Breaking News

Monthly Archives: ಜೂನ್ 2026

ದೇಶದ ಜನರಿಗೆ ಬೆಳ್ಳಂಬೆಳಗ್ಗೆ ಶಾಕ್‌ – ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ 42 ರೂ. ಏರಿಕೆ!

ಬೆಂಗಳೂರು: ಈಗಾಗಲೇ ಪೆಟ್ರೋಲ್‌, ಡೀಸೆಲ್‌, ಸಿಎನ್‌ಜಿ ದರ ಏರಿಕೆಯಿಂದ ತತ್ತರಿಸಿರುವ ದೇಶದ ಜನರಿಗೆ ಕೇಂದ್ರ ಸರ್ಕಾರ ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಭಾರೀ ಏರಿಕೆ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ. ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಬಳಕೆ ಸಿಲಿಂಡರ್‌ ದರ 42 ರೂ. ಹೆಚ್ಚಾಗಿದ್ದು, ಪ್ರತಿ ಸಿಲಿಂಡರ್‌ ಬೆಲೆ 3,113.5 ರೂ.ಗಳಿಗೆ ತಲುಪಿದ್ದರೆ, ಬೆಂಗಳೂರಿನಲ್ಲಿ  46 ರೂ.ಗಳಷ್ಟು ಹೆಚ್ಚಳವಾಗಿ ಪ್ರತಿ ಸಿಲಿಂಡರ್ ದರ …

Read More »

ಮೌಲ್ಯ ವೃದ್ಧಿಗೆ ಉಪನ್ಯಾಸ ಸಹಕಾರಿ

ಇಟಗಿ: ಯುವಕರಲ್ಲಿ ಇತಿಹಾಸ ಪ್ರಜ್ಞೆ ಮತ್ತು ಸಾಂಸ್ಕೃತಿಕ ಮೌಲ್ಯ ವೃದ್ಧಿಸುವಲ್ಲಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಅವಶ್ಯ ಎಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು. ಹಲಸಿ ಗ್ರಾಮದ ಐತಿಹಾಸಿಕ ಭೂವರಾಹ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಹಾಗೂ ಕದಂಬ ಯುವ ಸೇನೆ, ಅಂಬೇಡ್ಕರ ಯುವಕ ಮಂಡಳ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಕರ್ನಾಟಕ …

Read More »

ತಂಬಾಕುಮುಕ್ತ ಸಮಾಜ ರಚನೆಗೆ ವಿದ್ಯಾರ್ಥಿಗಳ ಜಾಗೃತಿ ರ‍್ಯಾಲಿ

ಕಾಗವಾಡ: ಮಹಾರಾಷ್ಟ್ರದ ಮಿರಜನ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಮೇ ೩೦ರಂದು ವಿಶ್ವ ತಂಬಾಕುರಹಿತ ದಿನದ ಅಂಗವಾಗಿ ಶುಕ್ರವಾರ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮತ್ತು ತಂಬಾಕುಮುಕ್ತ ಸಮಾಜ ರಚಿಸಲು ಜಾಗೃತಿ ರ‍್ಯಾಲಿ ಜರುಗಿತು. ಬೀದಿ ನಾಟಕ ಮತ್ತು ಪ್ರತಿಜ್ಞಾ ಬೋಧನೆಯೊಂದಿಗೆ ರ‍್ಯಾಲಿಗೆ ಚಾಲನೆ ನೀಡಲಾಯಿತು. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ನಿರ್ಮಲ ಆಸ್ಪತ್ರೆ ಸಿಬ್ಬಂದಿ ಸೇರಿ ತಂಬಾಕು ಸೇವನೆಯಿಂದಾಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ …

Read More »

ಸರ್ಕಾರಿ ಸೌಲಭ್ಯ ಸದುಪಯೋಗವಾಗಲಿ

ಯರಗಟ್ಟಿ: ಸರ್ಕಾರ ಕೃಷಿ ವಿಜ್ಞಾನಿಗಳಿಂದ ಸಂಸ್ಕರಿಸಿದ ಉತ್ತಮ ಬಿತ್ತನೆ ಬೀಜ ಸಬ್ಸಿಡಿಯಲ್ಲಿ ವಿತರಿಸುತ್ತಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಹೇಳಿದರು. ಎಪಿಎಂಸಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಇಲಾಖೆ ಪ್ರಸಕ್ತ  ಸಾಲಿನ ಮುಂಗಾರು ಹಂಗಾಮಿನ ಸಹಾಯ ಧನ ಯೋಜನೆಯಡಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಬಾರಿಗಿಂತ ಅಧಿಕ ಪ್ರಮಾಣದಲ್ಲಿ ಉದ್ದು, ಗೋವಿನ ಜೋಳ ಬೀಜಗಳ ದಾಸ್ತಾನು ಮಾಡಲಾಗಿದೆ. ಯಾವುದೇ …

Read More »

ಸತ್ತಿಗೇರಿ ಗ್ರಾಮದಲ್ಲಿ ಜಲ ಸಂಗ್ರಹಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ

ಸತ್ತಿಗೇರಿ: ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವುದು ಮುಖ್ಯ ಧ್ಯೇಯವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 2025-26ನೇ ಸಾಲಿನ ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ಮೇಲ್ಮಟ್ಟದ ಜಲ ಸಂಗ್ರಹಾಲಯ ನಿರ್ಮಾಣ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮೇಲ್ಮಟ್ಟದ ಜಲ ಸಂಗ್ರಹಾಲಯ ನಿರ್ಮಾಣದಿಂದ ಸತ್ತಿಗೇರಿ ಗ್ರಾಮದ ಸಾರ್ವಜನಿಕರ ಕುಡಿಯುವ ನೀರಿನ …

Read More »

ನೇಣುಬಿಗಿದುಕೊಂಡು ಉಪತಹಶೀಲ್ದಾರ್ ಆತ್ಮಹತ್ಯೆ – 4 ಪುಟದ ಡೆತ್‌ನೋಟ್ ಪತ್ತೆ

ಹಾಸನ: ನೇಣುಬಿಗಿದುಕೊಂಡು ಉಪತಹಶೀಲ್ದಾರ್  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದ  ಬಿಎಂ ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ನಡೆದಿದೆ‌. ತಿಮ್ಮಯ್ಯ (52) ಆತ್ಮಹತ್ಯೆಗೆ ಶರಣಾದ ಉಪತಹಶೀಲ್ದಾರ್. ಮೈಸೂರು ಜಿಲ್ಲೆ, ಸಾಲಿಗ್ರಾಮದಲ್ಲಿ ಉಪತಹಶೀಲ್ದಾರ್ ಆಗಿದ್ದ ತಿಮ್ಮಯ್ಯ, ಮೂರು ವರ್ಷಗಳ ಹಿಂದೆ ಹಾಸನದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಿನ್ನೆ (ಮೇ 30) ಲಾಡ್ಜ್‌ನಲ್ಲಿ 4 ಪುಟದ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ಕೊಡಗು ಜಿಲ್ಲೆಯವರಾದ ತಿಮ್ಮಯ್ಯ ಹಾಸನ ನಗರದ ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದರು. …

Read More »

ಡಿಕೆ ಶಿವಕುಮಾರ್‌ಗೆ ಅಧಿಕಾರ ಸಿಕ್ಕರೆ ನನಗೆ ಸಿಕ್ಕಹಾಗೇ – ಮಂಡ್ಯ ಜಿಲ್ಲೆಗೆ 2 ಸಚಿವ ಸ್ಥಾನದ ಬೇಡಿಕೆಯಿಟ್ಟ ಗಣಿಗ ರವಿಕುಮಾರ್

ಮಂಡ್ಯ: ಡಿಕೆ ಶಿವಕುಮಾರ್‌ಗೆ  ಅಧಿಕಾರ ಸಿಕ್ಕರೆ ನನಗೆ ಸಿಕ್ಕಹಾಗೇ. ಮಂಡ್ಯ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಗಲಿ ಎಂಬುದು ನನ್ನ ಬೇಡಿಕೆ ಎಂದು ಶಾಸಕ ಗಣಿಗ ರವಿಕುಮಾರ್  ಹೇಳಿದ್ದಾರೆ. ಮಂಡ್ಯದಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 40 ವರ್ಷದ ಪರಿಶ್ರಮಕ್ಕೆ ಫಲ ಸಿಕ್ಕಿದೆ. ನನ್ನ ಕಷ್ಟ ಕಾಲದಲ್ಲಿ ಡಿಕೆಶಿ ನನ್ನೊಂದಿಗಿದ್ದರು. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವುದು ಖುಷಿ ತಂದಿದೆ. ಸಿದ್ದರಾಮಯ್ಯ  ಒಂದು ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದಾರೆ. ಅದನ್ನೇ ಡಿಕೆಶಿ …

Read More »

ಡಿಸಿಎಂ ಪ್ರಪೋಸಲ್ ಬಂದಿಲ್ಲ, ಜೂನ್ 3ರಂದು ಸಭೆ ಮಾಡಿ ಫೈನಲ್ ಆಗುತ್ತೆ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಸದ್ಯ ಡಿಸಿಎಂ ಪ್ರಪೋಸಲ್ ಬಂದಿಲ್ಲ, ಬಂದ ಮೇಲೆ ಎಷ್ಟು ಡಿಸಿಎಂ ಮಾಡಬೇಕು, ಎಷ್ಟು ಸಚಿವರನ್ನಾಗಿ ಮಾಡಬೇಕು ಎಂದು ನೋಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಒಂದು ಹಂತದಲ್ಲಿ ಕೆಲವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ. ಆಮೇಲೆ ಹದಿನೈದು ದಿನದ ನಂತರ ಮತ್ತೊಂದು ಸುತ್ತಿನಲ್ಲಿ ಸಚಿವ ಸ್ಥಾನ ನೀಡುತ್ತಾರೆ. ಮೊದಲ ಹಂತದಲ್ಲಿ 8ರಿಂದ 10 ಜನ ಆಗುತ್ತಾರಾ ಏನು ಅಂತಾ ನೋಡಬೇಕು. ಸಿಎಂ …

Read More »

ಪ್ಯಾಸೆಂಜರ್ ಆಟೋಗೆ ಕಾರು ಡಿಕ್ಕಿ – ಐವರು ದುರ್ಮರಣ

ಚಿಕ್ಕಬಳ್ಳಾಪುರ: ಆಟೋಗೆ ಕಾರು ಡಿಕ್ಕಿಯಾದ ಪರಿಣಾಮ ಐವರು ಸಾವನ್ನಪ್ಪಿದ ಘಟನೆ ಬಾಗೇಪಲ್ಲಿ  ತಾಲೂಕಿನ ಸುಂಕಲಮ್ಮ ದೇವಾಲಯದ ಬಳಿ ನಡೆದಿದೆ. ಮುಂದೆ ಸಾಗುತ್ತಿದ್ದ ಆಟೋಗೆ ಹಿಂಬದಿಯಿಂದ ಥಾರ್ ಕಾರು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಮುಂದೆ ನಿಂತಿದ್ದ ಲಾರಿ ಆಟೋ ಡಿಕ್ಕಿಯಾಗಿ ಅಪ್ಪಚ್ಚಿಯಾಗಿದೆ. ಅಪಘಾತದಲ್ಲಿ 3-4 ಮಂದಿ ಗಾಯಾಗೊಂಡಿದ್ದಾರೆ. ಗಾಯಾಳುಗಳನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಮೃತಪಟ್ಟವರು: ಆಟೋ ಚಾಲಕ ಅಂಜನಪ್ಪ ಸೇರಿ ವರ್ಷದ ಉಮಾದೇವಿ …

Read More »

ಸಿಎಂ ಆಗಿ ಪದಗ್ರಹಣ ಮಾಡಿದ ದಿನವೇ ಕಾಂಗ್ರೆಸ್ ನೂತನ ಭವನಕ್ಕೆ ಡಿಕೆಶಿ ಗುದ್ದಲಿ ಪೂಜೆ

ಬೆಂಗಳೂರು: ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿದ ದಿನವೇ ಕಾಂಗ್ರೆಸ್ ಪಕ್ಷದ ನೂತನ ಕಚೇರಿ  ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿದ್ಧತೆ ನಡೆಸಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನವನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅದೇ ಸಂಜೆ ರಾಹುಲ್ ಗಾಂಧಿ ಸಮ್ಮುಖದಲ್ಲಿ ನೂತನ ಭವನಕ್ಕೆ ಭೂಮಿ ಪೂಜೆ ನೆರವೇರಿಸುವ ಯೋಜನೆ ರೂಪಿಸಲಾಗಿದೆ. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ …

Read More »