Breaking News

ಸರಕಾರಿ ಉದ್ಯೋಗಕ್ಕೆ ಕಾದವರಿಗೆ ಗುಡ್ ನ್ಯೂಸ್

Spread the love

ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಿವಿಧ ಇಲಾಖೆಗಳ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಪ್ರಸ್ತಾವಿತ ನೇಮಕ ಪ್ರಕ್ರಿಯೆ ಪುನರಾರಂಭಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ. ಕರೊನಾ ಕಾರಣಕ್ಕೆ ತಲೆದೂರಿದ ಆರ್ಥಿಕ ಸಂಕಷ್ಟ ಸರಿದೂಗಿಸಿ ಸುಸ್ಥಿತಿಗೆ ತರಲೆಂದು 2020-21 ನೇ ಸಾಲಿನ ಎಲ್ಲ ನೇರ ನೇಮಕ ಹುದ್ದೆಗಳ ಭರ್ತಿ ತಡೆಹಿಡಿಯಲಾಗಿತ್ತು. ಅನುಕಂಪದ ಆಧಾರದ ಮೇಲೆ ನೇಮಕವಾದ ಅಭ್ಯರ್ಥಿಗಳಿಗೆ ಷರತ್ತುಬದ್ಧ ನೇಮಕ ನೀಡಲು ಅಸ್ತು ಎಂದಿದೆ.

ಇನ್ನು ಲೋಕಸೇವಾ ಆಯೋಗದ ಮೂಲಕ ವಿವಿಧ ಇಲಾಖೆಗಳಿಗೆ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಹುದ್ದೆಗಳಿಗೆ ಆಯ್ಕೆಯಾಗಿರುವವರ ನೇಮಕ ಪೂರ್ವ ಪ್ರಕ್ರಿಯೆ ಮುಂದುವರೆಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೊಟ್ಟಿರೋ ಸಿಎ ಸೈಟ್ ವಾಪಸ್ ಪಡೆಯಬೇಕು: ಬಿಜೆಪಿ ಆಗ್ರಹ

Spread the love ಬೆಂಗಳೂರು: ಕಾಂಗ್ರೆಸ್ ಭವನಕ್ಕೆ ಕಡಿಮೆ ದರದಲ್ಲಿ ಸಿಎ ನಿವೇಶನಗಳನ್ನು (CA Site) ಕೊಟ್ಟಿರೋ ವಿಚಾರ ವಿಧಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ