Breaking News

ಕಾಕತಿ ಜಿ.ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Spread the love

ಇಂದು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿ ಜಿ.ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ  ಪಿ.ಡಬ್ಲ್ಯೂ.ಡಿ ಇಲಾಖೆಯ ಎಸ್.ಟಿ.ಪಿ ಮತ್ತು ಟಿ.ಎಸ್.ಪಿ ಅನುದಾನ ಅಡಿಯಲ್ಲಿ ಸುಮಾರು ₹1.60 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಕಾಮಗಾರಿಗಳ ವಿವರ:
1️⃣ ಹೊನಗಾ ಗ್ರಾಮ – ಜನತಾ ಪ್ಲಾಟ್ ಹಾಗೂ ಭೈರವನಾಥ ಗಲ್ಲಿಯಲ್ಲಿ ₹60 ಲಕ್ಷ ವೆಚ್ಚದ ಸಿ.ಸಿ ಚರಂಡಿ ನಿರ್ಮಾಣ
2️⃣ ಕಾಕತಿ ಗ್ರಾಮ – ಮಠಗಲ್ಲಿ (ನಾಯಿಕ ಗಲ್ಲಿ ಹಾಗೂ ಅಂಬೇಡ್ಕರ್ ಗಲ್ಲಿ) ಯಲ್ಲಿ ₹70 ಲಕ್ಷ ವೆಚ್ಚದ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ
3️⃣ ಸೋನಟ್ಟಿ ಗ್ರಾಮ – ₹30 ಲಕ್ಷ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ

ಈ ಸಂದರ್ಭದಲ್ಲಿ ಕಾಕತಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸಿದ್ದಗೌಡ ಸುಣಗಾರ, ಕಾಕತಿ ಬ್ಲಾಕ್ ಅಧ್ಯಕ್ಷರಾದ ಸಾಗರ ಪಿಂಗಟ, ಹೊನಗಾ ಹಾಗೂ ಕಾಕತಿ ಮಾಜಿ ತಾ.ಪಂ ಸದಸ್ಯರಾದ ಯಲ್ಲಪ್ಪ ಕೊಳೇಕರ ಮತ್ತು ಸಿದ್ದಪ್ಪ ನಾಯಿಕ, ಕಾಕತಿ ಹಾಗೂ ಹೊನಗಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವರ್ಷಾ ಮುಚ್ಚಂಡಿಕರ ಮತ್ತು ಜಿಜಭಾಯಿ ದುಡಂ ಸೇರಿದಂತೆ ಎಲ್ಲಾ ಗ್ರಾಮಗಳ ಹಿರಿಯರು, ಮಾಜಿ ಗ್ರಾ.ಪಂ ಸದಸ್ಯರು, ಮುಖಂಡರು, ಗುತ್ತಿಗೆದಾರರು ಹಾಗೂ ಯುವಕರು ಉಪಸ್ಥಿತರಿದ್ದರು.

ಕ್ಷೇತ್ರಯಾದ್ಯಂತ ಗ್ರಾಮೀಣ ಭಾಗದ ಮೂಲಸೌಕರ್ಯ ವೃದ್ಧಿಗೆ ಶಾಸಕರು ಮತ್ತು ತಂದೆಯವರಾದ ಶ್ರೀ ಸತೀಶ ಜಾರಕಿಹೊಳಿಯವರು ನೀಡುತ್ತಿರುವ ಒತ್ತು ಅಭಿನಂದನೀಯ. ಈ ಅಭಿವೃದ್ಧಿ ಪಥವು ಸಾರ್ವಜನಿಕರ ಜೀವನಮಟ್ಟವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ.
#rahuljarkiholi #Yamakanamaradi


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ