Home / ರಾಜ್ಯ / ಫೇಸ್​ಬುಕ್​ ಸುಂದರಿಯಗಾಗಿ ಪತ್ನಿಯ ಚಿನ್ನವನ್ನೂ ಮಾರಿ ₹11 ಲಕ್ಷ ಪಂಗನಾಮ ಹಾಕಿಸಿಕೊಂಡ ಪತಿಮಹಾಶಯ!

ಫೇಸ್​ಬುಕ್​ ಸುಂದರಿಯಗಾಗಿ ಪತ್ನಿಯ ಚಿನ್ನವನ್ನೂ ಮಾರಿ ₹11 ಲಕ್ಷ ಪಂಗನಾಮ ಹಾಕಿಸಿಕೊಂಡ ಪತಿಮಹಾಶಯ!

Spread the love

ಮುಂಬೈ: ಸಾಮಾಜಿಕ ಜಾಲತಾಣದ ವಂಚನೆ ಕುರಿತಂತೆ ನಿತ್ಯವೂ ಹತ್ತಾರು ವರದಿಗಳು ಬರುತ್ತಲೇ ಇವೆ. ಬಹುತೇಕ ಎಲ್ಲಾ ಘಟನೆಗಳಲ್ಲಿಯೂ ಒಂದೇ ತೆರನಾಗಿ ಮೋಸದ ಜಾಲ ಮಾಡಿರುವ ಬಗ್ಗೆ ವರದಿಯಾಗುತ್ತಲೇ ಇವೆ. ಮೊದಲು ಹಣ ಕೇಳುವುದು ನಂತರ ಕಸ್ಟಮ್ಸ್​ ಅಧಿಕಾರಿಗಳ ಹೆಸರಿನಲ್ಲಿ ಕಾಲ್​ ಮಾಡುವುದು, ನಂತರ ಮೋಸ ಮಾಡಿ ಪಂಗನಾಮ ಹಾಕುವುದು… ಹೀಗೆ ವರದಿ ಬಂದರೂ ಯುವತಿಯರ ವಿಷಯ ಬಂದಾಗ ಗಂಡಸರಿಗೆ ಯಾಕೋ ಈ ಸುದ್ದಿಗಳು ನೆನಪಾಗುವುದೇ ಇಲ್ಲದಂತೆ ಕಾಣಿಸುತ್ತದೆ!

ಅಂಥದ್ದೇ ಒಂದು ಘಟನೆ ಮುಂಬೈನ ವ್ಯಕ್ತಿಯೊಬ್ಬನಿಗೆ ಆಗಿದ್ದು, ಫೇಸ್​ಬುಕ್​ ಫ್ರೆಂಡ್​ಗಾಗಿ 11 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾನೆ!
ಫೈವ್​ಸ್ಟಾರ್​ ಹೋಟೆಲ್​ ಒಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ವ್ಯಕ್ತಿ ಸದ್ಯ ಕರೊನಾದಿಂದ ಕೆಲಸ ಕಳೆದುಕೊಂಡು, ಇದೀಗ ಫೇಸ್​ಬುಕ್​ ಸುಂದರಿಯಿಂದ ಇರುವ ಹಣವನ್ನೂ ಕಳೆದುಕೊಂಡಿದ್ದಾನೆ!

ಕಳೆದ ಡಿಸೆಂಬರ್​ನಲ್ಲಿ ಅಮೆರಿಕದ ವೈನರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ತಾನು ಎಂದು ಹೇಳಿಕೊಂಡಾಕೆಯಿಂದ ಫೇಸ್​ಬುಕ್​ನಲ್ಲಿ ಈತನಿಗೆ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಆ ಸುಂದರಿಯನ್ನು ನೋಡಿ ರಿಕ್ವೆಸ್ಟ್​ ಅಕ್ಸೆಪ್ಟ್​ ಮಾಡಿಕೊಂಡು ಮಾತುಕತೆ ನಡೆಸಿದ್ದಾನೆ!

ನಂತರ ಆಕೆ ಭಾರತದಲ್ಲಿ ಮೀನುಗಾರಿಕೆ ವ್ಯಾಪಾರ ಮಾಡಲು ಯೋಚಿಸಿದ್ದೇನೆ, ಸಹಾಯ ಮಾಡುತ್ತೀರಾ ಎಂದು ಕೇಳಿದ್ದಾಳೆ. ವ್ಯಾಪಾರ ನಡೆಸಲು ಫಾರ್ಮ್‍ವೊಂದನ್ನು ಖರೀದಿಸುತ್ತಿದ್ದೇನೆ, ಅಲ್ಲಿ ನಾವಿಬ್ಬರೂ ಸೇರಿ ಕೆಲಸ ಮಾಡಬಹುದು ಎಂದಿದ್ದಾರೆ. ಈತ ಅದಾಗಲೇ ತಾನು ಕೆಲಸ ಕಳೆದುಕೊಂಡಿರುವ ಬಗ್ಗೆ ಸಂಪೂರ್ಣ ಜಾತಕ ಕೊಟ್ಟಿದ್ದರಿಂದ ಇದನ್ನೇ ಆಕೆ ಬಂಡವಾಳವಾಗಿಸಿಕೊಂಡಿದ್ದಾಳೆ.

ನಂತರ ಯುವತಿ ಈತನ ಮನೆಯ ವಿಳಾಸವನ್ನು ಕೇಳಿ ಆತನಿಗೆ ವ್ಯಾಪಾರ ನಡೆಸಲು ವ್ಯವಸ್ಥೆಗೊಳಿಸಲು 50 ಸಾವಿರ ಪೌಂಡ್‍ಗಳನ್ನು ಮತ್ತು ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದಾಳೆ. ತನಗೆ ಇಷ್ಟೆಲ್ಲಾ ವ್ಯವಸ್ಥೆ ಮಾಡಿಕೊಡಲಿರುವ ಈ ಯುವತಿಗೆ ಈ ವಿವಾಹಿತ ತುಂಬಾ ಥ್ಯಾಂಕ್ಸ್​ ಹೇಳಿದ್ದಾನೆ.

ನಂತರ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ವ್ಯಕ್ತಿಗೆ ಕರೆ ಬಂದಿದೆ. ಅಸಲಿಗೆ ಈ ಚಾಲಾಕಿಯೇ ಕರೆ ಮಾಡಿದ್ದಾಳೆ. ಆ ಕರೆಯಲ್ಲಿ ಮಹಿಳೆಯೊಬ್ಬಳು ಅಕ್ರಮವಾಗಿ ವಿದೇಶಿ ಕರೆನ್ಸಿಯನ್ನು ಆಮದು ಮಾಡಿಕೊಂಡಿದ್ದಾಳೆ. ಈ ಚಟುವಟಿಕೆ ಭಾರತೀಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹಾಗಾಗಿ ಹಣ ಬೇಕಾದರೆ ಶುಲ್ಕ ಪಾವತಿಸಬೇಕಾಗುತ್ತದೆ. ಜೊತೆಗೆ ನಿಮ್ಮ ಇಮೇಲ್ ಐಡಿಯನ್ನು ಕಳುಹಿಸಬೇಕಾಗುತ್ತದೆ ಎಂದು ಹೇಳಿದ್ದಾಳೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣವನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಈ ಕುರಿತ ಕ್ರಮ ಕೈಗೊಳ್ಳಬಾರದಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ಮೇಲ್​ ಕಳುಹಿಸಿದ್ದಾರೆ.

ಇದನ್ನು ನಿಜ ಎಂದು ನಂಬಿದ ವ್ಯಕ್ತಿ ಕೂಡಲೇ ಮಹಿಳೆಗೆ ಕರೆ ಮಾಡಿದ್ದಾನೆ. ಆಗ ಮಹಿಳೆ ಭಾರತಕ್ಕೆ ಆಗಮಿಸಿದಾಗ ನಿಮ್ಮ ಹಣವನ್ನು ಹಿಂದಿರುಗಿಸುವುದಾಗಿ ಮಾತು ನೀಡಿ ಸದ್ಯ ದಂಡ ಪಾವತಿಸುವಂತೆ ವ್ಯಕ್ತಿಗೆ ತಿಳಿಸಿದ್ದಾಳೆ. ಹೀಗಾಗಿ ಈತ ಸ್ನೇಹಿತರಿಂದ ಸಾಲ ಸೋಲ ಮಾಡಿ, ತಾಯಿ, ಪತ್ನಿಯ ಒಡವೆಯನ್ನೂ ಮಾರಿ 11 ಲಕ್ಷ ರೂಪಾಯಿ ಕೊಟ್ಟಿದ್ದಾನೆ! ನಂತರ ಆಕೆಯ ಸುದ್ದಿಯೇ ಇಲ್ಲದಾಗ ಕರೆ ಮಾಡಿದ್ದಾನೆ, ಫೋನ್​ ಸ್ವಿಚ್​ ಆಫ್​. ಆಗಲೇ ತಿಳಿದದ್ದು ತಾನು ಮೋಸ ಹೋಗಿದ್ದೇನೆ ಎಂದು!
ಪೊಲೀಸರು ಸದ್ಯ ತನಿಖೆ ಕೈಗೊಂಡಿದ್ದಾರೆ. ಸಾಲ ಕೇಳಿದ ಸ್ನೇಹಿತರು ಈತನ ಹಿಂದೆ ಬಿದ್ದಿದ್ದಾರೆ!


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ