Breaking News

15 ದಿನದ ಮಗುವಿಗೆ ತಂದೆ ವಿಷಪ್ರಾಶನ ?: ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ತಾಯಿ

Spread the love

ಬೆಳಗಾವಿ: ಪ್ರಪಂಚವನ್ನೇ ಕಾಣದ 15 ದಿನದ ಮಗುವಿಗೆ ಪಾಪಿ ತಂದಯೇ ವಿಷಪ್ರಾಶನ ಮಾಡಿದ್ದಾನೆ ಎಂದು ಹೆತ್ತ ತಾಯಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಈ ಘೋರ ಘಟನೆ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಘಟನೆ ನಡೆದಿದೆ. ಉಸಿರು ಚೆಲ್ಲಿದ ಮಗುವನ್ನು ನೋಡಲಾಗದೇ ಹೆತ್ತತಾಯಿ ಮೌನಕ್ಕೆ ಜಾರಿದ್ದಾರೆ.

ಎರಡಯ ವಾರಗಳ ಹಿಂದೆಯಷ್ಟೇ ತಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ಮಗುವನ್ನು ನೋಡಲು ಬಂದ ತಂದನೇ ಕರುಳು ಬಳ್ಳಿಗೆ ವಿಷಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ. ಇಂತಹ ಕೆಟ್ಟ ಮನಸ್ಥಿತಿ ಯಾವ ತಂದೆಗೂ ಬರಬಾರದು, ಆ ಬೇಡವಾದರೆ ನಾವೇ ಅಂಗೈಯಲ್ಲಿಟ್ಟು ಜೋಪಾನ ಮಾಡುತ್ತಿದೆ ಎಂದು ಮಗುವಿನ ಅಜ್ಜಿ ರೋದನೆ ವ್ಯಕ್ತಪಡಿಸಿದ್ದಾರೆ.

ಬಿಮ್ಸ್ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟುಕೊಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಮಗುವಿನ ತಂದೆ ಭೀಮರಾಯ ತಲೆಮರೆಸಿಕೊಂಡಿದ್ದಾನೆ.

ಭೀಮರಾಯ ಸಣ್ಣದೊಂದು ಟ್ಯೂಬ್ ಹಿಡಿದುಕೊಂಡು ಬಂದಿದ್ದ. ಅದೇ ಟ್ಯೂಬ್​ನಿಂದ ಮಗುವಿಗೆ ಕುಡಿಸಿದ್ದಾನೆ ಎಂದು ಪತ್ನಿ ಶೀಲಾ ಹಾಗೂ ಆಕೆಯ ಪೋಷಕರಿಂದ ಗಂಭೀರ ಆರೋಪ ಮಾಡಿದ್ದಾರೆ. ಇನ್ನೊಂದೆಡೆ ಭೀಮರಾಯ ಸಹ ನಾಪತ್ತೆಯಾಗಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಮೃತ ಮಗುವಿನ ಮರಣೋತ್ತರ ಪರೀಕ್ಷೆ ನಿಜಾಂಶ ಹೊರಬೀಳಲಿದೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ