Breaking News
Home / ರಾಜಕೀಯ (page 1846)

ರಾಜಕೀಯ

ದೆಹಲಿಯಲ್ಲಿ ಗಲಾಟೆ ನಡೆದಿದ್ದು, ಕೇಂದ್ರ ಸರ್ಕಾರದ ಇಂಟಲಿಜೆನ್ಸಿ ವೈಫಲ್ಯವಾಗಿದೆ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು

ಬೆಂಗಳೂರು, ಫೆ.28- ಅಮೆರಿಕ ಅಧ್ಯಕ್ಷರ ಭಾರತ ಭೇಟಿ ಸಂದರ್ಭದಲ್ಲಿ ದೆಹಲಿಯಲ್ಲಿ ಗಲಾಟೆ ನಡೆದಿದ್ದು, ಕೇಂದ್ರ ಸರ್ಕಾರದ ಇಂಟಲಿಜೆನ್ಸಿ ವೈಫಲ್ಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯುತ್ತಿದ್ದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಾಗಿದೆ. ಟ್ರಂಪ್ ಕಡೆ ಕೇಂದ್ರ ಸರ್ಕಾರ ಹೆಚ್ಚು ಗಮನಹರಿಸಿತು. ಗಲಾಟೆ ವಿಚಾರದಲ್ಲಿ ಇಂಟೆಲಿಜೆನ್ಸಿ ವಿಫಲವಾಗಿದೆ ಎನಿಸುತ್ತದೆ ಎಂದು ಹೇಳಿದರು ಮಹದಾಯಿ …

Read More »

ದಿನಾಂಕ 29 ಮಾರ್ಚ 2020 ರಿಂದ ಹುಬ್ಬಳ್ಳಿ – ಮಂಗಳೂರು, ಮಂಗಳೂರು – ಹುಬ್ಬಳ್ಳಿ ಇಂಡಿಗೋ ನೇರ ವಿಮಾನ ಸೇವೆ ಪ್ರಾರಂಭವಾಗಲಿದೆ.

ದಿನಾಂಕ 29 ಮಾರ್ಚ 2020 ರಿಂದ ಹುಬ್ಬಳ್ಳಿ – ಮಂಗಳೂರು, ಮಂಗಳೂರು – ಹುಬ್ಬಳ್ಳಿ ಇಂಡಿಗೋ ನೇರ ವಿಮಾನ ಸೇವೆ ಪ್ರಾರಂಭವಾಗಲಿದೆ. ಸಮಯ : ಸಾಯಂಕಾಲ 5.15ಕ್ಕೆ ಹುಬ್ಬಳ್ಳಿಯಿಂದ ಹೊರಟು 6.25 ಕ್ಕೆ ಮಂಗಳೂರು ತಲುಪುವುದು ಮತ್ತು ಮರಳಿ ಮಂಗಳೂರಿನಿಂದ ಸಾಯಂಕಾಲ 6.45ಕ್ಕೆ ಹೊರಟು 7.55ಕ್ಕೆ ಹುಬ್ಬಳ್ಳಿ ತಲುಪುವುದು. ಬಹುದಿನಗಳಿಂದ ನಾವು ಬಂದರು ನಗರಿ ಮಂಗಳೂರಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ನಡೆಸಿದ ಪ್ರಯತ್ನ ಈಗ ಫಲಪ್ರದವಾಗಿದೆ. ಇದೇ ಮಾರ್ಚ್ …

Read More »

ಟ್ರಿಬ್ಯೂನಲ್ ಆದೇಶದಂತೆ ಯೋಜನೆ ಜಾರಿ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಹದಾಯಿ ವಿಚಾರವಾಗಿ ರಾಜ್ಯದ ಸಚಿವರು, ಶಾಸಕರು, ಹೋರಾಟಗಾರರ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ಸಂತಸದ ವಿಚಾರ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸರ್ಕಾರಕ್ಕೆ, ನಮ್ಮ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಟ್ರಿಬ್ಯೂನಲ್ ಆದೇಶದಂತೆ ಯೋಜನೆ ಜಾರಿ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಸುಪ್ರೀಂ ಕೋರ್ಟ್​​ ಆದೇಶಕ್ಕೆ ಮೊದಲೇ ಮಹದಾಯಿಗೆ 200 ಕೋಟಿ ರೂಪಾಯಿ ಮೀಸಲಿಡಲು ಸಿಎಂ ಬಿಎಸ್ ಯಡಿಯೂರಪ್ಪನವರಿಗೆ …

Read More »

ಸಚಿವ ವಿಸ್ತರಣೆ ಹಿನ್ನೆಲೆಯಲ್ಲಿ ಹಾಲಿ ಮೂವರು ಸಚಿವರೂ ಸೇಫ್

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾ? ಪುನಾರಚನೆಯಾ ಅನ್ನೋ ಗೊಂದಲ ಬಗೆಹರಿದಿದೆ. ಗುರುವಾರ ನಡೆಯೋದು ವಿಸ್ತರಣೆ ಮಾತ್ರ, ಪುನಾರಚನೆಯಲ್ಲ. ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಪೂರ್ಣ ಒಪ್ಪಿಗೆ ಕೊಟ್ಟಿದೆ. ಸಂಪುಟದಿಂದ ಯಾರನ್ನೂ ಕೈಬಿಡದೇ ವಿಸ್ತರಣೆ ನಡೆಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ. ಸಚಿವ ವಿಸ್ತರಣೆ ಹಿನ್ನೆಲೆಯಲ್ಲಿ ಹಾಲಿ ಮೂವರು ಸಚಿವರೂ ಸೇಫ್ ಆಗಿದ್ದಾರೆ. ಸಚಿವ ಸಂಪುಟ ಸಂಕಷ್ಟಗಳ ಮಧ್ಯೆಯೂ ಹಾಲಿ ಮೂವರು ಸಚಿವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಚಿವರಾದ ಕೋಟಾ …

Read More »

ರಾಜ್ಯ ಜಲಸಂಪನ್ಮೂಲ ಸಚಿವರಾಗಿ ಅಧಿಕಾರವಹಿಸಿಕೊಂಡ ನಂತರ ರಮೇಶ ಜಾರಕಿಹೊಳಿಗೆ ಮೊದಲ ದೊಡ್ಡ ಗೆಲುವು ಸಿಕ್ಕಂತಾಗಿದೆ.

ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಮಹದಾಯಿ ಯೋಜನೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಟೀಮ್ ಬಿಜೆಪಿ ಯಶಸ್ವಿಯಾಗಿದೆ. ತನ್ಮೂಲಕ, ತಡವಾದರೂ ತಂಡ ಕಿರೀಟ ಮುಡಿಗೇರಿಸಿಕೊಂಡಿದೆ. ಜೊತೆಗೆ, ರಾಜ್ಯ ಜಲಸಂಪನ್ಮೂಲ ಸಚಿವರಾಗಿ ಅಧಿಕಾರವಹಿಸಿಕೊಂಡ ನಂತರ ರಮೇಶ ಜಾರಕಿಹೊಳಿಗೆ ಮೊದಲ ದೊಡ್ಡ ಗೆಲುವು ಸಿಕ್ಕಂತಾಗಿದೆ. ಮಹದಾಯಿ ಹೋರಾಟ ಇಂದು-ನಿನ್ನೆಯದಲ್ಲ. ಹಲವು ದಶಕಗಳ ಹೋರಾಟವಿದು. ಇದೀಗ ನ್ಯಾಯಾಧಿಕರಣದ ತೀರ್ಪಿನ ಗೆಜೆಟ್ ನೋಟಿಫಿಕೇಶನ್ ಹೊರಡಿಸುವ ಮೂಲಕ ಮೊದಲ ಜಯ ಕರ್ನಾಟಕದ ಪಾಲಿಗಾದಂತಾಗಿದೆ. ಮುಂದೆ ಸರ್ವೋಚ್ಛ ನ್ಯಾಯಾಲಯದಲ್ಲಿ ಹೋರಾಟ ಇದ್ದೇ …

Read More »

ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತ ಸಭೆ:

ಇವತ್ತು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಕರೆದು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು… ಜವಳಿ ಮತ್ತು ಅಲ್ಪಸಂಖ್ಯಾತರ ಖಾತೆಯಲ್ಲಿ ಬರುವ ಎಲ್ಲ ಸೌಲಭ್ಯಗಳನ್ನು ಈ ರಾಜ್ಯದ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲ ಮಾಡಿಕೊಡುವುದುಗೋಸ್ಕರ ಈ ಎರಡು ಖಾತೆಯ ಎಲ್ಲಾ ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಲಾಯಿತ್ತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳಾದ ಶ್ರೀ ಎಸ್ …

Read More »

ಬಜೆಟ್‍ನಲ್ಲೂ ಹೆಚ್ಚಿನ ಅನುದಾನಕ್ಕೆ ಮಿತ್ರಮಂಡಳಿ ಪಟ್ಟು- ಮೂಲ ಸಚಿವರು ಗರಂ

ಬೆಂಗಳೂರು: ರಾಜ್ಯ ಸರ್ಕಾರದ ಪ್ರಸಕ್ತ ಹಣಕಾಸು ಸ್ಥಿತಿ ಚೆನ್ನಾಗಿಲ್ಲ. ಹೀಗಾಗಿ ಈ ಸಲದ ಬಜೆಟ್ ಸಿದ್ಧಪಡಿಸುತ್ತಿರುವ ಸಿಎಂ ಯಡಿಯೂರಪ್ಪ ಇತಿಮಿತಿಯಲ್ಲೇ ರಾಜ್ಯ ಬಜೆಟ್ ಕೊಡಲು ಮುಂದಾಗಿದ್ದಾರೆ. ಬಿಜೆಪಿ ಸರ್ಕಾರ ಬಂದ ಆರಂಭದಲ್ಲಿ ನೆರೆ, ಅತಿವೃಷ್ಟಿ ಪರಿಹಾರ ಕಾಮಗಾರಿಗಳಿಗೆ ಹಣ ಕ್ರೋಢೀಕರಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಬಳಿಕ ಕಾಂಗ್ರೆಸ್, ಜೆಡಿಎಸ್ ನಿಂದ ವಲಸೆ ಬಂದವರ ಕ್ಷೇತ್ರಗಳಿಗೆ ಸಾಕಷ್ಟು ಅನುದಾನವನ್ನೂ ಕೊಡಲಾಯ್ತು. ಇದರಿಂದ ಸರ್ಕಾರ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಹೀಗಾಗಿ ಸರ್ಕಾರದ ಮಟ್ಟದಲ್ಲಿ …

Read More »

ಕರ್ನಾಟಕ ರಾಜ್ಯ ಸಹಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ 5 ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಬೆಳಗಾವಿ ಬೆಳಗಾವಿಯ ಕಾಲೇಜು ರಸ್ತೆಯ ಮಹಾತ್ಮಾ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘ, ಎನ್.ಜಿ.ಓ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ 5 ನೇ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಸಮ್ಮೇಳನವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ,ಜಿ ಯವರು ಉದ್ಘಾಟಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. …

Read More »

ಹು-ಧಾ ಮಹಾನಗರ ಪೊಲೀಸ ಆಯುಕ್ತರನ್ನು ಅಮಾನತು ಮಾಡಿ:ಅಣ್ವೇಕರ ಆಗ್ರಹ

ಹು-ಧಾ ಮಹಾನಗರ ಪೊಲೀಸ ಆಯುಕ್ತರನ್ನು ಅಮಾನತು ಮಾಡಿ:ಅಣ್ವೇಕರ ಆಗ್ರಹ ಹುಬ್ಬಳ್ಳಿ:ಪಾಕ್ ಪರ ಘೋಷಣೆ ಕೂಗಿದ ದೇಶದ್ರೋಹದ ಪ್ರಕರಣದಲ್ಲಿ ಹು-ಧಾ ಮಹಾನಗರ ಪೊಲೀಸ ಆಯುಕ್ತ ಮೃಧುಧೋರಣೆ ಅನುಸರಿಸುತ್ತಿರುವುದು ಖಂಡನೀಯವಾಗಿದೆ‌‌‌.ಕೂಡಲೇ ಪೊಲೀಸ ಆಯುಕ್ತರನ್ನು ಅಮಾನತು ಮಾಡಬೇಕು ಎಂದು ಯುವ ವಕೀಲರ ಸಂಘದ ಮುಖಂಡ ಅಶೋಕ ಅಣ್ವೇಕರ ಹೇಳಿದರು. ನಗರದಲ್ಲಿಂದು ಪ್ರತಿಭಟನೆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ದೇಶದ್ರೋಹದ ಪ್ರಕರಣದಲ್ಲಿ ಪೊಲೀಸ ಆಯುಕ್ತರು ಮೃಧುಧೋರಣೆ ಅನುಸರಿಸುವ ಮೂಲಕ ದೇಶದ್ರೋಹದ ಆರೋಪಿತರಿಗೆ ರಕ್ಷಣೆ ನೀಡಿರುವುದು ಖಂಡನೀಯವಾಗಿದೆ. …

Read More »

ಸ್ವಾಗತ ಕಮಾನಿನಲ್ಲಿ ಅಷ್ಟೇ ಸಕ್ಕರೆ ನಾಡು:

ಮಂಡ್ಯ: ಮೈಸೂರಿನಿಂದ ಬೆಂಗಳೂರಿಗೆ ಬರುವ ರಸ್ತೆಯ ಮಧ್ಯ ಭಾಗದಲ್ಲಿ ಸಕ್ಕರೆ ನಗರಿ ಮಂಡ್ಯಗೆ ಸ್ವಾಗತ ಎಂದು ಮಂಡ್ಯದ ಸ್ವಾಗತ ಕಮಾನನ್ನು ಹಾಕಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯಗೆ ಸಕ್ಕರೆ ನಾಡು ಎಂದು ಹೆಸರು ಬಂದಿದೆ. ಆದರೆ ಇದೀಗ ಮಂಡ್ಯ ಜಿಲ್ಲೆಯಲ್ಲಿ ಸಕ್ಕರೆ ಎನ್ನುವುದು ಕೇವಲ ಸ್ವಾಗತದ ಕಮಾನಿನಲ್ಲಿ ಇದೆ. ಮಂಡ್ಯ ಜಿಲ್ಲೆಯ ಜೀವಾಳವಾಗಿದ್ದ ಮೈ ಶುಗರ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆಗಳ ಬಾಗಿಲು ಮುಚ್ಚಿರುವ ಹಿನ್ನೆಲೆಯಲ್ಲಿ …

Read More »