Breaking News

ಸಕಲೇಶಪುರದಿಂದ ಮತ್ತೆ ಮೂಡಿಗೆರೆಯತ್ತ ಹೆಜ್ಜೆ ಹಾಕಿದ ಭೀಮ

Spread the love

ಚಿಕ್ಕಮಗಳೂರು: ಕಾಡಾನೆಗಳ ಗುಂಪಿನ ಜೊತೆ ಸಕಲೇಶಪುರದಿಂದ ಮೂಡಿಗೆರೆಗೆ ಬಂದು ವಾಪಸ್‌ ಆಗಿದ್ದ ಭೀಮ , ಮತ್ತೆ ಮೂಡಿಗೆರೆಯತ್ತ ಹೆಜ್ಜೆ ಹಾಕಿದ್ದಾನೆ.

ಮೂಡಿಗೆರೆ ತಾಲೂಕಿನ ಗೌತಹಳ್ಳಿ ಬಳಿ ಭೀಮ ಓಡಾಡಿದ್ದಾನೆ. ಇತ್ತೀಚೆಗೆ ಬೇಲೂರು ಭಾಗದಿಂದ ಕಾಡಾನೆಗಳನ್ನು ಚಿಕ್ಕಮಗಳೂರಿನ ಭಾಗಗಳಿಗೆ ಅಟ್ಟಲಾಗಿತ್ತು. ಈ ಆನೆಗಳ ಜೊತೆಗೆ ಭೀಮ ಸಹ ಹೋಗಿದ್ದ. ಆದರೆ ಎರಡೇ ದಿನಕ್ಕೆ ವಾಪಸ್‌ ಸಕಲೇಶಪುರ ಭಾಗಕ್ಕೆ ಬಂದಿದ್ದ. ನ.25 ರಂದು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ, ಕಾಡಾನೆ ಬಳಿ ಭೀಮ ಕಾಣಿಸಿಕೊಂಡಿದ್ದ. ಅದ್ದರಿಂದ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಇಂದು (ನ.26) ಕಾಡಾನೆಗಳ ಗುಂಪನ್ನು ಹುಡುಕಿಕೊಂಡು ಭೀಮ ಮೂಡಿಗೆರೆಯತ್ತ ಹೆಜ್ಜೆ ಹಾಕುತ್ತಿದ್ದಾನೆ. ಶಾಂತ ಸ್ವಾಭಾವದಿಂದ ಭೀಮ ಹಾಸನ ಭಾಗದ ಜನರ ಮನೆ ಮಾತಾಗಿದ್ದಾನೆ.

ಮೂಡಿಗೆರೆಯ ಕಾಫಿತೋಟದಲ್ಲಿ 39 ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆ ಆಪರೇಷನ್ ಗಜ ಕಾರ್ಯಾಚರಣೆಯಡಿ ಆನೆಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಬೈಲು, ಮಾಕೋನಹಳ್ಳಿ, ಕಲ್ಲುಗುಡ್ಡ ಹಾಗೂ ಕಸ್ಕೆಬೈಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಕಾರ್ಮಿಕರು ಸದ್ಯಕ್ಕೆ ಕಾಫಿ ತೋಟಗಳತ್ತ ತೆರಳದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.


Spread the love

About Laxminews 24x7

Check Also

ಭೂ ಕಬಳಿಕೆ ಆರೋಪ – ಮಾಜಿ ಸಚಿವ ಪ್ರಭು ಚೌಹಾಣ್‌ಗೆ ನೋಟಿಸ್ ಜಾರಿ

Spread the loveಬೀದರ್: ಭೂ ಕಬಳಿಕೆ ಸಂಬಂಧ ಶಾಸಕ ಪ್ರಭು ಚೌಹಾಣ್‌ಗೆ  ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ