Breaking News

Daily Archives: ಜುಲೈ 16, 2026

ಚಾಕು ಇರಿದು ಪತಿಯ ಹತ್ಯೆ, ಮಗನ ಕೊಲೆಗೂ ಯತ್ನ – ಶವದ ಪಕ್ಕದಲ್ಲೇ ರಾಕ್ಷಸಿಯಂತೆ ಮೊಬೈಲ್ ನೋಡ್ತಿದ್ದ ಹಂತಕಿ ಪತ್ನಿ

ಧಾರವಾಡ: ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು ಕೆಟ್ಟ ತಾಯಿ ಇರಲಾರಳು ಎಂಬ ಮಾತಿದೆ. ಆದರೆ, ಈ ಮಾತಿಗೆ ತದ್ವಿರುದ್ಧವಾದ ಘಟನೆಯೊಂದು ವಿದ್ಯಾಕಾಶಿ ಧಾರವಾಡದಲ್ಲಿ  ನಡೆದಿದೆ. ಧಾರವಾಡದ ಬಾರಾಕೊಟ್ರಿಯಲ್ಲಿರುವ ಅಪಾರ್ಟ್ಮೆಂಟ್‌ವೊಂದರಲ್ಲಿ ವಾಸವಾಗಿದ್ದ ಡಾ.ಕಿರಣ್ ಹೊನ್ನಣ್ಣವರ (45) ಎಂಬುವವರ ಭೀಕರ ಕೊಲೆ ನಡೆದಿದೆ. ಅಲ್ಲದೇ ಕಿರಣ್ ಅವರ ಪುತ್ರ ನಿಹಿತ್ ಎಂಬ ಎಂಟು ವರ್ಷದ ಮಗುವಿನ ಮೇಲೂ ಭೀಕರ ಚಾಕು ದಾಳಿ ನಡೆದಿದ್ದು, ಇದೀಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಈ …

Read More »

ಡಿಕೆ ಶಿವಕುಮಾರ್ ಸಿಎಂ ಆಗಿರೋದು ವಿಪಕ್ಷಗಳಿಗೆ ತಡೆಯಲು ಆಗ್ತಿಲ್ಲ: ಚಲುವರಾಯಸ್ವಾಮಿ

ಬೆಂಗಳೂರು: ಡಿಕೆ ಶಿವಕುಮಾರ್  ಸಿಎಂ ಆಗಿರೋದು ತಡೆಯಲು ಆಗದೇ ಬಿಡದಿ ಟೌನ್‌ಶಿಪ್  ವಿಚಾರದಲ್ಲಿ ದೇವೇಗೌಡ, ಕುಮಾರಸ್ವಾಮಿ, ಅಶೋಕ್ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ  ಕಿಡಿಕಾರಿದ್ದಾರೆ. ಮಂಗಳವಾರ ದೇವೇಗೌಡರು ಸುದ್ದಿಗೋಷ್ಟಿ ಮಾಡಿದ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರು ನಿನ್ನೆ ಮಾತಾಡಿದ್ದಾರೆ. ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವ ಇದೆ. ಸತ್ಯಾಗ್ರಹ ಮಾಡ್ತೀನಿ ಅಂತಾರೆ.ನೀಟ್ ಲೋಪ ಆದಾಗ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು ದೇವೇಗೌಡ ಮಾತೇ ಆಡಲಿಲ್ಲ. ಇವತ್ತು …

Read More »

ಪಬ್‌ನಲ್ಲಿ ಕುಡಿದ ಮತ್ತಿನಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ರಾದ್ಧಾಂತ

ಬೆಂಗಳೂರು: ಪಬ್‌ನಲ್ಲಿ ಕುಡಿದ ಮತ್ತಿನಲ್ಲಿ ಅಬಕಾರಿ ಇನ್‌ಸ್ಪೆಕ್ಟರ್  ರಾದ್ಧಾಂತ ಮಾಡಿರುವ ಘಟನೆ ಜೆ.ಪಿ.ನಗರದಲ್ಲಿ  ನಡೆದಿದೆ. ಮಲ್ಲಪ್ಪ ಎಸ್ ಕುಂದಗೋಳ ಕುಡಿದು ಕಿರಿಕ್ ಮಾಡಿದ ಅಬಕಾರಿ ಇನ್ಸಪೆಕ್ಟರ್. ಸರ್ಕಾರಿ ಐಡಿ ಕಾರ್ಡ್ ಹಾಕಿಕೊಂಡು ಇನ್‌ಸ್ಪೆಕ್ಟರ್ ಪಬ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಕಂಠಪೂರ್ತಿ ಕುಡಿದು ಸಿಕ್ಕಸಿಕ್ಕವರಿಗೆ ಅವಾಜ್ ಹಾಕಿದ್ದಾರೆ. ಇನ್‌ಸ್ಪೆಕ್ಟರ್ ರಾದ್ಧಾಂತದ ವೀಡಿಯೋ ಲಭ್ಯವಾಗಿದೆ. ಪಬ್‌ನಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಜೊತೆಯೂ ಇನ್‌ಸ್ಪೆಕ್ಟರ್ ಕಿರಿಕ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಮ್ಯಾನೇಜರ್‌ಗೂ …

Read More »

ಚಾಮುಂಡಿ ಬೆಟ್ಟದಲ್ಲಿ ಜು.17 ರಿಂದ ಆಷಾಢ ಮಾಸದ ಪೂಜೆ – ಸಿದ್ಧತೆ ಪರಿಶೀಲಿಸಿದ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಂಭ್ರಮ ಕಳೆಗಟ್ಟಿದೆ, ವಿವಿಧ ಕಾರ್ಯಕ್ರಮಗಳಿಗೆ ಭರದ ಸಿದ್ಧತೆ ನಡೆಯುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.  ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಭೇಟಿ ನೀಡಿ ಅಗತ್ಯ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದ್ದಾರೆ. ನಗರದ ಚಾಮುಂಡಿ ಬೆಟ್ಟಕ್ಕೆ  ಭೇಟಿ ನೀಡಿದ್ದ ಅವರಿಂದು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಜು.17 ರಿಂದ ಶುರುವಾಗಲಿರುವ ಆಷಾಢ ಮಾಸದ ಸಿದ್ಧತೆಗಳನ್ನ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. …

Read More »

ಶಾಹಾಪುರದ ಚಿಂತಾಮಣರಾವ್ ಪ್ರೌಢಶಾಲೆಯಲ್ಲಿ ಉಚಿತ ಕೃತಕ ಬುದ್ಧಿಮತ್ತೆ (AI) ಹಾಗೂ ಕೋಡಿಂಗ್ ಪುಸ್ತಕಗಳ ವಿತರಣೆ

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಭಯ ಪಾಟೀಲ ಅವರ ಮಾರ್ಗದರ್ಶನದಲ್ಲಿ ಚಾಣಕ್ಯ ಎಜುಕೇಶನ್ ಅಂಡ್ ಸೋಶಿಯಲ್ ವೆಲ್ಫೇರ್ ಸೊಸೈಟಿ, ಬೆಳಗಾವಿ ವತಿಯಿಂದ ಶಾಹಾಪುರದ ಚಿಂತಾಮಣರಾವ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಕೋಡಿಂಗ್ ಪುಸ್ತಕಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲಾ ಅಧ್ಯಕ್ಷ  ಶ್ರೀಮತಿ ಗೀತಾ ಸುತಾರ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲಕ್ಷ್ಮಿ ನಾಯಕ್, ಶ್ರೀಮತಿ ಚೇತನಾ ಸಾರಂಗ್ (CEO, ದತ್ತಾಂಶ), …

Read More »

ಆಗುಂಬೆಗೆ ಸತೀಶ್‌ ಜಾರಕಿಹೊಳಿ ಭೇಟಿ – ರಸ್ತೆ ಕಾಮಗಾರಿ, ಅಪಾಯಕಾರಿ ತಿರುವುಗಳ ಸ್ಥಿತಿ ಪರಿಶೀಲನೆ

ಉಡುಪಿ: ಜಿಲ್ಲೆಯ ಆಗುಂಬೆಗೆ  ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ  ಭೇಟಿ ನೀಡಿ ರಸ್ತೆ ಕಾಮಗಾರಿ ಹಾಗೂ ಅಪಾಯಕಾರಿ ತಿರುವುಗಳ ಸ್ಥಿತಿಯನ್ನು ಪರಿಶೀಲಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸಚಿವ ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ನೇಮಕ, ಆಗುಂಬೆ ಸುರಂಗ ಯೋಜನೆ ಹಾಗೂ ಕಾರ್ಕಳ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಹಲವು ರಾಜಕೀಯ ಮತ್ತು ಆಡಳಿತಾತ್ಮಕ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು. ಆಗುಂಬೆ ಘಾಟ್ ರಸ್ತೆಯ ವಿವಿಧ ಭಾಗಗಳನ್ನು ವೀಕ್ಷಿಸಿದ ಲೋಕೋಪಯೋಗಿ ಸಚಿವ ಸತೀಶ್ …

Read More »

ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ – ಫಾರ್ಮ್‌ ವಿತರಣೆಗೆ ಆ. 8ರ ವರೆಗೆ ಅವಕಾಶ

ಬೆಂಗಳೂರು: ಕರ್ನಾಟಕ, ದೆಹಲಿ, ಪಂಜಾಬ್‌ ಮತ್ತು ತೆಲಂಗಾಣದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ  ಪ್ರಕ್ರಿಯೆಯನ್ನು ಕೆಲವು ದಿನಗಳವರೆಗೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಹಿನ್ನೆಲೆ ರಾಜ್ಯದಲ್ಲೂ ಫಾರ್ಮ್‌ (ನಮೂನೆ) ಹಿಂದಿರುಗಿಸಲು ಅವಧಿ ವಿಸ್ತರಿಸಿ ಚುನಾವಣಾ ಆಯೋಗ  ಆದೇಶ ಹೊರಡಿಸಿದೆ. ಈ ತಿಂಗಳ ಅಂತ್ಯದ ವರೆಗೆ ಬಿಎಲ್‌ಒಗಳಿಗೆ  ಎಸ್‌ಐಆರ್‌ ನಮೂನೆ ವಿಸ್ತರಣೆಗೆ ಸಮಯ ಇತ್ತು. ಇದೀಗ ಆಗಸ್ಟ್‌ 8 ರ ಅವಧಿ ವಿಸ್ತರಿಸಲಾಗಿದೆ. ಬಿಎಲ್‌ಒಗಳು …

Read More »

ಜು.17ರಂದು ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ಜನಪ್ರತಿನಿಧಿಗಳ ಧರಣಿ: ಬಿವೈ ವಿಜಯೇಂದ್ರ

ಬೆಂಗಳೂರು: ರಾಜ್ಯದಲ್ಲಿ ರೈತವಿರೋಧಿ, ಬಡವರ ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೇ 17ರಂದು ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ  ಬಿಜೆಪಿಯ  ಎಲ್ಲ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು ಧರಣಿ ಹಮ್ಮಿಕೊಳ್ಳಲಿದ್ದೇವೆ. ರೈತರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಲು ಆಗ್ರಹಿಸಲಾಗುವುದು. …

Read More »

ಬಿಡದಿ ಟೌನ್‌ಶಿಪ್ ಜಟಾಪಟಿ – ತೀವ್ರ ವಿರೋಧದ ಮಧ್ಯೆ 4 ಗ್ರಾಮಗಳ 5,000 ಎಕ್ರೆ ಸ್ವಾಧೀನಕ್ಕೆ ಅಧಿಸೂಚನೆ

ಬೆಂಗಳೂರು: ಬಿಡದಿ ಟೌನ್‌ಶಿಪ್ ವಿರೋಧಿಸಿ ರೈತರ 500 ದಿನಗಳ ಹೋರಾಟ, ಸರ್ವೇಗೆ ಹೋದ ಅಧಿಕಾರಿಗಳು, ಲೀಸರ ಮೇಲೆ ಮಹಿಳೆಯರು ಪೊರಕೆ ದಾಳಿ ನಡೆಸಿದ್ದ ಬೆನ್ನಲ್ಲೇ, ಯೋಜನೆಯನ್ನ 2 ತಿಂಗಳು ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರೈತರ ಅಭಿಪ್ರಾಯ ಸಂಗ್ರಹಕ್ಕಾಗಿ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಇದು ಕೊಡುವ ವರದಿಯ ಮೇಲೆ ಮುಂದಿನ ಹೆಜ್ಚೆ ಇಡಲು ಸರ್ಕಾರ ತೀರ್ಮಾನಿಸಿದೆ. ಆದ್ರೆ, ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಲ್ಲ ಅಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಯಾವುದೇ ರೈತರ …

Read More »

ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಪತ್ನಿ ಆರೋಗ್ಯದಲ್ಲಿ ದಿಢೀರ್ ಏರುಪೇರು – ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ  ಅವರ ಪತ್ನಿ ಆರೋಗ್ಯದಲ್ಲಿ ದಿಢೀರ್‌ ಏರುಪೇರಾಗಿದೆ. ಅನಾರೋಗ್ಯ ಹಿನ್ನೆಲೆ ಪತ್ನಿ ಚೆನ್ನಮ್ಮ ಅವರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ  ಅವರನ್ನು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ರಾತ್ರಿ 10 ಗಂಟೆ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ …

Read More »