ಶಿವಮೊಗ್ಗ: 2021ರಲ್ಲಿ ವೈಯಕ್ತಿಕ ದ್ವೇಷದಿಂದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಅನಿಲ್ ಎಂಬಾತನಿಗೆ ಶಿವಮೊಗ್ಗದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. 2021ರ ಅಕ್ಟೋಬರ್ 14 ರಂದು ಬಾಪೂಜಿ ನಗರದ ಗಂಗಾಮತ ಎಂಬ ಹಾಸ್ಟೆಲ್ ಮುಂಭಾಗ ರಾತ್ರಿ ಸಂತೋಷ್ ಎಂಬಾತನ ಮೇಲೆ ಅನಿಲ್ ಹಾಗೂ ಆತನ ಸಹಚರರು ಸೇರಿ ದಾಳಿ ನಡೆಸಿದ್ದರು. ಬೈಕ್ನಲ್ಲಿ ಬರುತ್ತಿದ್ದ ಸಂತೋಷನನ್ನು ಅಡ್ಡಗಟ್ಟಿ ಮಚ್ಚಿನಿಂದ ತಲೆಗೆ …
Read More »Daily Archives: ಮಾರ್ಚ್ 13, 2025
‘ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಕೇಸ್ನಲ್ಲಿ ಸರ್ಕಾರ ಯಾರನ್ನೋ ರಕ್ಷಿಸುತ್ತಿದೆ’: ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ : ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ ಯಾರನ್ನೋ ರಕ್ಷಣೆ ಮಾಡಲು ಹೊರಟಿರೋದು ಸ್ಪಷ್ಟವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಪ್ರಕರಣದ ಹಿಂದೆ ರಾಜಕಾರಣಿಗಳಿದ್ದಾರೆ ಅನ್ನೋ ವರದಿಗಳು ಬರುತ್ತಿವೆ. ಇದು ದೇಶದ್ರೋಹದ ಕೆಲಸ. ಚಿನ್ನ ಎಲ್ಲಿಗೆ ಹೋಗುತ್ತಿದೆ? ಅಲ್ಲಿಂದ ಬರೋ ಹಣ ಎಲ್ಲಿ ಹೋಗುತ್ತೆ? ಅನ್ನೋದು ಯಾರಿಗೂ ಗೊತ್ತಿಲ್ಲ. ದೇಶವಿರೋಧಿ ಕೃತ್ಯಕ್ಕೆ …
Read More »ವಿಧಾನಸಭೆಯಲ್ಲಿ ಸದ್ದು ಮಾಡಿದ ಬೀದಿನಾಯಿಗಳ ಕಾಟದ ವಿಚಾರ; ಗಮನ ಸೆಳೆದ ನಾಗರಹಾವು ಪ್ರಸ್ತಾಪ
ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ತೊಂದರೆಯ ವಿಚಾರ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ ಸದಸ್ಯರ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ: ಇಂದು ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ವಿಷಯ ಪ್ರಸ್ತಾಪಿಸಿ, ಬೀದಿನಾಯಿಗಳ ಹಾವಳಿಯಿಂದ ತೊಂದರೆಯಾಗುತ್ತಿದೆ. ಸನ್ಸಿಟಿ ಅಪಾರ್ಟ್ಮೆಂಟ್ 18ನೇ ಮಹಡಿಗೆ ಬೀದಿನಾಯಿಗಳನ್ನು ಮಹಿಳೆಯೊಬ್ಬರು ಕರೆದೊಯ್ದಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ. ಅಲ್ಲಿನ ನಿವಾಸಿಗಳಿಗೆ ಆ ಬೀದಿ ನಾಯಿಗಳು ಕಚ್ಚಿವೆ. ಬಿಬಿಎಂಪಿ ಗಮನಕ್ಕೆ ತಂದರೂ …
Read More »ನರೇಗಾ ಯೋಜನೆಯಡಿ ಕೆಲಸ ಮಾಡಲು ಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.:zp ceo
ಮೈಸೂರು : ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಲು ಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಆದರೂ, ಕೂಲಿ ಕಾರ್ಮಿಕರನ್ನು ಕೆರೆಗಳ ಹೊಳೆತ್ತುವ ಕೆಲಸ ಮಾಡಿಸುತ್ತಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಉಕೇಶ್ ಕುಮಾರ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿರುವ ಜಲಾಶಯಗಳಲ್ಲಿ ಈಗಾಗಲೇ ಸಾಕಷ್ಟು ನೀರು ಲಭ್ಯವಿದ್ದು, ಯಾವುದೇ ರೀತಿ …
Read More »ಡಿಕೆ ಶಿವಕುಮಾರ್ ಆಯೋಜಿಸಿದ ಔತಣಕೂಟದಲ್ಲಿ ಇಬ್ಬರು ಬಿಜೆಪಿ ಶಾಸಕರು
ಬೆಂಗಳೂರು, (ಮಾರ್ಚ್ 13): ಕೆಪಿಸಿಸಿ ಅಧ್ಯಕ್ಷರಾಗಿ (KPCC President) ಜುಲೈ 2ಕ್ಕೆ ಐದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಮೂರವರೇ ತಿಂಗಳು ಮೊದಲೇ ಔತಣಕೂಟ (Dinner) ಏರ್ಪಡಿಸಿದ್ದಾರೆ. ಇಂದು (ಮಾರ್ಚ್ 13) ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಡಿಕೆಶಿ ಭೋಜನಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ನ ಶಾಸಕರು, ಸಚಿವರು ಭಾಗವಹಿಸಿದರು. ಈ ವೇಳೆ ಡಿಕೆ ಶಿವಕುಮಾರ್ಗೆ ಶುಭಾಶಯ ಕೋರಿ ಔತಣಕೂಟ ಸ್ವೀಕರಿಸಿದರು. ಇನ್ನು ಡಿಕೆಶಿ ಆಯೋಜಿಸಿರುವ ಈ …
Read More »ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಕಡಿಮೆ ಆಗಿದ್ದ ಕಸ(garbage) ವಿಲೇವಾರಿ ಸಮಸ್ಯೆ ಮತ್ತೆ ತೀವ್ರಗೊಂಡಿದೆ.
ಬೆಂಗಳೂರು, (ಮಾರ್ಚ್ 13): ಬೆಂಗಳೂರಿನಲ್ಲಿ (Bengaluru) ಕೆಲ ದಿನಗಳಿಂದ ಕಡಿಮೆ ಆಗಿದ್ದ ಕಸ(garbage) ವಿಲೇವಾರಿ ಸಮಸ್ಯೆ ಮತ್ತೆ ತೀವ್ರಗೊಂಡಿದೆ. ಕಣ್ಣೂರು ಬಳಿಯ ಮಿಟ್ಟಗಾನ ಹಳ್ಳಿ ಡಂಪಿಂಗ್ ಯಾರ್ಡ್ ನಲ್ಲಿ (mittaganahalli dumping yard) ಕಸ ಹಾಕುವುದನ್ನೇ ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಸ ತಾಂಡವವಾಡುತ್ತಿದೆ. ಇನ್ನು ಬಿಬಿಎಂಪಿ ವಾಹನಗಳು ಸಹ ಕಸ ತುಂಬಿಕೊಂಡು ನಿಂತಲ್ಲೇ ನಿಂತಿವೆ. ಈ ಬೆಳವಣಿಗೆ ಬೆನ್ನಲ್ಲೇ ಕಸಕ್ಕೆ ತೆರಿಗೆ ವಿಧಿಸಲು ಮುಂದಾಗಿರುವ ಸರ್ಕಾರದ ನಡೆಗೆ ಆಕ್ರೋಶ ಭುಗಿಲೆದ್ದಿದೆ.ಕಣ್ಣೂರು …
Read More »ವಿಜಯಪುರದಲ್ಲಿ ಅಕ್ರಮ ಕಸಾಯಿಖಾನೆಗಳ ದರ್ಬಾರ್
ವಿಜಯಪುರ, ಮಾರ್ಚ್ 13: ನಗರದ ಅಕ್ರಮ ಕಾಸಾಯಿ ಖಾನೆಗಳ (slaughterhouses) ಅಡ್ಡೆಯಾಗುತ್ತಿದೆಯಾ? ಹೀಗೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಕಾರಣ ನಗದರ ಹೃದಯ ಭಾಗದಲ್ಲಿ ಅದರಲ್ಲೂ ಎಸ್ಪಿ ಕಚೇರಿ ಕೂಗಳತೆಯಲ್ಲೇ ಈ ಅಕ್ರಮ ನಡೆಯುತ್ತಿದೆ. ವಾರ್ಡ್ ನಂಬರ್ 7 ರಲ್ಲಿನ ಶಾಪೂರ (Shapur) ಆಗಸಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗಳನ್ನು ನಡೆಸಲಾಗುತ್ತಿದೆ. ಇಡೀ ಏರಿಯಾದಲ್ಲಿ ಕೆಟ್ಟ ದುರ್ವಾಸನೆ ಬೀರಿದ್ದು, ಶ್ವಾಸಕೋಶದ ರೋಗಕ್ಕೀಡಾಗುವಂತಾಗಿದೆ. ಚರಂಡಿಯಲ್ಲಿ ಜಾನುವಾರುಗಳ ರಕ್ತ, ತ್ಯಾಜ್ಯವೇ ಹರಿದು ಹೋಗುತ್ತಿದೆ. ಸಂಬಂಧ ಪಟ್ಟ ಆಧಿಕಾರಿಗಳ ನಿರ್ಲಕ್ಷತನವೋ ಅಥವಾ ಜಾಣ ಕುರುಡೋ ಎಂದು ಜನರು …
Read More »BJP ಅವಧಿಯಲ್ಲಿನ 40% ಕಮಿಷನ್ ಆರೋಪ: 20 ಸಾವಿರ ಪುಟದ ವರದಿ
ಬೆಂಗಳೂರು, (ಮಾರ್ಚ್ 13): ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಪ್ರಮುಖ ಕಾಮಗಾರಿ ನಡೆಸುವ ಐದು ಇಲಾಖೆಗಳಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ(40 percent commission )ನಡೆಯುತ್ತಿದೆ ಎಂಬ ರಾಜ್ಯ ಗುತ್ತಿಗೆದಾರರ ಸಂಘದ ಆರೋಪ ಕುರಿತ ತನಿಖೆಗೆ ರಚಿಸಲಾಗಿದ್ದ ನಿವೃತ್ತಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ (Nagamohan Das) ನೇತೃತ್ವದ ವಿಚಾರಣಾ ಆಯೋಗವು 20,000 ಪುಟಗಳ ಬೃಹತ್ ತನಿಖಾ ವರದಿಯನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದೆ. ಬಿಜೆಪಿ ಅವಧಿಯಲ್ಲಿನ ಕಾಮಗಾರಿಗಳ ಬಗ್ಗೆ ತನಿಖಾ ವರದಿಯನ್ನ ಸಲ್ಲಿಸಲಾಗಿದ್ದು, …
Read More »ರಾಜ್ಯ ಸರ್ಕಾರ ದಿಂದ ರೇಶನ ಕಾರ್ಡ್ ಇದ್ದವರಿಗೆ ಪ್ರತಿಯೋಬ್ಬರಿಗೆ 15ಕೆಜಿ ಅಕ್ಕಿ ವಿತರಣೆ
ಬೆಳಗಾವಿ: ರಾಜ್ಯ ಸರ್ಕಾರ ಕೊಡುವ ಫೆಬ್ರು ವರಿ ಹಾಗೂ ಮಾರ್ಚ್ ತಿಂಗಳ ಅಕ್ಕಿಯ ಬಗ್ಗೆ ಪಡಿತರ ಚೀಟಿ ದಾರ ರಿಗೆ ಒಂದು ಮಾಹಿತಿ ಒದ ಗಿಸಲು ಬಯಸು ತ್ತೇವೆ ರಾಜ್ಯ ಸರ್ಕಾರ ಫೆಬ್ರುವರಿ ತಿಂಗಳ ಅಕ್ಕಿ ಕೆಜಿ ಹಾಗೂ ಮಾರ್ಚ್ ತಿಂಗಳ ಅಕ್ಕಿ 10 ಕೆಜಿ ಈರೀತಿ ರಾಜ್ಯ ದಲ್ಲಿರುವ ಎಲ್ಲ ಬಿಪಿಎಲ್ ಹಾಗೂ ಅಂತ್ಯೋ ದಯ ಕಾರ್ಡ್ ಇರುವವರಿಗೆ ವಿತರಣೆ ಮಾಡಲು ಸೂಚಿ ಸಿದೆ ರೇಷನ್ ಅಂಗಡಿ ಗಳಲ್ಲಿ …
Read More »ದಕ್ಷಿಣ ಕನ್ನಡದಲ್ಲಿ ಆಲಿಕಲ್ಲು ಮಳೆ
ಬೆಳ್ತಂಗಡಿಯಲ್ಲಿ ಆಲಿಕಲ್ಲು ಮಳೆ: ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಬುಧವಾರ ರಾತ್ರಿ ಆಲಿಕಲ್ಲು ಮಳೆ ಸುರಿದಿದೆ. ಉಜಿರೆ, ಕಕ್ಕಿಂಜೆ, ಚಾರ್ಮಾಡಿ ಭಾಗದಲ್ಲಿ ಸುರಿದ ಮಳೆಯಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದಿದೆ. ವಿಮಾನಗಳು ಡೈವರ್ಟ್: ಭಾರೀ ಮಳೆಯ ಪರಿಣಾಮ ಮಂಗಳೂರಿನಲ್ಲಿ ಕಳೆದ ರಾತ್ರಿ ಇಳಿಯಬೇಕಿದ್ದ ಮೂರು ವಿಮಾನಗಳನ್ನು ಕೇರಳಕ್ಕೆ ಡೈವರ್ಟ್ ಮಾಡಲಾಗಿತ್ತು. ಹೈದರಾಬಾದ್ನ ಒಂದು ವಿಮಾನ ಮತ್ತು ಬೆಂಗಳೂರಿನ ಎರಡು ವಿಮಾನಗಳನ್ನು ಕೇರಳದ ಕಣ್ಣೂರಿಗೆ ಡೈವರ್ಟ್ ಮಾಡಲಾಯಿತು. ವಾತಾವರಣ ಸರಿಯಾದ ಬಳಿಕ ಮತ್ತೆ …
Read More »