ಬೆಳಗಾವಿ: ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಅಂಕಗಳನ್ನು ಗಳಿಸುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಶುಭಹಾರೈಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ವರ್ಷಾನುಪೂರ್ತಿ ಎಲ್ಲ ವಿಷಯಗಳನ್ನು ತರಗತಿಗಳಲ್ಲಿ ಕಲಿತು, ಸಾಕಷ್ಟು ಅಧ್ಯಯನ ಮಾಡಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದೀರಿ. ಹೀಗಾಗಿ, ಯಾವುದೇ ಭಯ ಹಾಗೂ ಒತ್ತಡಕ್ಕೆ ಒಳಗಾಗದೇ ಧೈರ್ಯವಾಗಿ ಪರೀಕ್ಷೆ ಎದುರಿಸಿ. ಶಾಂತ …
Read More »ಅಂತರರಾಜ್ಯ ಕಳ್ಳರನ್ನು ಬಂಧಿಸಿ 6.11 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ
ಬೆಳಗಾವಿ: ಹಾರೂಗೇರಿ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ನಡೆದಿದ್ದ ಕಳ್ಳತನ ಪ್ರಕರಣದ ತನಿಖೆಯಲ್ಲಿ ಮಹಾರಾಷ್ಟ್ರ ಮೂಲಕ 7 ಅಂತರರಾಜ್ಯ ಕಳ್ಳರನ್ನು ಬಂಧಿಸಿ, 29 ಲಕ್ಷ ರೂ. ಮೌಲ್ಯದ 267ಗ್ರಾಂ. ಚಿನ್ನಾಭರಣ ಸೇರಿದಂತೆ ಒಟ್ಟು 36.11 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಡಲಾಗಿದೆ ಎಂದು ಎಸ್ಪಿ ಕೆ.ರಾಮರಾಜನ್ ತಿಳಿಸಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಫೆ.7ರಂದು ರಾಯಬಾಗ ತಾಲೂಕಿನ ಹಾರೂಗೇರಿಯ ಅಭಿಷೇಕ ಪಾಂಡೆ ಎಂಬುವವರು …
Read More »ಅಲಿ ಖಮೇನಿ ಪೋಸ್ಟರ್ ವಿರುದ್ಧ ಶ್ರೀರಾಮ ಸೇನೆಯಿಂದ ಶಿವಾಜಿ ಹಾಗೂ ಮೋದಿ ಬ್ಯಾನರ್ ಅಭಿಯಾನ
ಬೆಳಗಾವಿ : ನಗರದಲ್ಲಿ ಅಳವಡಿಸಿರುವ ಇರಾನ್ ದೇಶದ ಅಲಿ ಖಮೇನಿ ಪೋಸ್ಟರ್ ವಿರುದ್ಧ ಶ್ರೀರಾಮ ಸೇನೆಯಿಂದ ಆಫ್ಜಲ್‌ಖಾನ್‌ನ ವಧೆ ಮಾಡುತ್ತಿರುವ ಛತ್ರಪತಿ ಶಿವಾಜಿ ಹಾಗೂ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಭಾರತದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಸೋಮವಾರ ಅಳವಡಿಸಿದೆ. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಈ ಬ್ಯಾನರ್‌ಗಳನ್ನು ಅಳವಡಿಸಿದರು. ಇದರಲ್ಲಿ ಯುಗಾದಿಯ ಶುಭಾಶಯವನ್ನೂ ಕೋರಲಾಗಿದೆ. ಇದೇ …
Read More »ಏ.14ರ ಅಂಬೇಡ್ಕರ್ ಜನ್ಮ ದಿನಾಚರಣೆ ಪೂರ್ವಭಾವಿ ಸಭೆ
ಬೆಳಗಾವಿ: ಪ್ರತಿ ವರ್ಷದಂತೆ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆ ಅಂಬೇಡ್ಕರ್ ಉದ್ಯಾನವನದಲ್ಲಿ ಏಪ್ರಿಲ್ 14 ರಂದು ಅರ್ಥಪೂರ್ಣ, ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ಪ್ರಮುಖ ವೃತ್ತಗಳಲ್ಲಿ ಬ್ಯಾನರ್ ಅಳವಡಿಕೆ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಕುಡಿಯುವ ನೀರು, ಅಲ್ಪೋಪಹಾರ ಒದಗಿಸಬೇಕು. ಕಾರ್ಯಕ್ರಮದ ಕುರಿತು ಶಿಷ್ಟಾಚಾರದನ್ವಯ ಆಂಮತ್ರಣ …
Read More »ಅಂತರರಾಜ್ಯ ವಂಚಕರ ಜಾಲವನ್ನು ಭೇದಿಸಿದ ಗೋಕಾಕ ಪೊಲೀಸರು
ಬೆಳಗಾವಿ: ಜಿಲ್ಲೆಯ ಗೋಕಾಕದಲ್ಲಿ ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ ವಂಚಿಸುತ್ತಿದ್ದ ಅಂತರರಾಜ್ಯ ವಂಚಕರ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ದಂಧೆಯಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಮಂದಿ ಬಂಧಿಸಲಾಗಿದೆ ಎಂದು ಎಸ್ಪಿ. ಕೆ. ರಾಮರಾಜನ್ ಹೇಳಿದರು. ಗೋಕಾಕದ ಶ್ರೀನಗರದಲ್ಲಿರುವ ಮನೆಯೊಂದರಲ್ಲಿ ಹಣವನ್ನು ನಾಲ್ಕು ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಜಾಲದ ಮೇಲೆ ಗೋಕಾಕ ಶಹರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾದವರನ್ನು ಪರಶುರಾಮ …
Read More »ಬ್ಯಾಂಕ್‌ನಿಂದ ರೈತರಿಗೆ ವಿವಿಧ ಸಾಲ ಸೌಲಭ್ಯ: ಕೆನರಾ ಬ್ಯಾಂಕ್ ಆರ್‌ಜಿಎಂ ಪನಿಶಯನ್
ನಿಪ್ಪಾಣಿ: ಕೆನರಾ ಬ್ಯಾಂಕ್ ರೈತರಿಗೆ ಬೆಳೆ ಸಾಲ, ಕೃಷಿ ಯಾಂತ್ರೀಕರಣ, ಟ್ರ‍್ಯಾಕ್ಟರ್, ನೀರಾವರಿ ಪಂಪ್‌ಸೆಟ್ ಮತ್ತು ಹೈಟೆಕ್ ಕೃಷಿ ಉಪಕರಣಗಳ ಖರೀದಿಗೆ, ಪಶುಸಂಗೋಪನೆ (ಕುರಿ, ಮೇಕೆ, ಕೋಳಿ), ರೇಷ್ಮೆ ಕೃಷಿ ಮತ್ತು ಭೂಮಿ ಅಭಿವೃದ್ಧಿಗೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತದೆ. ಜತೆಗೆ ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕೂಡ ನೀಡುತ್ತದೆ ಎಂದು ಕೆನರಾ ಬ್ಯಾಂಕ್ ಆರ್‌ಜಿಎಂ ಪನಿಶಯನ್ ಎಂ. ಹೇಳಿದರು. ಜೊಲ್ಲೆ ಗ್ರುಪ್ ವತಿಯಿಂದ ಮತ್ತು ಹಾಲಸಿದ್ಧನಾಥ ಸಹಕಾರ ಸಕ್ಕರೆ …
Read More »ಸೌಹಾರ್ದತೆಯ ಸಂಕೇತ: ಇಫ್ತಾರ್ ಕೂಟದಲ್ಲಿ ಭಾಗಿ!
ಯರಗಟ್ಟಿ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಆಯೋಜಿಸಿದ್ದ ಪವಿತ್ರ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಸೌಹಾರ್ದತೆಯ ಕ್ಷಣಗಳನ್ನು ಹಂಚಿಕೊಳ್ಳಲಾಯಿತು. ಈ ಪವಿತ್ರ ರಂಜಾನ್ ಮಾಸವು ಎಲ್ಲರ ಬಾಳಿನಲ್ಲಿ ಶಾಂತಿ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ. ಸಮಾಜದಲ್ಲಿ ಸಹೋದರತ್ವದ ಭಾವನೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತಾ, ಸಮಸ್ತ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಸಮುದಾಯದ ಪ್ರಮುಖರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.
Read More »ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ: ಹಿರಿಯ ಮುಖಂಡರ ಸೇರ್ಪಡೆ
ಮುನವಳ್ಳಿ ಭಾಗದ ಹಿರಿಯ ರಾಜಕಾರಣಿಗಳು, ಪುರಸಭೆಯ ಮಾಜಿ ಉಪಾಧ್ಯಕ್ಷರು ಹಾಗೂ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ದುಂಡಪ್ಪ ಬುರ್ಜಿ ಅವರು ಇಂದು ಬಿಜೆಪಿ ತೊರೆದು ಅಧಿಕೃತವಾಗಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರ ಸುದೀರ್ಘ ರಾಜಕೀಯ ಅನುಭವ ಮತ್ತು ಜನಸೇವೆಯ ಮನೋಭಾವವು ಮುನವಳ್ಳಿ ಭಾಗದಲ್ಲಿ ಪಕ್ಷದ ಸಂಘಟನೆಗೆ ಮತ್ತಷ್ಟು ಶಕ್ತಿಯನ್ನು ನೀಡಲಿದೆ. ಶ್ರೀ ದುಂಡಪ್ಪ ಬುರ್ಜಿ ಅವರಿಗೆ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾ, ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ನಾವೆಲ್ಲರೂ …
Read More »ಬೆಳಗಾವಿಯಲ್ಲಿ ಸಾರಿಗೆ ಬಸ್ ಅಪಘಾತ: 11 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು
ಬೆಳಗಾವಿ :ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹನ್ನೊಂದು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಖಾನಾಪುರ ತಾಲೂಕಿನ ನಂದಗಡದ ಸರಕಾರಿ ಆಸ್ಪತ್ರೆ ಎದುರುಗಡೆ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಹನ್ನೊಂದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾನಾಪುರ ಘಟಕಕ್ಕೆ ಸೇರಿದ ಕೆಎ-೨೨ ಎಫ್-೨೧೦೩ ಸಂಖ್ಯೆಯ ಬಸ್ಸು ಖಾನಾಪುರದಿಂದ ಬೀಡಿಗೆ ತೆರಳುತ್ತಿತ್ತು. ನಂದಗಡದ ಸರಕಾರಿ ಆಸ್ಪತ್ರೆ ಎದುರುಗಡೆ ಬರುತ್ತಿದ್ದಾಗ, ಏಕಾಏಕಿ ರಸ್ತೆಗೆ ಅಡ್ಡ …
Read More »ಗೊಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅದ್ದೂರಿಯಾಗಿ ನಡೆದ ಸಾಂಸ್ಕೃತಿಕ-ತಾಂತ್ರಿಕ ಉತ್ಸವ
ಬೆಳಗಾವಿ: ಬೆಳಗಾವಿಯ KLS Gogte Institute of Technology ನಲ್ಲಿ ಮಾರ್ಚ್ 11 ರಿಂದ 14ರವರೆಗೆ ನಡೆದ AURA 2K26 ಸಾಂಸ್ಕೃತಿಕ ಹಾಗೂ ತಾಂತ್ರಿಕ ಉತ್ಸವ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ನವೀನತೆಗೆ ವೇದಿಕೆಯಾಗಿ ಭರ್ಜರಿಯಾಗಿ ನೆರವೇರಿತು. ನಾಲ್ಕು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ತಂಡಭಾವ, ನಾಯಕತ್ವ ಹಾಗೂ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡಿದವು. ಉತ್ಸವದ ಅಂಗವಾಗಿ ನೃತ್ಯ, ನಾಟಕ, ಸಂಗೀತ, …
Read More »
Laxmi News 24×7