Breaking News

ವಾರ್ಡ ನಂ.4 ರಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚು…!!

Spread the love

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ದಿನ ದಿನ ರಂಗೆರುತ್ತಿದೆ.ರಾಜಕೀಯ ಪಕ್ಷಗಳು ಸಿಂಬಾಲ್ ಮೇಲೆ ಚುನಾವಣೆ ಎದುರಿಸುತ್ತಿದ್ದರೆ ಎಮ್ ಇ ಎಸ್ ತೀವ್ರ ಪೈಪೋಟಿ ನೀಡಲು ತಯಾರಿ ಮಾಡಿಕೊಳ್ಳುತ್ತಿದೆ.

ಕೆಲವು ವಾರ್ಡಗಳಲ್ಲಿ ಬಿಜೆಪಿ ಮುಂದೆ ಇದ್ದರೆ ಕೆಲವು ವಾರ್ಡಗಳಲ್ಲಿ ಕಾಂಗ್ರೆಸ್ ಮುಂದೆ ಇದೆ.ಇನ್ನು ಕೆಲವು ವಾರ್ಡಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ.ಈ ತರಹ ತ್ರಿಕೋನ ಸ್ಪರ್ಧೆಯು ವಾರ್ಡ್ ನಂ 4 ರಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.ಇಲ್ಲಿ ಇವತ್ತಿನ ಮಟ್ಟಿಗೆ ಎಮ್ ಈ ಎಸ್ ಮುಂದೆ ಇದೆ ಎಂದು ಹೇಳಲಾಗುತ್ತಿದ್ದು ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಮೂರನೇ ಸ್ಥಾನದಲ್ಲಿ ಬಿಜೆಪಿ ಇದೆ ಎಂಬ ಲೆಕ್ಕಾಚಾರ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಆದರೆ ಕಣದಲ್ಲಿ ಬಿಜೆಪಿ,ಕಾಂಗ್ರೆಸ್ ಎಮ್ ಇ ಎಸ್ ಬಿಟ್ಟರೆ ಹದಿನಾರು ಪಕ್ಷೇತರ ಅಭ್ಯರ್ಥಿಗಳು ಮರಾಠಾ ಮತಗಳನ್ನೆ ಅವಲಂಬಿಸಿವೆ ಎಂದು ಹೇಳಲಾಗುತ್ತಿದೆ.ಒಂದು ವೇಳೆ ಪಕ್ಷೇತರರು ಅಲ್ಪ ಸ್ವಲ್ಪ ಮರಾಠಾ ಮತಗಳನ್ನು ಪಡೆದುಕೊಂಡರೆ ಎಮ್ ಇ ಎಸ್ ಹಾಗೂ ಬಿಜೆಪಿಗೆ ಗೆಲುವಿನ ಹಾಕಿ ಕಷ್ಟ ಆಗುವ ಸಾಧ್ಯತೆ ಹೆಚ್ಚಿದೆ.ಇದರ ಲಾಭ ಕಾಂಗ್ರೆಸ್ ಪಡೆದುಕೊಂಡು ಗೆಲುವಿನ ದಡ ಸೇರಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ