ಆವರಿಸಿದೆ. ಸರ್ಕಾರ ಕೂಡಲೇ …
Read More »ಕ್ಯಾಬ್ ಕಾಯುತ್ತಿದ್ದ ಯುವತಿಗೆ ‘ನಿನ್ ರೇಟ್ ಎಷ್ಟು’ ಅಂತ ಕಿರುಕುಳ ನೀಡಿದ ಬೈಕ್ ಸವಾರ
ಬೆಂಗಳೂರು: ರಸ್ತೆ ಬದಿಯಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯೊಬ್ಬಳಿಗೆ ʼನಿನ್ ರೇಟ್ ಎಷ್ಟುʼ ಅಂತ ಕಿರುಕುಳ ನೀಡಿದ ಶೋಚನೀಯ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಕಂಡ ತಕ್ಷಣ ಅಸಭ್ಯವಾಗಿ ಮಾತನಾಡಿಸಿ, ಲೈಂಗಿಕವಾಗಿ ನಿಂದಿಸುತ್ತಾ ರೇಟ್ ಎಷ್ಟು? ಎಂದು ಕೇಳಿ ಕಿರುಕುಳ ನೀಡಿದ್ದಾನೆ. ಘಟನೆಯಿಂದ ಧೃತಿಗೆಡದ ಧೈರ್ಯವಂತ ಯುವತಿ, ತಕ್ಷಣವೇ ತನ್ನ ಮೊಬೈಲ್ ತೆಗೆದು ಆತನ ಕೃತ್ಯವನ್ನು ವೀಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾರೆ. ನಿನ್ನ ವಿರುದ್ಧ …
Read More »
Laxmi News 24×7