Breaking News
Home / ಜಿಲ್ಲೆ / ತುಮಕೂರು

ತುಮಕೂರು

ಬೆಳ್ಳಂಬೆಳಗ್ಗೆ ತುಮಕೂರು ಬಳಿ ಭೀಕರ ಅಪಘಾತ

ತುಮಕೂರು: ಬೆಳ್ಳಂಬೆಳಗ್ಗೆ ಕೆಎಸ್‌ಆರ್​ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದೊಡ್ಡಗುಣಿ ಸಮೀಪ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 10 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ತುಮಕೂರು-ಶಿವಮೊಗ್ಗ ನ್ಯಾಷನಲ್ ಹೆದ್ದಾರಿ 206ರಲ್ಲಿ ಈ ಘಟನೆ ಸಂಭವಿಸಿದೆ. ಗಿರೀಶ್​ (37), ಮಾನ್ಯ (17), ಮೃತ ದುರ್ದೈವಿಗಳು. ಇವರಿಬ್ಬರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ನಿಟ್ಟೂರು ಕಡೆಯಿಂದ ತುಮಕೂರು ಕಡೆಗೆ ಝೈಲೋ ಕಾರು ಬರುತ್ತಿದ್ದರೆ, …

Read More »

ಲಾರಿ, ಬೈಕ್​​ಗಳ ನಡುವೆ ಸರಣಿ ಅಪಘಾತ-ಸ್ಥಳದಲ್ಲೇ ಮೂವರು ಸವಾರರ ಸಾವು

ತುಮಕೂರು: ಸರಣಿ ಅಪಘಾತದಲ್ಲಿ ಮೂವರು ಬೈಕ್ ಸವಾರರು ನಡುರಸ್ತೆಯಲ್ಲೇ ಪ್ರಾಣಬಿಟ್ಟಿರೋ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಬಳಿ ನಡೆದಿದೆ. ಮೊದಲು ವಿ.ಆರ್.ಎಲ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಅಪಘಾತ ನೋಡಲು ಹೋದ ಮತ್ತೊಂದು ಬೈಕ್‌ಗೆ ಮೊತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಟ್ಟಾರೆ ಎರಡು ಬೈಕ್‌‌ಗಳಲ್ಲಿದ್ದ ಒಟ್ಟು ಮೂವರು ಯುವಕರು ಸಾವನ್ನಪ್ಪಿದ್ದಾರೆ.

Read More »

ಭೀಕರ ಅಪಘಾತ; ದುರ್ಘಟನೆ ಬಳಿಕ ಹೊತ್ತಿಕೊಂಡ ಬೆಂಕಿಯಿಂದ ಇಬ್ಬರು ಪಾರಾಗಿದ್ದೇ ಪವಾಡ

ತುಮಕೂರು: ಬೆಳ್ಳಂಬೆಳಗ್ಗೆ ಎರಡು ಲಾರಿಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪೊಲೀಸರ ಸಮಯ ಪ್ರಜ್ಞೆಯಿಂದ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾದ ಘಟನೆ ಶಿರಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಳ್ಳಂಬೆಳ್ಳ ಬಳಿ ನಡೆದಿದೆ. ಬೆಂಗಳೂರು ಕಡೆ ತೆರಳುತ್ತಿದ್ದ ಸಿಮೆಂಟ್ ಪೈಪ್‌ಗಳನ್ನು ಹೊತ್ತಿದ್ದ ಲಾರಿ ಮತ್ತು ಕಟ್ಟಿಗೆ ತುಂಬಿದ ಲಾರಿ ಪರಸ್ಪರ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಪರಿಣಾಮ ಕಟ್ಟಿಗೆ ತುಂಬಿದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ …

Read More »

ತುಮಕೂರು: ಪುಕ್ಕಟೆ ಕೊತ್ತಂಬರಿ ಸೊಪ್ಪಿಗೆ ಮುಗಿಬಿದ್ದ ಜನರು

ತುಮಕೂರು : ಉಚಿತವಾಗಿ ನೀಡುತಿದ್ದ ಕೊತ್ತಂಬರಿ ಸೊಪ್ಪಿಗಾಗಿ ಜನರು ಮುಗಿ ಬಿದ್ದಿರುವ ಘಟನೆ ತುಮಕೂರಿನ ಎನ್.ಆರ್ ಕಾಲೋನಿಯಲ್ಲಿ ನಡೆದಿದೆ. ಪಾಲಿಕೆ ಸದಸ್ಯ ಶ್ರೀನಿವಾಸ್ ಉಚಿತವಾಗಿ ಕೊತ್ತಂಬರಿ ಸೊಪ್ಪು ಹಂಚುತ್ತಿದ್ದರು. ಈ ವೇಳೆ ಜನರು ನಾಮುಂದು ತಾಮುಂದು ಎಂಬಂತೆ ಮುಗಿ ಬಿದ್ದು ಕೊತ್ತಂಬರಿ ಸೊಪ್ಪು ಪಡೆದಿದ್ದಾರೆ. ಜನರು ಮುಗಿ ಬಿದ್ದ ಹಿನ್ನೆಲೆಯಲ್ಲಿ ಸೊಪ್ಪು ಹಂಚುತ್ತಿದ್ದ ಯುವಕ ಆಟೋದಿಂದ ಜನರತ್ತ ಸೊಪ್ಪನ್ನು ಎಸೆದು ಹೋಗಿದ್ದಾನೆ. ಉಚಿವಾಗಿ ಸಿಗುವ ಕೊತ್ತಂಬಿಗಾಗಿ ಜನರು ಮುಗಿಬಿದ್ದಿರುವ ವೀಡಿಯೋ …

Read More »

ನನಗೂ ಸಿಎಂ ಆಗುವ ಆಸೆ ಇದೆ : ಸಚಿವ ಉಮೇಶ ಕತ್ತಿ

ತುಮಕೂರು : ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಸೀನಿಯರ್ ಇದಾರೆ. ಅವರಿಗಿಂತ ನಾನು ಸೀನಿಯರ್ ಇದ್ದೇನಿ. ಸಿಎಂ ಸ್ಥಾನಕ್ಕೆ ಯತ್ನಾಳ ಹಾಗೂ ನನಗೆ ಪೈಪೋಟಿ ನಡೆಯಲಿ ಎಂದು ನೂತನ ಸಚಿವ ಉಮೇಶ ಕತ್ತಿ ಹಾಸ್ಯವಾಗಿ ಹೇಳಿದರು. ತುಮಕೂರು ಸಿದ್ದಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಈಗ ಖಾಲಿ ಇಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿಯಲ್ಲಿ 75 ವರ್ಷದವರೆಗೂ …

Read More »

ಸರ್ಕಾರದಿಂದ ರೈತರ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ

ತುಮಕೂರು : ರಾಜ್ಯ ಸರ್ಕಾರವು ರೈತರ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೃಷಿ ವಿವಿಗಳಲ್ಲಿ ಪದವಿ ವ್ಯಾಸಾಂಗ ಮಾಡುವ ರೈತರ ಮಕ್ಕಳಿಗೆ ಮೀಸಲಾತಿಯನ್ನು ಶೇ. 50 ಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ರಾಜ್ಯ ಸರ್ಕಾರವು ಕೃಷಿ, ತೋಟಗಾರಿಕೆ, ಪಶುಪಾಲನಾ ಪದವಿಯಲ್ಲಿ ಮೀಸಲಾತಿ ಹೆಚ್ಚಳವಾಗಲಿದ್ದು, ಇದರಲ್ಲಿ ದೊಡ್ಡ ಮತ್ತು ಸಣ್ಣ ರೈತರ ಮಕ್ಕಳು ಎಂಬ ಬೇಧ ಮಾಡದೇ ಎಲ್ಲರಿಗೂ ಸೌಲಭ್ಯ ಕಲ್ಪಿಸಲು …

Read More »

ಮಾಸ್ಕ್ ಧರಿಸದ್ದಕ್ಕೆ ದಂಡ ಹಾಕುತ್ತಿದ್ದ ಸಿಬ್ಬಂದಿ ಮೇಲೆ ಹಲ್ಲೆ

ತುಮಕೂರು: ಕೊರೊನಾ ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ. ಜನ ಸಹ ಮತ್ತಷ್ಟು ನಿರ್ಲಕ್ಷ್ಯ ತೋರುತ್ತಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಹೀಗೆ ಮಾಸ್ಕ್ ಹಾಕದೆ ಓಡಾಡುತ್ತಿದ್ದವರಿಗೆ ನಗರ ಸಭೆ ಸಿಬ್ಬಂದಿ ದಂಡ ವಿಧಿಸಿದ್ದು, ಇದರಿಂದ ಕೋಪಿತಗೊಂಡ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಜಿಲ್ಲೆಯ ತಿಪಟೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಘಟನೆ ನಡೆದಿದ್ದು, ಮಾಸ್ಕ್ ಧರಿಸಿದ್ದಕ್ಕೆ ದಂಡ ಹಾಕುತಿದ್ದ ನಗರ ಸಭೆ ಸಿಬ್ಬಂದಿ ವೆಂಕಟೇಶ ಅವರ ಮೇಲೆ ಹಲ್ಲೆ ವ್ಯಕ್ತಿ ಹಲ್ಲೆ …

Read More »

ಯತ್ರೀಂದ್ರ ಸಿದ್ದರಾಮಯ್ಯ ಅವರು ಆಪ್ತ ಸ್ನೇಹಿತನ ವಿರುದ್ಧವೇ ಪ್ರಚಾರ

ತುಮಕೂರು: ಜಿಲ್ಲೆಯ ಶಿರಾ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇದರ ಮಧ್ಯೆ ಸಿದ್ದರಾಮಯ್ಯನವರ ಪುತ್ರ ಯತ್ರೀಂದ್ರ ಸಿದ್ದರಾಮಯ್ಯ ಅವರು ಆಪ್ತ ಸ್ನೇಹಿತನ ವಿರುದ್ಧವೇ ಪ್ರಚಾರಕ್ಕಿಳಿದಿದ್ದಾರೆ. ಹೌದು….ಶಿರಾದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರು ಯತೀಂದ್ರ ಅವರ ಆಪ್ತ ಸ್ನೇಹಿತರು. ಆದರೂ ಇಂದು (ಸೋಮವಾರ) ಯತೀಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರನವರ ಪರವಾಗಿ ಶಿರಾ ನಗರ ಮತ್ತು ಗೌಡಗೆರೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಈ ಮೂಲಕ ವೈಯಕ್ತಿಕ ಸಂಬಂಧಗಳೇ ಬೇರೆ, …

Read More »

ಶಿರಾ ಕ್ಷೇತ್ರ ಉಪಚುನಾವಣೆ ನವೆಂಬರ್ 3 ರಂದು

ತುಮಕೂರು: ಶಿರಾ ಕ್ಷೇತ್ರ ಉಪಚುನಾವಣೆ ಘೋಷಣೆ ಮಾಡಲಾಗಿದೆ. ನವೆಂಬರ್ 3 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 9 ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿದುಬಂದಿದೆ. ಹೀಗಾಗಿ ಬಿಜೆಪಿಯಲ್ಲಿ 4, ಜೆಡಿಎಸ್​ನಲ್ಲಿ ಇಬ್ಬರು ಟಿಕೆಟ್​ ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿದೆ. ಬಿಜೆಪಿ ಟಿಕೆಟ್​ಗಾಗಿ ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ, ಡಾ.ರಾಜೇಶ್ ಗೌಡ, ಡಾ.ಶಿವಕುಮಾರ್ ನಡುವೆ ಪೈಪೋಟಿ ಇದ್ರೆ. ಜೆಡಿಎಸ್​ನಲ್ಲಿ ದಿವಂಗತ ಸತ್ಯನಾರಾಯಣ ಪುತ್ರ‌ ಸತ್ಯಪ್ರಕಾಶ್, ಕಲ್ಕೆರೆ ರವಿಕುಮಾರ್ ನಡುವೆ ಟಿಕೆಟ್​ಗಾಗಿ ಪೈಪೋಟಿ ಇದೆ. ಹಾಗೂ ಕಾಂಗ್ರೆಸ್ ಪಕ್ಷದಿಂದ …

Read More »

ಕೆ.ಆರ್.ಪೇಟೆ ಮಾದರಿಯಲ್ಲಿ ಶಿರಾ ಉಪಚುನಾವಣೆ ಗೆಲ್ಲುತ್ತೇವೆ: ವಿಜಯೇಂದ್ರ

ತುಮಕೂರು: ಜಿಲ್ಲೆಯ ಶಿರಾ ವಿಧಾನಸಭೆ ಉಪಸಮರ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ಶಿರಾ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಶಿರಾ ನಗರದ ಕೋಟೆ ಬೀದಿ, ಸಂತೆಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚಾರ ಮಾಡಿ ಮತದಾರರನ್ನು ಭೇಟಿ ಮಾಡಿದರು. ಈ ವೇಳೆ ಟಿಕೆಟ್ ಅಕಾಂಕ್ಷಿಗಳಾದ ಎಸ್. ಆರ್.ಗೌಡ ಬಿ.ಕೆ.ಮಂಜುನಾಥ್ ವಿಜಯೇಂದ್ರ ಅವರಿಗೆ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ವಿಜಯೇಂದ್ರ ಅವರು, ಕೆ.ಆರ್.ಪೇಟೆ …

Read More »