Breaking News

ಖಾನಾಪುರ

ಗ್ರಾಮಸ್ಥರ ; ಕಣ್ಣೀರು ತರಿಸುವ ಘಟನೆ

ಬೆಳಗಾವಿ : ತೀವ್ರವಾಗಿ ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು ಗ್ರಾಮಸ್ಥರು ಕಟ್ಟಿಗೆಯ ಸ್ಟ್ರೇಚರ್ ನಲ್ಲಿ ಹಾಕಿ ಸುಮಾರು ಐದು ಕಿ.ಮೀಟರ್ ವರೆಗೆ ನಡೆದುಕೊಂಡು ಆಸ್ಪತ್ರೆಗೆ ಸೇರಿಸಿದ ಘಟನೆ ಖಾನಾಪುರ ತಾಲೂಕಿನ ಅಂಗಾವ್ ಗ್ರಾಮದಲ್ಲಿ ನಡೆದಿದೆ. 36 ವರ್ಷದ ಹರ್ಷದಾ ಘಾಡಿ ಎಂಬ ಮಹಿಳೆ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆದರೆ ಖಾನಾಪುರ ಘಟ್ಟ ಪ್ರದೇಶದ ಕಾಡಂಚಿನಲ್ಲಿರುವ ಅಂಗಾವ್ ಗ್ರಾಮಕ್ಕೆ ರಸ್ತೆ ಸಂಪರ್ಕ ಸೇತುವೆ ಯಾವುದೂ ಇಲ್ಲ. ಮೋಬೈಲ್ ನೆಟ್ವರ್ಕ್ ಬೇಕಾದರೆ ಗ್ರಾಮದಿಂದ ಒಂದು‌ …

Read More »

ಅಪಹರಣ: ಸಮಯಪ್ರಜ್ಞೆ ಮೆರೆದ ಬಾಲಕ

ಖಾನಾಪುರ: ಪಟ್ಟಣದಲ್ಲಿ ಶಾಲೆಗೆ ಹೋಗುವಾಗ ಬುಧವಾರ ಅಪಹರಣವಾಗಿದ್ದ 8ನೇ ತರಗತಿ ವಿದ್ಯಾರ್ಥಿಯೊಬ್ಬ ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡು ಮನೆಗೆ ಬಂದು ಸೇರಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಪಟ್ಟಣದ ಅಸೋಗಾ ರಸ್ತೆಯ ರೈಲು ನಿಲ್ದಾಣದ ಪೂರ್ವ ದಿಕ್ಕಿನ ಬಡಾವಣೆಯಲ್ಲಿ ವಾಸವಿದ್ದ ಆದಿತ್ಯ ಮಿಲಿಂದ ಶಿಂಧೆ (13) ಶಾಲೆಗೆ ಹೋಗಲು ರೈಲು ನಿಲ್ದಾಣದ ಬಳಿ ಬಂದಾಗ ಆತನ ಮೂಗಿಗೆ ಅಪರಿಚಿತರು ಹಿಂದಿನಿಂದ ಪ್ರಜ್ಞೆ ತಪ್ಪಿಸುವ ಔಷಧವಿರುವ ಕರವಸ್ತ್ರವನ್ನು ಹಿಡಿದು ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಬಾಲಕನನ್ನು …

Read More »

ಖಾನಾಪುರ ತಾಲ್ಲೂಕಿನಲ್ಲಿ ಒಂದೇ ದಿನ 74.5 ಸೆಂ.ಮೀ ಮಳೆ

ಖಾನಾಪುರ: ತಾಲ್ಲೂಕಿನಲ್ಲಿ ಗುರುವಾರ ಒಂದೇ ದಿನ 74.5 ಸೆ.ಮೀ ಮಳೆಯಾಗಿದೆ. ‘ಇದು ಈ ವರ್ಷದಲ್ಲಿ ಸುರಿದ ಅತ್ಯಧಿಕ ಮಳೆ’ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಮಲಪ್ರಭಾ, ಮಹಾದಾಯಿ ಮತ್ತು ಪಾಂಡರಿ ನದಿಗಳಲ್ಲಿ ನೀರಿನ ಹರಿವು ಪ್ರಮಾಣ ವೃದ್ಧಿಸಿದೆ. ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಬೈಲ್, ಕುಂಬಾರ, ಕರೀಕಟ್ಟಿ, ತಟ್ಟಿ, ಕೋಟ್ನಿ ಹಳ್ಳಗಳಲ್ಲೂ ನೀರಿನ ರಭಸ ಮುಂದುವರೆದಿದೆ. ಹಬ್ಬನಹಟ್ಟಿ ಆಂಜನೇಯ ದೇವಾಲಯ ಮಲಪ್ರಭಾ ನದಿಯಲ್ಲಿ …

Read More »

ಖಾನಾಪುರ: ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಖಾನಾಪುರ: ಪಟ್ಟಣದ ಹೊರವಲಯದ ಬೆಳಗಾವಿ ರಸ್ತೆಯ ಮರೆಮ್ಮ ದೇವಾಲಯದ ಬಳಿ ಶುಕ್ರವಾರ ರಾತ್ರಿ ಲಾರಿ ಹಿಂದಿನ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತಪಟ್ಟಿದ್ದಾರೆ. ತಾಲ್ಲೂಕಿನ ಹಲಕರ್ಣಿ ನಿವಾಸಿ ಸಂಜು ಮಲ್ಲಪ್ಪ ಸತನಾಯ್ಕ (35) ಮೃತರು. ಪಟ್ಟಣದಿಂದ ಬೆಳಗಾವಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಲಾರಿಯನ್ನು ಓವರ್‌ಟೇಕ್ ಮಾಡಲು ಹೀಗಿ, ಎದುರಿಗೆ ಬಂದ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದು, ಲಾರಿಯ ಹಿಂದಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದ ಗಂಗವಾಳಿ ಗ್ರಾಮದ ತುಕಾರಾಮ ಸುತಾರ …

Read More »

ಕರಂಜಾಳ ಕೆರೆಯಲ್ಲಿ ಬೇಸಿಗೆಯಲ್ಲೂ ನೀರು

ಖಾನಾಪುರ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು ಮತ್ತು ನದಿ ಮತ್ತಿತರ ಜಲಮೂಲಗಳಲ್ಲಿ ನೀರಿನ ಹರಿವು ಮತ್ತು ಪ್ರಮಾಣ ಕ್ಷೀಣಿಸುವುದು ವಾಡಿಕೆ. ಆದರೆ ತಾಲ್ಲೂಕಿನ ಲೋಂಡಾ ಅರಣ್ಯ ವಲಯದ ಕರಂಜಾಳ ಗ್ರಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅರಣ್ಯ ಇಲಾಖೆಯವರು ನಿರ್ಮಿಸಿದ ಕೆರೆಯಲ್ಲಿ ಈ ವರ್ಷದ ಕಡು ಬೇಸಿಗೆಯಲ್ಲೂ ಅವಶ್ಯ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ.

Read More »

ಖಾನಾಪುರ: ಪ್ರವಾಸಿ ತಾಣವಾಗಲಿ ಸಣ್ಣಹೊಸೂರಿನ ದೊಡ್ಡ ಕೆರೆ, ಬರಗಾಲದಲ್ಲೂ ಜಲಪೂರಣ

ಖಾನಾಪುರ: ತಾಲ್ಲೂಕಿನ ಹಲವೆಡೆ ಮಳೆಯ ಕೊರತೆಯ ಪರಿಣಾಮ ಈ ಸಲದ ಬೇಸಿಗೆಯಲ್ಲಿ ಎಲ್ಲೆಡೆ ಜಲಕ್ಷಾಮ ತಲೆದೋರಿದೆ. ಪ್ರಾಣಿ- ಪಕ್ಷಿಗಳು, ಜಲಚರಗಳಿಗೂ ಕುಡಿಯುವ ನೀರಿನ ತೊಂದರೆ ಉದ್ಭವಿಸಿದೆ. ಆದರೆ ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಸಣ್ಣ ಹೊಸೂರು ಗ್ರಾಮದ ವಿಶಾಲವಾದ ಕೆರೆ ನೀರಿನಿಂದ ತುಂಬಿ ಕಂಗೊಳಿಸುತ್ತಿದೆ. ಇದನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣ ಮಾಡಬೇಕಾದ ಅವಶ್ಯಕತೆ ಇದೆ. ಈ ಕೆರೆಯಲ್ಲಿ ನೀರಿನ ಸಂಗ್ರಹದ ಪರಿಣಾಮ ಅಂಚಿನಲ್ಲಿ ನೂರಾರು ಬಿಳಿ ಕೊಕ್ಕರೆ, ರಾಜಹಂಸ, ಪಾರಿವಾಳ, …

Read More »

ಕಾಡಿನ ಕೂಸು’ಗಳಿಗೂ ತಪ್ಪದ ನೀರಿನ ಬವಣೆ

ಖಾನಾಪುರ: ಈಚಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದೆ. ಕಾರಣ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಪ್ರಮುಖ ಜಲಮೂಲಗಳಾದ ಮಲಪ್ರಭಾ, ಪಾಂಡರಿ ನದಿಗಳು, ಕೆರೆಗಳು ಮತ್ತು ಹಳ್ಳಕೊಳ್ಳಗಳು ಸಂಪೂರ್ಣ ಬತ್ತಿವೆ. ಇದು ಸದ್ಯದ ಬರದ ಪರಿಸ್ಥಿತಿಗೆ ಜ್ವಲಂತ ಸಾಕ್ಷಿ. ತಾಲ್ಲೂಕಿನ ಪ್ರಮುಖ ಜಲಮೂಲಗಳು ಬತ್ತಿರುವ ಕಾರಣ ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನು ಅವಲಂಬಿಸಬೇಕಾಗಿದೆ. ದಟ್ಟ ಅರಣ್ಯವನ್ನು ಸುತ್ತುವರಿದ ತಾಲ್ಲೂಕಿನ ಪಶ್ಚಿಮ ಭಾಗದ ಕರ್ನಾಟಕ- ಗೋವಾ ಗಡಿಯಲ್ಲಿರುವ …

Read More »

ಖಾನಾಪುರದ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ ಆರೋಪ‌ ಚರ್ಚೆಗೆ ಬನ್ನಿ: ಶಾಸಕ ಹಲಗೇಕರ್​ಗೆ ನಿಂಬಾಳ್ಕರ್ ಸವಾಲು‌

ಬೆಳಗಾವಿ: ಖಾನಾಪುರದ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ ಆರೋಪ‌ದಲ್ಲಿ ರಾಜಕೀಯ ಏನೂ ಇಲ್ಲ‌. ಈಗ ಚುನಾವಣೆ ಮುಗಿದಿದ್ದು, ನೀವು ದಾಖಲೆ ಸಮೇತ ಬಹಿರಂಗ ಚರ್ಚೆ ಬರುವಂತೆ ಶಾಸಕ ವಿಠ್ಠಲ ಹಲಗೇಕರ್​ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸವಾಲ್‌ ಹಾಕಿದ್ದಾರೆ. ಖಾನಾಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಹಿತಿ ಹಕ್ಕಿನಡಿ ಯಾವುದೇ ದಾಖಲೆ ಕೊಡ್ತಿಲ್ಲ. ಕಳೆದ 6 ವರ್ಷಗಳಿಂದ ಬೆನ್ನು ಬಿದ್ದ ಮೇಲೆ ನಿವೃತ್ತ ನ್ಯಾಯಾಧೀಶ ಎಸ್.ಪಿ.ವಸ್ತ್ರದ ಅವರ ನೇತೃತ್ವದಲ್ಲಿ ತನಿಖೆ …

Read More »

ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ ಹಾರೂರಿನ ರೈತ

ಖಾನಾಪೂರ ತಾಲೂಕಿನ ಹಾರೂರಿನಲ್ಲಿ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದರೆ ಇರ್ನೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿದೆ ಏನ್ನೇಂದರೆ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ಬೇಲಿಯ ತಂತಿ ತಗುಲಿ ಈ ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶಗೊಂಡಿದ್ದ ಸಹೋದರ ರಕ್ಷಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿದಾಗ ಇನ್ನೋರ್ವ ಪಕ್ಕಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕಳುಹಿಸಲಾಗಿದೆ. ಹಾರೂರಿನ ರೈತ ಹಾಗೂ …

Read More »

ಅರ್ಚಕನ ಕೆಲಸ ಬಿಡಿಸಿದ್ದಕ್ಕೆ ಮಲಪ್ರಭಾ ನದಿ ತೀರದಲ್ಲಿ ಧರಣಿಗೆ ಕುಳಿತ

ಅರ್ಚಕನ ಕೆಲಸ ಬಿಡಿಸಿದ್ದಕ್ಕೆ ಮಲಪ್ರಭಾ ನದಿ ತೀರದಲ್ಲಿ ಧರಣಿಗೆ ಕುಳಿತ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಬ್ಬನಹಟ್ಟಿ ಗ್ರಾಮದಲ್ಲಿ ನಡೆದಿದೆ. ಪೊಲೀಸರು, ಆಡಳಿತ ಮಂಡಳಿ ಹಾಗೂ ಸ್ಥಳೀಯರು ಅರ್ಚಕನನ್ನು ಅಲ್ಲಿಂದಹೊರತೆಗೆಯಲು ಹರಸಾಹಸ ಪಟ್ಟರು.  ಹರಿಯಾಣ ಮೂಲದ ಅರ್ಚಕ ದೇವೇಂದ್ರ ಸಿಂಗ್ ಶರ್ಮಾ ಅವರು ನದಿ ಬಳಿ ಧರಣಿಕುಳಿತಿದ್ದು. ಖಾನಾಪುರ ಪೊಲೀಸರು, ಗ್ರಾಮಾಂತರ ಪಿಡಿಒ ಹಾಗೂ ಸ್ಥಳೀಯರು. ನದಿಯ ದಡದಲ್ಲಿ ಕುಳಿತಿದ್ದ ಅರ್ಚಕರನ್ನು ಸ್ಥಳೀಯ ನಾಗರಿಕರು ಹೊರ ಬರುವಂತೆ ಮನವಿ …

Read More »