Breaking News

ಬಸ್ ಗಳಿಗೆ ಡಿಸೇಲ್ ಹಾಕೋದಕ್ಕೆ ಆಗಿದೆ. ಆದ್ರೇ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವ ಕಾರು ಚಾಲಕ ಸಚಿವರ ಸ್ವಂತ ಕಾರಿಗೆ ಹಾಕಿಸಿಕೊಂಡಿದ್ದು ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Spread the love

ಬೆಳಗಾವಿ : ಸಾರಿಗೆ ಬಸ್ ಗಳ ಡಿಪೋದಲ್ಲಿನ ಬಂಕ್ ಗಳಿರೋದು ಕೇವಲ ಸಾರಿಗೆ ಬಸ್ ಗಳಿಗೆ ಡಿಸೇಲ್ ತುಂಬಿಸೋದಕ್ಕೆ. ಸಾರಿಗೆ ಬಸ್ ಗಳ ಹೊರತಾಗಿ ಮತ್ತಾರಿಗೂ ಇಂಧನ ಹಾಕೋದಿಲ್ಲ. ಹೀಗಿದ್ದೂ ಸಾರಿಗೆ ಸಚಿವರ ಕಾರಿಗೆ ಬಸ್ ಡಿಪೋ ಬಂಕ್ ನಲ್ಲಿಯೇ ಪುಲ್ ಟ್ಯಾಂಕ್ ಮಾಡಿಸಲಾಗಿದೆ. ಇಂತಹ ವೀಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಾಗಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರ ನಡೆಗೆ, ಈಗ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಬೆಳಗಾವಿಯ ಮೂರನೇ ಬಸ್ ಡಿಪೋದಲ್ಲಿನ ಸಾರಿಗೆ ಇಲಾಖೆಯಿಂದ ನಿರ್ಮಿಸಲಾಗಿದ್ದಂತ ವಿಶ್ರಾಂತಿ ಗೃಹ ಉದ್ಘಾಟನೆಗೆ ಇಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಆಗಮಿಸಿದ್ದರು. ಅತ್ತ ಸಚಿವರು ವಿಶ್ರಾಂತಿ ಗೃಹದ ಉದ್ಘಾಟನೆಗೆ ತಮ್ಮ ಕಾರಿಳಿದು ಸಾಗಿದ್ರೇ, ಇತ್ತ ಸಚಿವರ ಕಾರು ಚಾಲಕ ಡಿಪೋ ಬಂಕ್ ಗೆ ತೆರಳಿ ಬರೋಬ್ಬರಿ 44 ಲೀಟರ್ ಅಂದ್ರೆ 3,432 ಮೌಲ್ಯದ ಡಿಸೇಲ್ ಹಾಕಿಸಿಕೊಂಡಿದ್ದಾರೆ.

ಈ ಬಸ್ ಡಿಪೋ ಬಂಕ್ ಇರೋದು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಂಚರಿಸುವಂತ ಸಾರಿಗೆ ಬಸ್ ಗಳಿಗೆ ಡಿಸೇಲ್ ಹಾಕೋದಕ್ಕೆ ಆಗಿದೆ. ಆದ್ರೇ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವ ಕಾರು ಚಾಲಕ ಸಚಿವರ ಸ್ವಂತ ಕಾರಿಗೆ ಹಾಕಿಸಿಕೊಂಡಿದ್ದು ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ.


Spread the love

About Laxminews 24x7

Check Also

30 ದಿನ ಜೈಲಿಗೆ ಹೋದರೆ ಪ್ರಧಾನಿ, ಸಿಎಂ, ಸಚಿವರು ವಜಾ – ಮಸೂದೆಗೆ ಸಿದ್ಧತೆ

Spread the loveನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ