Breaking News

ಬೆಳಗಾವಿ

ಮಹಾವೀರ ನಗರದಲ್ಲಿ ಶಾಸಕ ಆಸೀಫ್ ಸೇಠ್ ಜನತಾ ದರ್ಬಾರ್: ಸಾರ್ವಜನಿಕರ ಅಹವಾಲು ಆಲಿಕೆ

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆಸೀಫ್ ಸೇಠ್ ಅವರು ಮಹಾವೀರ ನಗರದಲ್ಲಿ ನಡೆಸಿದ ‘ಜನತಾ ದರ್ಬಾರ್’ ಕುರಿತು ನೋಡೋಣ. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ನೇರವಾಗಿ ಜನರ ಮನೆಬಾಗಿಲಿಗೆ ತೆರಳುತ್ತಿರುವ ಶಾಸಕರ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಶಾಸಕ ಆಸೀಫ್ ಸೇಠ್ ಅವರು ಇಂದು ಮಹಾವೀರ ನಗರ ಪ್ರದೇಶದಲ್ಲಿ ಸಮಗ್ರ ರೌಂಡ್ಸ್ ನಡೆಸಿ, ‘ಜನತಾ ದರ್ಬಾರ್’ ಮೂಲಕ ಸ್ಥಳೀಯ ನಿವಾಸಿಗಳ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಮನ್ …

Read More »

ಟ್ರ್ಯಾಕ್ಟರ್’ಗಳ ಡಿಜೆ ಅಬ್ಬರಕ್ಕೆ ಸಾರಿಗೆ ಇಲಾಖೆ ಮೌನ: ಅಧಿಕಾರಿಗಳ ಅಮಾನತ್ತಿಗೆ ಆಗ್ರಹಿಸಿ ಶ್ರೀನಿವಾಸ್ ಪಾಟೀಲ್ ಸತ್ಯಾಗ್ರಹ

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಟ್ರ್ಯಾಕ್ಟರ್‌ಗಳಿಗೆ ಅಳವಡಿಸಲಾದ ಕಾನೂನುಬಾಹಿರ ಡಿಜೆ ಸೌಂಡ್ ಸಿಸ್ಟಮ್‌ಗಳು ಈಗ ಜನರ ಪ್ರಾಣಕ್ಕೆ ಸಂಚಕಾರ ತಂದಿವೆ. ಶಾಲಾ ಮಕ್ಕಳ ಶಿಕ್ಷಣ ಮತ್ತು ರೋಗಿಗಳ ನೆಮ್ಮದಿಗೆ ಭಂಗ ತರುತ್ತಿರುವ ಈ ಅಬ್ಬರದ ವಿರುದ್ಧ ಶ್ರೀನಿವಾಸ್ ಪಾಟೀಲ್ ಈಗ ರಣಕಹಳೆ ಊದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಲಾಗಿರುವ ಡಿಜೆ ಸೌಂಡ್ …

Read More »

ಹುಕ್ಕೇರಿ : ಮುಸ್ಲಿಂ ಮನೆಯಲ್ಲಿ ಬೆಳೆದು ಹಿಂದೂ ಸಂಪ್ರದಾಯದಂತೆ ಮದುವೆ ಯಾದ ಯುವಕ

ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಮುಸ್ಲಿಂ ದಂಪತಿಗಳು ಹಿಂದೂ ಅನಾಥ ಮಕ್ಕಳಿಗೆ ಬೆಳಕಾಗಿ ಸಾಕಿ ಬೆಳೆಸಿ ಶಿಕ್ಷಣ ಕೊಡಿಸಿ ಈಗ ಹಿಂದೂ ವಧುವನ್ನು ಹುಡಕಿ ಮದುವೆ ಮಾಡಿಸಿದ ಅಪರೂಪದ ಘಟನೆ ಜರುಗಿದೆ. ಹೌದು ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಮುಸ್ಲಿಂ ದಂಪತಿಗಳಾದ ಮೆಹಬೂಬ್ ಹಸನ ನಾಯಿಕವಾಡಿ ಹಾಗೂ ನೂರಜಾನ್ ರವರು ಇಬ್ಬರೂ ಅನಾಥ ಹಿಂದೂ ಮಕ್ಕಳನ್ನು ಸಾಕಿ ಸಲುಹಿ ದೊಡ್ಡವರಾದ ಮೇಲೆ ಇಡಿ ಮುಸ್ಲಿಂ ಕುಟುಂಬಸ್ಥರು ಸೇರಿ ಹಿಂದೂ ವಧುವನ್ನು …

Read More »

ಚಿಕ್ಕೋಡಿ ತಾಲೂಕಿನ 4 ಏತ ನೀರಾವರಿ ಯೋಜನೆಗೆ 2 ಕೋಟಿ ಅನುದಾನ ಮಂಜೂರು: ಎಂಎಲ್ಸಿ ಪ್ರಕಾಶ ಹುಕ್ಕೇರಿ

ಚಿಕ್ಕೋಡಿ:ನನ್ನ ಹಾಗೂ ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದ ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯ ಇಂಗಳಿ ಗ್ರಾಮದ-2 ಯಕ್ಸಂಬಾ ಹಾಗೂ ಯಡೂರವಾಡಿ ಗ್ರಾಮಗಳ ಒಟ್ಟು 04 ಏತ ನೀರಾವರಿ ಯೋಜನೆಗಳ 159 ಎಕರೆ ಜಮೀನುಗಳಿಗೆ ರೂ. 2.00 ಕೋಟಿಗಳ ಅನುದಾನ ಮಂಜೂರಾಗಿದೆ ಎಂಎಲ್ಸಿ ಪ್ರಕಾಶ ಹುಕ್ಕೇರಿ ಹೇಳಿದರು. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಂಜೂರಾದ ಆದೇಶ ಪತ್ರವನ್ನು ವಿತರಿಸಿ ಮಾತನಾಡಿ ಅವರು ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯಲ್ಲಿ ಇಂಗಳಿ, ಯಕ್ಸಂಬಾ ಹಾಗೂ ಯಡೂರವಾಡಿ ಗ್ರಾಮದ …

Read More »

ಶತಮಾನದ ಸಾಧಕ ಡಾ.ಪ್ರಭಾಕರ – ಸಚಿವ ವಿ.ಸೋಮಣ್ಣ

ಬೆಳಗಾವಿ: ಶಿಕ್ಷಣ, ಕೃಷಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಡಾ.ಪ್ರಭಾಕರ ಕೋರೆ ಕೊಡುಗೆ ಅಪಾರವಾದುದು. ಅವರ ಸಮಾಜಮುಖಿ ಸೇವೆ, ಧಾರ್ಮಿಕತೆಯ ಮನಸ್ಸು ಅವರನ್ನು ಎತ್ತರಕ್ಕೆ ಬೆಳೆಸಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶ್ಲಾಘಿಸಿದರು. ನಗರದ ಡಾ.ಪ್ರಭಾಕರ ಕೋರೆಯವರ ಸ್ವಗೃಹಕ್ಕೆ ಶನಿವಾರ ಆಗಮಿಸಿ, ಪದ್ಮಶ್ರೀಗೆ ಭಾಜನರಾಗಿದ್ದಕ್ಕಾಗಿ ಸತ್ಕರಿಸಿ ಬಳಿಕ ಕುಶಲೋಪಹರಿ ವಿಚಾರಿಸಿ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ ಕೋರೆ ಅವರು ಸಮಾಜ ಸೇವೆಯನ್ನು ಒಂದು ವ್ರತವನ್ನಾಗಿಸಿ ಸ್ವೀಕರಿಸಿ ಶ್ರಮಿಸಿದವರು. …

Read More »

ಭೂ ಸ್ವಾಧಿನ ಸಮಸ್ಯೆಯಿಂದಾಗಿ ರೈಲ್ವೆ ಹೊಸ ಯೋಜನೆಗಳು ವಿಳಂಬವಾಗುತ್ತಿವೆ: ಸಚಿವ ವಿ.ಸೋಮಣ್ಣ

ಬೆಳಗಾವಿ: ಬೆಳಗಾವಿ&ಧಾರವಾಡ ನಡುವೆ ನೇರ ರೈಲು ಮಾರ್ಗ, ಬಾಗಲಕೋಟೆ&ಕುಡಚಿ, ಲೋಕಾಪುರ&ಯಾದವಾಡ, ಬೆಂಗಳೂರು&ಕೋಲಾರ ಸೇರಿ ಹತ್ತಕ್ಕೂ ಅಧಿಕ ರೈಲ್ವೆ ಹೊಸ ಯೋಜನೆಗಳು ಭೂ ಸ್ವಾಧಿನ ಸಮಸ್ಯೆಯಿಂದಾಗಿ ವಿಳಂಬವಾಗುತ್ತಿವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ನಿಗದಿತ ವೇಳೆ ಭೂ ಸ್ವಾಧಿನ ಮಾಡಿ ಹಸ್ತಾಂತರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಎಂದರು. ಕೇಂದ್ರ ಸರ್ಕಾರ 2026&27ನೇ ಬಜೆಟ್​ನಲ್ಲಿ ೂಷಿಸಿದಂತೆ ಬೆಂಗಳೂರು ಕೇಂದ್ರದಿಂದ …

Read More »

ಛತ್ರಪತಿ ಶಿವಾಜಿ ಅಪ್ರತಿಮ ನಾಯಕ

ಬೆಳಗಾವಿ: ಶಿವಾಜಿ ಮಹಾರಾಜರು ಖಡ್ಗದಿಂದ ಮಾತ್ರ ರಾಜ್ಯ ಕಟ್ಟಲಿಲ್ಲ, ಅವರು ನ್ಯಾಯ, ಶಿಸ್ತು, ಜನರ ಮೇಲಿನ ಪ್ರೀತಿಯಿಂದ ಸಾಮ್ರಾಜ್ಯ ನಿರ್ಮಿಸಿದರು. ಮಹಿಳೆಯರ ಗೌರವವನ್ನು ರಕ್ಷಿಸಿದ ಮೊದಲ ಆಡಳಿತಗಾರರಲ್ಲಿ ಶಿವಾಜಿ ಮಹಾರಾಜರು ಪ್ರಮುಖರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಶತ್ರುವಿನ ಕೋಟೆ ಗೆದ್ದರೂ ಪರಸ್ತ್ರೀಯರನ್ನು ಕಣ್ಣೆತ್ತಿ ನೋಡದ ಸಂಸ್ಕಾರವುಳ್ಳ …

Read More »

ಕುಟುಂಬದ ಭದ್ರತೆಗಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ

ಬೆಳಗಾವಿಯ ಎಂಎನ್‌ಆರ್‌ಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಸಂಚಾರ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮವನ್ನು ಸಿಪಿ ಜ್ಯೋತಿಬಾ ನಿಕ್ಕಂ ಉದ್ಘಾಟಿಸಿದರು. ಬೆಳಗಾವಿ: ವಾಹನ ಚಲಾಯಿಸುವಾಗ ವ್ಯಕ್ತಿಗಳು ತಮ್ಮ ಪ್ರಾಣದ ಜತೆಗೆ ಕುಟುಂಬದ ಭದ್ರತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಚಲಾಯಿಸುವ ಇಡೀ ಕುಟುಂಬದ ಹೊಣೆ ತನ್ನ ಮೇಲಿದೆ ಎಂಬುದನ್ನು ಅರಿತು ಜಾಗೃತವಾಗಿರಬೇಕು ಎಂದು ಟ್ರಾಫಿಕ್ ಎಸಿಪಿ ಜ್ಯೋತಿಬಾ ನಿಕ್ಕಂ ಹೇಳಿದರು. ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅವಾಸ …

Read More »

ಮನರೇಗಾ ಹೆಸರು ಬದಲಿಸದಿರಲು ಆಗ್ರಹ

ಸಂಕೇಶ್ವರ: ಮನರೇಗಾ ಹೆಸರನ್ನು ಬದಲಾಯಿಸದಂತೆ ಒತ್ತಾಯಿಸಿ ಸಮೀಪದ ಗೋಟೂರ ಗ್ರಾಮದ ನರೇಗಾ ಕೂಲಿಕಾರ್ಮಿಕರು ಪ್ರತಿಭಟನೆ ನಡೆಸಿ, ಯೋಜನೆಯನ್ನು ಮೊದಲಿನಂತೆಯೇ ಮುಂದುವರಿಸುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಈಚೆಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ಮನರೇಗಾ ಯೋಜನೆಗೆ ತಿದ್ದುಪಡಿ ಮಾಡಿ, ಮಾನವ ದಿನಗಳನ್ನು ಕೇಂದ್ರ ಸರ್ಕಾರ ಸೂಚಿಸದಂತೆ ಸೃಜಿಸಬೇಕು, ಕೂಲಿಕಾರ್ಮಿಕರ ವೇತನ ಮತ್ತು ಸಾಮಗ್ರಿಗಳಿಗಾಗಿ ರಾಜ್ಯ ಹಾಗೂ ಕೇಂದ್ರಗಳ ಪ್ರಮಾಣಿತ ಹಂಚಿಕೆ ಬದಲಿಸಲಾಗಿದೆ. ಕೆಲಸದ ಸಮಯಕ್ಕೆ ನಿರ್ಬಂಧ ಹೇರಲಾಗಿದೆ. ಈ ಮೂಲಕ ಉದ್ಯೋಗ ಖಾತ್ರಿ …

Read More »

ಮಾದಕ ವ್ಯಸನ ಮುಕ್ತ ಬೆಳಗಾವಿಗೆ ಸಂಕಲ್ಪ

ಬೆಳಗಾವಿ: ನಗರವನ್ನು ಮಾದಕ ವ್ಯಸನ ಮುಕ್ತವನ್ನಾಗಿ ಮಾಡಲು ಸಂಕಲ್ಪ ಮಾಡಿದ್ದು, ಈ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟಗಾರರು ಮತ್ತು ವ್ಯಸನಿಗಳ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಕೇಸ್ ದಾಖಲಿಸುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತ ಭೂಷಣ ಬೋರಸೆ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಎನ್‌ಡಿಪಿಎಸ್ ಕಾಯ್ದೆಯಡಿ 200ಕ್ಕೂ ಹೆಚ್ಚು ಕೇಸ್ ಮಾಡಿದ್ದೇವೆ. ಕಳೆದ ವರ್ಷ ಕೇವಲ 50 ಮಾತ್ರ ಇದ್ದವು. ಈ ಕೇಸ್‌ಗಳ ಪೈಕಿ 48 ಪ್ರಕರಣ ಮಾರಾಟಗಾರರ ವಿರುದ್ಧ, …

Read More »