ಬಾಗಲಕೋಟೆ: “ರಕ್ತದ ಕಣಕಣಗಳಲ್ಲೂ ದೇಶಭಕ್ತಿಯ ಭಾವ ತುಂಬಿ ಹರಿಯಲಿ, ಮನೆ ಮನೆಗಳಲ್ಲೂ ಹೆಮ್ಮೆಯ ರಾಷ್ಟ್ರಧ್ವಜ ರಾರಾಜಿಸಲಿ” ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.
ನಗರದಲ್ಲಿರುವ ತಮ್ಮ ನಿವಾಸದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಗಸ್ಟ್ 13ರಿಂದ 15ರವರೆಗೆ ಪ್ರತಿಯೊಂದು ಮನೆಯಲ್ಲೂ ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಾರಿಸಿ, ಸಂಭ್ರಮ ಹಾಗೂ ಸಡಗರದಿಂದ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ದೇಶಾಭಿಮಾನದ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ತಾಯಿ ಭಾರತಾಂಬೆಯ ಮೇಲಿನ ನಮ್ಮ ಭಕ್ತಿ ಹಾಗೂ ಗೌರವವನ್ನು ಗರ್ವದಿಂದ ಅಭಿವ್ಯಕ್ತಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಎಂ.ಎಸ್. ದಡ್ಡೆನ್ನವರ, ಗುಂಡುರಾವ ಶಿಂಧೆ, ಬಸವರಾಜ ಯಂಕಂಚಿ, ಯಲ್ಲಪ್ಪ ಬೆಂಡಿಗೇರಿ, ರಾಜು ರೇವನಕರ್, ಬಸವರಾಜ ಹುನಗುಂದ, ಸುರೇಶ ಮಜ್ಜಗಿ, ಶೋಭಾರಾವ, ಶಶಿಕಲಾ ಮಜ್ಜಗಿ, ಸವಿತಾ ಲಂಕೆನ್ನವರ, ಉಮೇಶ ಹಂಚಿನಾಳ, ರವಿ ಧಾಮಜಿ, ಶ್ರೀನಾಥ ಸಜ್ಜನ,ಸತ್ಯನಾರಾಯಣ ಹೆಮಾದ್ರಿ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Laxmi News 24×7