Breaking News

ಬೆಳಗಾವಿ

ಸಾಂಬ್ರಾ ವಿಮಾನ ನಿಲ್ದಾಣ| ಸೌಲಭ್ಯ ಒದಗಿಸಿದರೆ ಮೇಲ್ದರ್ಜೆಗೆ: ಶೆಟ್ಟರ್‌ಗೆ ಪತ್ರ

ಬೆಳಗಾವಿ: ‘ಅಗತ್ಯ ಸೌಲಭ್ಯ ಒದಗಿಸಿದರೆ, ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿಸಲು ಸಾಧ್ಯ’ ಎಂದು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ತಿಳಿಸಿದ್ದಾರೆ. ಈ ಸಂಬಂಧ ಸಂಸದ ಜಗದೀಶ ಶೆಟ್ಟರ್‌ ಅವರಿಗೆ ಪತ್ರ ಬರೆದಿದ್ದಾರೆ. ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಲು ರನ್‌ವೇ ಉದ್ದಳತೆ, ಇನ್‌ಸ್ಟ್ರುಮೆಂಟ್‌ ಲ್ಯಾಂಡಿಂಗ್‌ ಸಿಸ್ಟಮ್‌, ಲೈಟಿಂಗ್‌ ವ್ಯವಸ್ಥೆ ಮತ್ತಿತರ ವಿಷಯ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ. ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಬರೆದ …

Read More »

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಶಾಸಕ ಅಭಯ ಪಾಟೀಲ್ ಗೆ ಸುಪ್ರೀಂ ಕೋರ್ಟ್ ನೋಟಿಸ್

ದೆಹಲಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಗೆ ಸುಪ್ರೀಂಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ. ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 4 ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ನ್ಯಾಯಪೀಠ …

Read More »

ಹೂಡಿಕೆದಾರರೇ ಎಚ್ಚರ: ಬೆಳಗಾವಿಯ ಈ ವಂಚನೆಯ ಜಾಲದ ಕಥೆ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ!

ರಾತ್ರೋರಾತ್ರಿ ಕುಬೇರರಾಗುವ ಹಪಹಪಿ ಮನುಷ್ಯನ ತರ್ಕಬದ್ಧ ಆಲೋಚನೆಯನ್ನೇ ಮಂದಗೊಳಿಸುತ್ತದೆ. ಇದೇ ಮಾನವ ಸಹಜ ದೌರ್ಬಲ್ಯವನ್ನು ಬಂಡವಾಳವಾಗಿಸಿಕೊಂಡು ಹೊಂಚು ಹಾಕುವ ಅಂತರರಾಜ್ಯ ವಂಚಕ ಜಾಲದ ಕಿಂಗ್‌ಪಿನ್‌ಗಳು, ಸಾಮಾನ್ಯ ಜನರನ್ನು ಹೇಗೆ ಮರೀಚಿಕೆಯ ಬೆನ್ನತ್ತಿ ಹೋಗುವಂತೆ ಮಾಡುತ್ತಾರೆಂಬುದಕ್ಕೆ ಬೆಳಗಾವಿಯ ಈ ಇತ್ತೀಚಿನ ಘಟನೆಯೇ ಸಾಕ್ಷಿ. ಹಣವನ್ನು ನಾಲ್ಕು ಪಟ್ಟು ಮಾಡಿಕೊಡುವ ಆಮಿಷವೊಡ್ಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ವ್ಯವಸ್ಥಿತ ಸಂಚನ್ನು ಬೆಳಗಾವಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಪ್ರಕರಣ ಕೇವಲ ಒಂದು ಕ್ರೈಂ ವರದಿಯಲ್ಲ, ಬದಲಿಗೆ ಆಸೆಯ …

Read More »

ಪ್ಯಾಟ್ಸನ್ ಟೋಯೋಟಾದಲ್ಲಿ ಯುಗಾದಿ ಹಬ್ಬದ ಸಡಗರ

ಯುಗಾದಿ ಹಬ್ಬಕ್ಕೆ ‘ಪ್ಯಾಟ್ಸನ್’ ಸಂಭ್ರಮ: ಬೆಳಗಾವಿಯಲ್ಲಿ ಒಂದೇ ದಿನ 28 ಟೋಯೋಟಾ ಕಾರುಗಳ ಭರ್ಜರಿ ಮಾರಾಟ ಗ್ರಾಹಕರ ಪಾಲಿನ ‘ಭರವಸೆಯ ಬೆಳಕು’ ಪ್ಯಾಟ್ಸನ್: ಟೋಯೋಟಾ ಶೋರೂಂನ ಅತುಲನೀಯ ಸೇವೆಗೆ ಬೆಳಗಾವಿ ಜನ ಫಿದಾ! ಬೆಳಗಾವಿಯ ವಾಹನ ಕ್ಷೇತ್ರಗಳಲ್ಲಿ ಪ್ಯಾಟ್ಸನ್ ಕಂಪನಿ ಅತ್ಯಂತ ಮಹತ್ತರ ಪಾತ್ರವನ್ನು ವಹಿಸಿದೆ. ಯುಗಾದಿಯ ಶುಭ ಸಂಭ್ರಮದಲ್ಲಿ ಪ್ಯಾಟ್ಸನ್ ಟೋಯೋಟಾ ಶೋಂ, ತನ್ನ ಸೇವೆಯನ್ನು ಅಧಿಕಗೊಳಿಸಿದ್ದು, ಹೊಸ ಹೊಸ ವಾಹನಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಈ ಹಿನ್ನೆಲೆ …

Read More »

ಹೆಣ್ಣು ಮಗು ಹುಟ್ಟಿದಕ್ಕೆ 15 ದಿನದ ಹಸುಗೂಸಿಗೆ ವಿಷ ನೀಡಿ ಕೊಲೆ: ಪಾಪಿ ತಂದೆಯ ಬಂಧನ…!

ಬೆಳಗಾವಿ: ಜಿಲ್ಲೆಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 15 ದಿನದ ನವಜಾತ ಶಿಶುವಿನ ಸಾವಿನ ಪ್ರಕರಣಕ್ಕೆ ಬೆಚ್ಚಿಬೀಳಿಸುವ ತಿರುವು ಸಿಕ್ಕಿದೆ. ಮಗು ಸಹಜವಾಗಿ ಮೃತಪಟ್ಟಿಲ್ಲ; ಸ್ವಂತ ತಂದೆಯೇ ವಿಷ ನೀಡಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಭೀಮರಾಯ್ ಚಿಪ್ಪಾಡಿ ಹಾಗೂ ಶೀಲಾ ಚಿಪ್ಪಾಡಿ ದಂಪತಿಗೆ ಇತ್ತೀಚೆಗೆ ಹೆಣ್ಣು ಮಗು ಜನಿಸಿದ್ದು, ಆಕೆಗೆ ‘ಪ್ರಿಯಾಂಕಾ’ ಎಂದು ಹೆಸರಿಡಲಾಗಿತ್ತು. ಆದರೆ ಹೆಣ್ಣು ಮಗು ಹುಟ್ಟಿದುದನ್ನು ಒಪ್ಪಲಾರದ ತಂದೆ ಭೀಮರಾಯ್, ಮಗುವನ್ನು …

Read More »

ಕಾಕತಿ ಜಿ.ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಇಂದು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿ ಜಿ.ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ  ಪಿ.ಡಬ್ಲ್ಯೂ.ಡಿ ಇಲಾಖೆಯ ಎಸ್.ಟಿ.ಪಿ ಮತ್ತು ಟಿ.ಎಸ್.ಪಿ ಅನುದಾನ ಅಡಿಯಲ್ಲಿ ಸುಮಾರು ₹1.60 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಕಾಮಗಾರಿಗಳ ವಿವರ: 1️⃣ ಹೊನಗಾ ಗ್ರಾಮ – ಜನತಾ ಪ್ಲಾಟ್ ಹಾಗೂ ಭೈರವನಾಥ ಗಲ್ಲಿಯಲ್ಲಿ ₹60 ಲಕ್ಷ ವೆಚ್ಚದ ಸಿ.ಸಿ ಚರಂಡಿ …

Read More »

ಬೆಳಗಾವಿಯಲ್ಲಿ ಆಲಿಕಲ್ಲು ಮಳೆಗೆ 39 ಕುರಿಗಳು ಬಲಿ; ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುರಿಗಾಹಿ ಕುಟುಂಬ

ಬೆಳಗಾವಿ: ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಆಲಿಕಲ್ಲು ಮಳೆಯು ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಪ್ರಕೃತಿಯ ವಿಕೋಪಕ್ಕೆ ಬರೋಬ್ಬರಿ 39 ಕುರಿಗಳು ಬಲಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿಯಾಗಿದೆ. ಘಟನೆಯ ವಿವರ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ದಿಢೀರನೆ ಸುರಿದ ಆಲಿಕಲ್ಲು ಮಳೆಯ ತೀವ್ರತೆಗೆ ಸಿಲುಕಿದ ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಕುಟುಂಬಕ್ಕೆ ಆಘಾತ: ಮೃತಪಟ್ಟ ಕುರಿಗಳು ಶಂಕರ ಕರಜಗಿ ಎಂಬುವವರಿಗೆ ಸೇರಿದ್ದಾಗಿವೆ. ತಮ್ಮ ಜೀವನೋಪಾಯಕ್ಕೆ ಆಧಾರವಾಗಿದ್ದ ಕುರಿಗಳನ್ನು …

Read More »

ಬೆಳಗಾವಿ | ₹4,746 ಕೋಟಿ ಕಬ್ಬಿನ ಬಿಲ್‌ ಬಾಕಿ: 10 ಸಕ್ಕರೆ ಕಾರ್ಖಾನೆಗೆ ನೋಟಿಸ್‌

ಬೆಳಗಾವಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಶೇ 60ಕ್ಕಿಂತ ಕಡಿಮೆ ಬಿಲ್‌ ಪಾವತಿಸಿದ (ಫೆ.28ರ ವರೆಗೆ) 10 ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ಆಯುಕ್ತರು ನೋಟಿಸ್‌ ಕೊಟ್ಟಿದ್ದಾರೆ. ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳು 550 ಲಕ್ಷ ಟನ್‌ ಕಬ್ಬು ನುರಿಸಿ, 47.35 ಲಕ್ಷ ಟನ್‌ ಲಿ ಸಕ್ಕರೆ ಉತ್ಪಾದಿಸಿವೆ. ಒಟ್ಟು ₹22,171 ಕೋಟಿ ಬಿಲ್‌ ಪಾವತಿಸಬೇಕಿದ್ದು,₹4,741 ಕೋಟಿ ಬಾಕಿ ಉಳಿಸಿಕೊಂಡಿವೆ. ‘ವಿವಿಧ ಕಾರ್ಖಾನೆಗಳು ಬಿಲ್‌ ಪಾವತಿಸಿದ ಪ್ರಮಾಣ ಶೇ 78ರಷ್ಟಿದೆ. …

Read More »

15 ದಿನದ ಮಗುವಿಗೆ ತಂದೆ ವಿಷಪ್ರಾಶನ ?: ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ತಾಯಿ

ಬೆಳಗಾವಿ: ಪ್ರಪಂಚವನ್ನೇ ಕಾಣದ 15 ದಿನದ ಮಗುವಿಗೆ ಪಾಪಿ ತಂದಯೇ ವಿಷಪ್ರಾಶನ ಮಾಡಿದ್ದಾನೆ ಎಂದು ಹೆತ್ತ ತಾಯಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಈ ಘೋರ ಘಟನೆ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಘಟನೆ ನಡೆದಿದೆ. ಉಸಿರು ಚೆಲ್ಲಿದ ಮಗುವನ್ನು ನೋಡಲಾಗದೇ ಹೆತ್ತತಾಯಿ ಮೌನಕ್ಕೆ ಜಾರಿದ್ದಾರೆ. ಎರಡಯ ವಾರಗಳ ಹಿಂದೆಯಷ್ಟೇ ತಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ಮಗುವನ್ನು ನೋಡಲು ಬಂದ ತಂದನೇ ಕರುಳು ಬಳ್ಳಿಗೆ ವಿಷಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ. ಇಂತಹ …

Read More »

ಭಾರಿ ಮಳೆ,ಗೋಡೆ ಕುಸಿದು ಮಹಿಳೆ ಸಾವು

ಬೆಳಗಾವಿ : ನಗರದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ಮಹಿಳೆಯೊಬ್ಬಳು ಮೃತಪಟ್ಟಿದ್ದು ಪತಿ ಸ್ವಲ್ಪದರಲ್ಲೇ ಪಾರಾದ ಘಟನೆ ಹೊಸೂರ ಗ್ರಾಮದಲ್ಲಿ ನಡೆದಿದೆ. ವಂಟಮೂರಿ ಗ್ರಾಮದ ಪರ್ವಿನ್ ಬೇಪಾರಿ (34) ಮೃತ ದುರ್ದೈವಿ. ಸ್ವಲ್ಪದರಲ್ಲೇ ಪತಿ ಶರೀಫ್ ಪಾರಾಗಿದ್ದಾನೆ. ಕೋಳಿ ವ್ಯಾಪಾರಕ್ಕೆ ಹೊರಟಿದ್ದ ದಂಪತಿ ಮಳೆ ಬಂದ ಕಾರಣಕ್ಕೆ ಹಳೆಯದಾದ ಮನೆ ಪಕ್ಕ ನಿಂತಿದ್ದರು. ಈ ವೇಳೆ ಗೋಡೆ ಕುಸಿದಿದೆ. ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »