Breaking News
Home / ಜಿಲ್ಲೆ / ಗದಗ

ಗದಗ

ಗಣೇಶ ವಿಸರ್ಜನೆ ವೇಳೆ ಚಾಕು ಇರಿತ

ಗದಗ: ಗಣೇಶ ವಿಸರ್ಜನೆ ವೇಳೆ ಚಾಕು ಇರಿತದಲ್ಲಿ ಯುವಕ ಸಾವನ್ನಪ್ಪಿದ ಘಟನೆ ಗದಗದ ತೋಂಟದಾರ್ಯ ಮಠದ ಬಳಿ ತಡರಾತ್ರಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ಸುದೀಪ್ ಮುಂಡೆವಾಡಿ(22) ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಸ್ನೇಹಿತರೇ ಹಲ್ಲೆ ಮಾಡಿ ಚಾಕು ಇರಿದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ತೀವ್ರ ರಕ್ತಸ್ರಾವದಿಂದ ಸುದೀಪ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗದಗದಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ …

Read More »

ಹಿಂದೂ-ಮುಸ್ಲಿಮ್ ಐಕ್ಯತೆಗೆ ಸಾಕ್ಷಿ: ಕೋಮು, ಧಾರ್ಮಿಕ ಸೌಹಾರ್ದತೆಗೆ ಗದಗ ಜಿಲ್ಲೆಯ ಈ ಗ್ರಾಮಸ್ಥರು ಮಾದರಿ!

ಗದಗ: ರಾಜ್ಯದ ವಿವಿಧೆಡೆ ಕೋಮುಗಲಭೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಇಲ್ಲಿ ಹಿಂದೂ-ಮುಸ್ಲಿಮರು ಒಂದೆಡೆ ಸೇರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಗದಗ ಪಟ್ಟಣದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಕಳಸಾಪುರ ಕಳೆದ ಎಂಟು ವರ್ಷಗಳಿಂದ ಕೋಮು ಮತ್ತು ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿದೆ.   ವಿಶಿಷ್ಟ ಆಚರಣೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳು ಮತ್ತು ಗದಗ ಪಟ್ಟಣದ ಜನರು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಕಳಸಾಪುರ ಗಣೇಶನನ್ನು ಈಗ ‘ಕೋಮು ಸೌಹಾರ್ದ ಗಣೇಶ’ ಎಂದು ಕರೆಯುತ್ತಾರೆ. …

Read More »

ಟಿವಿಎಸ್ ಎಕ್ಸೆಲ್ ಗೆ ಹಿಂಬದಿಯಿಂದ ಕಾರು ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಗದಗ: ಟಿವಿಎಸ್ ಎಕ್ಸೆಲ್ ಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹೊಂಬಳ ರಸ್ತೆಯಲ್ಲಿ ಭಾನುವಾರ ನಡೆದಿದೆ. ಗದಗ ನಗರದ ಹಾಳದಿಬ್ಬ ನಿವಾಸಿ ಮಂಜಪ್ಪ ಬಸಪ್ಪ ಕಲಬಂಡಿ(25) ಮೃತಪಟ್ಟ ಸವಾರ.   ಮಂಜಪ್ಪ ಕಲಬಂಡಿ ಅವರು ಭಾನುವಾರಬೆಳಿಗ್ಗೆ ಮನೆಯಿಂದ ಹೊಂಬಳ ರಸ್ತೆಯಲ್ಲಿನ ಜಮೀನಿಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಮಂಜಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ …

Read More »

ಮನೆ ಕೆಲಸದವನಿಂದ ಜೋಡಿ ಕೊಲೆ: ಒಟ್ಟಿಗೆ ಊಟ ಮಾಡಿ ಮಲಗಿದ್ದ ಮಾಲೀಕರನ್ನು ಹೊಡೆದು ಹತ್ಯೆ

ಗದಗ: ಮನೆಗೆಲಸದ ವ್ಯಕ್ತಿಯೊಬ್ಬ ಮಾಲೀಕರನ್ನು ಹತ್ಯೆಗೈದ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಗ್ರಾಮದ ಫಕೀರೇಶ ಮಾಚೇನಹಳ್ಳಿ (17) ಮಹಾಂತೇಶ್ ಮಾಚೇನಹಳ್ಳಿ (28) ಕೊಲೆಗೀಡಾದ ದುರ್ದೈವಿಗಳು. ಅಲಗಿಲವಾಡ ಗ್ರಾಮದ ನಿವಾಸಿ ಮಂಜುನಾಥ್ (40) ಕೊಲೆ ಮಾಡಿದ ಆರೋಪಿ. ಗುರುವಾರ ರಾತ್ರಿ ಮಾಲೀಕರ ಜೊತೆ ಬಾಡೂಟ ಸವಿದ ಮಂಜುನಾಥ ಮನೆಯ ಮಹಡಿಯಲ್ಲಿ ಮಾಲೀಕರ ಪಕ್ಕದಲ್ಲಿಯೇ ಮಲಗಿದ್ದರು. ಬೆಳಗಿನ ಜಾವ ಕೋಲಿನಿಂದ ಮುಖ ಹಾಗೂ ತಲೆಗೆ …

Read More »

ಬೆತ್ತಲೆ ಸೇವೆ ತಪ್ಪಿಸಿದ ಪೊಲೀಸರು

ಗದಗ: ಬೆಟಗೇರಿ ಹೊರವಲಯದ ನಾಗಸಮುದ್ರ ಸಮೀಪದ ದಂಡಿನ ದುರ್ಗಮ್ಮದೇವಿ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ದೇಹಕ್ಕೆ ಬೇವಿನಸೊಪ್ಪು ಸುತ್ತಿಕೊಂಡು ಬೆತ್ತಲೆ ಸೇವೆ ಸಲ್ಲಿಸಲು ಮುಂದಾದ ಭಕ್ತರನ್ನು ಪೊಲೀಸರು ತಡೆದರು.   ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ರಾಜ್ಯದ ಸಾವಿರಾರು ಭಕ್ತರು ಸೋಮವಾರವೇ ನಗರಕ್ಕೆ ಬಂದಿದ್ದರು. ಮಕ್ಕಳು, ಕೆಲ ಭಕ್ತರು ದೀರ್ಘ ದಂಡ ನಮಸ್ಕಾರ ಹಾಕಿ, ಹರಕೆ ತೀರಿಸಿದರು.   ‘ಹರಕೆ ಹೊತ್ತಿದ್ದ ಕೆಲವು ಭಕ್ತರು ಬೆತ್ತಲೆ ಸೇವೆ …

Read More »

ಮಠದಲ್ಲಿ ರಂಜಾನ್‌, ಬಸವ ಜಯಂತಿ ಆಚರಣೆ – ಬಸವಣ್ಣ, ಮಹಮ್ಮದ್‌ ಪೈಗಂಬರ್‌ಗೆ ಜಯಘೋಷ

ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣ ಹಾಗೂ ಮುಂಡರಗಿ ಶ್ರೀ ಅನ್ನದಾನೀಶ್ವರ ಮಠದಲ್ಲಿ ವಿಭಿನ್ನವಾಗಿ ರಂಜಾನ್ ಹಾಗೂ 889ನೇ ಬಸವ ಜಯಂತಿ ಆಚರಿಸಲಾಯಿತು. ಗಜೇಂದ್ರಗಡ, ಸೂಡಿಯ ಮೈಸೂರು ಮಠದ ಶ್ರೀ ವಿಜಯ ಮಹಾಂತೇಶ್ವರ ಸ್ವಾಮೀಜಿ ಹಾಗೂ ಮೌಲ್ವಿ ನೇತೃತ್ವದಲ್ಲಿ ʻಭಾವೈಕ್ಯತೆ ನಡಿಗೆ ಸಾಮರಸ್ಯದ ಕಡೆಗೆʼ ಎಂಬ ವಿಭಿನ್ನ ಹಾಗೂ ವಿಶೇಷವಾದ ಪಾದಯಾತ್ರೆ ಮಾಡಲಾಯಿತು. ಈ ವೇಳೆ ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ಮಾಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಮರಸ್ಯ …

Read More »

ಗಜೇಂದ್ರಗಡ: ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನೀರು ಪಾಲು

ಗಜೇಂದ್ರಗಡ(ಗದಗ): ತಾಲೂಕಿನ ಜಿಗೇರಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ ಶನಿವಾರ ನಡೆದಿದೆ. ಮೃತ ದುರ್ದೈವಿ ಗಜೇಂದ್ರಗಡ ಪಟ್ಟಣದ ನಿವಾಸಿ ಶಂಕರ ಬೆರಗಿ(25) ಎಂದು ತಿಳಿದು ಬಂದಿದೆ. ಶಂಕರ ತನ್ನ ಸ್ನೇಹಿತರೊಂದಿಗೆ ಜಿಗೇರಿ ಕೆರೆಗೆ ಈಜಲು ತೆರಳಿದ್ದ. ಮೇಲಿಂದ ಕೆರೆಗೆ ಹಾರಿದ ವೇಳೆ ಕೆರೆಯ ಹುದುಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಇದನ್ನು ಕಂಡ ಸ್ನೇಹಿತ ಹಾಗೂ ಮತ್ತಿತರರು ತಕ್ಷಣವೇ ನೀರಿಗೆ ಹಾರಿ ಸ್ನೇಹಿತನ ರಕ್ಷಿಸಲು ಪ್ರಯತ್ನಿಸಿದರೂ, ಅದಾಗಲೇ ಶಂಕರ್ ಬೆರಗಿ …

Read More »

ಸರ್ ನಮ್ಮ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನಿಯೋಜನೆ ಮಾಡಿ ಎಂದು ಶಿಕ್ಷಣಾಧಿಕಾರಿ ಕಾಲು ಹಿಡಿದ ವಿದ್ಯಾರ್ಥಿಗಳು

ಗದಗ: ಸರ್ಕಾರಿ ಪ್ರೌಢಶಾಲೆಯಲ್ಲಿ 6 ವರ್ಷದಿಂದ ಇಂಗ್ಲಿಷ್ ಶಿಕ್ಷಕರಿಲ್ಲ. ‘ಸರ್ ನಮ್ಮ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನಿಯೋಜನೆ ಮಾಡಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾಲು ಹಿಡಿದು ವಿದ್ಯಾರ್ಥಿಗಳು ಗೋಳಾಡಿದ ಘಟನೆ ಗದಗದಲ್ಲಿ ನಡೆದಿದೆ. ಗದಗ ತಾಲೂಕಿನ ಕದಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 6 ವರ್ಷದಿಂದ ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಹೀಗಾಗಿ ಇಂಗ್ಲಿಷ್ ಶಿಕ್ಷಕರ ನೇಮಕ ಮಾಡಿ ಎಂದು ಗದಗ ಬಿಇಒ ಎಂ.ಎ.ರಡ್ಡೇರ್‌ಗೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಇದೇ ವೇಳೆ ಬಿಇಒಗೆ …

Read More »

41ನೇ ರೈತ ಹುತಾತ್ಮ ದಿನಾಚರಣೆ; ಹುತಾತ್ಮ ರೈತನಿಗೆ ನಮನ ಸಲ್ಲಿಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ರೈತರು

ಗದಗ: 41ನೇ ರೈತ ಹುತಾತ್ಮ ದಿನಾಚರಣೆ ಹಿನ್ನೆಯಲ್ಲಿ ಬಂಡಾಯದ ನಾಡಿನತ್ತ ಇಂದು (ಜುಲೈ 21) ರೈತ ಸಮೂಹವೇ ಹರಿದು ಬಂದಿತ್ತು. ಹುತಾತ್ಮ ರೈತನ ವೀರಗಲ್ಲಿಗೆ ಹೂವು ಅರ್ಪಿಸಿ ರೈತರು, ಮುಖಂಡರು, ಜನಪ್ರತಿನಿಧಿಗಳು ನಮನ ಸಲ್ಲಿಸಿದರು. ಈ ವೇಳೆ ಮಹದಾಯಿ, ಕಳಸಾ ಬಂಡೂರಿಗಾಗಿ ರೈತರು ಹಸಿರು ಶಾಲು ಹಾರಿಸುವ ಮೂಲಕ ಮತ್ತೆ ರಣಕಹಳೆ ಊದಿದರು. ಜೊತೆಗೆ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್ ಹಾಕುವ ಮೂಲಕ ಸರ್ಕಾರಗಳಿಗೆ …

Read More »

ಅಪ್ಪ ಅಮ್ಮನ ಜೊತೆಗೆ ಖುಷಿ ಖುಷಿಯಾಗಿ ಮಾತನಾಡಿದ್ದ ಯೋಧ ಮಾತನಾಡಿದ ಒಂದೇ ಗಂಟೆಯಲ್ಲಿ ಯೋಧನ ಹುತಾತ್ಮನಾದ ಸುದ್ದಿ ಬರಸಿಡಿಲಂತೆ ಬಡಿದಿದೆ.

ಗದಗ: ಆತ 12 ವರ್ಷಗಳಿಂದ ಸೈನಿಕನಾಗಿ ದೇಶ ಕಾಯ್ತಿದ್ದ. ಒಂದು ತಿಂಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದ. ಬಳಿಕ ಮೇಲಾಧಿಕಾರಿಗಳ ಕರೆ ಮೇಲೆ ಮತ್ತೆ ಸೇವೆಗೆ ಹಾಜರಾದ. ಆದ್ರೆ ಬೆಳಿಗ್ಗೆ ಅಪ್ಪ ಅಮ್ಮನ ಜೊತೆಗೆ ಖುಷಿ ಖುಷಿಯಾಗಿ ಮಾತನಾಡಿದ್ದ ಯೋಧ ಮಾತನಾಡಿದ ಒಂದೇ ಗಂಟೆಯಲ್ಲಿ ಯೋಧನ ಹುತಾತ್ಮನಾದ ಸುದ್ದಿ ಬರಸಿಡಿಲಂತೆ ಬಡಿದಿದೆ. ಇಂದು ಛತ್ತೀಸ್​ಘಡದಲ್ಲಿ ಗದಗ ಮೂಲದ ಯೋಧ ಹುತಾತ್ಮನಾಗಿರೋ ಸುದ್ದಿ ತಿಳಿದು ಗೊಜನೂರು ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. …

Read More »