Breaking News

ಹಠಾತ್ ಹೋಟೆಲಗೆ ತೆರಳಿದ ಹುಕ್ಕೇರಿ ನ್ಯಾಯಾಧೀಶ ರೊಟ್ಟೆರ್

Spread the love

ಹುಕ್ಕೇರಿ : ಹುಕ್ಕೇರಿ ನಗರದ ಹಿರಿಯ ನ್ಯಾಯಾಧೀಶ ಕೆ ಎಸ್ ರೋಟ್ಟೆರ ಹಠಾತ್ ಹೋಟೆಲ್ ಗೆ ನುಗ್ಗಿ ಬಾಲ ಕಾರ್ಮಿಕರನ್ನು ರಕ್ಷಿಸಿದ ಘಟನೆ ಜರುಗಿದೆ. ಹೌದು ಇಂದು ಬೆಳಗಿನ ಜಾವ ಹುಕ್ಕೇರಿ ಕೋರ್ಟ ಸರ್ಕಲ್ ಬಳಿ ಇರುವ ಹೋಟೆಲ್ ಒಂದಕ್ಕೆ ಹಠಾತ್ ಆಗಿ ಕಾರ್ಮಿಕ ಇಲಾಖೆ ಮತ್ತು ಬಾಲ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಕೆ ಎಸ್ ರೋಟ್ಟೆರ ತೇರಳಿ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದ ಘಟನೆ ಜರುಗಿದೆ.

ರಾಷ್ಟ್ರೀಯ ಮಕ್ಕಳ ಆಯೋಗದ ವತಿಯಿಂದ ಇಂದು ಹುಕ್ಕೇರಿ ನಗರದಲ್ಲಿ ಹಮ್ಮಿಕೊಂಡ ಬಾಲ ಕಾರ್ಮಿಕರ ವಿರೋಧಿ ದಿನ ಆಚರಣೆಯ ಜಾಗ್ರತೆ ಜಾಥಾವನ್ನು ನ್ಯಾಯಾಧೀಶ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ರೋಟ್ಟೆರ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ,ಕಾನೂನು ಸೇವಾ ಸಮಿತಿ ಮತ್ತು ವಿವಿಧ ಇಲಾಖೆ ಆಶ್ರಯದಲ್ಲಿ ಪ್ಯಾನ್ ಇಂಡಿಯಾ ಕಾರ್ಯಕ್ರಮ ಹಮ್ಮಿಕೊಂಡು ಹುಕ್ಕೇರಿ ತಾಲೂಕಿನ ಶಾಲಾ ಕಾಲೇಜು ಮತ್ತು ಗ್ರಾಮ ಮಟ್ಟದಲ್ಲಿ ಜಾಗ್ರತೆ ಮೂಡಿಸಲಾಗುತ್ತಿದೆ ಎಂದರು

ನಂತರ ಪಟ್ಟಣದ ವಿವಿಧ ಹೋಟೇಲ್ ಗಳಿಗೆ ತೇರಳಿ ಪರಶಿಲನೆ ನಡೆಸಿದರು.
ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಮತಿ ಜ್ಯೋತಿ ಕಾಂತೆ ಮಾತನಾಡಿ ರಾಷ್ಟ್ರೀಯ ಮಕ್ಕಳ ಆಯೋಗ ಕಿಶೋರ ಮತ್ತು ಬಾಲ ಕಾರ್ಮಿಕರು ದುಡಿಯುತ್ತಿರುವ ಮಕ್ಕಳಿಗೆ ಪುನರ್ವಸತಿ ಮತ್ತು ಶಿಕ್ಷಣ ನೀಡುವ ಉದ್ದೇಶದಿಂದ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಸಮಿತಿಗಳ ವತಿಯಿಂದ ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಬಾರ ಹೋಟೆಲ, ಅಂಗಡಿಗಳಿಗೆ ಹಠಾತ್ ತೇರಳಿ ಮಕ್ಕಳ ರಕ್ಷಣೆ ಮತ್ತು ಮಾಲಿಕರಿಗೆ ಕಾನೂನು ಪ್ರಕಾರ ಶಿಕ್ಷೆ ಮತ್ತು ದಂಢ ವಿಧಿಸಲಾಗುತ್ತಿದೆ ಎಂದರು

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಧೀಕಾರಿ ಸಂಜೀವ ಭೋಸಲೆ, ನ್ಯಾಯವಾದಿಗಳ ಸಂಘದ ಅದ್ಯಕ್ಷ ಅನೀಸ ವಂಟಮೂರಿ, ಕಾರ್ಯದರ್ಶಿ ಎಸ್ ಜೆ ನದಾಫ್, ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ, ಅನೀಲ ಕರೋಶಿ, ನ್ಯಾಯವಾದಿಗಳಾದ ಎಮ್ ಎಮ್ ಪಾಟೀಲ, ಗಸ್ತಿ ಮೊದಲಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ರೈತರು ಮುಂಗಾರು ಬೆಳೆ ಬೆಳೆಯಲು ಸಿದ್ದರಾಗಿ – ಶಾಸಕ ನಿಖಿಲ್ ಕತ್ತಿ

Spread the love ಹುಕ್ಕೇರಿ : ರೈತರು ಮುಂಗಾರು ಬೆಳೆ ಬೆಳೆಯಲು ಸಿದ್ದರಾಗಿ – ಶಾಸಕ ನಿಖಿಲ್ ಕತ್ತಿ ಹುಕ್ಕೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ