Breaking News

ಸಿಡಿ ಲೇಡಿಯ ಆಡಿಯೋ ವೈರಲ್: ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ!

Spread the love

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಿಡಿ ರಾದ್ದಾಂತ ಪ್ರಕರಣ ಘಳಿಗೆಗೊಂದು ತಿರುವು ತೆಗೆದುಕೊಳ್ಳುತ್ತಿದೆ. ಅಶ್ಲೀಲ ವಿಡಿಯೋದಲ್ಲಿ ಇದ್ದಾಳೆ ಎನ್ನಲಾದ ಯುವತಿ ತನ್ನ ಸಹೋದರನೊಂದಿಗೆ ಮಾತನಾಡಿರುವ ಆಡಿಯೋ ಇಂದು ವೈರಲ್ ಆಗಿದ್ದು, ಆ ಆಡಿಯೋದಲ್ಲಿ ಯುವತಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಾಳೆ.

ಆಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ, ನಾಳೆ ಇದಕ್ಕಿಂತ ದೊಡ್ಡ ಬಾಂಬ್ ಇದೆ. ಸಂಜೆ 4-6 ರೊಳಗೆ ಬಿಡುಗಡೆಯಾಗಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ಆಗಿದ್ದರ ಕುರಿತು ಮಾತನಾಡಿದ ಅವರು, ಡಿಕೆಶಿ ನನ್ನ ಗೆಳೆಯ, ಆತನಿಗೆ ಒಳ್ಳೆಯದಾಗಲಿ. ನನಗೆ ಬಂದ ಪರಿಸ್ಥಿತಿ ಅವನಿಗೆ ಬರಬಾರದು. ನಾನು ರಾಜೀನಾಮೆ ಕೊಟ್ಟಂತೆ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಎಫ್​ಐಆರ್​ ಆದ ತಕ್ಷಣ ನಾನೇನು ಅಪರಾಧಿ ಅಲ್ಲ. ನಾನು ಎಫ್​ಐಆರ್​ ದಾಖಲಿಸಿದ್ದೇನೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ನಾನು ಯಾವುದೇ ಜಾಮೀನು ತೆಗೆದುಕೊಳ್ಳುವುದಿಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ.

ಆಡಿಯೋದಲ್ಲಿ ಏನಿದೆ? ಯುವತಿ ಸಿಡಿ ಬಿಡುಗಡೆಯಾದ ಆರಂಭದ ದಿನದಲ್ಲಿ ತನ್ನ ಸಹೋದರನೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಅಶ್ಲೀಲ ವಿಡಿಯೋದಲ್ಲಿ ಇರುವುದು ನಾನಲ್ಲ, ಅದು ಗ್ರಾಫಿಕ್​ ಮಾಡಿದ್ದಾರೆ. ನನ್ನನ್ನು ನಂಬಿ. ಡಿಕೆ ಶಿವಕುಮಾರ್ ಅವರು ನನ್ನನ್ನು ಭೇಟಿಯಾಗಲು ಬಂದಿದ್ದಾರೆ. ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ ಹೆಚ್ಚು.

Spread the loveಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ