ಚಿಕ್ಕೋಡಿ: ಧರ್ಮ ಅಂದರೆ ಕರ್ತವ್ಯ. ಧರ್ಮದ ಪರಂಪರೆಯನ್ನು ಎಲ್ಲರೂ ಕಾಪಾಡಿಕೊಂಡು ಹೋಗಬೇಕು ಹಾಗೂ ಕುಂಕುಮಾರ್ಚಣೆಯು ಧರ್ಮ ಪಾಲನೆಯ ಒಂದು ಭಾಗವಾಗಿದೆ ಎಂದು ರಾಷ್ಟ್ರೀಯ ಸೇವಿಕಾ ಸಮಿತಿಯ ಸಹ ಕಾರ್ಯವಾಹಿಕಿ ಅಲ್ಕಾತಾಯಿ ಇನಾಮದಾರ ಹೇಳಿದರು. ಅವರು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದ ಆವರಣದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿದ ಕುಂಕುಮಾರ್ಚನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು ತಾಯಂದಿರ ಒಳ್ಳೆಯ ಸಂಸ್ಕಾರದಿಂದ ಮಕ್ಕಳನ್ನು ಬೆಳೆಸಿದರೆ ಮಕ್ಕಳು ಸದೃಢವಾಗಿ ಬೆಳೆಯಲು …
Read More »ಶಿಂದೋಳಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಚಾಲನೆ ಮೃಣಾಲ ಹೆಬ್ಬಾಳಕರ್.
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೋಳಿ ಗ್ರಾಮದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರು ಈ ಹಿಂದೆ ಗ್ರಾಮದ ಒಳಾಂಗಣ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಸಚಿವೆ ಲಕ್ಷ್ಮೀ …
Read More »ಪ್ರೊ. ಮಾಧವ ಗಾಡ್ಗೀಳ್ ಆತ್ಮಕಥೆ ಏರುಘಟ್ಟದ ನಡಿಗೆ ಬಿಡುಗಡೆ ; ಈಶ್ವರ ಖಂಡ್ರೆ
ಬೆಂಗಳೂರು : ಅದ್ಭುತ ಜೀವವೈವಿಧ್ಯತೆಯ ತಾಣ ಹಾಗೂ ಹಲವು ಪ್ರಮುಖ ನದಿಗಳ ಮೂಲವಾದ ಪಶ್ಚಿಮಘಟ್ಟಗಳ ಮಹತ್ವದ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ಚಿತ್ರಕಲಾ ಪರಿಷತ್ತಿನಲ್ಲಿಂದು ಪ್ರೊ. ಮಾಧವ ಗಾಡ್ಗೀಳ್ ಅವರ ಆತ್ಮಕತೆ A Walk up the Hill ನ ಕನ್ನಡ ಕೃತಿ ‘ಏರುಘಟ್ಟದ ನಡಿಗೆ’ ಬಿಡುಗಡೆ ಮಾಡಿ ಮಾತನಾಡಿದ ಅವರು, …
Read More »ಹಾಡುಹಕ್ಕಿ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ನಿಧನ.
ಉತ್ತರ ಕನ್ನಡ : ಜನಪದ ಕೋಗಿಲೆ ಎಂದೇ ಹೆಸರು ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಡಿಗೇರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ನಾಡೋಜಾ ಸುಕ್ರಿ ಬೊಮ್ಮಗೌಡ (91) ವಯೋ ಸಹಜ ಕಾಯಿಲೆಯಿಂದಾಗಿ ಇಂದು ಸ್ವ ಗೃಹದಲ್ಲಿ ನಿಧನ ಹೊಂದಿದ್ದಾರೆ. 2017 ರಲ್ಲಿ ಜನಪದ ಹಾಡಿನ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. ರಾಜ್ಯ, ರಾಷ್ಟ್ರದ ಹಲವು ಪ್ರಶಸ್ತಿ ಪಡೆದಿದ್ದ ಇವರು ಇತ್ತೀಚೆಗೆ ಅನಾರೋಗ್ಯ ಕಾರಣದಿಂದ ಹಾಸಿಗೆ ಹಿಡಿದಿದ್ದರೂ. ತೀವ್ರ ಉಸಿರಾಟ …
Read More »ಹುಸ್ಕೂರು ಗೇಟ್‌ನಿಂದ ಹೆಬ್ಬಗೋಡಿ ಮೆಟ್ರೋ ಪಿಲ್ಲರ್‌ಗಳ ಮೇಲೆ ಚನ್ನಪಟ್ಟಣ ಕಲೆ ಬಿಂಬಿಸುವ ದೈನಂದಿನ ಸೆಲೆಬ್ರಿಟೀಸ್‌ಗಳ ಚಿತ್ರಣ.
ಬೆಂಗಳೂರು: ನಗರದ 50ಕ್ಕೂ ಹೆಚ್ಚು ಮೆಟ್ರೋ ಸ್ಥಂಭಗಳಿಗೆ ಚನ್ನಪಟ್ಟಣದ ಕಲೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಬಯೋಕಾನ್ ಫೌಂಡೇಷನ್‌ನ ಸಿಎಸ್‌ಆರ್ ಅಡಿಯಲ್ಲಿ ಚಿತ್ರಿಸಲಾಗಿದೆ. ಹುಸ್ಕೂರು ಗೇಟ್‌ನಿಂದ ಹೆಬ್ಬಗೋಡಿ ಮೆಟ್ರೋ ನಿಲ್ದಾಣದವರೆಗೂ ಬರುವ 50 ಮೆಟ್ರೋ ಪಿಲ್ಲರ್‌ಗಳ ಮೇಲೆ ಚೆನ್ನಪಟ್ಟಣದ ಕಲೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ. “ಪಿಲ್ಲರ್ ಆಫ್ ಬೆಂಗಳೂರು- ಪ್ರತಿನಿತ್ಯದ ಚಾಂಪಿಯನ್‌ಗಳ ಸಂಭ್ರಮಾಚರಣೆ” ಶೀರ್ಷಿಕೆಯಡಿ ಈ ಚಿತ್ತಾರ ಬಿಡಿಸಲಾಗಿದೆ. ನಮ್ಮ ದೈನಂದಿನ ಜೀವನದ ಚಾಪಿಂಯನ್ಸ್‌ಗಳಾದ ಹೂ ಮಾರಾಟಗಾರರು, ಎಲೆಕ್ಟ್ರೀಷಿಯನ್, ಟೈಲರ್‌ಗಳು, ಪ್ಲಂಬರ್ಸ್, …
Read More »ತಮ್ಮ ಇಷ್ಟದ ಭಾಷೆಯಲ್ಲೇ ಮಾಹಿತಿ ಕೊಡುವ ಎಐ ಚಾಟ್ ಬಾಟ್ ; ಏಕಗವಾಕ್ಷಿ ಪೋರ್ಟಲ್ ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಯೋಜನೆಗಳಿಗೆ ತ್ವರಿತ ಗತಿಯಲ್ಲಿ ಅನುಮೋದನೆ ನೀಡಬಲ್ಲ ಮತ್ತು ಉದ್ಯಮಗಳಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಇಲಾಖೆಗಳ 150 ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವಂತಹ ಉದ್ಯಮಸ್ನೇಹಿ ಪರಿಷ್ಕೃತ ಏಕಗವಾಕ್ಷಿ ಪೋರ್ಟಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಗತಿಕ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿದರು. ಮೈಕ್ರೋಸಾಫ್ಟ್ ಕಂಪನಿಯ ನೆರವಿನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಬಲದಿಂದ ರೂಪಿಸಿರುವ ಈ ವ್ಯವಸ್ಥೆಯು ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದ ಅನುಮೋದನೆ, ನವೀಕರಣ, ತಿದ್ದುಪಡಿ, ಕುಂದುಕೊರತೆಗಳಿಗೆ …
Read More »ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಸಮಿತಿಯ ಸದಸ್ಯರುಗಳ ಸಭೆ.
ಬೆಳಗಾವಿ: ನಗರ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಸಮಿತಿಯ ಸದಸ್ಯರುಗಳ ಸಭೆ ಬೆಳಗಾವಿ ದಿ 13/02/25 ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಿತ್ತೂರು ಕರ್ನಾಟಕ ವಿಭಾಗದ ಕಾಂಗ್ರೆಸ್ ಭವನ ನಿರ್ಮಾಣ ಸಮಿತಿಯ ಸದಸ್ಯರುಗಳ ಸಭೆ ದಿ 13 ರಂದು ಬೆಳಿಗ್ಗೆ 11:00 ಘಂಟೆಗೆ ಬೆಳಗಾವಿ ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜರುಗಿತು, ಸಭೆಯ ಅಧ್ಯಕ್ಷತೆಯನ್ನು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕ …
Read More »ಶಬ್-ಎ-ಬರಾತ್, ಇಸ್ಲಾಂ ಧರ್ಮದ ಪ್ರಮುಖ ಹಬ್ಬ ಇಂದು ಅಥವಾ ನಾಳೆ..?
ಶಬ್-ಎ-ಬರಾತ್, ಇಸ್ಲಾಂ ಧರ್ಮದ ಪ್ರಮುಖ ಹಬ್ಬವಾಗಿದ್ದು, ಕ್ಷಮೆಯ ರಾತ್ರಿಯೆಂದು ಪರಿಗಣಿಸಲಾಗುತ್ತದೆ. 2025ರ ಶಬ್-ಎ-ಬರಾತ್ ಫೆಬ್ರವರಿ 13ರಂದು ಆಚರಿಸಲಾಗುತ್ತದೆ. ಈ ರಾತ್ರಿಯಲ್ಲಿ ಮುಸ್ಲಿಮರು ಪ್ರಾರ್ಥನೆ, ಧ್ಯಾನ ಮತ್ತು ಪವಿತ್ರ ಗ್ರಂಥ ಪಠಣದಲ್ಲಿ ತೊಡಗುತ್ತಾರೆ. ಅಲ್ಲಾಹನ ಕ್ಷಮೆ ಮತ್ತು ಆಶೀರ್ವಾದಕ್ಕಾಗಿ ಪ್ರಾರ್ಥಿಸುವುದು ಈ ದಿನದ ಮುಖ್ಯ ಅಂಶವಾಗಿದೆ. ಕೆಲವರು ಉಪವಾಸವನ್ನೂ ಆಚರಿಸುತ್ತಾರೆ. ರಂಜಾನ್ ತಿಂಗಳಂತೆ, ಶಬ್-ಎ-ಬರಾತ್ ಅನ್ನು ಇಸ್ಲಾಂನ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ, ಇದು ಮುಸ್ಲಿಂ ಸಮುದಾಯದ ಜನರಿಗೆ ವಿಶೇಷ ಮಹತ್ವದ್ದಾಗಿದೆ. ಈ …
Read More »ಬಾಗಪ್ಪ ಹರಿಜನ, ಕೊಲೆ ಮಾಡಿದ ಆರೋಪಿಗಳು
ವಿಜಯಪುರ, ಫೆಬ್ರವರಿ 14: ಭೀಮಾತೀರದ ನಟೋರಿಯಸ್ ರೌಡಿ ಬಾಗಪ್ಪ ಹರಿಜನ (Bagappa Harijan) ಹತ್ಯೆ ಪ್ರಕರಣ ವಿಜಯಪುರ (Vijayapura) ಪೊಲೀಸರು ಬೇಧಿಸಿದ್ದಾರೆ. ಗಾಂಧಿಚೌಕ ಠಾಣೆ ಪೊಲೀಸರು ಕೇವಲ 24 ಗಂಟೆಯಲ್ಲಿ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪ್ರಕಾಶ ಅಲಿಯಾಸ್ ಪಿಂಟ್ಯಾ ಅಗರಖೇಡ್ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಎ1 ಪ್ರಕಾಶ್ ಅಲಿಯಾಸ್ ಪಿಂಟ್ಯಾ ಅಗರಖೇಡ್ (25), ಎ2 ರಾಹುಲ್ ತಳಕೇರಿ (20), ಎ3 ಗದಿಗೆಪ್ಪ ಅಲಿಯಾಸ್ ಮನಿಕಂಠ ದನಕೊಪ್ಪ (27), …
Read More »ತರಕಾರಿ ಖರೀದಿಸುತ್ತಿದ್ದ ಮಹಿಳೆಯ ಜೇಬಿನಲ್ಲೇ ಫೋನ್ ಸ್ಫೋಟ: ಇದಕ್ಕೆ ಕಾರಣವೇನು?, ಎಚ್ಚರ ಬಹಿಸುವುದು ಹೇಗೆ?
ಫೋನ್ ಬಿದ್ದು ಒಡೆದರೆ ಅಂತಹ ಪರಿಸ್ಥಿತಿಯಲ್ಲಿ ಬ್ಯಾಟರಿಯ ಒಳಗಿನ ರಚನೆಯು ಹಾನಿಗೊಳಗಾಗಬಹುದು. ಇದು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಹುದು. ಇದಲ್ಲದೆ, ಫೋನ್ ಅನ್ನು ದೀರ್ಘಕಾಲದವರೆಗೆ ಸೂರ್ಯನ ಬೆಳಕಿನಲ್ಲಿ ಇರಿಸಿದರೆ ಅಥವಾ ಯಾವುದೇ ಮಾಲ್‌ವೇರ್‌ನಿಂದಾಗಿ ಪ್ರೊಸೆಸರ್ ಮೇಲೆ ಅತಿಯಾದ ಒತ್ತಡ ಹೇರಿದರೆ, ಅದು ಬ್ಯಾಟರಿಗೆ ಹಾನಿಯನ್ನುಂಟುಮಾಡುತ್ತದೆ. ಬಹಳ ಆಘಾತಕಾರಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸುತ್ತಿರುವುದನ್ನು ಕಾಣಬಹುದು. ಅದೇ ಕ್ಷಣದಲ್ಲಿ, …
Read More »