Breaking News

ಮದ್ಯ ಪ್ರಿಯರಿಗೆ ಗುಡ್​​ನ್ಯೂಸ್​​​; ಅ.3ರಿಂದ ಪಬ್, ಕ್ಲಬ್ ಆರಂಭ

Spread the love

ಬೆಂಗಳೂರು: ಮಾರಕ ಕೊರೋನಾದಿಂದ ಹೇರಲಾಗಿದ್ದ ಲಾಕ್ಡೌನ್​​​ ಸಡಿಲಗೊಳಿಸಿ ಸಿಎಂ ಬಸವರಾಜ್​​ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಈಗ ಮದ್ಯ ಪ್ರಿಯರಿಗೆ ಗುಡ್​​ನ್ಯೂಸ್​​ ನೀಡಿರುವ ಸಿಎಂ ಬಸವರಾಜ್​​ ಬೊಮ್ಮಾಯಿ ಅಕ್ಟೋಬರ್​​​ 3ನೇ ತಾರೀಕಿನಿಂದಲೇ ಕ್ಲಬ್​​​, ಪಬ್​​​​​ ತೆರೆಯಲು ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಬಸವರಾಜ್​​ ಬೊಮ್ಮಾಯಿ, ರಾಜ್ಯದಲ್ಲಿ ಸರಾಸರಿ 0.66 ಕೋವಿಡ್ ಪ್ರಮಾಣ ಇದೆ. ಸದ್ಯ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಪಾಸಿಟಿವಿ ರೇಟ್​​ ಶೇ.1 ಕ್ಕಿಂತ ಕಡಿಮೆ ಇರುವ ಜಿಲ್ಲೆಯಗಳಲ್ಲಿ ಅಕ್ಟೋಬರ್ 3ರಿಂದಲೇ ಪಬ್​​​, ಕ್ಲಬ್​​ ತೆರೆಯಲು ಗ್ರೀನ್​​ ಸಿಗ್ನಲ್​​​​ ನೀಡಲಾಗಿದೆ. ಪಬ್​​ ಮತ್ತು ಕ್ಲಬ್​​ ಪ್ರವೇಶ ಮಾಡೋರಿಗೆ ಒಂದು ಡೋಸ್​​ ಲಸಿಕೆಯಾದ್ರೂ ಕಡ್ಡಾಯ ಎಂದರು.

ಸಿನಿಮಾ ಥಿಯೇಟರ್​ಗಳ ನಿಯಮಗಳೇ ಪಬ್ ಗಳಿಗೂ ಅನ್ವಯ ಆಗಲಿವೆ. ಅಕ್ಟೋಬರ್ 3 ರಿಂದ ಪಬ್​ಗಳು ಆರಂಭ ಮಾಡಲು ಅವಕಾಶ ನೀಡಲಾಗಿದೆ. ಮೂರನೇ ಅಲೆ ಬಗ್ಗೆ ತಜ್ಞರು ಅಧ್ಯಯನ ಮಾಡುತ್ತಿದ್ದಾರೆ ಎಂದು ಹೇಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ