ಅಥಣಿ: ಹಂಪವ್ವ ಶಿಂಗೆ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅಧಿಕಾರಿಗಳು ಕೇವಲ 10 ಸಾವಿರ ಆದಾಯ ಪ್ರಮಾಣ ಪತ್ರ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿನೊದ ಮಹಾದೇವ ಶಿಂಗೆ ಎಂಬ ಹೆಸರಿನ ವ್ಯಕ್ತಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ಅಥಣಿ ತಾಲೂಕಿನ ಐಗಳಿ ಮೂಲದ ವಿನೋದ ಮಹಾದೇವ ಶಿಂಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದು, ಕಳೆದ ಹಲವು ವರ್ಷಗಳಿಂದ ಮೀಸಲಾತಿ ಪಡೆದಿದ್ದಾರೆ. ಇದರಿಂದ ನಮ್ಮ ದಲಿತ ಸಮುದಾಯಕ್ಕೆ ಅಧಿಕಾರಿಗಳು ಹಾಗೂ ವಿನೋದ ಅನ್ಯಾಯ ಮಾಡಿದ್ದಾರೆ ಎಂದು
ದಲಿತ ಮುಖಂಡ ಸಂದೀಪ ಕಾಂಬಳೆ ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಕುಲಂಕುಷವಾಗಿ ಪರಿಗಣಿಸಿ ದಲಿತ ಸಮುದಾಯಕ್ಕೆ ನ್ಯಾಯ ನೀಡುವಂತೆ ಮನವಿಮಾಡಿದ್ದಾರೆ.