Breaking News

ಗಂಡನ ಕಣ್ಣೆದುರೇ ಹೆಂಡತಿ ಮೇಲೆ ಐವರಿಂದ ಅತ್ಯಾಚಾರ..!

Spread the love

 

ರಾಜಸ್ಥಾನ : ರಾಜ್ಯದಲ್ಲಿ 30 ವರ್ಷದ ಮಹಿಳೆ ಮೇಲೆ ಆಕೆಯ ಪತಿಯ ಕಣ್ಣೆದುರೇ, ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ, ಬರಾನ್ ಎಂಬಲ್ಲಿ ನಡೆದಿದೆ.

ಮಹಿಳೆಯ ಮಾಜಿ ಪತಿ ಮತ್ತು ಆತನ ಸಹಾಯಕರು ಸೇರಿದಂತೆ ಐವರು ಪುರುಷರು ಶನಿವಾರ ರಾತ್ರಿ ಬರಾನ್ ಅತ್ರು ರಾಜ್ಯ ಹೆದ್ದಾರಿಯಲ್ಲಿ ದಂಪತಿಗಳನ್ನು ತಡೆದು, ಅತ್ಯಾಚಾರ ಎಸಗಿರುವುದಾಗಿ ಎಸ್ ಪಿ ವಿನೀತ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ.

ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ದಂಪತಿ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದರು. ಆರೋಪಿ ದಂಪತಿಯನ್ನು ಸಮೀಪದ ಹೊಲಕ್ಕೆ ಕರೆದೊಯ್ದು, ಅಲ್ಲಿ ಪತಿಯನ್ನು ಕಟ್ಟಿ ಹಾಕಿ ಅತ್ಯಾಚಾರ ವೆಸಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಮಹಿಳೆ ತನ್ನ ಪತಿಯೊಂದಿಗೆ ಸದರ್ ಪೊಲೀಸ್ ಠಾಣೆಗೆ ತೆರಳಿ ದಿನೇಶ್ ಮತ್ತು ಆತನ ನಾಲ್ವರ ವಿರುದ್ಧ ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಐವರ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದು, ಆಕೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.


Spread the love

About Laxminews 24x7

Check Also

ಸಾರಿಗೆ ನೌಕರರಿಗೆ ಸಿಹಿ ಸುದ್ದಿ – ಈ ತಿಂಗಳಿನಿಂದಲೇ ಅಕೌಂಟ್‌ಗೆ ಪರಿಷ್ಕೃತ ವೇತನ ಜಮೆ

Spread the loveಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ಕೊನೆಗೂ ವೇತನ ಹೆಚ್ಚಳ ಮಾಡಿ ಆದೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ