Breaking News

Daily Archives: ಜುಲೈ 9, 2026

ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಚನ್ನರಾಜ ಹಟ್ಟಿಹೊಳಿ

ಬೆಳಗಾವಿ: ಧಾರವಾಡದಿಂದ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ನೂತನ ರೈಲ್ವೆ ಮಾರ್ಗ ಯೋಜನೆಗೆ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ರೈತ ಮುಖಂಡರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ರೈತರಿಗೆ ಬೆಂಬಲ ಸೂಚಿಸಿದರು. ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಯೋಗ್ಯ ಹಾಗೂ ನ್ಯಾಯಯುತವಾದ ಪರಿಹಾರವನ್ನು ನಿಗದಿಪಡಿಸಬೇಕು ಎಂದು ಈ …

Read More »

ತಾಡಪತ್ರಿ ಕೆಳಗೆ ವಾಸಿಸುತ್ತಿದ್ದ ಸಹೋದರಿಯರಿಗೆ ಅನಿಲ ಬೆನಕೆ ಸಹಾಯ

ಬೆಳಗಾವಿ: ಹಲವು ದಿನಗಳಿಂದ ಪ್ಲಾಸ್ಟಿಕ್ ತಾಡಪತ್ರಿಗಳ ಅಡಿಯಲ್ಲಿ ವಾಸಿಸುತ್ತಿದ್ದ ಇಬ್ಬರು ವೃದ್ಧ ಸಹೋದರಿಯರಿಗೆ ಮಾಜಿ ಶಾಸಕ ಅನಿಲ್ ಬೆನಕೆ ಅವರ ನೇತೃತ್ವದಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಕ್ಯಾಂಪ್ ಪ್ರದೇಶದ ಮಹಿಳಾ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಬೊಗಾರ ವೇಸ್ ಪ್ರದೇಶದಲ್ಲಿ ಹಲವು ದಿನಗಳಿಂದ ಪ್ಲಾಸ್ಟಿಕ್ ತಾಡಪತ್ರಿಗಳ ಅಡಿಯಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ವಾಸಿಸುತ್ತಿದ್ದ ಇಬ್ಬರು ವೃದ್ಧ ಸಹೋದರಿಯರನ್ನು ಸುರಕ್ಷಿತ ಸ್ಥಳಕ್ಕೆ ಪುನರ್ವಸತಿ ಮಾಡಲಾಯಿತು. ನಿರಂತರ ಮಳೆಯಿಂದಾಗಿ ಅವರ ಜೀವನವು ಹೆಚ್ಚು ಕಷ್ಟಕರವಾಗಿತ್ತು. ಈ …

Read More »

ಬೆಳಗಾವಿಯ ಕಲ್ಲೋಳದ ದತ್ತ ಮಂದಿರ ಜಲಾವೃತ

ಬೆಳಗಾವಿ: ಕರ್ನಾಟಕದ ಗಡಿ ಭಾಗದ ಕೃಷ್ಣಾ ನದಿ ತಿರದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ದತ್ತ ಮಂದಿರವು ಸಂಪೂರ್ಣವಾಗಿ ಜಲಾವೃತಗೊಂಡು ಭಕ್ತರಿಗೆ ನಿಷೇದ ಹೆರಲಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಸದ್ ಕೃಷ್ಣಾ ನದಿಗೆ ಬರೋಬ್ಬರಿ 1 ಲಕ್ಷ 35 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದು …

Read More »

ಗಡಿ ಕನ್ನಡಿಗರ ಸಮಸ್ಯೆ ಸಿಎಂ ಗಮಕ್ಕೆ ತರಲು ಮಹತ್ವದ ಸಭೆ ನಡೆಸಿದ ಕನ್ನಡ ಸಂಘಟನೆಗಳು

ಬೆಳಗಾವಿ: ಗುರುವಾರ ಬೆಳಗಾವಿಗೆ ಮೊದಲ ಬಾರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ತರಬೇಕಾದ ಗಡಿ ಭಾಗದ ಕನ್ನಡಿಗರ ಸಮಸ್ಯೆಗಳ ಕುರಿತು ಬುಧವಾರ ಮುಂಜಾನೆ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರಿದ್ದ ಕನ್ನಡ ಸಂಘಟನೆಗಳು ಸುದೀರ್ಘವಾಗಿ ಚರ್ಚಿಸಿದವು. ಗಡಿ ವಿವಾದ ಸಂಬಂಧ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ನಡೆದ ಚರ್ಚೆಗಳು, ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕೆ ಆಗ್ರಹಿಸಿ ಕಳೆದ ನೂರು ದಿನಗಳಿಂದಲೂ ನಡೆದಿರುವ …

Read More »

ಘಟಪ್ರಭಾ ನದಿಯ ಒಳಹರಿವು ಹೆಚ್ಚಳ: ಸೇತುವೆ ಜಲಾವೃತ, ಹಲವು ಗ್ರಾಮಗಳ ಸಂಪರ್ಕ ಕಡಿತ

ಬೆಳಗಾವಿ:  ಸತತ ಮಳೆಯಿಂದ ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅವರಾದಿ ಬಳಿಯ ಬ್ರಿಡ್ಜ್‌ ಕಂ ಬ್ಯಾರೆಜ್‌  ಜಲಾವೃತಗೊಂಡಿದೆ. ಇದರಿಂದ ಹಲವು ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ. ನದಿಯ ನೀರಿನ ಮಟ್ಟವು ಇನ್ನು ಏರಿಕೆಯಾಗುವ ಸಂಭವವಿದ್ದು ಮೂಡಲಗಿ ಸುಣಧೋಳಿ ಸಂಪರ್ಕ ಇರುವ ಸುಣಧೋಳಿ ಸೇತುವೆ, ವಡೇರಹಟ್ಟಿ ಸೇತುವೆ, ಕಮಲದಿನ್ನಿ ಸೇತುವೆಗಳು ಜಲಾವೃತವಾಗುವ ಸಾಧ್ಯತೆಗಳು ಇವೆ. ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾದಾಗ ತಾಲ್ಲೂಕಿನ ನಾಲ್ಕು ಸೇತುವೆಗಳು ಜಲಾವೃತಗೊಂಡು ಸಂಚಾರಕ್ಕೆ …

Read More »